Bollywood: ನಟನೆಯ ಜೊತೆ ಬ್ಯುಸಿನೆಸ್‌ನಿಂದಲೂ ಲಕ್ಷಗಟ್ಟಲೆ ಗಳಿಸುತ್ತಾರೆ ಈ ಬಾಲಿವುಡ್ ನಟಿಯರು!

Bollywood actresses: ಸಿನಿಲೋಕದ ಸುಂದರಿಯರ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಸಾಮಾನ್ಯವಾಗಿ ಎಲ್ಲರಿಗೂ ಇರುತ್ತದೆ. ಅಭಿನಯದ ಜೊತೆಗೆ ಸೌಂದರ್ಯದಿಂದ ನಟಿಯರು ಜನರ ಹೃದಯ ಗೆಲ್ಲುತ್ತಾರೆ. ಲಕ್ಷಗಟ್ಟಲೇ ಸಂಭಾವನೆ ಪಡೆಯುವ ಜೊತೆಗೆ ಬೇರೆ ಬೇರೆ ಆದಾಯದ ಮೂಲಗಳಿಂದ ಲಾಭ ಗಳಿಸುವ ನಟಿಯರ ಬಗ್ಗೆ ಇಂದು ತಿಳಿಯೋಣ.  

Written by - Chetana Devarmani | Last Updated : Apr 26, 2023, 08:20 PM IST
  • ನಟನೆಯ ಜೊತೆ ಬ್ಯುಸಿನೆಸ್‌ನಲ್ಲೂ ಬ್ಯುಸಿ
  • ಲಕ್ಷಗಟ್ಟಲೆ ಗಳಿಸುತ್ತಾರೆ ಈ ಬಾಲಿವುಡ್ ನಟಿಯರು
  • ಬೇರೆ ಬೇರೆ ಆದಾಯದ ಮೂಲಗಳಿಂದ ಲಾಭ ಗಳಿಸುವರು
Bollywood: ನಟನೆಯ ಜೊತೆ ಬ್ಯುಸಿನೆಸ್‌ನಿಂದಲೂ ಲಕ್ಷಗಟ್ಟಲೆ ಗಳಿಸುತ್ತಾರೆ ಈ ಬಾಲಿವುಡ್ ನಟಿಯರು! title=
Bollywood actresses

Bollywood actresses: ನಟನಾ ಕಲೆ, ಬ್ಯೂಟಿ ಜೊತೆಗೆ ತಮ್ಮ ಜಾಣತನದಿಂದಲೂ ಹಲವು ನಟಿಯರು ಜನರ ಮನಸ್ಸು ಗೆದ್ದಿದ್ದಾರೆ. ಕೆಲವರು ಕೇವಲ ಸಿನಿ ರಂಗ, ನಟನೆಗೆ ತಮ್ಮ ಬದುಕನ್ನು ಸೀಮಿತವಾಗಿಸಿಕೊಂಡರೆ, ಇನ್ನೂ ಕೆಲವರು ಬ್ಯುಸಿನೆಸ್‌ನಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಬ್ಯೂಟಿ, ಲೈಫ್‌ಸ್ಟೈಲ್‌, ಆರೋಗ್ಯ ಕ್ಷೇತ್ರಗಳ ಜತೆಗೆ ಸ್ಟಾರ್ಟ್‌ಅಪ್‌ಗಳಲ್ಲಿ ಹೂಡಿಕೆ ಮಾಡಿರುವ ಬಾಲಿವುಡ್‌ ನಟಿಯರ ಬಗ್ಗೆ ಇಂದು ತಿಳಿಯೋಣ.

ದೀಪಿಕಾ ಪಡುಕೋಣೆ: ಯಶಸ್ಸಿನ ಉತ್ತುಂಗದಲ್ಲಿರುವ ನಟಿ ದೀಪಿಕಾ, ನಟನೆ ಜೊತೆಗೆ ಬ್ಯುಸಿನೆಸ್‌ನಿಂದಲೂ ಸಾಕಷ್ಟು ಆದಾಯ ಗಳಿಸುತ್ತಾರೆ. ಹಲವು ಪ್ರಾಡಕ್ಟ್ ಸಂಬಂಧಿತ ಕಂಪನಿಗಳಲ್ಲಿ ಹೂಡಿಕೆ ಮಾಡಿದ್ದಾರೆ. ಟೆಕ್‌ ಕ್ಷೇತ್ರಕ್ಕೆ ಸಂಬಂಧ ಪಟ್ಟ ಸ್ಟಾರ್ಟ್‌ಅಪ್‌ಗಳಲ್ಲಿ ದೀಪಿಕಾ ಆದಾಯ ಗಳಿಸುವರು.

ಕತ್ರಿನಾ ಕೈಫ್: ಕತ್ರಿನಾ ಕೈಫ್‌ ಬಾಳಿವುಡ್‌ನ ಸ್ಟಾರ್‌ ನಟಿಯರಲ್ಲಿ ಒಬ್ಬರು. ಇವರು ಸಿನಿಮಾಗಳಿಂದ ಕೋಟಿ ಕೋಟಿ ಸಂಭಾವನೆ ಪಡೆಯುತ್ತಾರೆ. ಭಾರತೀಯ ಷೇರು ಮಾರುಕಟ್ಟೆಗಳಲ್ಲಿ ನಟಿ ಕತ್ರಿನಾ ಕೈಫ್ ಹೂಡಿಕೆ ಮಾಡಿದ್ದು, ಉತ್ತಮ ಲಾಭ ಗಳಿಸುತ್ತಾರೆ. ಅಲ್ಲದೇ, ಕಾಸ್ಮೆಟಿಕ್‌ ಬ್ರಾಂಡ್‌ ಬ್ಯುಸಿನೆಸ್‌ ಕೂಡ ನಡೆಸುತ್ತಾರೆ. 

ಇದನ್ನೂ ಓದಿ: ಬೆತ್ತಲಾದ ʻಹೆಡ್ ಬುಷ್ʼ ನಟಿ ಪಾಯಲ್ ಫೋಟೋ ಸಿಕ್ಕಾಪಟ್ಟೆ ವೈರಲ್!

ಶಿಲ್ಪಾ ಶೆಟ್ಟಿ: 40 ವರ್ಷ ದಾಡಿದರೂ ಸಖತ್‌ ಫಿಟ್‌ ಆಗಿರುವ ಬಾಲಿವುಡ್‌ ಬ್ಯೂಟಿ ಶಿಲ್ಪಾ ಶೆಟ್ಟಿ ಕೂಡ ಬ್ಯುಸಿನೆಸ್‌ ಮಾಡುತ್ತಾರೆ. ಯೋಗಾಭ್ಯಾಸದ ಮೂಲಕವೇ ತಮ್ಮ ಫಿಟ್ನೆಸ್‌ ಕಾದುಕೊಂಡಿರುವ ಶಿಲ್ಪಾ ಶೆಟ್ಟಿ ಯೋಗ, ವ್ಯಾಯಾಮ, ಇಮ್ಯುನಿಟಿ, ಡಯಟ್‌, ಆರೋಗ್ಯ ಸಂಬಂಧಿ ಬ್ಯುಸಿನೆಸ್‌ಗಳನ್ನು ಹೊಂದಿರುವರು. 

ಸಾರಾ ಅಲಿ ಖಾನ್: ಬಾಲಿವುಡ್‌ ಬೆಡಗಿ ಸಾರಾ ಅಲಿ ಖಾನ್ ಪಾಪ್‌ ಕಲ್ಚರ್‌ ಬ್ರ್ಯಾಂಡ್‌ವೊಂದರಲ್ಲಿ ಹೂಡಿಕೆ ಮಾಡಿದ್ದು, ಆನ್‌ಲೈನ್‌ ಮಾರ್ಕೆಟ್‌ನಲ್ಲಿ ಸಾಕಷ್ಟು ಹೂಡಿಕೆ ಮಾಡಿದ್ದಾರೆ.

ಅನುಷ್ಕಾ ಶರ್ಮಾ: ವಿರಾಟ್‌ ಕೊಹ್ಲಿ ಪತ್ನಿ, ನಟಿ ಅನುಷ್ಕಾ ಶರ್ಮಾ ತಮ್ಮ ಪತಿ ವಿರಾಟ್‌ ಕೊಹ್ಲಿ ಅವರ ಸಹಕಾರದೊಂದಿಗೆ ಫುಡ್‌ ಬ್ಯುಸಿನೆಸ್‌ನಲ್ಲಿ ತೊಡಗಿಕೊಂಡಿದ್ದಾರೆ.  ಈ ಹಿಂದೆ ಡಿಜಿಟಲ್‌ ಇನ್ಸೂರೆನ್ಸ್‌ ಕ್ಷೇತ್ರದಲ್ಲಿ ಹೂಡಿಕೆ ಮಾಡಿದ್ದರು. 

ಆಲಿಯಾ ಭಟ್‌: ಬಾಲಿವುಡ್‌ ಬೆಡಗಿ ಆಲಿಯಾ ಸದ್ಯ ತಾಯ್ತನವನ್ನು ಅನುಭವಿಸುತ್ತಿದ್ದಾರೆ. ಮಗಳು ರಾಹಾ ಜೊತೆ ಕಾಲ ಕಳೆಯುತ್ತ, ಸಿನಿಮಾ ಕೆಲಸದಲ್ಲೂ ಬ್ಯುಸಿಯಾಗಿದ್ದಾರೆ. ಇವರು ಲೈಫ್‌ಸ್ಟೈಲ್‌ ಸಂಬಂಧಿ ಪ್ರಾಡಕ್ಟ್ ಕಂಪನಿಗಳಲ್ಲಿ ಹೂಡಿಕೆ ಮಾಡಿದ್ದಾರೆ.

ಇದನ್ನೂ ಓದಿ: ಕಾರಿನಲ್ಲಿ ಪ್ರಿಯಕರನೊಂದಿಗೆ ತಮನ್ನಾ.. ಕ್ಯಾಮೆರಾ ಕಣ್ಣಿಗೆ ಸಿಕ್ಕಿಬಿದ್ದ ಲವ್‌ಬರ್ಡ್ಸ್‌!!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News