ಸಾಜಿದ್ ಖಾನ್ ವಿರುದ್ಧ ದೂರು ದಾಖಲಿಸಿದ ನಟಿ ಶೆರ್ಲಿನ್ ಛೋಪ್ರಾ

Written by - Zee Kannada News Desk | Last Updated : Oct 20, 2022, 09:58 PM IST
  • ಈ ಘಟನೆ ಯಾವಾಗ ಸಂಭವಿಸಿತು ಎಂದು ಪೊಲೀಸರು ನನ್ನನ್ನು ಮೊದಲು ಕೇಳಿದರು.
  • ಅದಕ್ಕೆ ನಾನು 2005 ಎಂದು ಹೇಳಿದೆ. ಆಗ ಅದಕ್ಕೆ ಅವರು ದೂರು ನೀಡಲು ಇಷ್ಟು ಸಮಯ ಏಕೆ ಹಿಡಿಯಿತು ಎಂದು ಕೇಳಿದರು.
  • ಎಂದು ಹೇಳಿದಾಗ ಸಾಜಿದ್ ಖಾನ್ ಅವರಂತಹ ದೊಡ್ಡ ವ್ಯಕ್ತಿಯ ವಿರುದ್ಧ ಲೈಂಗಿಕ ಶೋಷಣೆಯ ದೂರು ದಾಖಲಿಸಲು ನನಗೆ ಧೈರ್ಯವಿರಲಿಲ್ಲ ಎಂದು ಹೇಳಿದ್ದೇನೆ,
ಸಾಜಿದ್ ಖಾನ್ ವಿರುದ್ಧ ದೂರು ದಾಖಲಿಸಿದ ನಟಿ ಶೆರ್ಲಿನ್ ಛೋಪ್ರಾ title=
file photo

#MeToo ಆರೋಪವನ್ನು ಎದುರಿಸುತ್ತಿರುವ ಚಲನಚಿತ್ರ ನಿರ್ಮಾಪಕ ಸಾಜಿದ್ ಖಾನ್ ವಿರುದ್ಧ ಬುಧವಾರ ಪೊಲೀಸ್ ದೂರು ದಾಖಲಿಸಿರುವ ಬಾಲಿವುಡ್ ನಟಿ ಶೆರ್ಲಿನ್ ಚೋಪ್ರಾ, 'ಯಾರೂ ಕಾನೂನಿಗಿಂತ ಮೇಲಲ್ಲ' ಹಾಗಾಗಿ ಅವರು ಕಂಬಿ ಹಿಂದೆ ಶಿಕ್ಷೆ ಎಣಿಸಬೇಕು ಎಂದು ಹೇಳಿದ್ದಾರೆ.

ಸಾಜಿದ್ 2018 ರಲ್ಲಿ #MeToo ವಿವಾದದಲ್ಲಿ ಸಿಲುಕಿಕೊಂಡಿದ್ದರು. ಶೆರ್ಲಿನ್ ಜೊತೆಗೆ ಸಲೋನಿ ಚೋಪ್ರಾ, ಅಹಾನಾ ಕುಮ್ರಾ ಮತ್ತು ಮಂದನಾ ಕರಿಮಿ ಸೇರಿದಂತೆ ನಟಿಯರು ಅವರ ವಿರುದ್ಧ ಆರೋಪಗಳನ್ನು ಮಾಡಿದ್ದರು.

ಇದೀಗ ಮುಂಬೈನ ಜುಹು ಪೊಲೀಸ್ ಠಾಣೆಯಲ್ಲಿ ಸಾಜಿದ್ ಖಾನ್ ವಿರುದ್ಧ ಪೊಲೀಸ್ ದೂರು ದಾಖಲಿಸಿರುವ ಶೆರ್ಲಿನ್, ಸಂಪೂರ್ಣ ವಿವಾದದ ಬಗ್ಗೆ ಮತ್ತು ತನಗೆ ಮುಂದೆ ಬರಲು ಏಕೆ ವರ್ಷಗಳು ಬೇಕಾಯಿತು ಎಂಬ ಬಗ್ಗೆ ಎಎನ್‌ಐ ಜೊತೆ ಮಾತನಾಡಿದ್ದಾರೆ.

ಇದನ್ನೂ ಓದಿ : Benefits Of Green Peas: ಡಯಾಬಿಟಿಸ್, ಕೊಲೆಸ್ಟ್ರಾಲ್ ಕಾಯಿಲೆಗಳಿಗೆ ರಾಮಬಾಣ ಹಸಿರು ಬಟಾಣಿ

"ನಾನು ಇತ್ತೀಚೆಗೆ #MeToo ಆರೋಪಿ ಸಾಜಿದ್ ಖಾನ್ ವಿರುದ್ಧ ಲೈಂಗಿಕ ಶೋಷಣೆ, ಕ್ರಿಮಿನಲ್ ಬಲ ಮತ್ತು ಕ್ರಿಮಿನಲ್ ಬೆದರಿಕೆಗಾಗಿ ಜುಹು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ. ಈ ಘಟನೆ ಯಾವಾಗ ಸಂಭವಿಸಿತು ಎಂದು ಪೊಲೀಸರು ನನ್ನನ್ನು ಮೊದಲು ಕೇಳಿದರು, ಅದಕ್ಕೆ ನಾನು 2005 ಎಂದು ಹೇಳಿದೆ. ಆಗ ಅದಕ್ಕೆ ಅವರು  ದೂರು ನೀಡಲು ಇಷ್ಟು ಸಮಯ ಏಕೆ ಹಿಡಿಯಿತು ಎಂದು ಹೇಳಿದಾಗ ಸಾಜಿದ್ ಖಾನ್ ಅವರಂತಹ ದೊಡ್ಡ ವ್ಯಕ್ತಿಯ ವಿರುದ್ಧ ಲೈಂಗಿಕ ಶೋಷಣೆಯ ದೂರು ದಾಖಲಿಸಲು ನನಗೆ ಧೈರ್ಯವಿರಲಿಲ್ಲ ಎಂದು ಹೇಳಿದ್ದೇನೆ," ಎಂದು ಅವರು ಹೇಳಿದರು. 

ಇದನ್ನೂ ಓದಿ : Benefits Of Jaggery: ಬಿಪಿಯಿಂದ ರಕ್ತಹೀನತೆಯವರೆಗೆ ಹಲವು ಸಮಸ್ಯೆಗಳ ನಿವಾರಣೆಗೆ ಬೆಲ್ಲವೇ ಮದ್ದು

#MeToo ಆಂದೋಲನದ ಸಮಯದಲ್ಲಿ ಇತರ ಮಹಿಳೆಯರು 'ಮಾಧ್ಯಮಗಳ ಮುಂದೆ ತಮ್ಮ ಅನುಭವಗಳನ್ನು ಹಂಚಿಕೊಳ್ಳಲು ಮುಕ್ತವಾಗಿ ಹೊರಬಂದಾಗ, ತಮಗೆ ಧೈರ್ಯ ಬಂದಿತು ಎಂದು ಶೆರ್ಲಿನ್ ಚೋಪ್ರಾ ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

 

 

 

 

Trending News