Actress Childhood Pics: ಈ ಬಾಲಕಿ ಇಂದು ಫೇಮಸ್‌ ನಟಿ.. ಇವ್ರು ಕರ್ನಾಟಕದ ಕುಡ್ಲದವರು! ಯಾರೆಂದು ಹೇಳುವಿರಾ?

Actress Childhood Pics: ಬಾಲ್ಯದ ಫೋಟೋಗಳಲ್ಲಿ ತುಂಬಾ ಮುದ್ದಾಗಿ ಕಾಣುತ್ತಿರುವ ಈ ಬಾಲಕಿ, ಇಂದು ಅನೇಕ ಪಡ್ಡೆಹೈಕ್ಳ ನಿದ್ದೆ ಕದ್ದ ಬೆಡಗಿ. ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಸಿನಿಮಾದಲ್ಲಿ ನಟಿಸಿ ಎಲ್ಲರ ಮನಗೆದ್ದ ತಾರೆ. ಸೌತ್‌ ಸಿನಿಮಾದಲ್ಲೂ ತಮ್ಮ ಹೆಸರು ಛಾಪಿಸಿರುವ ಈಕೆ ಯಾರೆಂದು ಹೇಳ ಬಲ್ಲಿರಾ?   

Written by - Chetana Devarmani | Last Updated : May 5, 2023, 12:55 PM IST
  • ಈ ಬಾಲಕಿ ಇಂದು ಫೇಮಸ್‌ ನಟಿ
  • ಇವ್ರು ಕರ್ನಾಟಕದ ಕುಡ್ಲದವರು!
  • ಯಾರೆಂದು ಹೇಳುವಿರಾ?
Actress Childhood Pics: ಈ ಬಾಲಕಿ ಇಂದು ಫೇಮಸ್‌ ನಟಿ.. ಇವ್ರು ಕರ್ನಾಟಕದ ಕುಡ್ಲದವರು! ಯಾರೆಂದು ಹೇಳುವಿರಾ? title=
ಪೂಜಾ ಹೆಗ್ಡೆ

Actress Childhood Pics: ನೋಡಲು ಇಷ್ಟೊಂದು ಕ್ಯೂಟ್‌ ಆಗಿರುವ ಈ ಮುದ್ದು ಮಗು ಇಂದು ಸೌತ್‌ ಮತ್ತು ಬಾಳಿವುಡ್‌ನಲ್ಲಿ ಸಾಕಷ್ಟು ಹೆಸರು ಮಾಡಿರುವ ನಟಿ. ಈ ಬೆಡಗಿ ನಮ್ಮ ಕರ್ನಾಟಕದವರು ಎಂಬುದು ಮತ್ತೊಂದು ವಿಶೇಷ. ಕರಾವಳಿ ಬೆಡಗಿ ಕುಡ್ಲದ ಕುವರಿ ಈ ಪುಟ್ಟ ಬಾಲೆ ಇಂದು ದೊಡ್ಡ ದೊಡ್ಡ ಹೀರೋಗಳ ಜೊತೆ ಸ್ಕ್ರೀನ್‌ ಶೇರ್‌ ಮಾಡಿದ್ದಾರೆ. ಅಷ್ಟೇ ಅಲ್ಲ ತನ್ನ ಬ್ಯೂಟಿ ಮೂಲಕ ಅನೇಕರ ಹೃದಯ ಕದ್ದ ಚೋರಿ ಈ ಪೋರಿ. ಈ ನಟಿ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸಕ್ರಿಯರಾಗಿದ್ದಾರೆ. ತನ್ನ ರಜೆಯ ಚಿತ್ರಗಳಿಂದ ಫೋಟೋಶೂಟ್‌ಗಳವರೆಗೆ ಪ್ರತಿಯೊಂದನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ. ತನ್ನ ಜೀವನದ ದೈನಂದಿನ ಘಟನೆಗಳ ಬಗ್ಗೆ ತನ್ನ ಅಭಿಮಾನಿಗಳಿಗೆ ಅಪ್‌ಡೇಟ್‌ ನೀಡುತ್ತಿರುತ್ತಾರೆ.  

ಇದನ್ನೂ ಓದಿ: ʼದಿ ಕೇರಳ ಸ್ಟೋರಿʼ ನಾಯಕಿ ಅದಾ ಶರ್ಮಾ ಚಿತ್ರದ ಬಗ್ಗೆ ಹೇಳಿದ್ದೇನು..?

ನಟಿ ಈ ಬಾಲ್ಯದ ಫೋಟೋಗಳಲ್ಲಿ ತುಂಬಾ ಮುದ್ದಾಗಿ ಕಾಣುತ್ತಿದ್ದಾರೆ. ಸ್ನ್ಯಾಪ್‌ಗಾಗಿ ಪೋಸ್‌ ನೀಡಿದ್ದಾರೆ. ಇತ್ತೀಚೆಗೆ ಇವರು ತಮ್ಮ ತವರೂರು ಮಂಗಳೂರಿಗೆ ಭೇಟಿ ನೀಡಿ, ಫ್ಯಾಮಿಲಿ ಜೊತೆ ಸಮಯ ಕಳೆದಿದ್ದರು. ಇನ್ನೂ ಒಂದು ಕ್ಲ್ಯೂ ಬೇಕೆಂದರೆ, ಇವರು ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಸಿನಿಮಾದಲ್ಲಿ ಬಾಲಿವುಡ್‌ ಸ್ಟಾರ್‌ ನಟ ಸಲ್ಮಾನ್‌ ಖಾನ್‌ ಜೊತೆ ನಟಿಸಿದ್ದಾರೆ. ಅಲ್ಲದೇ, ಸಲ್ಲು ಜೊತೆ ಡೇಟಿಂಗ್‌ ಮಾಡುವ ವದಂತಿ ಕೂಡ ಹರಿದಾಡುತ್ತಿದೆ.

 

 
 
 
 

 
 
 
 
 
 
 
 
 
 
 

A post shared by Pooja Hegde (@hegdepooja)

 

ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಸಿನಿಮಾದಲ್ಲಿ ಸಲ್ಮಾನ್ ಖಾನ್ ಜೊತೆ ನಾಯಕಿಯಾಗಿ ನಟಿಸಿರು ಪೂಜಾ ಹೆಗ್ಡೆ ಅವರ ಬಾಲ್ಯದ ಫೋಟೋ ಇದು. ಸೌತ್‌ನಲ್ಲಿ ಪೂಜಾ ಹೆಗ್ಡೆ ಕೊನೆಯದಾಗಿ ರಾಧೆ ಶ್ಯಾಮ್ ಚಿತ್ರದಲ್ಲಿ ಪ್ರಭಾಸ್ ಎದುರು ಕಾಣಿಸಿಕೊಂಡರು. ಇತ್ತೀಚೆಗೆ ಸಲ್ಮಾನ್ ಖಾನ್ ಅವರ ಜೊತೆ ನಟಿಸಿದ್ದ ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಚಿತ್ರ ರಿಲೀಸ್‌ ಆಯ್ತು. ಈ ಚಿತ್ರದಲ್ಲಿ ಶೆಹನಾಜ್ ಗಿಲ್ ಮತ್ತು ಬಾಕ್ಸರ್ ವಿಜೇಂದರ್ ಸಿಂಗ್ ಕಾಣಿಸಿಕೊಂಡಿದ್ದಾರೆ. ರೋಹಿತ್ ಶೆಟ್ಟಿ ಅವರ ಸರ್ಕಸ್ ಸಿನಿಮಾದಲ್ಲಿ ರಣವೀರ್ ಕಪೂರ್ ಜೊತೆ ಪೂಜಾ ಹೆಗ್ಡೆ ನಟಿಸಲಿದ್ದಾರೆ. ಈ ಚಿತ್ರವು ಷೇಕ್ಸ್‌ಪಿಯರ್‌ನ ಜನಪ್ರಿಯ ನಾಟಕವಾದ ದಿ ಕಾಮಿಡಿ ಆಫ್ ಎರರ್ಸ್‌ನ ರೂಪಾಂತರವಾಗಿದೆ. ವರುಣ್ ಶರ್ಮಾ, ಜಾನಿ ಲಿವರ್ ಮತ್ತು ಸಂಜಯ್ ಮಿಶ್ರಾ ಮುಂತಾದವರು ನಟಿಸಿದ್ದಾರೆ.

ಇದನ್ನೂ ಓದಿ: ಸೀರೆಯುಟ್ಟ ಮಾಸ್ತಾರು ಮಾಸ್ತಾರು ಬೆಡಗಿ, ಪೋಟೋಸ್‌ ನೋಡಿ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News