ಮದುವೆಗೂ ಮುನ್ನ ಗಂಡು ಮಗುವಿಗೆ ಜನ್ಮ ನೀಡಿದ ಖ್ಯಾತ ನಟಿ! ಕಂದಮ್ಮನ ಜೊತೆ ಫೋಟೋ ಶೇರ್

Ileana d'cruz Baby Photo: ಇಲಿಯಾನಾ ತಮ್ಮ ಇನ್‌ ಸ್ಟಾಗ್ರಾಂ ಅಧಿಕೃತ ಖಾತೆಯಲ್ಲಿ ಮಗುವಿನೊಂದಿಗೆ ಇರುವ ಸುಂದರವಾದ ಫೋಟೋವನ್ನು ಹಂಚಿಕೊಂಡಿದ್ದಾರೆ. ಫೋಟೋದಲ್ಲಿ, ಇಲಿಯಾನ ಮಗುವನ್ನು ತನ್ನ ತೋಳುಗಳಲ್ಲಿ ಅಪ್ಪಿಕೊಂಡಿರುವುದನ್ನು ಕಾಣಬಹುದು.  

Written by - Bhavishya Shetty | Last Updated : Oct 2, 2023, 09:50 PM IST
    • ಇಲಿಯಾನಾ ಮಗುವಿನೊಂದಿಗೆ ಇರುವ ಫೋಟೋವನ್ನು ಹಂಚಿಕೊಂಡಿದ್ದಾರೆ.
    • ಮಗುವಿಗೆ ಕೋವಾ ಫೀನಿಕ್ಸ್ ಡೋಲನ್ ಎಂದು ನಾಮಕರಣ ಮಾಡಿದ ಜೋಡಿ
    • ಆಗಸ್ಟ್’ನಲ್ಲಿ ಗಂಡು ಮಗುವಿಗೆ ಪೋಷಕರಾದ ಇಲಿಯಾನಾ ಮತ್ತು ಮೈಕೆಲ್ ಡೋಲನ್
ಮದುವೆಗೂ ಮುನ್ನ ಗಂಡು ಮಗುವಿಗೆ ಜನ್ಮ ನೀಡಿದ ಖ್ಯಾತ ನಟಿ! ಕಂದಮ್ಮನ ಜೊತೆ ಫೋಟೋ ಶೇರ್ title=
Ileana d'cruz Baby News Photo

Ileana d'cruz Baby Photo: ಆಗಸ್ಟ್ 1, 2023ರಂದು ಬಾಲಿವುಡ್ ನಟಿ ಇಲಿಯಾನಾ ಡಿ'ಕ್ರೂಜ್ ಮತ್ತು ಅವರ ಪಾರ್ಟ್ನರ್ ಮೈಕೆಲ್ ಡೋಲನ್ ಗಂಡು ಮಗುವಿಗೆ ಪೋಷಕರಾಗಿದ್ದಾರೆ. ತಮ್ಮ ಮಗುವಿಗೆ ಕೋವಾ ಫೀನಿಕ್ಸ್ ಡೋಲನ್ ಎಂದು ನಾಮಕರಣ ಮಾಡಿದ ಜೋಡಿ, ಆಗಾಗ್ಗೆ ಮುದ್ದಾದ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಅಕ್ಟೋಬರ್ 1 ರಂದು ಕೋವಾಗೆ 2 ತಿಂಗಳು ತುಂಬಿದೆ. ಈ ಸಂದರ್ಭದಲ್ಲಿ ನಟಿ ಸುಂದರವಾದ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಖಾಲಿ ಹೊಟ್ಟೆಯಲ್ಲಿ ಈ ಬೀಜದ ನೀರನ್ನು ಕುಡಿದರೆ ಒಂದೇ ವಾರದಲ್ಲಿ ಸರಾಗವಾಗಿ ಕರಗುತ್ತೆ ಸೊಂಟದ ಬೊಜ್ಜು

ಇಲಿಯಾನಾ ತಮ್ಮ ಇನ್‌ ಸ್ಟಾಗ್ರಾಂ ಅಧಿಕೃತ ಖಾತೆಯಲ್ಲಿ ಮಗುವಿನೊಂದಿಗೆ ಇರುವ ಸುಂದರವಾದ ಫೋಟೋವನ್ನು ಹಂಚಿಕೊಂಡಿದ್ದಾರೆ. ಫೋಟೋದಲ್ಲಿ, ಇಲಿಯಾನ ಮಗುವನ್ನು ತನ್ನ ತೋಳುಗಳಲ್ಲಿ ಅಪ್ಪಿಕೊಂಡಿರುವುದನ್ನು ಕಾಣಬಹುದು.  

ಇದಕ್ಕೂ ಮೊದಲು, ಆಗಸ್ಟ್ 5, 2023 ರಂದು ಇಲಿಯಾನಾ ಮಗುವಿನ ಮೊದಲ ಚಿತ್ರವನ್ನು ಹಂಚಿಕೊಂಡಿದ್ದರು. ಅದರಲ್ಲಿ ಕಂದಮ್ಮ ಶಾಂತವಾಗಿ ಮಲಗಿದ್ದು, ತುಂಬಾ ಮುದ್ದಾಗಿ ಕಾಣುತ್ತಿತ್ತು. ಈ ಫೋಟೋದ ಜೊತೆ ತಮ್ಮ ಮಗುವಿನ ಹೆಸರನ್ನು ಇಲಿಯಾನ ಬಹಿರಂಗಪಡಿಸಿದ್ದರು. "ನಮ್ಮ ಮುದ್ದಾದ ಗಂಡು ಮಗುವನ್ನು ಜಗತ್ತಿಗೆ ಸ್ವಾಗತಿಸಲು ಸಂತೋಷಪಡುತ್ತೇವೆ ಎಂಬುದನ್ನು ಪದಗಳಿಂದ ವ್ಯಕ್ತಪಡಿಸಲು ಸಾಧ್ಯವಿಲ್ಲ. ಹೃದಯ ತುಂಬಿದೆ ಬರುತ್ತಿದೆ" ಎಂದು ಬರೆದುಕೊಂಡಿದ್ದರು.

ಇದನ್ನೂ ಓದಿ:ಪುತ್ರನ ಮದುವೆ ಡೇಟ್ ಬಹಿರಂಗಪಡಿಸಿದ ಮುಖೇಶ್ ಅಂಬಾನಿ! ಈ ದಿನ ಹಸೆಮಣೆ ಏರಲಿದ್ದಾರೆ ಅನಂತ್-ರಾಧಿಕಾ

ಇನ್ನು ಇಲಿಯಾನ ಮದುವೆ ಮುನ್ನ ಗರ್ಭಿಣಿಯಾಗಿದ್ದರು ಎಂಬ ಊಹಾಪೋಹ ಇಂದಿಗೂ ಹರಿದಾಡುತ್ತಿದೆ. ಪ್ರೆಗ್ನೆನ್ಸಿ ಅನೌನ್ಸ್ ಮಾಡುತ್ತಿದ್ದಂತೆ, ಅನೇಕ ನೆಟ್ಟಿಗರು ಮದುವೆ ಯಾವಾಗ ಆಯ್ತು? ಮಗುವಿನ ತಂದೆ ಯಾರು? ಎಂಬೆಲ್ಲಾ ಪ್ರಶ್ನೆಗಳನ್ನು ಕೇಳಲು ಪ್ರಾರಂಭಿಸಿದ್ದರು. ಆದರೆ ಇಲಿಯಾನಾ ತಮ್ಮ ಗೆಳೆಯ ಮೈಕೆಲ್ ಕೆಲ ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ ಎಂದು ವದಂತಿ ಹಬ್ಬಿತ್ತು. ಆದರೆ ಆ ಬಳಿಕ ಅಂದರೆ ಜುಲೈ 17, 2023 ರಂದು ಮೊದಲ ಬಾರಿಗೆ ತನ್ನ ಗೆಳೆಯನೊಂದಿಗೆ ಕಳೆದ ಕೆಲವು ಸುಂದರವಾದ ಕ್ಷಣಗಳ ಫೋಟೋಗಳನ್ನು ಹಂಚಿಕೊಂಡಿದ್ದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News