Actress Deepshikha's Audition Journey: ಇಲ್ಲಿ ನಾವು ಹಿಂದಿನ ಸ್ಟಾರ್ ಹೀರೋಯಿನ್ ದೀಪ್ ಶಿಖಾ ನಾಗ್ಪಾಲ್ ಬಗ್ಗೆ ಮಾತನಾಡುತ್ತಿದ್ದೇವೆ. ಇತ್ತೀಚಿನ ಸಂದರ್ಶನವೊಂದರಲ್ಲಿ, ದೀಪ್ ಶಿಖಾ ಅವರು ಕರಣ್ ಅರ್ಜುನ್ (1995) ಚಿತ್ರದಲ್ಲಿ ಸಲ್ಮಾನ್ ಖಾನ್ ಎದುರು ನಟಿಸಲು ನಿರಾಕರಿಸಿದ್ದೇ.. ಎಂದು ಒಪ್ಪಿಕೊಂಡರು.
ನನಗೆ ಗಾಡ್‌ಫಾದರ್ ಇಲ್ಲ.. ಆದ್ದರಿಂದ ಯೋಚಿಸದೆ ಕೆಲವು ನಿರ್ಧಾರಗಳನ್ನು ತೆಗೆದುಕೊಂಡಿದ್ದೆ ಎಂದಿದ್ದಾರೆ... ಈ ಬಗ್ಗೆ ದೀಪ್ ಶಿಖಾ ಮಾತನಾಡಿ, 'ರಾಕೇಶ್ ರೋಷನ್ ಅವರನ್ನು ಭೇಟಿಯಾದ ಮೊದಲ ದಿನವೇ ನನಗೆ ಕರಣ್ ಅರ್ಜುನ್ ಸಿನಿಮಾ ಆಫರ್ ಮಾಡಿದರು. ತಕ್ಷಣವೇ ನಾನು ಅದನ್ನು ತಿರಸ್ಕರಿಸಿದೆ... ಇದಲ್ಲದೇ ಅನಿಲ್ ಕಪೂರ್ ಅವರು ತಮ್ಮ ಹಿಟ್ ಚಿತ್ರದ ಹಾಡಿನಲ್ಲಿ ನಟಿಸಲು ಆಫರ್ ನೀಡಿದ್ದರು.. ಆದರೆ ಅದನ್ನೂ ನಾನು ರಿಜೆಕ್ಟ್ ಮಾಡಿದ್ದೇನೆ.. ಮುಂದೆ ಸಲ್ಮಾನ್ ಜೊತೆ ತೆರೆ ಹಂಚಿಕೊಳ್ಳಲು ಅವಕಾಶ ನೀಡಲಾಗಿತ್ತು.. ದಿಢೀರ್ ನಿರ್ಧಾರ ಕೈಗೊಂಡು ಆ ಚಿತ್ರವನ್ನು ತಿರಸ್ಕರಿಸಿದೆ.." ಎಂದಿದ್ದಾರೆ.. ಆದರೆ ದೀಪ್ ಶಿಖಾ ಇಂದಿಗೂ ಯಾಕೆ ನಾನು ಈ ಚಿತ್ರಗಳನ್ನು ತಿರಸ್ಕಿರಿಸಿದೆ ಎಂದು ವಿಷಾದಿಸುತ್ತಿದ್ದಾರೆ.
ಇನ್ನು ದೀಪ್ ಶಿಖಾ ಕೊನೆಯದಾಗಿ ಮೇ 2 ರಂದು ನಾ ಉಮರ್ ಕಿ ಸೀಮಾ ಹೋ, ಪಾಲಕ್ ಕಿ ಚೋನ್ ನಲ್ಲಿ ಕಾಣಿಸಿಕೊಂಡರು. ಈಗ ಅವರು ಸಾಧ್ಯವಾದಾಗಲೆಲ್ಲಾ ಟಿವಿಯಲ್ಲಿ ಕಾಣಿಸಿಕೊಳ್ಳುತ್ತಿದ್ದು.. ಸದ್ಯ ನಟಿಗೆ ಯಾವುದೇ ದೊಡ್ಡ ಪ್ರಾಜೆಕ್ಟ್‌ನ ಆಫರ್‌ಗಳು ಸಿಗುತ್ತಿಲ್ಲ.
ದೀಪ್ ಶಿಖಾ ಅವರ ವೈಯಕ್ತಿಕ ಜೀವನದ ವಿಷಯಕ್ಕೆ ಬಂದರೆ, ಅವರು 20 ನೇ ವಯಸ್ಸಿನಲ್ಲಿ ನಟ ಜೀತ್ ಉಪೇಂದ್ರ ಅವರನ್ನು ವಿವಾಹವಾದರು. ಇಬ್ಬರು ಮಕ್ಕಳೂ ಇದ್ದಾರೆ. ಆದರೆ ಕೆಲವು ವರ್ಷಗಳ ನಂತರ ದಂಪತಿಗಳು ವಿಚ್ಛೇದನ ಪಡೆದರು..
ಇದನ್ನೂ ಓದಿ-ನಟಿ ಪವಿತ್ರಾ ಗೌಡ ಮೊದಲ ಪತಿ ಯಾರು ಗೊತ್ತೇ? 18 ನೇ ವಯಸ್ಸಿಗೆ ಮದುವೆ.. ಮಗು.. ಡಿವೋರ್ಸ್!!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ