ವಿಶ್ವ ಸುಂದರಿ ವಿನ್ನರ್ ಪಟ್ಟ.. ನಟಿಸಿದ ಸಿನಿಮಾಗಳೆಲ್ಲ ಹಿಟ್‌.. ಸದ್ಯ ತೆರೆಯಿಂದ ಕಣ್ಮರೆಯಾದ ಖ್ಯಾತ ನಟಿ ಈಕೆ!

Bollywood Actress: ಸಿನಿಮಾಗಳಲ್ಲಿ ಯಶಸ್ಸು ಕಾಣಬೇಕಾದರೆ ಪ್ರತಿಭೆಯ ಜೊತೆಗೆ ತುಸು ಅದೃಷ್ಟವೂ ಬೇಕು. ಸಾಕಷ್ಟು ನಟ ನಟಿಯರು ಲಕ್‌ ಕೈ ಹಿಡಿಯದೇ ತೆರೆಯಿಂದ ಮರೆಯಾಗಿದ್ದಾರೆ.. ಅಂತವರಲ್ಲಿ ಈ ಬಾಲಿವುಡ್‌ ನಾಯಕಿಯೂ ಒಬ್ಬರು.. 

Written by - Savita M B | Last Updated : Mar 16, 2024, 07:37 AM IST
  • ಸಿನಿಮಾಗಳಲ್ಲಿ ಯಶಸ್ಸು ಕಾಣಬೇಕಾದರೆ ಪ್ರತಿಭೆಯ ಜೊತೆಗೆ ತುಸು ಅದೃಷ್ಟವೂ ಬೇಕು.
  • ಯುಕ್ತಾ ಇಂದ್ರಲಾಲ್ ಮುಖೆ (ಯುಕ್ತಾ ಮುಖೆ) ಬೆಂಗಳೂರಿನಲ್ಲಿ 1977 ರಲ್ಲಿ ಸಿಂಧಿ ಕುಟುಂಬದಲ್ಲಿ ಜನಿಸಿದರು.
  • ವಿಶ್ವ ಸುಂದರಿ ಕಿರೀಟವನ್ನು ಗೆದ್ದ ನಾಲ್ಕನೇ ಭಾರತೀಯ ಮಹಿಳೆಯಾಗಿದ್ದಾರೆ.
ವಿಶ್ವ ಸುಂದರಿ ವಿನ್ನರ್ ಪಟ್ಟ.. ನಟಿಸಿದ ಸಿನಿಮಾಗಳೆಲ್ಲ ಹಿಟ್‌.. ಸದ್ಯ ತೆರೆಯಿಂದ ಕಣ್ಮರೆಯಾದ ಖ್ಯಾತ ನಟಿ ಈಕೆ! title=

Bollywood Actress and Miss World Yukta Mookhey: ಸಿನಿಮಾಗಳಲ್ಲಿ ಯಶಸ್ಸು ಕಾಣಬೇಕಾದರೆ ಪ್ರತಿಭೆಯ ಜೊತೆಗೆ ತುಸು ಅದೃಷ್ಟವೂ ಬೇಕು. ಯಶಸ್ವಿ ಸೂಪರ್ ಮಾಡೆಲ್‌ಗಳಾಗಿ ಮತ್ತು ಬ್ಯೂಟಿ ಸ್ಪರ್ಧೆಗಳಲ್ಲಿ ವಿಜೇತರಾಗಿದ್ದರೂ ಅವರ ಚಿತ್ರಗಳು ಕೆಲವು ಬಾರಿ ಯಶಸ್ಸು ಕಾಣುವುದಿಲ್ಲ..  

ಯುಕ್ತಾ ಇಂದ್ರಲಾಲ್ ಮುಖೆ (ಯುಕ್ತಾ ಮುಖೆ) ಬೆಂಗಳೂರಿನಲ್ಲಿ 1977 ರಲ್ಲಿ ಸಿಂಧಿ ಕುಟುಂಬದಲ್ಲಿ ಜನಿಸಿದರು.. 1999 ರಲ್ಲಿ ಅವರು ವಿಶ್ವ ಸುಂದರಿ ಸ್ಪರ್ಧೆಯೊಂದಿಗೆ ಕಿರೀಟವನ್ನೂ ಗೆದ್ದರು. ಯುಕ್ತಾ ಅವರು ವಿಶ್ವ ಸುಂದರಿ ಕಿರೀಟವನ್ನು ಗೆದ್ದ ನಾಲ್ಕನೇ ಭಾರತೀಯ ಮಹಿಳೆಯಾಗಿದ್ದಾರೆ.

ಇದನ್ನೂ ಓದಿ-Aishwarya Lekshmi : ಕ್ರಾಪ್ ಟಾಪ್ ಅಲ್ಲಿ 'ಕಿಂಗ್ ಆಫ್ ಕೋತಾ' ನಟಿ : ಫೋಟೋಸ್ ಇಲ್ಲಿವೆ

ವಿಶ್ವ ಸುಂದರಿ ಕಿರೀಟವನ್ನು ಗೆದ್ದ ನಂತರ, ಯುಕ್ತಾಗೆ ಅನೇಕ ಚಿತ್ರಗಳಲ್ಲಿ ನಾಯಕಿಯಾಗಿ ಆಫರ್‌ಗಳು ಬಂದವು. ಆದ್ದರಿಂದ ಯುಕ್ತಾ ಅವರು ಚಲನಚಿತ್ರಗಳಲ್ಲಿ ತಮ್ಮ ವೃತ್ತಿಜೀವನವನ್ನು ಮುಂದುವರಿಸಲು ನಿರ್ಧರಿಸಿದರು. 2001 ರಲ್ಲಿ ತಮಿಳು ಚಲನಚಿತ್ರದೊಂದಿಗೆ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ನಂತರ ನಟಿಸಿದ ಎಲ್ಲ ಸಿನಿಮಾಗಳೂ ನೆಲಕಚ್ಚಿದವು.. 

ಇದನ್ನೂ ಓದಿ-Sofia Ansari : ಸೋಫಿಯಾ ಸಖತ್‌ ಹಾಟ್ ಲುಕ್‌ ಹೆಚ್ಚಾಯ್ತು ಹಾರ್ಟ್‌ ಬೀಟ್‌..! ಫೋಟೋಸ್‌ ಇಲ್ಲಿವೆ.

ಯುಕ್ತಾ ಕೆಲವು ಪ್ರಾದೇಶಿಕ ಚಿತ್ರಗಳಲ್ಲೂ ನಟಿಸಿದ್ದರು..ಅಲ್ಲಿಯೂ ಅವರಿಗೆ ಯಶಸ್ಸು ಸಿಗಲಿಲ್ಲ. ಹಾಗಾಗಿ ಸಿನಿಮಾದಲ್ಲಿ ನಟಿಸುವುದನ್ನು ನಿಲ್ಲಿಸಿದ್ದಾರೆ. ಸುಮಾರು 9 ವರ್ಷಗಳ ನಂತರ, ಯುಕ್ತಾ ಕೊನೆಯದಾಗಿ 2019 ರಲ್ಲಿ ಗುಡ್ ನ್ಯೂಸ್ ಚಿತ್ರದಲ್ಲಿ ನಟಿಸಿದರು. ಅಂದಿನಿಂದ ಅವರು ಯಾವುದೇ ಚಿತ್ರ ಮಾಡಿಲ್ಲ.  

2008 ರಲ್ಲಿ, ಯುಕ್ತಾ ಪ್ರಿನ್ಸ್ ತುಲಿ ಎಂಬ ಅಮೇರಿಕನ್ ಉದ್ಯಮಿಯನ್ನು ವಿವಾಹವಾದರು. ಅವರಿಗೆ ಒಬ್ಬ ಮಗನಿದ್ದಾನೆ.. ಆದರೆ ಕೆಲವು ವರ್ಷಗಳ ನಂತರ ಯುಕ್ತಾ ತನ್ನ ಪತಿ ವಿರುದ್ಧ ಕೌಟುಂಬಿಕ ಹಿಂಸೆ ಮತ್ತು ಕಿರುಕುಳದ ಪ್ರಕರಣವನ್ನು ದಾಖಲಿಸಿ 2014ರಲ್ಲಿ ವಿಚ್ಛೇದನ ನೀಡಿ ಮಗನೊಂದಿಗೆ ಭಾರತಕ್ಕೆ ಬಂದಿದ್ದರು.. ಯುಕ್ತಾ ಪ್ರಸ್ತುತ ತನ್ನ ಮಗುವಿನೊಂದಿಗೆ ಭಾರತದಲ್ಲಿ ವಾಸಿಸುತ್ತಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News