ಕಾಲೇಜಿಗೆ ಹೋಗಲು ಕಾರ್ ಕೇಳಿದ ಸಂಜಯ್ ದತ್ ಗೆ ತಂದೆ ಸುನಿಲ್ ದತ್ ನೀಡಿದ ಸಲಹೆ ಏನು ಗೊತ್ತೇ?

ಬಾಲಿವುಡ್ ನಟ ಸಂಜಯ್ ದತ್ ಇತ್ತೀಚೆಗೆ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡ ಸಂದರ್ಭದಲ್ಲಿ ತಮ್ಮ ತಂದೆ ಬೆಳಸಿದ ಬಗೆಯನ್ನು ಸ್ಮರಿಸಿಕೊಂಡರು.

Written by - Zee Kannada News Desk | Last Updated : Sep 18, 2021, 04:16 PM IST
  • ಬಾಲಿವುಡ್ ನಟ ಸಂಜಯ್ ದತ್ ಇತ್ತೀಚೆಗೆ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡ ಸಂದರ್ಭದಲ್ಲಿ ತಮ್ಮ ತಂದೆ ಬೆಳಸಿದ ಬಗೆಯನ್ನು ಸ್ಮರಿಸಿಕೊಂಡರು.
ಕಾಲೇಜಿಗೆ ಹೋಗಲು ಕಾರ್ ಕೇಳಿದ ಸಂಜಯ್ ದತ್ ಗೆ ತಂದೆ ಸುನಿಲ್ ದತ್ ನೀಡಿದ ಸಲಹೆ ಏನು ಗೊತ್ತೇ?  title=
Photo Courtesy: Instagram

ನವದೆಹಲಿ: ಬಾಲಿವುಡ್ ನಟ ಸಂಜಯ್ ದತ್ ಇತ್ತೀಚೆಗೆ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡ ಸಂದರ್ಭದಲ್ಲಿ ತಮ್ಮ ತಂದೆ ಬೆಳಸಿದ ಬಗೆಯನ್ನು ಸ್ಮರಿಸಿಕೊಂಡರು.

ಸಂಜಯ್ ದತ್ (Sanjay Dutt) ಅವರ ತಾಯಿ ಮತ್ತು ತಂದೆ ಅವರನ್ನು ಮತ್ತು ಅವರ ಸಹೋದರಿಯರನ್ನು ಹೇಗೆ ಬೆಳೆಸಿದರು ಎಂಬುದರ ಕುರಿತು ಮಾತನಾದಿದ್ದಾರೆ, 'ಅವರು ನಮ್ಮ 3 ಜನರಿಗೆ ಎಂದಿಗೂ ಆ ಶ್ರೇಷ್ಠತೆಯ ಭಾವನೆಯನ್ನು ನೀಡಲಿಲ್ಲ. ಅವರು ನಮಗೆ ಒಂದು ವಿಷಯವನ್ನು ಮಾತ್ರ ಕಲಿಸಿದರು ಮತ್ತು ಮನೆಗೆಲಸದವರಾಗಿದ್ದರೂ ಕೂಡ ಹಿರಿಯರನ್ನು ಗೌರವಿಸುವುದು.ಮಕ್ಕಳನ್ನು ಪ್ರೀತಿಸಿ, ಹಿರಿಯರನ್ನು ಗೌರವಿಸಿ ಮತ್ತು ಸುನೀಲ್ ಮತ್ತು ನರ್ಗಿಸ್ ದತ್ ಅವರ ಮಕ್ಕಳೆನ್ನುವ ಆಲೋಚನೆಯನ್ನು ತಲೆಗಯಲ್ಲಿ ಬಿಟ್ಟುಕೊಳ್ಳಬೇಡಿ' ಎಂದು ಹೇಳಿದ್ದರು.

ಇದನ್ನೂ ಓದಿ: KGF Chapter 2: ಸಂಜಯ್ ದತ್ ಹುಟ್ಟುಹಬ್ಬಕ್ಕೆ ‘ಅಧೀರ’ನ ಖಡಕ್ ಪೋಸ್ಟರ್ ರಿಲೀಸ್..!

'ಕಾಲೇಜಿಗೆ ಹೋಗುವ ಮೊದಲ ದಿನ,ಅಪ್ಪ ನನ್ನನ್ನು ಬಿಡಲು ಕಾರನ್ನು ಕಳುಹಿಸುತ್ತಾರೆ ಎಂದು ನಾನು ಭಾವಿಸಿದ್ದೆ.ಕಾಲೇಜಿಗೆ ಹೋಗುವ ಮೊದಲು ಅವರು ನನಗೆ ಕರೆ ಮಾಡಿದರು ಮತ್ತು ಬಾಂದ್ರಾದಿಂದ ಆರಂಭವಾಗುವ ಸೆಕೆಂಡ್ ಕ್ಲಾಸ್ ರೈಲ್ವೆ ಪಾಸ್ ನ್ನು ನೀಡಿದರು.ನಾನು ಕಾರನ್ನು ಕೇಳಿದೆ.ಅದಕ್ಕೆ ಅವರು ನೀನು ಸಂಪಾದಿಸಿದ ದಿನ ನೀನು ಅದರಲ್ಲಿ ಕುಳಿತುಕೊಳ್ಳು ಎಂದು ಹೇಳಿದರು.ನನಗೆ ಅವರು ಪಾಸ್ ಕೊಟ್ಟು, ಆಟೋ ಅಥವಾ ಕ್ಯಾಬ್ ತೆಗೆದುಕೊಂಡು ಬಾಂದ್ರಾ ನಿಲ್ದಾಣಕ್ಕೆ ಹೋಗು ಎಂದು ಹೇಳಿದರು.ನಾನು ಬಾಂದ್ರಾ ನಿಲ್ದಾಣದಿಂದ ಚರ್ಚ್‌ಗೇಟ್‌ಗೆ ಹೋಗುತ್ತಿದ್ದೆ.ಅಲ್ಲಿಂದ ನಾನು ಎಲ್ಫಿನ್ ಸ್ಟೋನ್ ಕಾಲೇಜಿಗೆ ಹೋಗುತ್ತಿದ್ದೆ, ಹಾಗಾಗಿ ಚರ್ಚ್ ಗೇಟ್ ನಿಂದ ನಾನು ಎಲ್ಫಿನ್ ಸ್ಟೋನ್ ಗೆ ನಡೆದುಕೊಂಡು ಹೋಗುತ್ತಿದ್ದೆ. ಇದು ನಮ್ಮನ್ನು ಬೆಳೆಸಿದ ರೀತಿ 'ಎಂದು ಹೇಳಿದರು.

ಸಂಜಯ್ ದತ್ ಯಾವಾಗಲೂ ಕುಟುಂಬದ ವ್ಯಕ್ತಿಯಾಗಿ ಕಾಣುತ್ತಾರೆ ಮತ್ತು ಅವರ ಆರಂಭಿಕ ದಿನಗಳಲ್ಲಿ ತಂದೆ ತಾಯಿಗಳು ಅವರಿಗೆ ಕಲಿಸಿದ ಮೌಲ್ಯಗಳು ನಿಜಕ್ಕೂ ಸ್ಫೂರ್ತಿದಾಯಕವಾಗಿವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

Trending News