2 ಚಿತ್ರದಲ್ಲಿ ನಟಿಸಿ 1 ಕೋಟಿಯೂ ಗಳಿಸದ ದೊಡ್ಡ ಫ್ಲಾಪ್ ಹೀರೋ, ಈಗ 200 ಕೋಟಿ ಬಜೆಟ್‌ನ ಸಿನಿಮಾದಲ್ಲಿ ವಿಲನ್

Bollywood Actor: ಚಿತ್ರರಂಗಕ್ಕೆ ಬಂದು ನೆಲೆ ನಿಲ್ಲುವುದು ಯಾರಿಗೂ ಸುಲಭವಲ್ಲ... ಹೊರಗಿನವರಾಗಿರಲಿ ಅಥವಾ ಸ್ಟಾರ್ಕಿಡ್ ಆಗಿರಲಿ.. ಹಾಗೆಯೇ ಸಿನಿರಂಗದಲ್ಲಿ ಅನೇಕ ನಟರು ಸೂಪರ್‌ಹಿಟ್ ಚಿತ್ರದೊಂದಿಗೆ ಪದಾರ್ಪಣೆ ಮಾಡಿ ನಂತರದ ವರ್ಷಗಳಲ್ಲಿ ಕಣ್ಮರೆಯಾಗಿದ್ದಾರೆ..  

Written by - Savita M B | Last Updated : Dec 5, 2023, 05:34 PM IST
  • ಈ ನಟ ಸ್ಟಾರ್ಕಿಡ್...ಬಾಲಿವುಡ್ ಮತ್ತು ದಕ್ಷಿಣದ ಹಿರಿಯ ಚಲನಚಿತ್ರ ನಿರ್ಮಾಪಕರ ಮಗ
  • ಕಳೆದ ಹಲವಾರು ವರ್ಷಗಳಿಂದ ಒಂದೇ ಒಂದು ಸೋಲೋ ಹಿಟ್ ಅಥವಾ ಬ್ಲಾಕ್ಬಸ್ಟರ್ ಚಿತ್ರವನ್ನು ನೀಡಿಲ್ಲ
  • ಇಷ್ಟೆಲ್ಲಾ ವಿಫಲವಾಗಿದ್ದರೂ ಅವರಿಗೆ ದೊಡ್ಡ ಪ್ರಾಜೆಕ್ಟ್ ಗಳು ಬರುತ್ತಿವೆ.
2 ಚಿತ್ರದಲ್ಲಿ ನಟಿಸಿ 1 ಕೋಟಿಯೂ ಗಳಿಸದ ದೊಡ್ಡ ಫ್ಲಾಪ್ ಹೀರೋ, ಈಗ 200 ಕೋಟಿ ಬಜೆಟ್‌ನ ಸಿನಿಮಾದಲ್ಲಿ ವಿಲನ್ title=

Arjun Kapoor: ಈ ನಟ ಸ್ಟಾರ್ಕಿಡ್...ಬಾಲಿವುಡ್ ಮತ್ತು ದಕ್ಷಿಣದ ಹಿರಿಯ ಚಲನಚಿತ್ರ ನಿರ್ಮಾಪಕರ ಮಗ ಆದರೆ ಕಳೆದ ಹಲವಾರು ವರ್ಷಗಳಿಂದ ಒಂದೇ ಒಂದು ಸೋಲೋ ಹಿಟ್ ಅಥವಾ ಬ್ಲಾಕ್ಬಸ್ಟರ್ ಚಿತ್ರವನ್ನು ನೀಡಿಲ್ಲ. ಇಷ್ಟೆಲ್ಲಾ ವಿಫಲವಾಗಿದ್ದರೂ ಅವರಿಗೆ ದೊಡ್ಡ ಪ್ರಾಜೆಕ್ಟ್ ಗಳು ಬರುತ್ತಿವೆ. 

ಅವರು ಬೇರೆ ಯಾರೂ ಅಲ್ಲ.. ಚಲನಚಿತ್ರ ನಿರ್ಮಾಪಕ ಬೋನಿ ಕಪೂರ್ ಅವರ ಮಗ ಮತ್ತು ನಟ ಅರ್ಜುನ್ ಕಪೂರ್. ಅರ್ಜುನ್ 2012 ರಲ್ಲಿ 'ಇಶಕ್ಜಾದೆ' ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಅದು ಬ್ಲಾಕ್ ಬಸ್ಟರ್ ಆಯಿತು. ಇದಾದ ನಂತರ ಅವರು '2 ಸ್ಟೇಟ್ಸ್' ಮತ್ತು 'ಹಾಫ್ ಗರ್ಲ್ ಫ್ರೆಂಡ್' ನಂತಹ ಹಿಟ್ ಚಿತ್ರಗಳನ್ನು ನೀಡಿದರು.

ಇದನ್ನೂ ಓದಿ-ಪ್ರಭಾಸ್- ಅನುಷ್ಕಾ ಶೆಟ್ಟಿ ಇನ್ನೂ ಹಸೆಮಣೆ ಏರದಿರುವುದಕ್ಕೆ ಇದೇ ಕಾರಣವಂತೆ !

ಅರ್ಜುನ್ ಕಪೂರ್ ಅವರ 'ಹಾಫ್ ಗರ್ಲ್ ಫ್ರೆಂಡ್' 2017 ರಲ್ಲಿ ಬಂದಿ ಅಲ್ಲಿಂದ ಇಲ್ಲಿವರೆಗೂ ಒಂದೇ ಒಂದು ಹಿಟ್ ಚಿತ್ರ ನೀಡಿಲ್ಲ. ಅಂದಿನಿಂದ ಅರ್ಜುನ್ 10 ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ, ಆದರೆ ಯಾವುದೇ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಕಮಾಲ್‌ ಮಾಡಲಿಲ್ಲ. 

ಇದನ್ನೂ ಓದಿ-ಬಿಗ್‌ಬಾಸ್‌ ಮನೆಯೊಳಗೆ ಗಂಧರ್ವರು-ರಕ್ಕಸರು!

ಅರ್ಜುನ್ ಕಪೂರ್ ಅವರ ಇತ್ತೀಚಿನ 'ದಿ ಲೇಡಿ ಕಿಲ್ಲರ್' ಸಿನಿಮಾ ಲಿಮಿಟೆಡ್‌ ಪ್ರದರ್ಶನದಿಂದ ಬಾಕ್ಸ್ ಆಫೀಸ್‌ನಲ್ಲಿ ರೂ 1 ಲಕ್ಷಕ್ಕಿಂತ ಹೆಚ್ಚು ಗಳಿಸಿತು. ಈ ಹಿಂದೆ ಬಹುತಾರಾಗಣದ 'ಕುತ್ತೆ' ಚಿತ್ರ ಭಾರತದಲ್ಲಿ ಕೇವಲ 4 ಕೋಟಿ ಗಳಿಸಿತ್ತು. ಅವರ 2021 ರ ಚಲನಚಿತ್ರ 'ಸಂದೀಪ್ ಔರ್ ಪಿಂಕಿ ಫರಾರ್' ಕೋವಿಡ್ -19 ಲಾಕ್‌ಡೌನ್‌ ಕಾರಣದಿಂದಾಗಿ ನಷ್ಟವನ್ನು ಅನುಭವಿಸಿತು..

ಈ ವೈಫಲ್ಯಗಳು ಅರ್ಜುನ್ ಕಪೂರ್ ಅವರ ವೃತ್ತಿಜೀವನದ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ಸದ್ಯ ಅರ್ಜುನ್ ರೊಮ್ಯಾಂಟಿಕ್ ಡ್ರಾಮಾ 'ಮೇರಿ ಪಟ್ನಿ ಕಾ ರಿಮೇಕ್' ಚಿತ್ರೀಕರಣದಲ್ಲಿದ್ದಾರೆ. ವರದಿಯ ಪ್ರಕಾರ, ರೋಹಿತ್ ಶೆಟ್ಟಿ ಅವರ ಬಹು ನಿರೀಕ್ಷಿತ ಚಿತ್ರ 'ಸಿಂಗಮ್ ರಿಟರ್ನ್ಸ್'ನಲ್ಲಿ ಮುಖ್ಯ ಖಳನಾಯಕನ ಪಾತ್ರವನ್ನು ನಿರ್ವಹಿಸಲು ಅವರು ಸಿದ್ಧರಾಗಿದ್ದಾರೆ. ಇದು ಸಿಂಘಮ್ ಫ್ರ್ಯಾಂಚೈಸ್ ಮತ್ತು ಕಾಪ್ ಯೂನಿವರ್ಸ್‌ನ ಭಾಗವಾಗಿದೆ. ಇದರ ಅಂದಾಜು ಬಜೆಟ್ 200 ಕೋಟಿ ರೂ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News