Akshay Kumar Deepfake Video : ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ತಮ್ಮ ಮುಂಬರುವ ಚಿತ್ರ 'ಬಡೆ ಮಿಯಾ ಛೋಟೆ ಮಿಯಾ'ಗಾಗಿ ಇತ್ತೀಚಿನ ದಿನಗಳಲ್ಲಿ ಸುದ್ದಿಯಲ್ಲಿದ್ದಾರೆ. ಅಕ್ಷಯ್ ಕುಮಾರ್ ಮತ್ತು ಟೈಗರ್ ಶ್ರಾಫ್ 'ಬಡೆ ಮಿಯಾ ಛೋಟೆ ಮಿಯಾ' ಚಿತ್ರದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಇದೆಲ್ಲದರ ನಡುವೆ ಅಕ್ಷಯ್ ಕುಮಾರ್ ಡೀಪ್ಫೇಕ್ಗೆ ಬಲಿಯಾಗಿದ್ದಾರೆ. ಇತ್ತೀಚೆಗೆ, ಅಕ್ಷಯ್ ಕುಮಾರ್ ಅವರ ಡೀಪ್ಫೇಕ್ ವೀಡಿಯೊ ಕಾಣಿಸಿಕೊಂಡಿದೆ.
ಇದನ್ನೂ ಓದಿ:ಕೆರೆಬೇಟೆ ಸಿನಿಮಾದ ರೊಮ್ಯಾಂಟಿಕ್ ಸಾಂಗ್ ರಿಲೀಸ್
ನಟ ಅಕ್ಷಯ್ ಕುಮಾರ್ ಅವರ ಡೀಪ್ಫೇಕ್ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಬಹಳ ವೇಗವಾಗಿ ವೈರಲ್ ಆಗುತ್ತಿದೆ. ವೀಡಿಯೊದಲ್ಲಿ, ಅಕ್ಷಯ್ ಕುಮಾರ್ ಅವರ ಧ್ವನಿ ಮತ್ತು ಮುಖವನ್ನು ಬಳಸಿಕೊಂಡು ಗೇಮ್ ಅಪ್ಲಿಕೇಶನ್ ಅನ್ನು ಪ್ರಚಾರ ಮಾಡಲಾಗಿದೆ. ವರದಿಗಳ ಪ್ರಕಾರ, ಡೀಪ್ಫೇಕ್ ವೀಡಿಯೊ ವೈರಲ್ ಆದ ನಂತರ ಅಕ್ಷಯ್ ಕುಮಾರ್ ದೂರು ದಾಖಲಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಪೊಲೀಸರೂ ಚುರುಕಾಗಿದ್ದು, ವಿಡಿಯೋ ಮೂಲದ ತನಿಖೆ ಆರಂಭಿಸಿದ್ದಾರೆ.
dear @akshaykumar sir
this is a matter of concern when #deepfake videos are circulating over social media & misleading people
Needs timely & harsh action pic.twitter.com/Qj1IA151ji— Puneet (@iampuneet_07) November 8, 2023
ದಿನದಿಂದ ದಿನಕ್ಕೆ ಡೀಪ್ಫೇಕ್ಗಳ ಸಮಸ್ಯೆ ಗಂಭೀರವಾಗುತ್ತಿದೆ. ಇಲ್ಲಿಯವರೆಗೆ ಅನೇಕ ಸೆಲೆಬ್ರಿಟಿಗಳು ಡೀಪ್ಫೇಕ್ ವೀಡಿಯೊಗಳಿಗೆ ಬಲಿಯಾಗಿದ್ದಾರೆ. ಅಕ್ಷಯ್ ಕುಮಾರ್ ಗಿಂತ ಮೊದಲು, ರಶ್ಮಿಕಾ ಮಂದಣ್ಣ, ಕತ್ರಿನಾ ಕೈಫ್, ನೋರಾ ಫತೇಹಿ, ಕಾಜೋಲ್, ಸೋನು ಸೂದ್, ಕ್ರಿಕೆಟಿಗ ಶುಭಮನ್ ಗಿಲ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಡೀಪ್ಫೇಕ್ಗಳಿಗೆ ಬಲಿಯಾಗಿದ್ದಾರೆ.
ಇದನ್ನೂ ಓದಿ: ವಿಜಯ್ ದಳಪತಿ ಹಿಂದೆ ಇರುವ ಆ ರಾಜಕೀಯ ಚತುರ ಯಾರು?
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.