ಜನ್ಮಭೂಮಿ To ಪುಣ್ಯಭೂಮಿ: ಅಪ್ಪು ಅಮರಜ್ಯೋತಿ ಯಾತ್ರೆಗೆ ಚಾಲನೆ ನೀಡಿದ ಅಣ್ಣಾವ್ರ ತಂಗಿ

‘ಅಪ್ಪು’ ಅಮರ ಜ್ಯೋತಿ ಯಾತ್ರೆಗೆ ಇಂದು ತಮಿಳುನಾಡಿನ ತಾಳವಾಡಿ ತಾಲೂಕಿನ ಗಾಜನೂರಿನಲ್ಲಿ ಅಣ್ಣಾವ್ರ ತಂಗಿ ನಾಗಮ್ಮ ಚಾಲನೆ ನೀಡಿದ್ದಾರೆ.

Written by - Zee Kannada News Desk | Last Updated : Apr 21, 2022, 08:55 PM IST
  • ಜನ್ಮಭೂಮಿ ಗಾಜನೂರು To ಪುಣ್ಯಭೂಮಿ ಬೆಂಗಳೂರಿಗೆ ಯಾತ್ರೆ
  • ಅಪ್ಪು ಅಮರಜ್ಯೋತಿ ಯಾತ್ರೆಗೆ ಚಾಲನೆ ನೀಡಿದ ಅಣ್ಣಾವ್ರ ತಂಗಿ
  • ದೊಡ್ಮನೆ ಅಭಿಮಾನಿಗಳ ವತಿಯಿಂದ 4 ದಿನಗಳ ಅಮರ ಜ್ಯೋತಿ ಯಾತ್ರೆ
ಜನ್ಮಭೂಮಿ To ಪುಣ್ಯಭೂಮಿ: ಅಪ್ಪು ಅಮರಜ್ಯೋತಿ ಯಾತ್ರೆಗೆ ಚಾಲನೆ ನೀಡಿದ ಅಣ್ಣಾವ್ರ ತಂಗಿ  title=
ಜನ್ಮಭೂಮಿ ಗಾಜನೂರು To ಪುಣ್ಯಭೂಮಿ ಬೆಂಗಳೂರು

ಚಾಮರಾಜನಗರ: ದೊಡ್ಮನೆ ಅಭಿಮಾನಿಗಳ ವತಿಯಿಂದ ಅಮರ ಜ್ಯೋತಿ ಯಾತ್ರೆ ಎಂಬ 4 ದಿನಗಳ ಯಾತ್ರೆಗೆ ಗುರುವಾರ(ಏ.21) ತಮಿಳುನಾಡಿನ ತಾಳವಾಡಿ ತಾಲೂಕಿನ ಗಾಜನೂರಲ್ಲಿ ಅಣ್ಣಾವ್ರ ತಂಗಿ ನಾಗಮ್ಮ ಚಾಲನೆ ನೀಡಿದ್ದಾರೆ.

ಡಾ.ರಾಜ್ ಕುಮಾರ್ ಹುಟ್ಟುಹಬ್ಬದ ದಿನದಂದು ಈ ಯಾತ್ರೆ ಮುಕ್ತಾಯಗೊಳ್ಳಲಿದೆ. ಪುನೀತ್ ರಾಜ್ ಕುಮಾರ್ ಹಾಗೂ ಅಣ್ಣಾವ್ರು ಎಂದಿಗೂ ಅಮರ, ಅವರ ಸೇವೆಯೂ ಅಮರ, ಅವರ ನಡೆ-ನುಡಿಯನ್ನು ಎಲ್ಲರೂ ಪಾಲಿಸಬೇಕೆಂಬ ದೃಷ್ಟಿಯಿಂದ ಈ 4 ದಿನಗಳ ಯಾತ್ರೆಯನ್ನು ಅಭಿಮಾನಿಗಳು ಹಮ್ಮಿಕೊಂಡಿದ್ದಾರೆ.

ಇದನ್ನೂ ಓದಿ: ಗಲ್ಲಾಪೆಟ್ಟಿಗೆ ಕೊಳ್ಳೆಹೊಡೆದ KGF2.. 7 ದಿನಕ್ಕೆ 723.15 ಕೋಟಿ ವರ್ಲ್ಡ್ ವೈಡ್ ಕಲೆಕ್ಷನ್‌!

ಡಾ.ರಾಜ್ ಪ್ರತಿಮೆ ಹಾಗೂ ಅಪ್ಪು ಪ್ರತಿಮೆಯು ರಥದಲ್ಲಿದೆ. ಗಾಜನೂರಲ್ಲಿ ಜ್ಯೋತಿಯನ್ನು ಬೆಳಗಿಸಲಾಗಿದೆ. ಇದನ್ನು ಅಣ್ಣಾವ್ರ ಸ್ಮಾರಕದೊಟ್ಟಿಗೆ ಹುಟ್ಟುಹಬ್ಬದ ದಿನದಂದು ಎರಡೂ ಜ್ಯೋತಿಯನ್ನು ಒಂದು ಮಾಡಲಾಗುತ್ತದೆ. ಇನ್ನು ಈ ಅಮರಜ್ಯೋತಿ ಯಾತ್ರೆಗೆ ಅಭೂತಪೂರ್ವ ಬೆಂಬಲ ದೊರಕಿದ್ದು, ಹೆದ್ದಾರಿಯಲ್ಲಿ ಹಾದುಹೋಗುವ ಪ್ರತಿ ಗ್ರಾಮದಲ್ಲಿಯೂ ಅಣ್ಣಾವ್ರು ಮತ್ತು ಅಪ್ಪು ಪ್ರತಿಮೆಗೆ ಮಾಲೆ ಹಾಕಿ, ಪಟಾಕಿ ಸಿಡಿಸಿ ಬರಮಾಡಿಕೊಳ್ಳಲಾಗುತ್ತಿದೆ.

‘ಕರುನಾಡ ಜನರ ಪ್ರೀತಿಯ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರನ್ನು ಕಳೆದುಕೊಂಡ ನೋವಿನಲ್ಲಿ ನಾವಿದ್ದೇವೆ. ವರನಟ ಡಾ.ರಾಜ್ ಕುಮಾರ್ ಅವರ ಜನ್ಮದಿನ ಸಂಭ್ರಮ ಮತ್ತು ಅಪ್ಪು ಕಳೆದುಕೊಂಡ ದುಃಖವನ್ನು ನಾವು ಒಟ್ಟಿಗೆ ಎದುರಿಸಬೇಕಾಗಿದೆ. ಹೀಗಾಗಿ ಶಾಂತಿ ಜ್ಯೋತಿಯ ಮೂಲಕ ನೊಂದ ಜೀವಗಳಿಗೆ ನೆಮ್ಮದಿ ನೀಡುವ ನಿಟ್ಟಿನಲ್ಲಿ ನಾವು 4 ದಿನಗಳ ಯಾತ್ರೆಯನ್ನು ಹಮ್ಮಿಕೊಂಡಿದ್ದೇವೆ’ ಎಂದು ರಥಯಾತ್ರೆ ಆಯೋಜಕ ಮುನಿಯಪ್ಪ ಹೇಳಿದ್ದಾರೆ.

ಇದನ್ನೂ ಓದಿ: ಹೊಸ ಸಿನಿಮಾ ಪ್ರಕಟಿಸಿದ ಹೊಂಬಾಳೆ ಫಿಲ್ಮ್ಸ್‌.. ಮತ್ತೊಂದು ಅಧ್ಯಾಯಕ್ಕೆ ಮುನ್ನುಡಿ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News