ಬಿಗ್ ‌ಬಾಸ್ ಕನ್ನಡ 10 : ದ್ವೇಷ ಮರೆತು ಒಂದಾದ ವಿನಯ್ - ಸಂಗೀತಾ.. ಸಂಗೀತಾ-ಕಾರ್ತಿಕ್ ಫೈಟ್‌!

Bigg Boss Kannada Season 10 : ಸಂಗೀತಾ ಮತ್ತು ವಿನಯ್ ನಡುವಿನ ಜಗಳ ತಾರಕಕ್ಕೇರಿತ್ತು. ಸಣ್ಣ ಸಣ್ಣ ವಿಚಾರಕ್ಕೂ ಇಬ್ಬರೂ ಜಗಳಕ್ಕೆ ನಿಲ್ಲುತ್ತಿದ್ದರು.

Written by - Chetana Devarmani | Last Updated : Oct 20, 2023, 11:45 AM IST
  • ಬಿಗ್ ‌ಬಾಸ್ ಕನ್ನಡ ಸೀಸನ್‌ 10
  • ಸಂಗೀತಾ ಮತ್ತು ವಿನಯ್ ನಡುವಿನ ಜಗಳ
  • ದ್ವೇಷ ಮರೆತು ಒಂದಾದ ವಿನಯ್ - ಸಂಗೀತಾ
ಬಿಗ್ ‌ಬಾಸ್ ಕನ್ನಡ 10 : ದ್ವೇಷ ಮರೆತು ಒಂದಾದ ವಿನಯ್ - ಸಂಗೀತಾ.. ಸಂಗೀತಾ-ಕಾರ್ತಿಕ್ ಫೈಟ್‌!  title=

Bigg Boss Kannada 10 : ಬಿಗ್‌ ಬಾಸ್‌ ಮನೆಯಲ್ಲಿ ಮೊದಲ ವಾರದ ನಾಮಿನೇಷನ್‌ನಿಂದ ಶುರುವಾದ ಸಂಗೀತಾ ಮತ್ತು ವಿನಯ್ ನಡುವಿನ ಜಗಳ ತಾರಕಕ್ಕೇರಿತ್ತು. ಸಣ್ಣ ಸಣ್ಣ ವಿಚಾರಕ್ಕೂ ಇಬ್ಬರೂ ಜಗಳಕ್ಕೆ ನಿಲ್ಲುತ್ತಿದ್ದರು. ಒಬ್ಬರ ಧ್ವನಿ ಕೇಳಿದರೆ ಇನ್ನೊಬ್ಬರಿಗೆ ಸಹಿಸಲಾಗದಷ್ಟು ದ್ವೇಷ ಬೆಳೆದುಕೊಂಡಿತ್ತು. ಈ ಜಗಳವನ್ನು ಶಮನ ಮಾಡುವ ಕೆಲಸಕ್ಕೆ ಕಾರ್ತಿಕ್‌ ಮುಂದಾಗಿದ್ದರು. ಇದೀಗ ಸಂಗೀತಾ - ವಿನಯ್ ಇಬ್ಬರೂ ದ್ವೇಷ ಮರೆತು‌ ಒಂದಾಗಿದ್ದಾರೆ.  

ಇದನ್ನೂ ಓದಿ : ಬಿಗ್ ಬಾಸ್ vs ಸರೆಗಮಪ : ಉತ್ತಮ ಟಿಆರ್‌ಪಿ ಪಡೆದ ರಿಯಾಲಿಟಿ ಶೋ ಇದು..! 

ಹರಹರ ಮಹಾದೇವ ಸಿರೀಯಲ್‌ನಲ್ಲಿ ಪತಿ - ಪತ್ನಿಯರಾಗಿ ನಟಿಸಿದ್ದ ಸಂಗೀತಾ - ವಿನಯ್ ಬಿಗ್‌ ಬಾಸ್‌ ಮನೆಗೆ ಬಂದಿದ್ದಾರೆ. ಬಿಗ್ ಬಾಸ್ ಮನೆಗೆ ಬಂದ ನಂತರ ಇಬ್ಬರ ಮಧ್ಯೆಯೂ ವೈಮನಸ್ಸು ಶುರುವಾಗಿತ್ತು. ಬದ್ಧ ವೈರಿಗಳಂತೆ ವರ್ತಿಸುತ್ತಿದ್ದರು. ಟಾಸ್ಕ್‌ ಆಡುವ ವಿಚಾರದಲ್ಲಿಯೂ ಒಬ್ಬರ ಮಧ್ಯೆ ಜಗಳವಾಗಿತ್ತು. 

ಸಂಗೀತಾ ಅವರು ವಿನಯ್‌ ವಾಯ್ಸ್‌ ಕೇಳಿದ್ರೆ ಹೆದರಿಕೆ ಆಗುತ್ತೆ ಎಂದಿದ್ದರು. ಈ ಮಾತು ಅವರ ಜಗಳಕ್ಕೆ ತುಪ್ಪ ಸುರಿದಿತ್ತು. ಇಬ್ಬರ ಮಧ್ಯೆ ಸಂಧಾನ ಮಾಡಲು ಮನೆಯವರೆಲ್ಲ ಹರಸಾಹಸಪಟ್ಟರು. ಆದರೆ ಸಾಧ್ಯವಾಗಿರಲಿಲ್ಲ. ಅಕ್ಟೋಬರ್ 19 ರ ಎಪಿಸೋಡ್‌ನಲ್ಲಿ ಇಬ್ಬರೂ ಕುಳಿತು ಮಾತನಾಡಿದ್ದಾರೆ. ಇದು ಅವರ ಫ್ಯಾನ್ಸ್‌ಗೆ ಸಂತಸ ತಂದಿದೆ. 

ಸಂಗೀತಾ-ಕಾರ್ತಿಕ್ ಫೈಟ್‌!

ವಿನಯ್ ಮತ್ತು ಸಂಗೀತಾ ನಡುವಿನ ಫೈಟ್‌ ಈ ಸಲದ ಬಿಗ್‌ಬಾಸ್‌ ಮನೆಯಲ್ಲಿ ಸಾಕಷ್ಟು ಏರುಪೇರುಗಳನ್ನು ಸೃಷ್ಟಿಸುತ್ತಿದೆ. ಪ್ರತಿಯೊಂದು ಹಂತದಲ್ಲಿಯೂ ಒಬ್ಬರು ಇನ್ನೊಬ್ಬರನ್ನು ಕೆಣಕುವುದು, ಮಾತಿನ ಚಕಮಕಿ ಮೊದಲಿನಿಂದಲೂ ನಡೆದೇ ಇತ್ತು. ಆಗೆಲ್ಲ ಸಂಗಿತಾಗೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಬೆಂಬಲಕ್ಕೆ ನಿಂತವರು ಕಾರ್ತಿಕ್. ಆದರೆ ಈಗ ವಿನಯ್‌ ಮತ್ತು ಸಂಗೀತಾ ರಾಜಿಯಾಗಿದ್ದಾರೆ. ಸಂಗೀತಾ ತಾವು ಆಡಿದ ‘ಥ್ರೆಟನಿಂಗ್’ ಎಂಬ ಪದವನ್ನು ಹಿಂಪಡೆದು ಕ್ಷಮೆ ಕೇಳಿದ್ದಾರೆ. ಹಾಗೆಯೇ ವಿನಯ್ ಕೂಡ, ತಮಗೆ ನಿಮ್ಮನ್ನು ಹರ್ಟ್‌ ಮಾಡುವ ಉದ್ದೇಶ ಇಲ್ಲ. ನಿಮ್ಮ ಬಗ್ಗೆ ಇನ್ನು ಎಂದಿಗೂ ಕೆಟ್ಟದಾಗಿ ಮಾತಾಡಲ್ಲ. ಹರ್ಟ್‌ ಮಾಡಲ್ಲ ಎಂದು ಹೇಳಿ ಕ್ಷಮೆ ಕೋರಿದ್ದಾರೆ.

ಅಲ್ಲಿಗೆ ಅವರಿಬ್ಬರೂ ಹಗ್‌ ಮಾಡಿಕೊಳ್ಳುವುದರ ಮೂಲಕ, ಬಿಗ್‌ಬಾಸ್‌ ಮನೆಯೊಳಗಿನ ಬಹುದೊಡ್ಡ ಜಗಳವೊಂದು ಸುಖಾಂತ್ಯ ಕಂಡಿದೆ. 
ಆದರೆ ಇದುವರೆಗೆ ಬೆಸ್ಟ್‌ ಫ್ರೆಂಡ್ಸ್ ಆಗಿ ಸದಾ ಜೊತೆಗೇ ಕಾಣಿಸಿಕೊಳ್ಳುತ್ತಿದ್ದ ಕಾರ್ತಿಕ್ ಮತ್ತು ಸಂಗೀತಾ ನಡುವೆ ಫೈಟ್‌ ಶುರುವಾಗಿದೆ! ಇದುವರೆಗೆ ಪರಸ್ಪರ ಕಾಂಪ್ಲಿಮೆಂಟರಿಯಾಗಿಯೇ ಒದಗಿಬರುತ್ತಿದ್ದ ಅವರ ನಡುವೆ ಫೈಟ್ ಹುಟ್ಟಿಕೊಂಡಿದ್ದ ಹೇಗೆ? ಅದಕ್ಕೆ ಕಾರಣವೇನು? ಹಾಗಾದ್ರೆ ಹೊಸದೊಂದು ಜಗಳಕ್ಕೆ ಬಿಗ್‌ಬಾಸ್‌ ಮನೆ ಸಾಕ್ಷಿಯಾಗುತ್ತಿದೆಯೇ? ಎಂಬ ಪ್ರಶ್ನೆ ಕಾಡ್ತಿದೆ.

ಇದನ್ನೂ ಓದಿ : BBK10 : ಸಂಗೀತಾ - ವಿನಯ್ ನಡುವೆ ಹೊತ್ತಿಕೊಂಡ ಬೆಂಕಿ ಕಿಡಿಯನ್ನು ಆರಿಸ್ತಾರಾ ಕಾರ್ತಿಕ್? 

ಕಾರ್ತಿಕ್ ಮತ್ತು ಸಂಗೀತಾ ನಡುವೆ ಫೈಟ್‌ ಸಿಕ್ವೆನ್ಸ್‌ ನಡೆದಿದ್ದು ನಿಜವೇ! ಆದರದು ಕೋಪದಿಂದ ಹುಟ್ಟಿಕೊಂಡ ಫೈಟ್ ಅಲ್ಲ, ಸ್ನೇಹದಿಂದ, ಸಲಿಗೆಯಿಂದ ಹುಟ್ಟಿಕೊಂಡ ತಮಾಷೆಯ ಫೈಟ್‌. ಬಿಗ್‌ಬಾಸ್ ಮನೆಯ ಹಾಲ್‌ನಲ್ಲಿ ಕಾರ್ತಿಕ್ ಮತ್ತು ಸಂಗೀತಾ ಇಬ್ಬರೂ ನಿಂತಿದ್ದಾರೆ. ಸಂಗೀತಾ, ‘ಸೋಲೊ ಪರ್ಫಾರ್ಮೆನ್ಸ್‌ ನಡೀತಿದ್ಯಾ?’ ಎಂದು ಕೇಳುತ್ತಾರೆ. ಕಾರ್ತಿಕ್, ‘ಸೋಲೊ ಎಲ್ಲ ಇಲ್ಲ’ ಎಂದು ಉತ್ತರಿಸುತ್ತಾರೆ. ಹಾಗೆಯೇ, ‘ಸ್ಕಿಟ್‌ ಸೌಂಡ್ ಅದು. ಅಲ್ನೋಡು’ ಎಂದು ಸಂಗೀತಾ ಗಮನವನ್ನು ಬೇರೆ ಕಡೆಗೆ ಸೆಳೆಯುತ್ತಾರೆ. ಸಂಗೀತಾ ಅತ್ತ ನೋಡುತ್ತಿದ್ದ ಹಾಗೆಯೇ ಅವರಿಗೆ ಒಂದು ಒದೆ ಕೊಟ್ಟು ಓಡಿಹೋಗುತ್ತಾರೆ ಕಾರ್ತಿಕ್. 

ಸಂಗೀತಾ ಹುಸಿಮುನಿಸಿಂದ, ‘ಕಾರ್ತಿಕ್…  ನೋ.. ನೋ..’ ಎನ್ನುತ್ತಾರೆ. ಕಾರ್ತಿಕ್ ಮತ್ತ ಸಂಗೀತಾ ಹತ್ತಿರ ಬಂದು, ‘ಯೆಸ್‌ ಯೆಸ್‌’ ಎಂದು ಮತ್ತೆ ಒದೆಯಲು ಯತ್ನಿಸುತ್ತಾರೆ. ಆಗ ಸಂಗೀತಾ, ಕಾರ್ತಿಕ್ ಕೈ ಹಿಡಿದುಕೊಂಡು ತಾವೂ ತಿರುಗಿ ಒದೆಯುತ್ತ, ‘ಎಲ್ಲಿಗೆ ಹೊಡಿತೀನಿ ಗೊತ್ತಿಲ್ಲ’ ಎನ್ನುತ್ತಾರೆ. ಕಾರ್ತಿಕ್ ಫೈಟ್‌ ಮಾಡುವವರ ಹಾಗೆ ಹಾವಭಾವ ಮಾಡುತ್ತ ಅವರ ಎದುರಿಗೆ ನಿಲ್ಲುತ್ತಾರೆ. ಸಂಗೀತಾ ಅತ್ತ ಹೋಗುತ್ತಿದ್ದ ಹಾಗೆಯೇ, ‘ಬೇಜಾರಾಯ್ತಾ?’ ಎಂದು ಹೆಗಲ ಮೇಲೆ ಕೈ ಹಾಕಲು ಹೋಗುತ್ತಾರೆ. ಆಗ ಸಂಗೀತಾ, ಅಫ್‌ಕೋರ್ಸ್‌’ ಎನ್ನುತ್ತ ಕಾರ್ತಿಕ್‌ಗೆ ಇನ್ನಷ್ಟು ಹೊಡೆಯುತ್ತಾರೆ. ಆ ರಭಸಕ್ಕೆ ಅವರ ಕಾಲಲ್ಲಿನ ಚಪ್ಪಲಿ ಬಿದ್ದು ಹೋಗುತ್ತದೆ. ಕಾರ್ತಿಕ್ ಚಪ್ಪಲಿಯನ್ನು ಒದ್ದುಕೊಂಡು ಹೋಗುತ್ತಾರೆ.

ಹೀಗೆ ಪರಸ್ಪರ ತಮಾಷೆಯಾಗಿ, ಮಾಕ್‌ ಫೈಟ್ ಮಾಡುತ್ತ ಕಳೆದ ಚಂದದ ಕ್ಷಣಗಳು ಈ ವಿಡಿಯೊದಲ್ಲಿ ಸೆರೆಯಾಗಿವೆ. ಈ ಫೈಟ್‌ ಸಂಗೀತಾ ಮತ್ತು ಕಾರ್ತಿಕ್ ಮಧ್ಯೆ ಬಿರುಕು ಮೂಡಿಸುವುದಲ್ಲ, ಅವರ ಸ್ನೇಹಸಂಬಂಧವನ್ನು ಇನ್ನಷ್ಟು ಗಟ್ಟಿಕೊಳಿಸುವಂತೆ ಕಾಣಿಸುತ್ತದೆ. ಬಿಗ್‌ಬಾಸ್ ಕನ್ನಡ 24 ಗಂಟೆ ನೇರಪ್ರಸಾರವನ್ನು JioCinemaದಲ್ಲಿ ಉಚಿತವಾಗಿ ನೋಡಿ. ಪ್ರತಿದಿನದ ಎಪಿಸೋಡ್‌ಗಳನ್ನು Colors Kannada ದಲ್ಲಿ ಪ್ರತಿದಿನ ರಾತ್ರಿ 9.30ಗೆ ವೀಕ್ಷಿಸಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News