BBK 10: "ನನಗೆ ತುಕಾಲಿ ಸಂತು ಅಸಹ್ಯವಾಗಿ ಕಾಣಿಸಿದರು": ಬೇಸರ ವ್ಯಕ್ತಪಡಿಸಿದ ವರ್ತೂರ್‌ ಸಂತೋಷ್‌!

Bigg Boss: ಬಿಗ್‌ಬಾಸ್‌ ಮನೆಯಲ್ಲಿ ನಾಮಿನೇಷನ್‌ ವಿಚಾರವಾಗಿ ವರ್ತೂರ್‌ ಸಂತೋಷ್‌, ತುಕಾಲಿ ಸಂತು ಅಸಹ್ಯವಾಗಿ ಕಾಣಿಸಿದರು ಎಂದು ಹೇಳಿದ್ದಾರೆ. ಹಾಗಾದ್ರೆ ವವರ್ತೂರ್‌ ಸಂತೋಷ್‌ ಹೀಗೇಳಿದ್ದು ಯಾಕೆ? ಇಲ್ಲಿದೆ ಸಂಪೂರ್ಣ ಮಾಹಿತಿ.  

Written by - Zee Kannada News Desk | Last Updated : Dec 21, 2023, 10:58 AM IST
  • ನಾಮಿನೇಷನ್ ಚಟುವಟಿಕೆ ವೇಳೆ ನಮ್ರತಾಗೆ ತುಕಾಲಿ ಸಂತು ವಿಶೇಷ ಅಧಿಕಾರ ನೀಡಿದ್ದು, ವಿಶೇಷ ಅಧಿಕಾರವನ್ನ ಬಳಸಿಕೊಂಡ ನಮ್ರತಾ.. ವರ್ತೂರು ಸಂತೋಷ್‌ರನ್ನ ನೇರವಾಗಿ ನಾಮಿನೇಟ್ ಮಾಡಿದರು.
  • ಈ ಹಿಂದೆ ತುಕಾಲಿ ಸಂತುರನ್ನ ನಾಮಿನೇಷನ್‌ನಿಂದ ಸ್ನೇಹಿತ್‌ ಬಚಾವ್ ಮಾಡಿದ್ದು, ಹಾಗಾಗಿ ಕಳೆದ ವಾರ ನಮ್ರತಾ ನಾಮಿನೇಟ್ ಆಗುವುದನ್ನ ತುಕಾಲಿ ಸಂತು ತಪ್ಪಿಸಿದ್ದರು.
  • ಸಂಗೀತಾ ತಮ್ಮ ಪಾಡಿಗೆ ತಾವು ಕೂತಿದ್ದರೂ, ಗನ್‌ನಿಂದ ಶೂಟ್‌ ಮಾಡುವ ಹಾಗೆ ವಿನಯ್‌ ಮಾಡಿದಾಗ, ಅಲ್ಲೇ ಪಕ್ಕದಲ್ಲೇ ಕೂತಿದ್ದ ತುಕಾಲಿ ಸಂತು ಸಂಗೀತಾ ಕಡೆಗೆ ಬಾಣ ಬಿಟ್ಟರು.
BBK 10: "ನನಗೆ ತುಕಾಲಿ ಸಂತು ಅಸಹ್ಯವಾಗಿ ಕಾಣಿಸಿದರು": ಬೇಸರ ವ್ಯಕ್ತಪಡಿಸಿದ ವರ್ತೂರ್‌ ಸಂತೋಷ್‌! title=

Varthur Santosh Talks About Tukali Santosh: ಬಿಗ್‌ಬಾಸ್‌ ಮನೆಯಲ್ಲಿ 11ನೇ ವಾರದ ನಾಮಿನೇಷನ್ ಚಟುವಟಿಕೆ ವೇಳೆ ನಮ್ರತಾಗೆ ತುಕಾಲಿ ಸಂತು ವಿಶೇಷ ಅಧಿಕಾರ ನೀಡಿದ್ದು, ವಿಶೇಷ ಅಧಿಕಾರವನ್ನ ಬಳಸಿಕೊಂಡ ನಮ್ರತಾ.. ವರ್ತೂರು ಸಂತೋಷ್‌ರನ್ನ ನೇರವಾಗಿ ನಾಮಿನೇಟ್ ಮಾಡಿದರು. "ಈ ಮನೆಯಲ್ಲಿ ಬೇರೆಯವರಿಗೆ ಹೋಲಿಸಿದರೆ ವರ್ತೂರು ಸಂತೋಷ್‌ ಕಾಂಟ್ರಿಬ್ಯೂಷನ್ ತೀರಾ ಕಡಿಮೆ ಇದೆ" ಎಂದರು ನಮ್ರತಾ. ಅಷ್ಟಕ್ಕೂ, ನಮ್ರತಾಗೆ ತುಕಾಲಿ ಸಂತು ವಿಶೇಷ ಅಧಿಕಾರ ಕೊಟ್ಟಿದ್ಯಾಕೆ ಅಂದ್ರೆ ‘ಋಣ’ದ ಕಥೆ ಹೇಳಿದ್ದಾರೆ ತುಕಾಲಿ ಸಂತು. 

ಈ ಹಿಂದೆ ತುಕಾಲಿ ಸಂತುರನ್ನ ನಾಮಿನೇಷನ್‌ನಿಂದ ಸ್ನೇಹಿತ್‌ ಬಚಾವ್ ಮಾಡಿದ್ದು, ಹಾಗಾಗಿ ಕಳೆದ ವಾರ ನಮ್ರತಾ ನಾಮಿನೇಟ್ ಆಗುವುದನ್ನ ತುಕಾಲಿ ಸಂತು ತಪ್ಪಿಸಿದ್ದರು. ಆಗ ಸ್ನೇಹಿತ್ ಋಣ ತೀರಿಸಿದ್ದೇನೆ ಅಂತ ತುಕಾಲಿ ಸಂತು ಹೇಳಿದಕ್ಕೆ, ಈಗಲೂ ನಮ್ರತಾಗೆ ವಿಶೇಷ ಅಧಿಕಾರ ಕೊಟ್ಟು ಮತ್ತದೇ ಋಣದ ಕಥೆ ಹೇಳಿದ್ದಾರೆ ತುಕಾಲಿ ಸಂತು. ಓಪನ್ ನಾಮಿನೇಷನ್‌ ವೇಳೆ ತಮ್ಮನ್ನ ಯಾರು ನಾಮಿನೇಟ್ ಮಾಡ್ತಾರೋ.. ಅವರನ್ನೇ ತುಕಾಲಿ ಸಂತು ನಾಮಿನೇಟ್ ಮಾಡ್ತಾ ಬಂದಿದ್ದಾರೆ. ನಾಮಿನೇಷನ್‌ ವೇಳೆ ‘ಟಿಟ್ ಫಾರ್ ಟ್ಯಾಟ್’ ಅನುಸರಿಸುತ್ತಿದ್ದಾರೆ ತುಕಾಲಿ ಸಂತು, ಆದರೇ ಬಿಗ್‌ಬಾಸ್‌ನ 11ನೇ ವಾರದ ನಾಮಿನೇಷನ್‌ನಲ್ಲಿ ತುಕಾಲಿ ಸಂತು ವಿರುದ್ಧ ತನಿಷಾ ವೋಟ್ ಹಾಕಿ, ಹೀಗಾಗಿ ತಮಗೆ ಅವಕಾಶ ಸಿಕ್ಕಾಗ.. ತನಿಷಾ ವಿರುದ್ಧ ತುಕಾಲಿ ಸಂತು ಮತ ಚಲಾಯಿಸಿದರು. ಇದೇ ನಾಮಿನೇಷನ್‌ನಲ್ಲಿ ತುಕಾಲಿ ಸಂತು ವಿರುದ್ಧ ಸಿರಿ ಮತ ಹಾಕಲಿಲ್ಲವೆಂಬ ಕಾರಣಕ್ಕೆ, ಸಿರಿಯರನ್ನ ತುಕಾಲಿ ಸಂತು ನಾಮಿನೇಟ್ ಮಾಡಲಿಲ್ಲ. ಇದನ್ನ ಗಮನಿಸಿದ ವರ್ತೂರು ಸಂತೋಷ್ ‘ಅಸಹ್ಯ’ ಎಂದಿದ್ದಾರೆ.

ಇದನ್ನೂ ಓದಿ: BBK 10: "ಈ ಚರ್ಚೆಯಲ್ಲಿ ನನ್ನ ಹೆಸರು ತೆಗೆದುಕೊಳ್ಳೋ ಹಾಗಿಲ್ಲ": ತನಿಷಾ ವಿರುದ್ದ ಸಿಟಿದೆದ್ದ ನಮ್ರತಾ!

ವರ್ತೂರು ಸಂತೋಷ್,  "ನನಗೆ ತುಕಾಲಿ ಸಂತು ಅಸಹ್ಯವಾಗಿ ಕಾಣಿಸಿದರು. ಸಿರಿ ಬಗ್ಗೆ ಏನೇನೋ ಹೇಳಿದ್ದ. ಆದರೆ, ಸಿರಿ ನಾಮಿನೇಟ್ ಮಾಡಲಿಲ್ಲ ಅಂತ ಇವನೂ ಮಾಡಲಿಲ್ಲ" ಅಂತ ಹೇಳಿದಕ್ಕೆ ಸಂಗೀತಾ "ಅವರು ಪ್ರತಿ ಬಾರಿ ಹೀಗೇ ಮಾಡೋದು. ನಾನು ಅಂದ್ರೆ ಅವರಿಗೆ ಯಾಕೆ ಆಗಲ್ಲ ಹೇಳಿ? ನಾನು ಅವರನ್ನ ನಾಮಿನೇಟ್ ಮಾಡ್ತೀನಿ ಅಂತ" ಮಾತನಾಡಿದರು. ಆಗ ವರ್ತೂರು ಸಂತೋಷ್, "ಈಗ ಅದು ಎದ್ದು ಕಾಣ್ತಿದೆ. ನೀನು ಮತ್ತು ಕಾರ್ತಿಕ್ ಸೆಪರೇಟ್ ಆಗಿದ್ದು ಆಡಿದರೆ, ನಿಜವಾಗಿಯೂ ಫೇರ್ ಆಗಿ ಕಾಣಿಸುತ್ತೆ. ನನಗೂ ಅದು ಅನಿಸುತ್ತೆ. ಫ್ರೆಂಡ್‌ಶಿಪ್‌ ಪಕ್ಕಕ್ಕೆ ಇಡಿ ಎಂದಿದಕ್ಕೆ ಸಂಗೀತಾ ನಿಮಗೇನು ಕಾಣಿಸ್ತಿದ್ಯೋ.. ನನಗೆ ಗೊತ್ತಿಲ್ಲ. ನಮ್ಮಲ್ಲೇ ತುಂಬಾ ಸಲಿ ಜಗಳ ಆಗಿದೆ. ನಮ್ಮಲ್ಲಿ ಒಬ್ಬರ ಮೇಲೆ ಒಬ್ಬರು ಡಿಪೆಂಡ್ ಆಗಿ ಯಾವತ್ತೂ ಆಡಿಲ್ಲ. ನಾನು ಬೇರೆ ತಂಡಕ್ಕೂ ಹೋಗಿ ಆಡಿದ್ದೀನಿ. ನಾನು ನನ್ನ ಆಟ ಆಡ್ತಿದ್ದೀನಿ. ಅವರೂ ನನ್ನಿಂದ ಸಪೋರ್ಟ್ ತಗೊಂಡಿಲ್ಲ. ಹಾಗಾದ್ರೆ, ನಾವ್ಯಾಕೆ ಅಷ್ಟೋಂದು ಜಗಳ ಆಡ್ತೀವಿ ಹೇಳಿ? ಅಂತ ಹೇಳಿದಕ್ಕೆ, ವರ್ತೂರು ಸಂತೋಷ್ ಈಗ ಅವರು ಸೇಫ್‌ ಆಗಿದ್ದಾರೆ. ನೀನು ನಾಮಿನೇಟ್ ಆಗಿದ್ಯಾ.! ಅಂತ ಹೇಳಿದರು. ಅದಕ್ಕೆ ಸಂಗೀತಾ ಪ್ರತಾಪ್ ಹಾಗೂ ನನ್ನ ಕಣ್ಣು ಒಟ್ಟಿಗೆ ಹಾಳಾಗಿದ್ದು ಎಂಬ ಒಂದು ಕಾಳಜಿ ಇದೆ ಅಷ್ಟೇ.

ಬಿಗ್‌ಬಾಸ್‌ನ ಬಸ್‌ಗೆ ಹೋಲಿಸಿದ ವರ್ತೂರು ಸಂತೋಷ್, "ಕೆಲವರು ಭದ್ರವಾಗಿ ಸೀಟು ಹಿಡಿದಿದ್ದಾರೆ. ನಾವೆಲ್ಲಾ ಸ್ಟ್ಯಾಂಡಿಂಗ್‌ನಲ್ಲಿದ್ದೀವಿ. ಸುದೀಪ್‌ ಸರ್‌ ಬಂದು ಸೀಟು ಹಿಡಿದಿರುವವರನ್ನ ಎಬ್ಬಿಸಿ ಕಳಿಸಿ, ನೀವು ಕೂತುಕೊಳ್ಳಿ ಎಂದಾಗ ನಮಗೆ ಸಮಾಧಾನ" ಎಂದಿದ್ದಾಗ ವಿನಯ್‌ "ಸಂಗೀತಾ ಈಸ್ ಡೆಡ್‌ ಫಾರ್‌ ಮಿ" ಅಂತ ಹೇಳಿದ್ದರು. ಸಂಗೀತಾ ತಮ್ಮ ಪಾಡಿಗೆ ತಾವು ಕೂತಿದ್ದರೂ, ಗನ್‌ನಿಂದ ಶೂಟ್‌ ಮಾಡುವ ಹಾಗೆ ವಿನಯ್‌ ಮಾಡಿದಾಗ, ಅಲ್ಲೇ ಪಕ್ಕದಲ್ಲೇ ಕೂತಿದ್ದ ತುಕಾಲಿ ಸಂತು ಸಂಗೀತಾ ಕಡೆಗೆ ಬಾಣ ಬಿಟ್ಟರು. ಇದೇ ವೇಳೆ, ಕಾರ್ತಿಕ್ ಅಡ್ಡ ಬಂದಾಗ… "ಬೋಡಿ ಅಡ್ಡ ಬಂದ್ನಾ? ಬೋಡಿಗೆ ಬಿದ್ದುಬಿಡ್ತಾ" ಅಂತಾರೆ ನಮ್ರತಾ. ಇವರುಗಳ ಈ ವರ್ತನೆ ಎಷ್ಟು ಸರಿ ಅನ್ನೋದು ವೀಕ್ಷಕರ ಪ್ರಶ್ನೆಯಾಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News