BBK Rakshak: ಬುಲೆಟ್ ಪ್ರಕಾಶ್ ಪುತ್ರನಿಗೆ ಬುದ್ದಿ ಹೇಳಿದ ಬ್ರಾಂಡೆಡ್‌ ಗಿಫ್ಟ್‌ ನೀಡಿದ ಕಿಚ್ಚ!

Rakshak Bullet: ಬಿಗ್‌ ಬಾಸ್‌ ಮನೆಯಿಂದ ರಕ್ಷಕ್‌ ಬುಲೆಟ್‌ ಹೊರ ಬಂದ್ಮೇಲೆ ಸಂದರ್ಶನವೊಂದರಲ್ಲಿ ಬಿಂದಾಸ್ ಆಗಿಯೇ ಸುದೀಪ್ ಬಗ್ಗೆ ಮಾತನಾಡಿ ಡ್ರೋಲ್‌ ಆಗಿದ್ದರು. ಬಿಗ್‌ಬಾಸ್‌ ಫಿಆಣಲೆಯ ಬಳಿಕ ಸುದೀಪ್‌ ರಕ್ಷಕ್‌ನನ್ನು ಕರೆಸಿ ಬುದ್ದಿ ಹೇಳಿ ದುಬಾರಿ ಉಡುಗರೆಯನ್ನು ಸಹ ನೀಡಿದ್ದಾರೆ. ಇಲ್ಲಿದೆ ಸಂಪೂರ್ಣ ವಿವರ.  

Written by - Zee Kannada News Desk | Last Updated : Jan 30, 2024, 12:29 PM IST
  • ಬಿಗ್‌ಬಾಸ್‌ ಮನೆಯಿಂದ ಹೊರ ಬಂದ್ಮೇಲೆ ರಕ್ಷಕ್ ಸಂದರ್ಶನವೊಂದರಲ್ಲಿ ಬಿಂದಾಸ್ ಆಗಿಯೇ ಸುದೀಪ್ ಬಗ್ಗೆ ಮಾತನಾಡಿ, ಅಷ್ಟೇ ಬಿಂದಾಸ್ ಆಗಿಯೇ ಟ್ರೋಲ್‌ ಕೂಡ ಆಗಿದ್ದರು.
  • ಈಗಷ್ಟೆ ಇಂಡಸ್ಟ್ರಿಗೆ ಕಾಲಿಟ್ಟಿರುವ ರಕ್ಷಕ್ ಬುಲೆಟ್‌, ಸಿನಿಮಾರಂಗದಲ್ಲಿ ಹೇಗಿರಬೇಕು ಅನ್ನೋದು ಇನ್ನೂ ಕಲಿಯಬೇಕಿದೆ.
  • ಹಾಗೆ ಸುಮಾರು ಹೊತ್ತು ಸಮಯ ಕಳೆದ ರಕ್ಷಕ್ ಬುಲೆಟ್, ತಮ್ಮ ಈ ಅನುಭವವನ್ನ ತಮ್ಮ ಸ್ಟೇಟಸ್‌ನಲ್ಲೂ ಶೇರ್ ಮಾಡಿಕೊಂಡಿದ್ದಾರೆ. ಕೊನೆಗೆ ಸುದೀಪ್ ಬೆಲೆ ಕಟ್ಟಲಾಗದ ಒಂದು ಗಿಫ್ಟ್ ಕೊಟ್ಟಿರೋ ವಿಚಾರವನ್ನು ಫೋಟೋ ಸಮೇತ ಹೇಳಿಕೊಂಡಿದ್ದಾರೆ.
BBK Rakshak: ಬುಲೆಟ್ ಪ್ರಕಾಶ್ ಪುತ್ರನಿಗೆ  ಬುದ್ದಿ ಹೇಳಿದ ಬ್ರಾಂಡೆಡ್‌ ಗಿಫ್ಟ್‌ ನೀಡಿದ ಕಿಚ್ಚ! title=

Rakshak Bullet Got Gift From Sudeep: ಬಿಗ್ ಬಾಸ್ ಕನ್ನಡ ಸೀಸನ್‌ 10 ಶೋನಲ್ಲಿ ಕೆಲವೇ ಕೆಲವು ವಾರಗಳು ಇದ್ದ ರಕ್ಷಕ್ ಬುಲೆಟ್ ಕೊಂಚ ಜಾಸ್ತಿನೇ ಬೋಲ್ಡ್ ಆಗಿ ಮಾತನಾಡುತ್ತಿದ್ದು, ಹಿಂದೆ-ಮುಂದೆ ಯೋಚನೆ ಮಾಡದೇ ಹೇಳೋ ಮಾತು ವೈರಲ್ ಆಗುತ್ತವೆ. ಬಿಗ್‌ಬಾಸ್‌ ಮನೆಯಿಂದ ಹೊರ ಬಂದ್ಮೇಲೆ ರಕ್ಷಕ್ ಸಂದರ್ಶನವೊಂದರಲ್ಲಿ ಬಿಂದಾಸ್ ಆಗಿಯೇ ಸುದೀಪ್ ಬಗ್ಗೆ ಮಾತನಾಡಿ, ಅಷ್ಟೇ ಬಿಂದಾಸ್ ಆಗಿಯೇ ಟ್ರೋಲ್‌ ಕೂಡ ಆಗಿದ್ದರು. ಆದರೂ ಏನೋ ಆಗಿಯೇ ಇಲ್ಲ ಅನ್ನೋ ಹಾಗೆ ಬಿಗ್ ಬಾಸ್ ಫಿನಾಲೆಗೂ  ಆಹ್ವಾನಿತರಾಗಿದ್ದರು. 

ಆದರೆ ಕಿಚ್ಚ ಸುದೀಪ್‌ ಬಗ್ಗೆ ಮಾತನಾಡಿ, ಕೊನೆಗೆ ಸಾರಿ ಕೇಳಿದ ರಕ್ಷಕ್‌ ಬುಲೆಟ್‌ಗೆ ಸ್ವತಃ ಸುದೀಪ್ ಒಂದಷ್ಟು ಸಲಹೆ-ಸೂಚನೆ ಕೊಟ್ಟಿದ್ದಾರೆ. ಸುದೀಪ್ ಮತ್ತು ಬುಲೆಟ್ ಒಳ್ಳೆ ಸ್ನೇಹಿತರೇ ಆಗಿದ್ದು, ಇವರ ಸ್ನೇಹ ಹಳಸಿ ಹೋಗಿರಲಿಲ್ಲ.  ಸುದೀಪ್ ಬಿಗ್ ಬಾಸ್ ಫಿನಾಲೆ ಆದ್ಮೇಲೆ ರಕ್ಷಕ್ ಬುಲೆಟ್‌ ಮುಂದೆ ತಮ್ಮ ಸ್ನೇಹದ ಕುರಿತು ಹಂಚಿಕೊಳ್ಳುತ್ತಾ, ನಿಮ್ಮ ತಂದೆ ಮತ್ತು ನಾನು ಒಳ್ಳೆ ಸ್ನೇಹಿತರು ಅಂತಲೇ ಹೇಳಿಕೊಂಡಿದ್ದಾರೆ. ಈಗಷ್ಟೆ ಇಂಡಸ್ಟ್ರಿಗೆ ಕಾಲಿಟ್ಟಿರುವ ರಕ್ಷಕ್ ಬುಲೆಟ್‌, ಸಿನಿಮಾರಂಗದಲ್ಲಿ ಹೇಗಿರಬೇಕು ಅನ್ನೋದು ಇನ್ನೂ ಕಲಿಯಬೇಕಿದೆ. 

ಇದನ್ನೂ ಓದಿ: Bigg Boss: ಬಿಗ್‌ಬಾಸ್‌ ಫಿನಾಲೆಯ ಟಾಪ್ 5 ಕಂಟೆಸ್ಟಂಟ್‌ ಆಗಿ ಹೊರನಡೆದ ಈ ಸ್ಪರ್ಧಿಯ ಹಿನ್ನಲೆ ಏನು ಗೊತ್ತಾ?

ಆದರಿಂದ ಕಿಚ್ಚ ಸುದೀಪ್ ತಮ್ಮ ಮತ್ತು ಬುಲೆಟ್ ಪ್ರಕಾಶ್ ಸ್ನೇಹದ ಕುರಿತು ರಕ್ಷಕ್ ಜೊತೆಗೆ ಸಾಕಷ್ಟು ಮಾತನಾಡುವುದರ ಜೊತೆಗೆ ರಕ್ಷಕ್ ಇನ್ಮುಂದೆ ಸಿನಿಮಾರಂಗದಲ್ಲಿ ಹೇಗೆಲ್ಲ ಇರಬೇಕು ಅನ್ನೋ ಸಲಗೆಗಳನ್ನೂ ಕೊಟ್ಟಿದ್ದಾರೆ. ಹಾಗೆ ಸುಮಾರು ಹೊತ್ತು ಸಮಯ ಕಳೆದ ರಕ್ಷಕ್ ಬುಲೆಟ್, ತಮ್ಮ ಈ ಅನುಭವವನ್ನ ತಮ್ಮ ಸ್ಟೇಟಸ್‌ನಲ್ಲೂ ಶೇರ್ ಮಾಡಿಕೊಂಡಿದ್ದಾರೆ. ಕೊನೆಗೆ ಸುದೀಪ್ ಬೆಲೆ ಕಟ್ಟಲಾಗದ ಒಂದು ಗಿಫ್ಟ್ ಕೊಟ್ಟಿರೋ ವಿಚಾರವನ್ನು ಫೋಟೋ ಸಮೇತ ಹೇಳಿಕೊಂಡಿದ್ದಾರೆ.

ಹೌದು.. ಕಿಚ್ಚ ಸುದೀಪ್ ತಮ್ಮ ಆತ್ಮೀಯರಿಗೆ ವಿಶೇಷವಾಗಿ ಗಿಫ್ಟ್ ಜೊತೆಗೆ ಸಪ್ರೈಸ್‌ಗಳನ್ನೂ ಸಹ ಕೊಟ್ಟಿದ್ದು ಇದೆ. ಬಿಗ್ ಬಾಸ್ ಮನೆಯಲ್ಲಿ ಆ ಒಂದು ಸರ್ಪ್ರೈಸ್ ಹೇಗಿದ್ದವು ಅನ್ನೋದು ಗೊತ್ತೇ ಇದ್ದು, ಅದೇ ರೀತಿ ಬುದ್ದಿ ಹೇಳಲು ರಕ್ಷಕ್‌ಗೂ ಕರೆಸಿ  ಒಂದು ಸ್ಪೆಷಲ್ ಬೆಲೆ ಬಾಳೋ ಬ್ಲ್ಯೂಬೆರಿ ಕನ್ನಡಕವನ್ನ ಗಿಫ್ಟ್ ಆಗಿಯೇ ಕೊಟ್ಟಿದ್ದಾರೆ. ಈ ವಿಶೇಷ ಗಿಫ್ಟ್ ಅನ್ನ ರಕ್ಷಕ್ ಬುಲೆಟ್ ತುಂಬಾನೇ ಪ್ರೀತಿಯಿಂದ ಸ್ವೀಕರಿಸಿದ್ದು, ಈ ಒಂದು ಕನ್ನಡಕದ ಫೋಟೋವನ್ನ ತಮ್ಮ ಸ್ಟೇಟಸ್‌ಗೂ ಹಾಕಿಕೊಂಡು ಖುಷಿಯನ್ನ ಎಲ್ಲರೊಟ್ಟಿಗೆ ಹಂಚಿಕೊಂಡಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News