BBK 10: ಬಿಗ್‌ಬಾಸ್‌ ಮನೆಯಿಂದ ಹೊರವಿರುವ ಪಾರ್ಟನರ್‌ ಬಗ್ಗೆ ಸತ್ಯ ಬಿಚ್ಚಿಟ್ಟ ಸಂಗೀತಾ ಶೃಂಗೇರಿ

Bigg Boss 10: ಬಿಗ್‌ಬಾಸ್‌ ಕನ್ನಡ ಸೀಸನ್ 10 ಶೋನಲ್ಲಿ 'ಡ್ರೋನ್' ಪ್ರತಾಪ್‌ ಸಂಗೀತಾ ಶೃಂಗೇರಿಗೆ ಹುಡುಗನನ್ನು ಹುಡುಕಿದ್ದು, ಅದಕ್ಕೆ ಕಾರ್ತಿಕ್ ಮಹೇಶ್  ಸಮ್ಮತಿ ಸಹ ಇದೆ. ಇತ್ತೀಚೆಗೆ ಸಂಗೀತಾ ತಮ್ಮ ಫ್ರೆಂಡ್ ಆಗಿರುವ ಪಾರ್ಟನರ್ ಬಗ್ಗೆಯೂ ಮಾತನಾಡಿದ್ದು, ಸಂಗೀತಾ ಜೊತೆ ಭಾಗ್ಯಶ್ರೀ ಅವರು ಮದುವೆ ಪ್ಲ್ಯಾನ್ ಬಗ್ಗೆ ಪ್ರಶ್ನೆ ಮಾಡಿದ್ದಾರೆ. 

Written by - Zee Kannada News Desk | Last Updated : Oct 31, 2023, 11:32 AM IST
  • ಕಾರ್ತಿಕ್ ನನ್ನ ಫ್ರೆಂಡ್ ಅಷ್ಟೇ ಅಂತ ಸ್ಪಷ್ಟನೆ ನೀಡಿದ ಸಂಗೀತಾ
  • ಭಾಗ್ಯಶ್ರೀ ಸಂಗೀತಾಗೆ ಮದುವೆ ಬಗ್ಗೆ ಪ್ರಶ್ನೆ ಮಾಡಿದ್ದಾರೆ
  • ಸಂಗೀತಾ ಕಾರ್ತಿಕ್‌ ಜೊತೆ ಲೈಫ್‌ ಪಾರ್ಟನರ್‌ ಬಗ್ಗೆ ಹಂಚಿಕೊಂಡಿದ್ದಾರೆ
BBK 10: ಬಿಗ್‌ಬಾಸ್‌ ಮನೆಯಿಂದ ಹೊರವಿರುವ ಪಾರ್ಟನರ್‌ ಬಗ್ಗೆ ಸತ್ಯ ಬಿಚ್ಚಿಟ್ಟ ಸಂಗೀತಾ ಶೃಂಗೇರಿ title=

Bigg Boss Kannada Season 10 Contestant Sangeetha Sringeri: ಬಿಗ್‌ಬಾಸ್‌ ಮನೆಯಲ್ಲಿ ಸಂಗೀತಾ ಹಾಗೂ ಕಾರ್ತಿಕ್ ಇವರಿಬ್ಬರ ವರ್ತನೆ ನೋಡಿದ್ರೆ ದೊಡ್ಮನೆಯಲ್ಲಿ ಇರುವವರಿಗೂ, ಹೊರಗಡೆ ಇರುವವರಿಗೂ ಏನೋ ಸಮ್‌ಥಿಂಗ್ ಸಮ್‌ಥಿಂಗ್ ಇದೆ ಅಂತಲೇ ಅನಿಸ್ತಿದೆ. ಇವರಿಬ್ಬರೂ "ನಾವಿಬ್ಬರೂ ಫ್ರೆಂಡ್ಸ್" ಅಂತಲೇ ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಈ ವೇಳೆ ಡ್ರೋನ್‌ ಪ್ರತಾಪ್‌ ಸಂಗೀತಾಗೆ ಹುಡುಗನ್ನು ಹುಡುಕಿದ್ದು, ಇನ್ನೊಂದೆಡೆ ಸಂಗೀತಾ ಕಾರ್ತಿಕ್ ನನ್ನ ಫ್ರೆಂಡ್ ಅಷ್ಟೇ ಅಂತ  ಸ್ಪಷ್ಟನೆ ಕೊಟ್ಟಿದ್ದಾರೆ.

ಬಿಗ್‌ಬಾಸ್‌ ಮನೆಯಲ್ಲಿ ಭಾಗ್ಯಶ್ರೀ ಸಂಗೀತಾಗೆ "ನಿಮಗೆ ಯಾರಾದರೂ ಪ್ರೇಮ ನಿವೇದನೆ ಮಾಡಿಲ್ಲವೇ? ಫ್ರೆಂಡ್‌ಶಿಪ್ ಆದಕೂಡಲೇ ಮದುವೆಗೆ ಒಪ್ಪುತ್ತೀರಾ" ಅಂತ ಮದುವೆ ಬಗ್ಗೆ ಪ್ರಶ್ನೆ ಮಾಡಿಯೇ ಬಿಟ್ಟರು. ಅದಕ್ಕೆ ಸಂಗೀತಾ " ನನಗೆ ಕೆಲವರು ಇಷ್ಟ ಆಗಿದ್ದಾರೆ, ಆದರೆ ಡೀಪ್ ಆಗಿ ಕನೆಕ್ಟ್ ಆಗಿಲ್ಲ. ನನಗೆ ಪ್ರೇಮ ನಿವೇದನೆ ಮಾಡಿದ್ದಾರೆ, ಆದರೆ ಅವರೆಲ್ಲ ಬೇರೆ ಯಾರಿಗೋ ಪ್ರೇಮ ನಿವೇದನೆ ಮಾಡಿರಬಹುದು ಅಂತ ಅನಿಸತ್ತೆ. ಅವರಿಗೆ ಪ್ರೀತಿ ಇದ್ದರೆ ಪರಸ್ಪರ ಗೊತ್ತಾಗತ್ತೆ. ನಾನು ಮದುವೆ ಆಗಲ್ಲ. ನನಗೆ ಮೊದಲು ಫ್ರೆಂಡ್‌ಶಿಪ್‌ ವರ್ಕ್ ಆಗಬೇಕು, ಬಾಂಡಿಂಗ್ ವರ್ಕ್ ಆಗಬೇಕು. ಆಮೇಲೆ ಮದುವೆ ಬಗ್ಗೆ ಯೋಚನೆ ಮಾಡಬೇಕು" ಅಂತ ಹೇಳಿದ್ದಾರೆ.

ಇದನ್ನು ಓದಿ: Varthur Santhosh : ವರ್ತೂರ್ ಸಂತೋಷ್ ಬಂದ್ ಕೂಡ್ಲೇ ಗೆಟೌಟ್ ಅಂತಿರೋ ಬಿಗ್ ಮಂದಿ!

ಇನ್ನೊಂದು ಕಡೆ ಡ್ರೋನ್‌ ಪ್ರತಾಪ್‌ ಕಾರ್ತಿಕ್‌ಗೆ " ಸಂಗೀತಾ ದೀದಿ ಅವರಿಗೆ ನಾನು ಹುಡುಗನನ್ನು ನೋಡಿದ್ದೀನಿ, ಮದುವೆ ಮಾಡಲಾ " ಅಂತ ಕೇಳಿದಕ್ಕೆ, ಕಾರ್ತಿಕ್ "‌ಸಂಗೀತಾ ಅವರು ನನಗೆ ಬೆಸ್ಟ್ ಫ್ರೆಂಡ್ಸ್, ನನ್ನ ಕಡೆಯಿಂದ ಏನೂ ಇಲ್ಲ. ಫ್ರೆಂಡ್ ಆಗಿ ಅವಳು ನನಗೆ ಇಷ್ಟ" ಎಂದು ಕಾರ್ತಿಕ್ ಸ್ಪಷ್ಟನೆ ನೀಡಿದ್ದಾರೆ. ಇನ್ನು ಸಂಗೀತಾ ಬಿಗ್ ಬಾಸ್ ಮನೆಯಲ್ಲಿರುವ ವಸ್ತುವೊಂದರ ಮೇಲೆ ಪಾರ್ಟನರ್ ಬಗ್ಗೆ ಬರೆದಿದ್ದು, ಅದು ಕಾರ್ತಿಕ್ ಕಣ್ಣಿಗೆ ಬಿದ್ದಿದೆ. 

ಕಾರ್ತಿಕ್‌ ಸಂಗೀತಾಗೆ ವಸ್ತು ಮೇಲೆ ವೈ ಅಂತ ಬರೆದಿದ್ದೀಯಾ ಅಂತ ಕೇಳಿದಕ್ಕೆ, ಸಂಗೀತಾ ನಾನು ಬರೆದಿಲ್ಲ ಅಂತ ಹೇಳುತ್ತಿದ್ದರು. ಆದರೂ ಕಾರ್ತಿಕ್ ಪ್ರಶ್ನೆ ಮಾಡಿದಾಗ ಸಂಗೀತಾ "ನನ್ನ ಲೈಫ್‌ನಲ್ಲಿ ಏನಾದರೂ ಇದ್ದರೆ ಅವರ ಹತ್ರಾ ಶೇರ್ ಮಾಡಿಕೊಳ್ತೀನಿ. ಅವರು ನನ್ನ ಲೈಫ್ ಪಾರ್ಟನರ್. ಇತ್ತೀಚೆಗೆ ನಾವು ಫ್ರೆಂಡ್ಸ್ ಆಗಿದ್ದೆವು. ಒಬ್ಬ ಹುಡುಗ ಒಬ್ಬ ಹುಡುಗಿ ಹತ್ರ ಮಾತ್ರ ಒಪನ್ ಅಪ್ ಆಗೋಕೆ ಸಾಧ್ಯ. ಹುಡುಗನ ಆ ಆಂಗಲ್‌ನ್ನು ಯಾರೂ ನೋಡಿರಲ್ಲ. ಹುಡುಗನ ಮುಗ್ಧ ಭಾವ ಆ ಹುಡುಗಿ ಬಿಟ್ರೆ ಬೇರೆ ಯಾರ ಜೊತೆಯೂ ಇರಲ್ಲ" ಎಂದು ಹೇಳಿದ್ದಾರೆ. ಆಗ ಕಾರ್ತಿಕ್ ಸಂಗೀತಾಗೆ "ನಾನು ನಿನ್ನ ಬೆಸ್ಟ್ ಫ್ರೆಂಡ್ಸ್" ಅಂತ ಹೇಳಿದ ಬಳಿಕ, ಅಲ್ಲಿಗೆ ಪಾರ್ಟನರ್ ಮಾತುಕತೆ ಮುಕ್ತಾಯವಾಗಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News