ಬಿಗ್‌ ಬಾಸ್ ಕನ್ನಡ ಸೀಸನ್‌ 10 ರ ಟಾಪ್‌ 10 ಮೆಮೊರಬಲ್ ಮೊಮೆಂಟ್ಸ್

Bigg Boss Kannada Season 10: ಬಹುಯಶಸ್ವಿಯಾಗಿ ಬಿಗ್‌ಬಾಸ್ ಕನ್ನಡ ಸೀಸನ್‌ 10 ಅಂತಿಮ ಹಂತಕ್ಕೆ ಬಂದುನಿಂತಿದೆ. ನೂರ ಹದಿನಾರು ದಿನಗಳ ಈ ದೀರ್ಘ ಪ್ರಯಾಣದಲ್ಲಿ ಎಣಿಸಲಾಗದಷ್ಟು ಅಮೂಲ್ಯವಾದ ಅವಿಸ್ಮರಣೀಯ ಗಳಿಗೆಗಳು ನಡೆದಿವೆ. 

Written by - Chetana Devarmani | Last Updated : Jan 28, 2024, 07:20 PM IST
  • ಬಿಗ್‌ಬಾಸ್ ಕನ್ನಡ ಸೀಸನ್‌ 10 ಅಂತಿಮ ಹಂತಕ್ಕೆ ಬಂದುನಿಂತಿದೆ
  • ನೂರ ಹದಿನಾರು ದಿನಗಳ ಈ ದೀರ್ಘ ಪ್ರಯಾಣ
  • ಬಿಗ್‌ಬಾಸ್ ಕನ್ನಡ ಸೀಸನ್‌ 10 ರ ಟಾಪ್‌ 10 ಮೆಮೊರಬಲ್ ಮೊಮೆಂಟ್ಸ್
ಬಿಗ್‌ ಬಾಸ್ ಕನ್ನಡ ಸೀಸನ್‌ 10 ರ ಟಾಪ್‌ 10 ಮೆಮೊರಬಲ್ ಮೊಮೆಂಟ್ಸ್   title=

Bigg Boss Kannada Season 10: ಬಹುಯಶಸ್ವಿಯಾಗಿ ಬಿಗ್‌ಬಾಸ್ ಕನ್ನಡ ಸೀಸನ್‌ 10 ಅಂತಿಮ ಹಂತಕ್ಕೆ ಬಂದುನಿಂತಿದೆ. ನೂರ ಹದಿನಾರು ದಿನಗಳ ಈ ದೀರ್ಘ ಪ್ರಯಾಣದಲ್ಲಿ ಎಣಿಸಲಾಗದಷ್ಟು ಅಮೂಲ್ಯವಾದ ಅವಿಸ್ಮರಣೀಯ ಗಳಿಗೆಗಳು ನಡೆದಿವೆ. ಅವುಗಳಲ್ಲಿ ಕೆಲವು ಸಿಹಿಯಾಗಿದ್ದವು, ಕೆಲವು ಕಹಿಯಾಗಿದ್ದವು. ಅಂಥ ಅಸಂಖ್ಯಾತ ಅವಿಸ್ಮರಣೀಯ ಗಳಿಗೆಗಳಲ್ಲಿ ಕೆಲವನ್ನು ಹೆಕ್ಕಿಕೊಡುವ ಪ್ರಯತ್ನವನ್ನು ಜಿಯೊಸಿನಿಮಾ ಇಲ್ಲಿ ಮಾಡುತ್ತಿದೆ. ಈ ಗಳಿಗೆಗಳು ಜಿಯೊ ಸಿನಿಮಾದಲ್ಲಿ ಉಚಿತ ವೀಕ್ಷಣಗೆ ಲಭ್ಯವಿದೆ. 

ಜಿಯೊ ಸಿನಿಮಾ ಫನ್ ಫ್ರೈಡೆ:

ಜಿಯೊ ಸಿನಿಮಾ ಕಡೆಯಿಂದ ಪ್ರತಿ ಶುಕ್ರಮವಾರ ಆಯೋಜಿಸಲಾಗುತ್ತಿದ್ದ ‘ಫನ್‌ ಫ್ರೈಡೆ’ ಎಲ್ಲ ಸ್ಪರ್ಧಿಗಳಿಗೂ ತುಂಬ ಖುಷಿಕೊಡುತ್ತಿದ್ದ ಸಮುಯ. ಮನೆಯಿಂದ ಹೊರಬಿದ್ದ ಸ್ಪರ್ಧಿಗಳೆಲ್ಲರೂ, ಜಿಯೊ ಸಿನಿಮಾ ಫನ್‌ ಫ್ರೈಡೆಯನ್ನು ಮೆಚ್ಚಿಕೊಂಡು ಮಾತಾಡಿರುವುದೇ ಇದಕ್ಕೆ ಸಾಕ್ಷಿ. ವಾರವಿಡೀ ಬಗೆಬಗೆಯ ಟಾಸ್ಕ್‌ಗಳಲ್ಲಿ ಜಿದ್ದಿಗೆ ಬಿದ್ದು ಆಡುತ್ತಿದ್ದ ಸ್ಪರ್ಧಿಗಳಿಗೆ ವಾರಾಂತ್ಯಕ್ಕೂ ಮುನ್ನ ರಿಲ್ಯಾಕ್ಸ್‌ ಭಾವ ಮೂಡುತ್ತಿದ್ದದ್ದು ಫನ್‌ ಫ್ರೈಡೆ. ಕಥೆ ಹೇಳುವ ಟಾಸ್ಕ್ ಇರಲಿ, ಲಗೋರಿ ಆಟವಿರಲಿ, ಮ್ಯೂಸಿಕಲ್ ಪಾಟ್‌ ಇರಲಿ, ಹಿಟ್ಟು ಪಾಸ್ ಮಾಡುವ ಮೋಜಿನ ಟಾಸ್ಕ್‌ ಇರಲಿ…  ಎಲ್ಲ ಸ್ಪರ್ಧಿಗಳಿಗೂ ಖುಷಿ ಕೊಡುತ್ತಿದ್ದ ರಿಫ್ರೆಶ್ ಭಾವ ಹುಟ್ಟಿಸುತ್ತಿದ್ದ ಚಟುವಟಿಕೆ ಬಿಗ್‌ಬಾಸ್ ಮನೆಯಲ್ಲಿ ಹಲವು ಮೋಜಿನ ಗಳಿಗೆಗಳನ್ನು ಸೃಷ್ಟಿ ಮಾಡಿದೆ. ಫನ್‌ಫ್ರೈಡೆಯ ಮೋಜಿನ ರಂಜನೆ ಹೇಗಿತ್ತು ಎಂಬುದರ ಸಣ್ಣ ಝಲಕ್ ಈ ದೃಶ್ಯಿಕೆಯಲ್ಲಿ ನೋಡಬಹುದು: 

ಟಿಕೆಟ್ ಟು ಫಿನಾಲೆ

ಫಿನಾಲೆ ವಾರಕ್ಕೆ ನೇರ ಪ್ರವೇಶ ಪಡೆಯಲು ಬಿಗ್‌ಬಾಸ್ ಮನೆಯ ಸದಸ್ಯರಿಗೆ ಒಂದು ಅವಕಾಶ ನೀಡಿತ್ತು,. ಈ ಟಿಕೆಟ್ ಟು ಫಿನಾಲೆ’ ವಾರದಲ್ಲಿ ಹಲವು ಬಗೆಯ ಟಾಸ್ಕ್‌ಗಳನ್ನು ನೀಡಿಅವುಗಳಲ್ಲಿ ಅತಿ ಹೆಚ್ಚು ಅಂಕ ಗಳಿಸಿದವರಲ್ಲಿ ಒಬ್ಬರು ನೇರವಾಗಿ ಟಿಕೆಟ್ ಟು ಫಿನಾಲೆ ಪ್ರವೇಶ ಪಡೆಯುತ್ತಾರೆ ಎಂದು ಹೇಳಿದ್ದರು. 

ಇದನ್ನೂ ಓದಿ: ವರ್ತೂರು ಸಂತೋಷ್ ಎರಡನೇ ಮದುವೆಗೆ ರೆಡಿಯಾದ್ರಾ.. ವಧು ಯಾರು ಗೊತ್ತಾ?

ಈ ವಾರದಲ್ಲಿ ಪ್ರತಾಪ್‌ ಹಲವು ಟಾಸ್ಕ್‌ಗಳಲ್ಲಿ ಚೆನ್ನಾಗಿ ಆಡಿ ಗೆದ್ದು 420 ಅಂಕಗಳನ್ನು ಗಳಿಸಿದ್ದರು. 360 ಅಂಕಗಳನ್ನು ಗಳಿಸಿ ಸಂಗೀತಾ ಎರಡನೇ ಸ್ಥಾನದಲ್ಲಿದ್ದರು. ನಮ್ರತಾ ಮೂರನೇ ಸ್ಥಾನದಲ್ಲಿದ್ದರು. ಬಿಗ್‌ಬಾಸ್‌ ಅತಿ ಹೆಚ್ಚು ಅಂಕ ಗಳಿಸಿದ ಮೂರು ಸ್ಪರ್ಧಿಗಳಲ್ಲಿ ಯಾರು ಟಿಕೆಟ್ ಟು ಫಿನಾಲೆಗೆ ಪ್ರವೇಶ ಪಡೆಯಲು ಹೆಚ್ಚು ಅರ್ಹರು ಎಂಬುದನ್ನು ಮನೆಯ ಸದಸ್ಯರು ಬಹುಮತದ ಆಧಾರದಲ್ಲಿ ನಿರ್ಧರಿಸಬೇಕಾಗಿತ್ತು. (https://go.jc.fm/fRhd/0npc69a5)  ಇದರಲ್ಲಿ ಮೂರು ಮತಗಳನ್ನು ಪಡೆದು ಸಂಗೀತಾ ಶೃಂಗೇರಿ ನೇರವಾಗಿ ಫಿನಾಲೆ ವಾರಕ್ಕೆ ಕಾಲಿಟ್ಟಿದ್ದರು. ಅನಿರೀಕ್ಷಿತವಾಗಿತಮಗೆ ಒದಗಿಬಂದ ಈ ಅವಕಾಶವನ್ನು ಸಂಗೀತಾ ಸಂಭ್ರಮಿಸಿದ್ದೊಂದು ಅವಿಸ್ಮರಣೀಯ ಗಳಿಗೆ. 

ಕುಟುಂಬ ಸದಸ್ಯರು ಬಂದಿದ್ದು

ಈ ಸೀಸನ್‌ ಅತಿ ಭಾವುಕವಾದ ವಾರ ಎಂದರೆ ಸ್ಪರ್ಧಿಗಳ ಕುಟುಂಬದವರು ಮನೆಯೊಳಗೆ ಬಂದಿದ್ದು. ಆ ವಾರ ಬಿಗ್‌ಬಾಸ್‌ ಮನೆಯವರಿಗೆ ಇಡೀ ವಾರ ಪಾಸ್‌- ಪ್ಲೇ ಟಾಸ್ಕ್‌ ಕೊಡುತ್ತಿದ್ದರು. ಪಾಸ್‌ ಎಂದಾಗ ಎಲ್ಲ ಸದಸ್ಯರೂ ನಿಶ್ಚಲವಾಗಬೇಕಾಗಿತ್ತು. ಹಾಗೆಯೇ ಪ್ಲೇ ಎಂದಾಗ ಚಲಿಸಬಹುದಿತ್ತು. ಒಬ್ಬೊಬ್ಬ ಮನೆಯ ಸದಸ್ಯ ಮನೆಯೊಳಗೆ ಬಂದಾಗಲೂ ಅವರ ಉತ್ಸಾಹ ಉಕ್ಕೇರುತ್ತಿತ್ತು. ಆದರೆ ಅಷ್ಟರೊಳಗೆ ಬಿಗ್‌ಬಾಸ್ ಅವರಿಗೆ ಪಾಸ್ ಹೇಳಿಬಿಟ್ಟಿರುತ್ತಿದ್ದರು. ಆಗ ತಮ್ಮ ಮನೆಯ ಸದಸ್ಯರು ಬಂದಿದ್ದರೂ ಅವರ ಮಾತಿಗೆ ಪ್ರತಿಕ್ರಿಯಿಸದೆ ನಿಶ್ಚಲರಾಗಿ ನಿಂತಿರಬೇಕಿತ್ತು. ಈ ನಿಲ್ಲು, ಚಲಿಸುವ ಆಟ ವಾರವಿಡೀ ಮುಂದುವರಿದು ಭಾವನೆಗಳೂ ಕಟ್ಟಿ, ಕಟ್ಟೊಡೆದು ಹರಿಯುತ್ತಿತ್ತು. 

ಬಿಗ್‌ಬಾಸ್‌ ಪ್ರಾಥಮಿಕ ಶಾಲೆ!

‘ರಕ್ಕಸರು-ಗಂಧರ್ವರ ಟಾಸ್ಕ್‌ ಇರುವವಾರದಲ್ಲಿ ಮನೆಯಲ್ಲಿ ಉಂಟಾಗಿದ್ದ ಗರಂ ಅನ್ನು ಕಡಿಮೆ ಮಾಡುವಂತೆ ಮುಂದಿನ ವಾರ ಬಿಗ್‌ಬಾಸ್ ಮನೆಯಲ್ಲಿ ಪ್ರಾಥಮಿಕ ಶಾಲೆಯನ್ನು ತೆರೆಯಲಾಗಿತ್ತು. ಬಿಗ್‌ಬಾಸ್ ಮನೆಯ ಸದಸ್ಯರಲ್ಲಿ ಕೆಲವರು ವಿದ್ಯಾರ್ಥಿಗಳಾಗಿದ್ದರೆ, ಇನ್ನು ಕೆಲವರು ಶಿಕ್ಷಕರಾಗಿದ್ದರು. ವ್ಯಕ್ತಿತ್ವ ವಿಕಸನ, ಇತಿಹಾಸ, ಕನ್ನಡ, ಗಣೀತ, ಪಿಟಿ ತರಗತಿಗಳು ನಡೆದವು. ತುಂಟ ವಿದ್ಯಾರ್ಥಿಗಳ ಕಾಟದಲ್ಲಿ ಶಿಕ್ಷಕರು ಬಸವಳಿದರು. ಸಿಟ್ಟಿಗೆದ್ದು ಶಿಕ್ಷಿಸಿದರು. ಜೊತೆಗೆ ಸೇರಿ ಡಾನ್ಸ್ ಮಾಡಿದರು. ತಮ್ಮ ನೆಚ್ಚಿನ ವಿದ್ಯಾರ್ಥಿಗಳಿಗೆ ಸ್ಟಾರ್ ನೀಡಿದರು. ವಿದ್ಯಾರ್ಥಿಗಳು ತಾವು ಇಷ್ಟಪಡದ ಶಿಕ್ಷಕರ ವಿರುದ್ಧ ದೂರು ನೀಡಿದರು. ಒಟ್ಟಾರೆ ಬಿಗ್‌ಬಾಸ್ ಮನೆಯೊಳಗಿನ ಸದಸ್ಯರು ಒಂದು ವಾರದ ಮಟ್ಟಿಗೆ ತಮ್ಮೊಳಗೆ ಅಡಗಿದ್ದ ಮಗುಮನಸ್ಸನ್ನು ಅನಾವರಣಗೊಳಿಸಿತು. 

ರಕ್ಕಸರು ವರ್ಸಸ್ ಗಂಧರ್ವರು

ಈ ಸಲದ ಬಿಗ್‌ಬಾಸ್ ಕನ್ನಡ ಮನೆ ಅತಿ ಹೆಚ್ಚು ಹೀಟ್‌ ಅನುಭವಿಸಿದ್ದು ರಕ್ಕಸರು- ಗಂಧರ್ವರ ಟಾಸ್ಕ್‌ನಲ್ಲಿ. ಟಾಸ್ಕ್‌ ಎಂಬುದು ಎದುರಾಳಿಗಳನ್ನು ಕೆರಳಿಸುವ ಅವಕಾಶವಾಗಿ ಬದಲಾಗಿ, ಅದ್ಕೆ ಸೇಡು ತೀರಿಸಿಕೊಳ್ಳಲು ಮತ್ತೊಂದು ತಂಡ ಪ್ರಯತ್ನಿಸುವತ್ತ ಹೋಗಿ, ಅದು ಅತಿರೇಕಕ್ಕೆ ಹೋಗಿ ಸಂಗೀತಾ ಮತ್ತು ಪ್ರತಾಪ್ ಅವರ ಕಣ್ಣಿಗೆ ಗಾಯವಾಗಿ ಆಸ್ಪತ್ರೆ ಸೇರುವಂತಾಗಿದ್ದು ಇದೇ ವಾರದಲ್ಲಿ. ವಿನಯ್ ಮತ್ತು ಕಾರ್ತಿಕ್ ನಡುವೆ ಗಲಾಟೆಯಾಗಿ, ಕಾರ್ತೀಕ್ ನೆಲಕ್ಕೆಸೆದ ಚಪ್ಪಲಿ ಸಿಡಿದು ವಿನಯ್‌ಗೆ ತಗುಲಿದ್ದು ಇದೇ ವಾರದಲ್ಲಿ. ಹಲವು ಅಟ್ಟಹಾಸಕ್ಕೆ, ಇನ್ನು ಕೆಲವರ ಪ್ರಾಣಸಂಕಟಕ್ಕೆ ಈ ವಾರ ಸಾಕ್ಷಿಯಾಗಿತ್ತು.

ಇದನ್ನೂ ಓದಿ: Rahat Fateh Ali Khan ವೈರಲ್ ವಿಡಿಯೋಗೆ ಪ್ರತಿಕ್ರಿಯಿಸಿದ ಚಿನ್ಮಯಿ ಶ್ರೀಪದಾ ಹೇಳಿದ್ದೇನು ಓದಿ 

ಡ್ರೋಣ್ ಪ್ರತಾಪ್ ತಂತ್ರಗಾರಿಕೆ

ಡ್ರೋಣ್ ಪ್ರತಾಪ್ ಅವರ ತಂತ್ರಗಾರಿಕೆ ಹಲವು ಬಾರಿ ಮನೆಯೊಳಗೆ ಯಶಸ್ವಿಯಾಗಿ ಪ್ರಯೋಗ ಕಂಡಿದೆ. ಅವರು ನಾಯಕರಾದಾಗ, ನಮ್ರತಾ ಅವರು ಕ್ಯಾಪ್ಟನ್ ಆಗಿ ಆಯ್ಕೆಯಾಗುವ ಹಂತದಲ್ಲಿ ವಿಶೇಷವಾಗಿ ಪ್ರತಾಪ್ ತಂತ್ರಗಾಗಿಕೆ ಗಮನಸೆಳೆದಿತ್ತು. ಹಾಗೆಯೇ ಟಿಕೆಟ್ ಟು ಫಿನಾಲೆ ಟಾಸ್ಕ್‌ಗಳಲ್ಲಯೂ ಕೂಡ ಪ್ರತಾಫ್ ಅವರು ತಮ್ಮ ತಂತ್ರಗಾರಿಕೆಯಿಂದಲೇ ಅತಿ ಹೆಚ್ಚು ಅಂಕ ಗಳಿಸಿದ್ದರು. 

ಸಂಗೀತಾ-ವಿನಯ್ ಹಣಾಹಣಿ

ಬಿಗ್‌ಬಾಸ್ ಮನೆಯೊಳಗೆ ಆರಂಭದಿಂದಲೂ ಮಾತಿನ ಚಕಮಕಿ ನಡೆದಿತ್ತು. ಅದು ಹಲವು ಸಲ ಅತಿರೇಕಕ್ಕೂ ಹೋಗಿತ್ತು. ಹಳ್ಳಿ ಟಾಸ್ಕ್‌ನಲ್ಲಯಂತೂ ಸಂಗೀತಾ ವಿನಯ್ ಮುಖಾಮುಖಿ ಜೋರಾಗಿಯೇ ನಡೆದಿತ್ತು. ಮಾತಿಗೆ ಮಾತು, ಜಗಳಕ್ಕೆ ಜಗಳ ಇಡೀ ಮನೆಯನ್ನು ಪ್ರಕ್ಷುಬ್ದತೆಗೆ ದೂಡಿತ್ತು. ಅದನ್ನು ಹೊರತುಪಡಿಸಿಯೂ ಎಲಿಮಿನೇಷನ್ ಸಂದರ್ಭದಲ್ಲಿ ಗೇಮ್‌ಗಳ ಸಂದರ್ಭದಲ್ಲಿ ವಿನಯ್ ಮತ್ತು ಸಂಗೀತ ನಡುವೆ ಜಗಳ ನಡೆಯುತ್ತಲೇ ಇತ್ತು.

ನಮ್ರತಾ ಕಮ್‌ಬ್ಯಾಕ್‌!

ಆರಂಭದ ದಿನಗಳಲ್ಲಿ ವಿನಯ್ ಗುಂಪಿನಲ್ಲಿ ಸೇರಿಕೊಂಡು ತಮ್ಮ ಸ್ವಂತ ಅಸ್ತಿತ್ವವನ್ನೇ ಕಾಣಿಸಲಾಗದೆ ಒದ್ದಾಡುತ್ತಿದ್ದ ನಮ್ರತಾ ನಂತರದ ದಿನಗಳಲ್ಲಿ ಅದರಲ್ಲಿಯೂ ಮನೆಯಿಂದ ಹೊರಗೆ ಬರುವ ಹಿಂದಿನ ಕೆಲವು ವಾರಗಳಲ್ಲಿ ಅತ್ಯುತ್ತಮವಾಗಿ ಪ್ರದರ್ಶನ ನೀಡಿದರು. ಅವರು ಸದಾಕಾಲ ದ್ವೇಷಿಸುತ್ತಿದ್ದ ಸಂಗೀತಾ ಜೊತೆಗೆ ಸ್ನೇಹಬೆಳೆಸಿಕೊಂಡು ಆಪ್ತರಾದರು. ಆಗ ನಮ್ರತಾ ಅವರ ಸ್ವಂತ ವ್ಯಕ್ತಿತ್ವ, ಶಕ್ತಿ ಎಲ್ಲವೂ ಕಾಣಿಸಿಕೊಂಡಿದ್ದು ಆ ವಾರಗಳಲ್ಲಿಯೇ.

ಡ್ರೋಣ್ ಪ್ರತಾಪ್‌ಗೆ ತುಕಾಲಿ ಸಂತೋಷ್‌ ಪ್ರೋತ್ಸಾಹ

ತುಕಾಲಿ ಸಂತೋಷ್ ಬಿಗ್‌ಬಾಸ್ ಮನೆಯಲ್ಲಿ ಅತಿಹೆಚ್ಚು ಎಂಟರ್‍‌ಟೈನ್ಮೆಂಟ್ ನೀಡಿದ ಸದಸ್ಯ . ಪ್ರತಾಪ್ ಅವರಿಗೆ ಒಂದು ಕಾಲಕ್ಕೆ ಅವರ ಹಾಸ್ಯ ನೋವನ್ನುಂಟು ಮಾಡಿತ್ತು. ನಂತರದ ದಿನಗಳಲ್ಲಿ ತುಕಾಲಿ ಅವರೇ ಪ್ರತಾಪ್ ಬೆಂಬಲಕ್ಕೆ ನೀಡಿದ್ದರು. 

ಹಬ್ಬದ ಸಂಭ್ರಮ 

ಸಂಕ್ರಾಂತಿಯ ಸಂದರ್ಭದಲ್ಲಿ ಮನೆಯೆಲ್ಲ ಹಬ್ಬದ ಸಂಭ್ರಮದಲ್ಲಿ ಮುಳುಗಿತ್ತು. ವಾರಾಂತ್ಯದಲ್ಲಿ ಎಲಿಮಿನೇಷನ್ ಸಂದರ್ಭದಲ್ಲಿ ವರ್ತೂರು ಮತ್ತು ತುಕಾಲಿ ಸಂತೋಷ್ ಅವರು ಎಲಿಮಿನೇಷನ್‌ ಸೀಟ್‌ನಲ್ಲಿ ಕೂತಿದ್ದರು. ಆ ಸಂದರ್ಭವು ಅವರ ನಡುವಿನ ಸ್ನೇಹಸಂಬಂಧವನ್ನೂ ಕರ್ನಾಟಕಕ್ಕೆ ಪರಿಚಯಿಸಿತ್ತು. ಕೊನೆಗೆ ಸುದೀಪ್, ಆ ವಾರದ ಎಲಿಮಿನೇಷನ್‌ ಅನ್ನು ಹೋಲ್ಡ್‌ನಲ್ಲಿ ಇರಿಸಿ ವರ್ತೂರು ಮತ್ತು ತುಕಾಲಿ ಸಂತೋಷ್ ಇಬ್ಬರನ್ನೂ ಮನೆಯೊಳಗೆ ಉಳಿಸಿದ್ದರು. ಆ ವಾರ ಮಿಡ್‌ವೀಕ್‌ ಎಲಿಮಿನೇಷನ್‌ನಲ್ಲಿ ತುನಿಷಾ ಮನೆಯಿಂದ ಹೊರಗೆ ಬಂದಿದ್ದರು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News