BBK 10 : ಈ ವಾರದ ಕ್ಯಾಪ್ಟನ್ ಪಟ್ಟ ಯಾರಿಗೆ..? ಸ್ಪರ್ಧಿಗಳ ಕುಟುಂಬಸ್ಥರು ಹೇಳಿದ್ದು ಈ ಒಬ್ಬ ವ್ಯಕ್ತಿ ಹೆಸರು ಮಾತ್ರ

Bigg Boss Kannada 10 : ಭರಪೂರ ಭಾವುಕತೆಯಲ್ಲಿಯೇ ಈ ವಾರ ಕಳೆದಿದೆ. ಬಿಗ್‌ಬಾಸ್‌ ಮನೆಯೊಳಗೆ ಪ್ರವೇಶಿಸಿದ ಎಲ್ಲ ಸದಸ್ಯರ ಕುಟುಂಬದವರು, ಎಲ್ಲ ಸದಸ್ಯರಿಗೂ ಕಿವಿಮಾತು ಹೇಳಿ ಹೋಗಿದ್ದಾರೆ. ಬಿಗ್‌ಬಾಸ್ ಕುಟುಂಬದ ಬಂಧವನ್ನು ಇನ್ನಷ್ಟು ಗಟ್ಟಿ ಮಾಡಿದ್ದಾರೆ. ವಾರವಿಡೀ ಹಲವು ಹೃದಯಸ್ಪರ್ಶಿ ಸನ್ನಿವೇಶಗಳಿಗೆ ಸಾಕ್ಷಿಯಾಗಿದ್ದ ಬಿಗ್‌ಬಾಸ್‌ ಮನೆ ವಾರಾಂತ್ಯದಲ್ಲಿ ಮತ್ತೆ ಮೊದಲಿನ ಹಳಿಗೆ ಮರಳುತ್ತಿದೆ.

Written by - Krishna N K | Last Updated : Dec 29, 2023, 11:54 AM IST
  • ವಾರವಿಡೀ ಹಲವು ಹೃದಯಸ್ಪರ್ಶಿ ಸನ್ನಿವೇಶಗಳಿಗೆ ಬಿಗ್‌ಬಾಸ್‌ ಸಾಕ್ಷಿಯಾಗಿತ್ತು.
  • ಬಿಗ್‌ಬಾಸ್‌ ಮನೆ ವಾರಾಂತ್ಯದಲ್ಲಿ ಮತ್ತೆ ಮೊದಲಿನ ಹಳಿಗೆ ಮರಳುತ್ತಿದೆ.
  • ಸಧ್ಯ ‘ಕ್ಯಾಪ್ಟನ್‌ ಯಾರು?’ ಈ ಪ್ರಶ್ನೆ ಈಗ ಎಲ್ಲರನ್ನೂ ಕಾಡುತ್ತಿದೆ.
BBK 10 : ಈ ವಾರದ ಕ್ಯಾಪ್ಟನ್ ಪಟ್ಟ ಯಾರಿಗೆ..? ಸ್ಪರ್ಧಿಗಳ ಕುಟುಂಬಸ್ಥರು ಹೇಳಿದ್ದು ಈ ಒಬ್ಬ ವ್ಯಕ್ತಿ ಹೆಸರು ಮಾತ್ರ title=

Drone Prathap : ಸಧ್ಯ ‘ಕ್ಯಾಪ್ಟನ್‌ ಯಾರು?’ ಈ ಪ್ರಶ್ನೆ ಈಗ ಎಲ್ಲರನ್ನೂ ಕಾಡುತ್ತಿದೆ. ಈ ಪ್ರಶ್ನೆಗೆ ಉತ್ತರದ ಜೊತೆಗೇ ಕಿಚ್ಚನ ವಾರಾಂತ್ಯದ ಎಪಿಸೋಡ್‌ಗಳಲ್ಲಿ ಭಾಗಿಯಾಗಲು ಸದಸ್ಯರು ಕಾಯುತ್ತಿದ್ದಾರೆ. ಈ ಪ್ರಶ್ನೆಗೆ ಉತ್ತರದ ಸುಳಿವು ಇವತ್ತು ಬಿಡುಗಡೆಯಾದ ಪ್ರೋಮೊದಲ್ಲಿ ಇದೆ. ಈ ವಾರ ಮನೆಯೊಳಗೆ ಬಂದ ಸ್ಪರ್ಧಿಗಳ ಕುಟುಂಬದವರಿಗೆ ಒಂದು ಪ್ರಶ್ನೆ ಕೇಳಲಾಗಿತ್ತು. ಅವರ ಕುಟುಂಬದ ಸದಸ್ಯರನ್ನು ಬಿಟ್ಟು ಬೇರೆ ಯಾರು ಈ ಮನೆಯ ಕ್ಯಾಪ್ಟನ್ ಆಗಬೇಕಾಗಬೇಕು ಎಂದು ಬಯಸುತ್ತೀರಿ? ಎಂಬ ಪ್ರಶ್ನೆಗೆ ಎಲ್ಲರೂ ತಮ್ಮ ಅಭಿಪ್ರಾಯ ಸೂಚಿಸಿದ್ದರು. 

ಅದರ ಅನುಸಾರ ಸಂಗೀತಾ, ತನಿಷಾ ಮತ್ತು ಪ್ರತಾಪ್ ಹೆಸರು ಅತಿ ಹೆಚ್ಚು ಸಲ ಬಂದಿತ್ತು. ಹಾಗಾಗಿ ಈ ಮೂವರು ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಆಡಲು ಸಜ್ಜಾಗಿದ್ದರು. ಈ ನಡುವೆ ಬಿಗ್‌ಬಾಸ್ ಇನ್ನೊಂದು ಶಾಕ್ ಕೊಟ್ಟಿದ್ದಾರೆ. ಮನೆಯ ಸದಸ್ಯರಿಗೇ ಈ ಮೂವರಲ್ಲಿ ಯಾರು ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಆಡುವುದು ಬೇಡ ಎಂಬುದನ್ನು ಸೂಚಿಸಲು ತಿಳಿಸಿದ್ದಾರೆ. 

ಇದನ್ನೂ ಓದಿ: Kaatera Review : ‘ಕಾಟೇರ’ನಿಗೆ ವಿಜಯಲಕ್ಷ್ಮಿ ದರ್ಶನ್‌ ಫಿದಾ..! ಪತಿ ಸಿನಿಮಾ ಬಗ್ಗೆ ಹೇಳಿದ್ದಿಷ್ಟು

ಆಗ ಬಹುತೇಕ ಎಲ್ಲರೂ ಸೂಚಿಸಿದ್ದು ಪ್ರತಾಪ್ ಹೆಸರನ್ನು. ‘ಪ್ರತಾಪ್‌ ಅಧಿಕಾರ ಸಿಕ್ಕ ಕೂಡಲೇ ಸ್ಟ್ರಿಕ್ಟ್ ಆಗಿಬಿಡ್ತಾರೆ’, ‘ಅವರು ಮೂಡಿ’, ‘ಪದೇ ಪದೇ ಮೂಡ್‌ಸ್ವಿಂಗ್ ಆಗುತ್ತಿರುತ್ತದೆ’ ಹೀಗೆಲ್ಲ  ಹಲವು ಅಭಿಪ್ರಾಯಗಳು ಬಂದಿದೆ. ಇದರಿಂದ ಪ್ರತಾಪ್ ಮನಸ್ಸಿಗೆ ನೋವೂ ಆಗಿದೆ. 

ಬಹುಶಃ ಈ ವಾರ ಮನೆಯ ಸದಸ್ಯರ ಅಭಿಪ್ರಾಯದ ಮೇರೆಗೆ ಪ್ರತಾಪ್‌ ಕ್ಯಾಪ್ಟನ್ಸಿ ಟಾಸ್ಕ್‌ನಿಂದ ಹೊರಗೆ ಉಳಿಯಬಹುದು. ಸಂಗೀತಾ ಮತ್ತು ತನಿಷಾ ಕ್ಯಾಪ್ಟನ್ಸಿ ಟಾಸ್ಕ್ ಆಡಬಹುದು. ಆ ಇಬ್ಬರಲ್ಲಿ ಯಾರು ಈ ವಾರದ ಕ್ಯಾಪ್ಟನ್ ಆಗುತ್ತಾರೆ ಎಂಬುದನ್ನು ಕಾದು ನೋಡಬೇಕಷ್ಟೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News