BBK 10: ಬಿಗ್‌ಬಾಸ್‌ ಸೀಸನ್‌ 10ರ ಜರ್ನಿಯಲ್ಲಿ 50ನೇ ದಿನದ ಸಡಗರ: ಕೇಕ್ ಕಟ್ ಮಾಡಿ ಸಂಭ್ರಮಾಚರಣೆ!

Bigg Boss 50 Days Celebration: ಬಿಗ್‌ಬಾಸ್‌ ಸೀಸನ್‌ 10ರ ಜರ್ನಿ 50 ದಿನಕ್ಕೆ ತಲುಪಿ, 50 ದಿನದ ಸಂಭ್ರಮಾಚೆಣೆಯನ್ನು ಕೇಕ್‌ ಕಟ್‌ ಮಾಡಿ ಮನೆಯ ಸದಸ್ಯರು ಸೆಲೆಬ್ರೇಟ್‌ ಮಾಡಿದ್ದಾರೆ.

Written by - Zee Kannada News Desk | Last Updated : Nov 27, 2023, 11:00 AM IST
  • ಬಿಗ್‌ಬಾಸ್ ಸೀಸನ್ ಕನ್ನಡ 10ರ ಜರ್ನಿಯಲ್ಲಿ ಮನೆ ಸದಸ್ಯರು ಅರ್ಧಕ್ಕೆ ಅರ್ಧ ಜರ್ನಿ ಮುಗಿಸಿದ್ದು, ಇನ್ನು ಮುಂದೆ ಟಾಸ್ಕ್ ಟಫ್ ಆಗುತ್ತಾ ಹೋಗುತ್ತದೆ.
  • ಬಿಗ್ಬಾಸ್‌ ಮನೆಯಲ್ಲಿ ಏನನ್ನೇ ತಿನ್ನುವುದಕ್ಕೆ ಕೊಡಬೇಕು ಎಂದರೂ, ಅದನ್ನು ಸದಸ್ಯರು ಕಷ್ಟಪಟ್ಟೆ ಪಡೆಯಬೇಕು.
  • ನಿನ್ನೆ 50 ದಿನದ ಸಂಭ್ರಮಕ್ಕಾಗಿ ಮನೆ ಸದಸ್ಯರಿಗೆ ಉಚಿತವಾಗಿ ಸ್ಪೆಷಲ್ ಕೇಕ್ ಸಿಕ್ಕಿ ಈ ಸಂತಸದ ದಿನಗಳನ್ನು ಸೆಲೆಬ್ರೆಟ್ ಮಾಡುವುದಕ್ಕೆ ಅವಕಾಶ ನೀಡಲಾಗಿದೆ.
BBK 10: ಬಿಗ್‌ಬಾಸ್‌ ಸೀಸನ್‌ 10ರ ಜರ್ನಿಯಲ್ಲಿ 50ನೇ ದಿನದ ಸಡಗರ: ಕೇಕ್ ಕಟ್ ಮಾಡಿ ಸಂಭ್ರಮಾಚರಣೆ! title=

Bigg Boss 50 Days Journey: ಬಿಗ್‌ಬಾಸ್ ಸೀಸನ್ ಕನ್ನಡ 10ರ ಜರ್ನಿಯಲ್ಲಿ ಮನೆ ಸದಸ್ಯರು ಅರ್ಧಕ್ಕೆ ಅರ್ಧ ಜರ್ನಿ ಮುಗಿಸಿದ್ದು, ಇನ್ನು ಮುಂದೆ ಟಾಸ್ಕ್ ಟಫ್ ಆಗುತ್ತಾ ಹೋಗುತ್ತದೆ. ಎಮೋಷನ್ಸ್ ಜಾಸ್ತಿಯಾಗುತ್ತಾ ಹೋಗುತ್ತಿದಂತೆ ಐವತ್ತು ದಿನ ಪೂರೈಸುವುದು ಸುಲಭದ ಮಾತೇನು ಅಲ್ಲ. ಸದ್ಯಕ್ಕೆ ಮನೆಯಲ್ಲಿ ಸ್ಟ್ರಾಂಗ್ ಎನಿಸಿಕೊಂಡವರೇ ಉಳಿದುಕೊಂಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ನೂರು ದಿನಗಳ ಆಟದಲ್ಲಿ ಕೊನೆಯವರೆಗೂ ಉಳಿಯುವುದು ಇಬ್ಬರು ಮಾತ್ರವಾಗಿದ್ದು, ವಾರಕ್ಕೆ ಒಬ್ಬರು ಮನೆಗೆ ಹೋಗುತ್ತಾರೆ. ಒಮ್ಮೊಮ್ಮೆ ಇಬ್ಬರು ಹೋಗುತ್ತಾರೆ. ಆಟದಲ್ಲಾಗಲಿ, ಓಟದಲ್ಲಿ ಆಗಲಿ ವೀಕ್ ಇರುವವರು ಆರಂಭದಲ್ಲಿ ಹೊರಗೆ ಹೋಗುತ್ತಾರೆ. 

ಆದರೆ, ದಿನ ಕಳೆದಂತೆ ಜನರಿಗೂ ಊಹೆ ಮಾಡಲು ಕಷ್ಟವಾಗಿ ಬಿಡುತ್ತಿದ್ದು, ಇದೀಗ ಬಿಗ್‌ಬಾಸ್ ಮನೆಯಲ್ಲಿರುವ ಸದಸ್ಯರಿ ಗೆ ನವೆಂಬರ್ 26 ರಂದು 50 ದಿನ ಕಳೆದಿದ್ದಾರೆ. ಬಿಗ್‌ಬಾಸ್ ನೂರು ದಿನಗಳ ಆಟದಲ್ಲಿ ಸದ್ಯ  ಬರೀ ಟಾಸ್ಕ್‌ಗಳ ಸಂಭ್ರಮಾಚರಣೆ. ಆದರೆ, ಇನ್ನು ಮುಂದೆ ದಿನ ಕಳೆದಂತೆ ಅಂದರೆ 80-90 ದಿನಗಳನ್ನು ಕಳೆಯುವವರು ಎಮೋಷನಲಿ ಸಿಕ್ಕಾಪಟ್ಟೆ ವೀಕ್ ಆಗಿರುತ್ತಾರಾದರೂ, ಆಗಲೂ ಸ್ಪೂರ್ತಿ ತುಂಬುವುದಕ್ಕೆ ಬಿಗ್‌ಬಾಸ್ ಸಪೋರ್ಟಿವ್ ಆಗಿ ನಿಲ್ಲುತ್ತದೆ. ಇದೀಗ 50 ದಿನ ಪೂರೈಸಿದ ಖುಷಿಯನ್ನು ಮನೆ ಮಂದಿಗೂ ನೀಡಿದೆ. 

ಇದನ್ನೂ ಓದಿ: 

ಬಿಗ್ಬಾಸ್‌ ಮನೆಯಲ್ಲಿ ಏನನ್ನೇ ತಿನ್ನುವುದಕ್ಕೆ ಕೊಡಬೇಕು ಎಂದರೂ, ಅದನ್ನು ಸದಸ್ಯರು ಕಷ್ಟಪಟ್ಟೆ ಪಡೆಯಬೇಕು. ಆದರೆ, ನಿನ್ನೆ 50 ದಿನದ ಸಂಭ್ರಮಕ್ಕಾಗಿ ಮನೆ ಸದಸ್ಯರಿಗೆ ಉಚಿತವಾಗಿ ಸ್ಪೆಷಲ್ ಕೇಕ್ ಸಿಕ್ಕಿ ಈ ಸಂತಸದ ದಿನಗಳನ್ನು ಸೆಲೆಬ್ರೆಟ್ ಮಾಡುವುದಕ್ಕೆ ಅವಕಾಶ ನೀಡಲಾಗಿದೆ. ಎಲ್ಲರೂ ಕೇಕ್ ಕಟ್ ಮಾಡಿ ಖುಷಿ ಪಟ್ಟಿದ್ದಾರೆ. ಕೇಕ್ ತಿಂದು, ಐವತ್ತು ದಿನಗಳ ಬಳಿಕ ಕೇಕ್ ತಿಂತಾ ಇದ್ದೀವಿ ಎಂದು ಖುಷಿ ಪಟ್ಟಿದ್ದಾರೆ. ಬಿಗ್‌ಬಾಸ್ ಇತಿಹಾಸದಲ್ಲಿ ಕಳೆದ ಒಂಬತ್ತು ಸೀಸನ್‌ನಲ್ಲಿ ಮಾಡಿರದ ಸಂಭ್ರಮಾಚರಣೆ, ಫಸ್ಟ್  ಟೈಮ್‌ ಸೆಲೆಬ್ರೆಷನ್ ಮಾಡಿದ್ದಾರೆ. 

ಕಳೆದ ಸೀಸನ್‌ನಲ್ಲಿಯೂ ಬಿಗ್ ಬಾಸ್ ಮನೆಯೊಳಗೆ ಇದ್ದಾಗಲೇ ವಿಟಿಯನ್ನು ತೋರಿಸದುವುದೇಯಿರುವುದಕ್ಕೆ ಕಾರಣ ಅಲ್ಲಿ ಕೋಪ ಇದೆ, ಗಾಸಿಪ್ ಇದೆ. ಜಗಳ ಇರುತ್ತೆ. ಹೀಗಾಗಿ ಅದ್ಯಾವುದನ್ನು ಮನೆಯೊಳಗಿದ್ದಾಗಲೇ ತೋರಿಸುವುದಕ್ಕೆ ಹೋಗುವುದಿಲ್ಲ. ಮನೆಯಿಂದ ಯಾರು ಹೊರಗೆ ಬರುತ್ತಾರೋ ಅವರಿಗೆ ವಿಟಿ ತೋರಿಸುತ್ತಾರೆ. ಆದರೆ, ಈ ಸೀಸನ್‌ನಲ್ಲಿ ಐವತ್ತು ದಿನಕ್ಕೇನೆ ಮನೆ ಮಂದಿಗೆ ವಿಟಿ ತೋರಿಸಿದ್ದಾರೆ. ಆ ಜರ್ನಿಯಲ್ಲಿ ತಮ್ಮನ್ನು ತಾವೂ ನೋಡಿಕೊಳ್ಳುವುದಕ್ಕೆ  ಬಿಗ್‌ಬಾಸ್ ಅವಕಾಶ ನೀಡಿದ್ದು, ಅದನ್ನು ನೋಡಿದ ವಿನಯ್ ಕಣ್ಣಲ್ಲಿ ನೀರು ಬಂದಿದೆ. ಇಂಥದ್ದೊಂದು ಜರ್ನಿ ಎಲ್ಲೂ ಸಿಗುವುದಕ್ಕೆ ಸಾಧ್ಯವಿಲ್ಲ ಎಂದಿದ್ದಾರೆ. ಸಂಗೀತಾ ಕೂಡ ಜರ್ನಿ ನೋಡಿ ಸೈಲೆಂಟ್ ಆಗಿದ್ದು, ಅಸಮರ್ಥರಾಗಿ ಬಂದು, ಇಲ್ಲೊಂದು ಫ್ರೆಂಡ್‌ಶಿಪ್ ಬಿಲ್ಡ್ ಆಗಿತ್ತು. ಈಗ ವಿಲನ್‌ಗಳ ಜೊತೆಗೆ ಜರ್ನಿ ಹೇಗಿದೆ ಎಂಬುದನ್ನು ನೆನೆದಿದ್ದು, ಮನೆ ಮಂದಿಯೆಲ್ಲಾ ತಮ್ಮ ಐವತ್ತು ದಿನದ ಜರ್ನಿ ಕಂಡು ಒಂದು ಕ್ಷಣ ಸೈಲೆಂಟ್ ಆಗಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News