BBK10: ಬಳೆ ತಂಟೆಗೆ ಹೋದ್ರೆ ಬರೆ ಬೀಳ್ದೇ ಇರುತ್ತಾ? ವಿನಯ್‌ಗೆ ನೀರಿಳಿಸಿದ ಕಿಚ್ಚ ಸುದೀಪ್‌!

Kiccha Sudeep Taking Class To Vinay: ಬಳೆ ತೊಟ್ಟು ಕುಳಿತುಕೊಂಡಿಲ್ಲ ಎಂದು ಮದವೇರಿದ ಆನೆಯಂತೆ ವರ್ತಿಸಿದ ವಿನಯ್‌ಗೆ ಇದೀಗ ಕಿಚ್ಚ ಸುದೀಪ್‌ ಭರ್ಜರಿ ಕ್ಲಾಸ್‌ ತೆಗೆದುಕೊಂಡಿದ್ದಾರೆ..   

Written by - Savita M B | Last Updated : Nov 4, 2023, 08:26 PM IST
  • ತಾರಕ್ಕೇರಿದ ಸಂಗೀತಾ ವಿನಯ್‌ ಜಗಳ
  • ಕಾರ್ತಿಕ್‌ಗೆ ಬಳೆ ತೊಟ್ಟುಕೊಂಡು ಕೂತಿಲ್ಲ ಎಂದ ವಿನಯ್‌
  • ವಿನಯ್‌ ಗೆ ಭರ್ಜರಿ ಕ್ಲಾಸ್‌ ತೆಗೆದುಕೊಂಡ ಕಿಚ್ಚ
BBK10: ಬಳೆ ತಂಟೆಗೆ ಹೋದ್ರೆ ಬರೆ ಬೀಳ್ದೇ ಇರುತ್ತಾ? ವಿನಯ್‌ಗೆ ನೀರಿಳಿಸಿದ ಕಿಚ್ಚ ಸುದೀಪ್‌! title=

Bigg Boss Kannada: ಕೊನೆಗೂ ವೀಕೆಂಡ್‌ ಬಂತೂ.. ಅಭಿಮಾನಿಗಳು ಕಿಚ್ಚನ ಆಗಮನಕ್ಕಾಗಿ ಎದುರು ನೋಡುತ್ತಿದ್ದಾರೆ.. ಅದರಲ್ಲೂ ಈ ವಾರದ ಬಿಗ್‌ ಬಾಸ್‌ ಮನೆಯ ಸ್ಥಿತಿ ನೋಡಿ ಕಿಚ್ಚ ಯಾರಿಗೆ ಕ್ಲಾಸ್‌ ತೆಗೆದುಕೊಳ್ಳುತ್ತಾರೆ.. ಯಾರಿಗೆ ಚಪ್ಪಾಳೆ ನೋಡುತ್ತಾರೆ ಅನ್ನೋದೆ ಕುತೂಹಲಕಾರಿಯಾದ ವಿಷಯ.. ಅದಕ್ಕೆಲ್ಲ ಉತ್ತರ ಇವತ್ತಿನ ವಾರದ ಕಥೆ ಕಿಚ್ಚನ ಜೊತೆ ಎಪಿಸೋಡ್‌. 

ಇನ್ನು ಇತ್ತೀಚೆಗೆ ಬಿಗ್‌ ಬಾಸ್‌ ಮನೆ ಸಖತ್‌ ಕಾವೇರಿದೆ. ಜಗಳಗಳು ಜೋರಾಗಿವೆ.. ಒಬ್ಬರನ್ನೊಬ್ಬರು ದೂಷಿಸೋದಂತೂ ಇನ್ನೂ ಹೆಚ್ಚಾಗಿದೆ. ಆದರೆ ಇದೆಲ್ಲದರ ನಡುಗೆ ತಾರಕ್ಕೇರಿದ್ದು, ವಿನಯ್‌ ಸಂಗೀತಾ ವಾಕ್ಸಮರ...

ಇದನ್ನೂ ಓದಿ-ವರುಣ್ ತೇಜ್, ಲಾವಣ್ಯ ತ್ರಿಪಾಠಿ ಸೇರಿದಂತೆ ಪ್ರೀತಿಸಿ ಮದುವೆಯಾದ ನಟ-ನಟಿಯರಿವರು!

ಬಿಗ್‌ ಬಾಸ್‌ ನೀಡಿದ ಹಳ್ಳಿ ಟಾಸ್ಕ್‌ನಲ್ಲಿ ವಿನಯ್‌ ಮತ್ತು ಕಾರ್ತಿಕ್‌ ನಡುವೆ ಮಾತಿನ ಚಕಮಕಿ ನಡೆದು ಬಳೆ ಎನ್ನುವ ಶಬ್ದವನ್ನು ವಿನಯ್‌ ಬಳಕೆ ಮಾಡುತ್ತಾರೆ.. ನಂತರ ಮತ್ತೆ ವಿನಯ್‌ ಸಂಗೀತಾ ಜೊತೆ ಕಾದಾಟಕ್ಕಿಳಿಯುತ್ತಾರೆ.. ಆಗ ಬಳೆ ತೊಟ್ಟುಕೊಂಡಿವವರು ದುರ್ಬಲರು ಎಂದು ತಿಳಿದಿದ್ದ ಆನೆ ಅಲಿಯಾಸ್‌ ವಿನಯ್‌ ಗೆ ಬಳೆ ಹಾಕಿಕೊಂಡಿದ್ದೇನೆ ನೋಡು ಎಂದು ಸಂಗೀತಾ ತಿರುಗೇಟು ನೀಡುತ್ತಾರೆ..

ಇದನ್ನೂ ಓದಿ-ಟೀಸರ್‌ನಿಂದಲೇ ಮೋಡಿಮಾಡಿದ "ದಿಲ್ ಖುಷ್" : ಚಿತ್ರತಂಡಕ್ಕೆ ಶುಭಕೋರಿದ ಡಾರ್ಲಿಂಗ್ ಕೃಷ್ಣ

ಈ ವಿಚಾರವಾಗಿ ಇಂದು ಕಿಚ್ಚ ಸುದೀಪ್‌ ವಿನಯ್‌ಗೆ ಭರ್ಜರಿ ಕ್ಲಾಸ್‌ ತೆಗೆದುಕೊಂಡಿದ್ದಾರೆ. "ಬಳೆ ಎಂದರೆ ನಿಮ್ಮ ಪ್ರಕಾರ ಏನು" ಎಂದು ಕಿಚ್ಚ ಕೇಳಿದಾಗ "ಯಾವಾಗಲೂ ಹೆಣ್ಣು ಮಕ್ಕಳ ಜೊತೆ ಇರುವ ಕಾರ್ತಿಕ್‌ಗೆ ನಾನು ಅಂದೆ" ಎಂದು ವಿನಯ್‌ ಹೇಳುತ್ತಾರೆ.. ಆಗ ಅದಕ್ಕೆ ಉತ್ತರಿಸಿದ ಕಿಚ್ಚ ಸುದೀಪ್‌ "ಕೆಲವೊಮ್ಮೆ ಸೈಲೆಂಟಾಗಿದ್ರೆ ಬೆಟರ್‌ ಅನ್ನೋದು ಇದಕ್ಕೆನೆ" ಎಂದು ಮಾತಿನ ಮೂಲಕ ಬೆವರಿಸಿಳಿದ್ದಾರೆ..

ಇನ್ನು ಇತ್ತೀಚೆನ ಬಿಗ್‌ ಬಾಸ್‌ ಮನೆಯ ಪರಿಸ್ಥಿತಿ ಕಂಡು ಅನೇಕರು ಬೇಸರ ವ್ಯಕ್ತಪಡಿಸಿದ್ದರು.. ಕಾರಣ ಅವಾಚ್ಯ ಶಬ್ದಗಳ ಬಳ.. ವ್ಯಕ್ತಿತ್ವ ಕುಂದಿಸುವುದು.. ಹೀಗೆ ರಾಕ್ಷಸರಂತೆ ವರ್ತಿಸುತ್ತಿರುವ ಕೆಲವರ ಕುರಿತಾಗಿ ಸೆಲೆಬ್ರಿಟಿಗಳು ಸೇರಿದಂತೆ, ಬಿಗ್‌ ಬಾಸ್‌ ಫ್ಯಾನ್ಸ್‌ ಬೇಸರಗೊಂಡಿದ್ದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News