Bigg Boss Kannada 10: ದೊಡ್ಮನೆ ಆಟ ಶುರುವಾಗಿ ನಾಲ್ಕು ವಾರಗಳಲ್ಲಿ ಮನೆ ಸಂಪೂರ್ಣ ಎರಡು ಭಾಗವಾಗಿದೆ. ಸಲಗದಂತೆ ಎಂಬ ಬಿರುದು ಪಡೆದುಕೊಂಡ ವಿನಯ್ ತಮ್ಮದೇ ಆದ ತಂಡ ಕಟ್ಟಿಕೊಂಡಿದ್ದಾರೆ. ನಮ್ರತಾ ಗ್ರೂಪಿಸಂ ಮಾಡುತ್ತಿದ್ದಾರೆ. ನಾಮಿನೇಷನ್ ಹಾಗೂ ಕಳಪೆ ನೀಡುವ ವಿಚಾರದಲ್ಲಿ ತಮ್ಮ ತಂಡದವರು ಕೆಟ್ಟದಾಗಿ ಆಡಿದ್ದರು ಎದುರಾಳಿ ತಂಡದ ಸದಸ್ಯರನ್ನು ನಾಮಿನೇಟ್ ಮಾಡಿ "ಬೇರೆಯವರು ಎಲಿಮಿನೇಟ್ ಆಗ್ತಾ ಇರಬೇಕು .. ನಾವು ಫಿನಾಲೆಗೆ ಹೋಗಬೇಕು" ಎಂದು ತಮ್ಮ ಗುಂಪಿನವರಿಗೆ ನಮ್ರತಾ ಗೌಡ ಫಿಕ್ಸಿಂಗ್ ಗೇಮ್ ಹೇಳಿಕೊಟ್ಟಿದ್ದಾರೆ.
ಹಾಗಾದ್ರೆ ನಮ್ರತಾ ಗೌಡ್ ಬಿಗ್ ಬಾಸ್ ಮನೆಯಲ್ಲಿ ಎಲ್ಲದಕ್ಕೂ ಟೀಮ್ ಫಿಕ್ಸಿಂಗ್ ಮಾಡಿಕೊಳ್ಳುತ್ತಾರಾ? ತಮ್ಮ ತಂಡದವರು ತಪ್ಪು ಮಾಡಿದರೂ ಎದುರಾಳಿ ತಂಡವನ್ನೆ ಟಾರ್ಗೆಟ್ ಮಾಡುತ್ತಾರಾ? ಮನೆಯಲ್ಲಿ ಈ ಗ್ರೂಪಿಸಂ ಮತ್ತು ಫಿಕ್ಸಿಂಗ್ ಆಟ ನಡೆಯುತ್ತಾ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ..
ಇದನ್ನೂ ಓದಿ-ನಾನು ʼGayʼ..! ಬಿಟೌನ್ ಕಿಂಗ್ ಶಾರುಖ್ ಖಾನ್ ಹೀಗೆ ಹೇಳಿಕೊಂಡಿದ್ಯಾಕೆ..?
ಬಿಗ್ ಬಾಸ್ ಸ್ಪರ್ಧಿಗಳಿಗೆ ಹಳ್ಳಿ ಟಾಸ್ಕ್ ನೀಡಲಾಗಿತ್ತು.. ಮೊದಲನೇ ಆಟದಲ್ಲಿ ಎರಡು ತಂಡಗಳು ಬೇಡಿಕೆಯನ್ನು ಪೊರೈಸಲಿಲ್ಲ. ಎರಡನೇ ಹಂತ ವಿನಯ್ ಹಾಗೂ ಸಂಗೀತಾ ಅವರಿಂದ ರದ್ದಾಯಿತು. ಮೂರನೇ ಹಂತವಾಗಿ ಕುಸ್ತಿ ನೀಡಲಾಗಿದ್ದು.. ಅದರಲ್ಲಿ ಸಂಗೀತಾ ತಂಡ ಸೋಲನುಭವಿಸಿ.. ವಿನಯ್ ತಂಡ ಗೆದ್ದು ಬೀಗೀತು.. ಆದರೆ ಇಲ್ಲಿ ಚರ್ಚೆಯಾಗುತ್ತಿರುವುದು ಗೆದ್ದು ಬೀಗಿದ ತಂಡದ ನಮ್ರತಾ ಹಾಗೂ ವಿನಯ್ ಗೌಡ ಮಾತುಗಳು..
ಇದನ್ನೂ ಓದಿ-ಕಿಂಗ್ ಖಾನ್ ಜನ್ಮದಿನಕ್ಕೆ ಬಂತು ‘ಡಂಕಿ’ ಟೀಸರ್..!
ವಿನಯ್ : ಈ ಟೀಮ್ ನಮ್ಮದು ಏನಿದ್ಯೋ.. ನನಗೆ ಹೃದಯದಿಂದ ಬೆಸ್ಟ್ ಟೀಮ್ ಎಂದು ಅನಿಸಿದೆ. ಇಷ್ಟು ದಿನ.. ಆಡಿರೋದ್ರಲ್ಲಿ ಈ ಟೀಮ್ ನನಗೆ ನಿಜವಾಗಿಯೂ ಬೆಸ್ಟ್ ಎನಿಸಿದೆ.
ನಮ್ರತಾ : ಫಿನಾಲೆಗೆ ನಮ್ಮಲ್ಲೇ ಯಾರಾದರೂ ಹೋಗಬೇಕು
ವಿನಯ್ : ಈ ಟೀಮ್‌ನ ನಾವು ಹೀಗೇ ಕೊನೆಯವರೆಗೂ ಕಟ್ಟಿಕೊಂಡು ಹೋದರೆ, ಕೊನೆಯವರೆಗೂ ಜೊತೆಲೇ ಇರ್ತೀವಿ
ನಮ್ರತಾ : ಫಿನಾಲೆವರೆಗೂ ಬೇರೆಯವರನ್ನ ಎಲಿಮಿನೇಟ್ ಮಾಡ್ತಾ .. ಫಿನಾಲೆಯಲ್ಲಿ ನಾವು ಇರ್ಬೇಕು
ಇದೆಲ್ಲವನ್ನು ಹೊರತು ಪಡಿಸಿ ನಾಮಿನೇಷನ್ ವಿಚಾರದ ಬಗ್ಗೆ ಮಾತನಾಡುವುದಾದರೇ ‘ಬಿಗ್ ಬಾಸ್’ ನಿಯಮದ ಪ್ರಕಾರ ನಾಮಿನೇಟ್ ಮಾಡುವುದರ ಕುರಿತಾಗಿ ಓಪನ್ ಆಗಿ ಚರ್ಚೆ ಮಾಡುವಂತಿಲ್ಲ. ಆದರೆ ವೋಟ್ ನೀಡುವುದರ ಬಗ್ಗೆ ವಿನಯ್ ತಮ್ಮ ತಂಡವರಿಗೆ ಇನ್‌ಫ್ಲುಯೆನ್ಸ್ ಮಾಡಿದ್ದಾರೆ. ಇದು ರೂಲ್ಸ್ ಬ್ರೇಕ್ ಅಲ್ವಾ? ಬಿಗ್ ಬಾಸ್ ಮನೆಯಲ್ಲಿ ಗ್ರೂಪಿಸಂ ಮಾಡಿಕೊಂಡು ಆಟ ಆಡಬಹುದಾ? ಪರೋಕ್ಷವಾಗಿ ಇನ್‌ಫ್ಲುಯೆನ್ಸ್ ಮಾಡಬಹುದಾ? ಆದರೆ ಈ ಬಗ್ಗೆ ಕಿಚ್ಚ ಸುದೀಪ್ ಈ ವಾರಾಂತ್ಯದಲ್ಲಿ ಪ್ರಶ್ನೆ ಮಾಡ್ತಾರಾ ಅನ್ನೋದನ್ನು ಕಾದು ನೋಡಬೇಕು..
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.