Karthik Mahesh: ಸಿಂಪಲ್‌ ಸುನಿ ಚಿತ್ರದಲ್ಲಿ ಬಿಗ್‌ ಬಾಸ್‌ ವಿನ್ನರ್‌: ಯಾವ ಸಿನಿಮಾ ಗೊತ್ತೇ?

Karthik Mahesh In Simple Suni Film: ಕಿರುತೆರೆ ನಟ ಹಾಗೂ ಬಿಗ್‌ ಬಾಸ್‌ ವಿನ್ನರ್‌ ಕಾರ್ತಿಕ್‌ ಮಹೇಶ್‌, ಚಂದನವನದ ನಿರ್ದೇಶಕ ಸಿಂಪಲ್‌ ಸುನಿ ಸಿನಿಮಾದಲ್ಲಿ ಅಭಿನಯಿಸಿದ್ದಾರೆಂಬ ಮಾಹಿತಿ ಹೊ ಬಂದಿದೆ. ಹಾಗಾದ್ರೆ ಈ ನಟ ಬಣ್ಣ ಹಚ್ಚಿರುವ ಸಿನಿಮಾವಾದರೂ ಯಾವುದು? ಇಲ್ಲಿದೆ ಸಂಪೂರ್ಣ ಮಾಹಿತಿ.

Written by - Zee Kannada News Desk | Last Updated : Feb 1, 2024, 12:09 PM IST
  • ಡೈರೆಕ್ಟರ್‌ ಸಿಂಪಲ್‌ ಸಿನಿ, ಸಾಲು ಸಾಲು ಚಿತ್ರಗಳ ನಿರ್ದೇಶನ ಮಾಡುವುದರಲ್ಲಿ ಸೈ ಎನಿಸಿಕೊಂಡಿದ್ದಾರೆ. ಈ ನಿರ್ದೇಶಕ ಸಿನಿಮಾದಲ್ಲಿ ಬಿಗ್‌ ಬಾಸ್‌ ವಿನ್ನರ್‌ ಕಾರ್ತಿಕ್‌ ಮಹೇಶ್‌ ಅಭಿನಯಿಸಿದ್ದಾರೆ.
  • ಬಿಗ್ ಬಾಸ್ ವಿನ್ನರ್ ಕಾರ್ತಿಕ್ ಮಹೇಶ್ ಅಭಿನಯಿಸಿದ ಈ ಸಿನಿಮಾದಲ್ಲಿ ದೊಡ್ಮನೆ ಮೊಮ್ಮಗ ಕೂಡ ಇದ್ದು, ಹಾಗೆಯೇ ಇದರಲ್ಲಿ ಒಬ್ಬರಲ್ಲ ಅಂತ ಇಬ್ಬರು ಹೀರೋಯಿನ್‌ಗಳೂ ಇದ್ದಾರೆ.
  • ಕಿರುತೆರೆ ನಟ ಕಾರ್ತಿಕ್ ಮಹೇಶ್ ಈ ಹಿಂದೆ ಹಲವಾರು ಸೀರಿಯಲ್‌ಗಳನ್ನ ಮಾಡಿದ್ದು, ಇದರ ಜೊತೆಗೆ ಸಿನಿಮಾದಲ್ಲೂ ನಟಿಸಿದ್ದಾರೆ.
Karthik Mahesh: ಸಿಂಪಲ್‌ ಸುನಿ ಚಿತ್ರದಲ್ಲಿ ಬಿಗ್‌ ಬಾಸ್‌ ವಿನ್ನರ್‌: ಯಾವ ಸಿನಿಮಾ ಗೊತ್ತೇ? title=

Karthik Mahesh In Ondu Salara Prema Kathe: ಸಿಂಪಲ್ಲಾಗಿ ಒಂದ್‌ ಲವ್‌ ಸ್ಟೋರಿ ಸಿನಿಮಾದ ಮೂಲಕ ಚಂದನವನಕ್ಕೆ ನಿರ್ದೇಶಕನಾಗಿ ಪಾದಾರ್ಪಣೆ ಮಾಡಿದ ಡೈರೆಕ್ಟರ್‌ ಸಿಂಪಲ್‌ ಸಿನಿ, ಸಾಲು ಸಾಲು ಚಿತ್ರಗಳ ನಿರ್ದೇಶನ ಮಾಡುವುದರಲ್ಲಿ ಸೈ ಎನಿಸಿಕೊಂಡಿದ್ದಾರೆ. ಇನ್ನೂ ಈ ಯಶಸ್ವಿ ನಿರ್ದೇಶಕ ಸಿನಿಮಾದಲ್ಲಿ ಬಿಗ್‌ ಬಾಸ್‌ ವಿನ್ನರ್‌ ಕಾರ್ತಿಕ್‌ ಮಹೇಶ್‌ ಅಭಿನಯಿಸಿದ್ದಾರೆ.  ಈ ಹಿಂದೆ ಸೀರಿಯಲ್‌ಗಳ ಮೂಲಕ ಮನೆ ಮಾತನಾದ ನಟ ದೊಡ್ಮನೆ ಒಳಗೆ ಹೋಗೋ ಮೊದಲೇ ಒಂದು ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಬಿಗ್ ಬಾಸ್ ವಿನ್ನರ್ ಕಾರ್ತಿಕ್ ಮಹೇಶ್ ಅಭಿನಯಿಸಿದ ಈ ಸಿನಿಮಾದಲ್ಲಿ ದೊಡ್ಮನೆ ಮೊಮ್ಮಗ ಕೂಡ ಇದ್ದು, ಹಾಗೆಯೇ ಇದರಲ್ಲಿ ಒಬ್ಬರಲ್ಲ ಅಂತ ಇಬ್ಬರು ಹೀರೋಯಿನ್‌ಗಳೂ ಇದ್ದಾರೆ. ಈ ಚಿತ್ರದ ಒಂದು ಸ್ಪೆಷಲ್ ಹಾಡನ್ನು ಸ್ಯಾಂಡಲ್‌ವುಡ್ ಕ್ವೀನ್ ರಮ್ಯಾ   ಡಿಜಿಟಲ್‌ನಲ್ಲಿ ರಿಲೀಸ್ ಮಾಡಿದ್ದು, ಇನ್ನೇನು ಈ ಸಿನಿಮಾ ಇದೇ ತಿಂಗಳು ರಿಲೀಸ್ ಆಗುತ್ತದೆ. ನಟ ಕಾರ್ತಿಕ್ ಮಹೇಶ್ ಒಂದು ಸರಳ ಪ್ರೇಮ ಕಥೆ ಚಿತ್ರದಲ್ಲಿ  ಪ್ರಮುಖ ಪಾತ್ರವನ್ನ ನಿರ್ವಹಿಸಿದ್ದು, ಆದರೆ ಆ ಪಾತ್ರವೇನು ಅನ್ನೋದು ಇನ್ನು ಸೀಕ್ರೆಟ್ ಆಗಿಯೇ ಇದೆ. ನಿರ್ದೇಶಕ ಸಿಂಪಲ್ ಸುನಿ ಕೂಡ ಈ ಬಗ್ಗೆ ಹೆಚ್ಚು ಏನೂ ಬಿಟ್ಟುಕೊಟ್ಟಿಲ್ಲ. 

ಇದನ್ನೂ ಓದಿ: Koffee With Shobha Shetty: ನಟನೆಯಿಂದ ನಿರೂಪಕಿಯಾಗಿ ಭಡ್ತಿ ಪಡೆದ ಕಾರ್ತಿಕಾ ದೀಪಂ ನಟಿ!

ಕಿರುತೆರೆ ನಟ ಕಾರ್ತಿಕ್ ಮಹೇಶ್ ಈ ಹಿಂದೆ ಹಲವಾರು ಸೀರಿಯಲ್‌ಗಳನ್ನ ಮಾಡಿದ್ದು, ಇದರ ಜೊತೆಗೆ ಸಿನಿಮಾದಲ್ಲೂ ನಟಿಸಿದ್ದಾರೆ. ಕಾರ್ತಿಕ್ ಮಹೇಶ್ ರಾಷ್ಟ್ರಪ್ರಶಸ್ತಿ ಪಡೆದ ಡೊಳ್ಳು ಚಿತ್ರದಲ್ಲಿ  ಹೀರೋ ಆಗಿ ಬಣ್ಣ ಹಚ್ಚಿದ್ದು, ಅಷ್ಟು ವಿಶೇಷವಾಗಿರೋ ಈ ನಟ ದೊಡ್ಮನೆ ಒಳಗೆ ಹೋಗುವ ಮುನ್ನ ಒಂದು ಸರಳ ಪ್ರೇಮ ಕಥೆ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಮತ್ತೆ ಈ ಚಿತ್ರದಲ್ಲಿ ಮಲ್ಲಿಕಾ ಸಿಂಗ್ ನಟಿಸಿದ್ದರೇ, ಸ್ವಾತಿಷ್ಠ ಮತ್ತೊಂದು ರೋಲ್ ಮಾಡಿದ್ದಾರೆ. ಇಬ್ಬರು ಹೀರೋಯಿನ್‌ಗಳ ಮಧ್ಯೆ ಸಂಗೀತದ ಪಯಣದಲ್ಲಿ ಸಾಗೋ ವಿನಯ್ ರಾಜಕುಮಾರ್ ಈ ಸಿನಿಮಾದಲ್ಲಿ ಅದ್ಭುತವಾಗಿ ನಟಿಸಿದ್ದಾರೆ. 

ನಟ ವಿನಯ್‌ ರಾಜಕುಮಾರ್ ತಂದೆ ರಾಘವೇಂದ್ರ ರಾಜಕುಮಾರ್ ಜೊತೆಗೂ ಈ ಚಿತ್ರದಲ್ಲಿ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದಾರೆ. ಒಂದು ಸರಳ ಪ್ರೇಮ ಕಥೆ ಚಿತ್ರದ ಎಲ್ಲ ಕೆಲಸ ಪೂರ್ಣಗೊಂಡಿದ್ದು, ಪ್ರಚಾರವೂ ಶುರು ಆಗಿದೆ. ರಿಲೀಸ್ ಡೇಟ್ ಅನೌನ್ಸ್ ಆಗಿದ್ದು, ಇದೇ ವರ್ಷ ಫೆಬ್ರವರಿ-8 ರಂದು ಈ ಸಿನಿಮಾ ಕೂಡ  ತೆರೆಗೆ ಅಪ್ಪಳಿಸುತ್ತಿದೆ. ಈಗಾಗಲೇ ಚಿತ್ರದ  ಹಾಡುಗಳು ಮೋಡಿ ಮಾಡ್ತಾನೇ ಇದ್ದು, ಇದರ ಜೊತೆಗೆ ಈ ಸಿನಿಮಾ ಒಂದು ನಿರೀಕ್ಷೆಯನ್ನೂ ಹುಟ್ಟುಹಾಕಿದೆ ಅಂತಲೇ ಹೇಳಬಹುದು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News