ಗಿಣಿರಾಮ ಕಥೆಯಲ್ಲಿ ಬಿಗ್‌ ಟ್ವಿಸ್ಟ್‌ ..!

Written by - CHARITHA PATEL | Last Updated : Mar 24, 2022, 08:14 PM IST
  • ಇಷ್ಟು ದಿನ ಒಂದು ಎಳೆಯಲ್ಲಿ ಸಾಗ್ತಾಯಿದ್ದ ಕಥೆಗೆ ಇದೀಗ ದೊಡ್ಡದೊಂದು ಟ್ವಿಸ್ಟ್‌ ಸಿಕ್ಕಿದೆ.
  • ಇನ್ನು ಗೌರವ್‌ ಪಾತ್ರಕ್ಕೆ ಬಣ್ಣ ಹಚ್ಚಿರೋದು ಮತ್ತಾರು ಅಲ್ಲ ನಟ ರಾಕಿ. ಹೌದು, ರಾಕಿ ಸದ್ಯ ಹಿಟ್ಲರ್‌ ಕಲ್ಯಾಣ ಧಾರವಾಹಿಯಲ್ಲಿ ಒಂದೊಳ್ಳೆ ಪಾತ್ರದ ಮೂಲಕ ಪ್ರೇಕ್ಷಕರನ್ನ ರಂಜಿಸ್ತಾಯಿದ್ದಾರೆ.
ಗಿಣಿರಾಮ ಕಥೆಯಲ್ಲಿ ಬಿಗ್‌ ಟ್ವಿಸ್ಟ್‌ ..!  title=

ಕನ್ನಡದ ವಿಭಿನ್ನ ಕಥಾಹಂದರದ ಧಾರಾವಾಹಿಗಳಲ್ಲಿ ಗಿಣಿರಾಮ ಕೂಡಾ ಒಂದು.ಈ ಸೀರಿಯಲ್‌ನಲ್ಲಿ ಮೂಡಿ ಬರುವ ಪ್ರತಿಯೊಂದು ಪಾತ್ರವೂ ಕೂಡ ಪ್ರೇಕ್ಷಕರಿಗೆ ಅಚ್ಚುಮೆಚ್ಚು.ಅದರಲ್ಲೂ ನಮ್‌ ಖಡಕ್‌ ಶಿವರಾಮ ಹಾಗೂ ಮಹತಿ ಜೋಡಿ ಅಂದ್ರೆ ಅಭಿಮಾನಿಗಳಿಗೆ ಎಲ್ಲಿಲ್ಲದ ಖುಷಿ. ಇಷ್ಟು ದಿನ ಒಂದು ಎಳೆಯಲ್ಲಿ ಸಾಗ್ತಾಯಿದ್ದ ಕಥೆಗೆ ಇದೀಗ ದೊಡ್ಡದೊಂದು ಟ್ವಿಸ್ಟ್‌ ಸಿಕ್ಕಿದೆ.ಶುರುವಿನಲ್ಲಿ ಮಹತಿ-ಶಿವರಾಮ ಒಬ್ಬನೊಬ್ಬರನ್ನು ಕಂಡ್ರೆ ಉರಿದು ಬೀಳ್ತಾಯಿದ್ರು. ಬಳಿಕ ದಿನ ಕಳೆದಂತೆ ಅವರ ಆ ಜಗಳ ಪ್ರೀತಿಗೆ ತಿರುಗಿ, ಆ ಪ್ರೀತಿ ಇದೀಗ ಇಬ್ಬರ ನಡುವೆ ಒಂದೊಳ್ಳೆ ಬಾಂಧವ್ಯ ಬೆಸೆದಿದೆ. 

ಇದನ್ನೂ ಓದಿ:  ಜಮೀರ್ ಅಹಮದ್ ನೀವು 'ನಮ್ಮ ಆರ್ ಎಸ್ ಎಸ್ 'ಎಂದು ಹೇಳಬೇಕು': ಸ್ಪೀಕರ್ ಕಾಗೇರಿ

ಆದ್ರೆ ಇದೀಗ ಸೀರಿಯಲ್‌ನಲ್ಲಿ ಬಿಗ್‌ ಟ್ವಿಸ್ಟ್‌ ಒಂದು ಸಿಕ್ಕಿದ್ದು, ಹೊಸ ಪಾತ್ರವೊಂದು ಎಂಟ್ರಿ ಕೊಟ್ಟಿದೆ. ಇದೀಗ ಮಹತಿ ಮದುವೆ ಮುಂಚೆ ಪ್ರೀತಿಸ್ತಾಯಿದ್ದ ಹುಡುಗ ಮತ್ತೆ ಮಹತಿ ಜೀವನದಲ್ಲಿ ಎಂಟ್ರಿ ಕೊಟ್ಟಿದ್ದಾನೆ. ಅವ್ನ ಸ್ಥಿತಿ ನೋಡಿ ಮಹತಿ ಫುಲ್‌ ಶಾಕ್‌ ಆಗಿದ್ದಾಳೆ. ಕಾರಣ ಇತ್ತ ಪ್ರೀತಿಸಿದ ಹುಡುಗಿ, ಅತ್ತ ಕುಟುಂಬ ಎರಡನ್ನೂ ಕಳೆದುಕೊಂಡು ಗೌರವ್‌ ಹುಚ್ಚನಾಗಿದ್ದಾನೆ. ಆದ್ರೆ ನಿಜವಾಗಲೂ ಗೌರವ್‌ ಹುಚ್ಚನಾ ಅಥವಾ ಮಹತಿ-ಶಿವರಾಮನನ್ನು ಮೋಸ ಮಾಡೋಕೆ ಯಾರದ್ರೂ ಕರೆಸಿದ್ದಾರಾ ಎಂಬ ಪ್ರಶ್ನೆಗಳು ಕೂಡ ಈಗ ಪ್ರೇಕ್ಷಕರಲ್ಲಿ ಮೂಡಿದೆ.

ಇದನ್ನೂ ಓದಿ : ‘ಎದೆಹಾಲು ದಾನ ಮಾಡಿ, ಜೀವಗಳನ್ನು ಉಳಿಸಿ’ ಅಭಿಯಾನದ ಬಗ್ಗೆ ಹೀಗಂದ್ರು ರಾಧಿಕಾ ಪಂಡಿತ್

ಇನ್ನು ಗೌರವ್‌ ಪಾತ್ರಕ್ಕೆ ಬಣ್ಣ ಹಚ್ಚಿರೋದು ಮತ್ತಾರು ಅಲ್ಲ ನಟ ರಾಕಿ. ಹೌದು, ರಾಕಿ ಸದ್ಯ ಹಿಟ್ಲರ್‌ ಕಲ್ಯಾಣ ಧಾರವಾಹಿಯಲ್ಲಿ ಒಂದೊಳ್ಳೆ ಪಾತ್ರದ ಮೂಲಕ ಪ್ರೇಕ್ಷಕರನ್ನ ರಂಜಿಸ್ತಾಯಿದ್ದಾರೆ.ಇದೀಗ ಗಿಣಿರಾಮ ಸೀರಿಯಲ್‌ಗೆ ಎಂಟ್ರಿ ಕೊಟ್ಟಿದ್ದು, ತಮ್ಮ ಪಾತ್ರದ ಬಗ್ಗೆ ಜೀ ಕನ್ನಡ ನ್ಯೂಸ್‌ ಜೊತೆ ಮಾಹಿತಿ ಹಂಚಿಕೊಂಡಿದ್ದಾರೆ.

'ನನಗೆ ಈ ಪಾತ್ರ ಸಿಕ್ಕಿದ್ದು ಖುಷಿ ನೀಡಿದೆ.ಗಿಣಿರಾಮ ಧಾರಾವಾಹಿ ಪ್ರೊಡ್ಯೂಸರ್‌ ನನಗೆ ಪರಿಚಯವಿದ್ರೂ, ಅವ್ರು ಹೀಗೆ ಒಂದು ದಿನ ಕಾಲ್‌ ಮಾಡಿ ಗೌರವ್‌ ಎಂಬ ಪಾತ್ರಯಿದೆ.ಮಾಡ್ತಿಯಾ ಅಂತ  ಕೇಳಿದ್ರು.ನಾನೂ ಕೂಡ ಒಪ್ಪಿಕೊಂಡೆ. ಮೊದಲು ಗೌರವ್‌ ಅಂದ್ರೆ ಒಬ್ಬ ಹುಚ್ಚ.ನೀವು ಈ ಹುಚ್ಚನ ಪಾತ್ರವನ್ನು ನಿಭಾಯಿಸಬೇಕು ಅಂದ್ರು..ಆಗ ನಾನು ಸ್ವಲ್ಪ ತಬ್ಬಿಬ್ಬಾದೆ. ಹೇಗಪ್ಪಾ ಮಾಡೋದು? ಇಷ್ಟು ದಿನ ಮಾಡಿದ ಎಲ್ಲಾ ಪಾತ್ರಗಳಿಗಿಂತ ವಿಭಿನ್ನವಾದ ಕ್ಯಾರೆಕ್ಟರ್‌ ಇದು. ಆಮೇಲೆ ಅವ್ರು ಒಂದಿಷ್ಟು ಕಥೆಯ ಎಳೆಯನ್ನು ಬಿಟ್ಟುಕೊಟ್ರು. ಬಳಿಕ ತನ್ನ ಪಾತ್ರಕ್ಕೆ ಎಷ್ಟು ವೈಟೇಜ್‌ ಇದೆ ಅನ್ನೋದು ತಿಳಿತು ಎಂದು ಹೇಳಿದರು.

"ಇನ್ನು ನನ್ನ ಪಾತ್ರ ನೋಡಿ ಜನ ಮೆಚ್ಚಿಕೊಂಡಿದ್ದಾರೆ.ಒಂದಿಷ್ಟು ಪ್ರಿಪರೇಷನ್‌ಗಳನ್ನ ಕೂಡಾ ಈ ಪಾತ್ರಕ್ಕಾಗಿ ಮಾಡಿಕೊಂಡಿದ್ದೇನೆ.ಬರೀ ಹುಚ್ಚ ಮಾತ್ರವಲ್ಲ, ಮುಂದಿನ ದಿನಗಳಲ್ಲಿ ಬೇರೆ ಶೇಡ್‌ಗಳಲ್ಲಿ ಕೂಡಾ ಕಾಣಿಸಿಕೊಳ್ಳಲ್ಲಿದ್ದೀನಿ ಎಂದಿದ್ದಾರೆ.ಒಟ್ಟಿನಲ್ಲಿ ಹೇಳೋದಾದ್ರೆ ಈ ಪಾತ್ರ ಖುಷಿ ಕೊಟ್ಟಿದೆ ಎಂದು ತಿಳಿಸಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News