ವಿನೋದ್ ಪ್ರಭಾಕರ್ ಅಭಿನಯದ "ಬಲರಾಮನ ದಿನಗಳು" ಚಿತ್ರ ತಂಡದಿಂದ ಬಿಗ್ ಅನೌನ್ಸ್ಮೆಂಟ್!

ವಿನೋದ್ ಪ್ರಭಾಕರ್ ಅಭಿನಯದ 25ನೇ ಚಿತ್ರ "ಬಲರಾಮನ ದಿನಗಳು" ಸಿನಿಮಾ ಬಗ್ಗೆ ಚಿತ್ರ ತಂಡ ಬಿಗ್‌ ಅನೌನ್ಸ್‌ಮೆಂಟ್‌ ಮಾಡಲಿದೆ. 

Written by - Chetana Devarmani | Last Updated : Aug 21, 2024, 11:42 AM IST
  • ವಿನೋದ್ ಪ್ರಭಾಕರ್ ಅಭಿನಯದ 25ನೇ ಚಿತ್ರ
  • "ಬಲರಾಮನ ದಿನಗಳು" ಸಿನಿಮಾ ತಂಡದಿಂದ ಬಿಗ್‌ ಅಪ್‌ಡೇಟ್‌
  • ʻಆ ದಿನಗಳುʼ ಖ್ಯಾತಿಯ ಕೆ.ಎಂ ಚೈತನ್ಯ ನಿರ್ದೇಶನದ ಚಿತ್ರ
ವಿನೋದ್ ಪ್ರಭಾಕರ್ ಅಭಿನಯದ "ಬಲರಾಮನ ದಿನಗಳು" ಚಿತ್ರ ತಂಡದಿಂದ ಬಿಗ್ ಅನೌನ್ಸ್ಮೆಂಟ್! title=

Vinod Prabhakar: ʻಆ ದಿನಗಳುʼ ಖ್ಯಾತಿಯ ಕೆ.ಎಂ ಚೈತನ್ಯ ನಿರ್ದೇಶನದ ಮತ್ತು ಪದ್ಮಾವತಿ ಫಿಲಂಸ್ ನಿರ್ಮಾಣದ ವಿನೋದ್ ಪ್ರಭಾಕರ್ ಅಭಿನಯದ 25ನೇ ಚಿತ್ರ "ಬಲರಾಮನ ದಿನಗಳು" ಸಿನಿಮಾ ಬಗ್ಗೆ ಚಿತ್ರ ತಂಡ ಬಿಗ್‌ ಅನೌನ್ಸ್‌ಮೆಂಟ್‌ ಮಾಡಲಿದೆ. 

ಟೈಗರ್ ವಿನೋದ್ ಪ್ರಭಾಕರ್ ಅಭಿನಯದ 25 ನೇ ಚಿತ್ರ "ಬಲರಾಮನ ದಿನಗಳು" ಚಿತ್ರವನ್ನು ಪದ್ಮಾವತಿ ಫಿಲಂಸ್ ಬ್ಯಾನರ್‌ ಅಡಿಯಲ್ಲಿ ಪದ್ಮಾವತಿ ಜಯರಾಂ ಹಾಗೂ ಶ್ರೇಯಸ್ ಅವರು ನಿರ್ಮಾಣ‌ ಮಾಡುತ್ತಿದ್ದಾರೆ. "ಆ ದಿನಗಳು" ಖ್ಯಾತಿಯ  ಕೆ‌.ಎಂ.ಚೈತನ್ಯ ರವರು ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. 

ಇದನ್ನೂ ಓದಿ:ರಣವೀರ್‌ ಸಿಂಗ್‌ ಅಲ್ಲ..ʻಈʼ ವ್ಯಕ್ತಿಯೊಂದಿಗೆ ಡಿನ್ನರ್‌ ಡೇಟ್‌ಗೆ ಹೋದ ತುಂಬು ಗರ್ಭಿಣಿ ದೀಪಿಕಾ..! 

ಕೆಲವು ದಿನಗಳ ಹಿಂದಷ್ಟೇ ಚಿತ್ರದ ಪೋಸ್ಟರ್ ಬಿಡುಗಡೆಯಾಗಿತ್ತು. ಈ ಚಿತ್ರದ ಮೊದಲ ಪೋಸ್ಟರ್ ಎಲ್ಲರ ಗಮನ ಸೆಳೆದಿತ್ತು. ಆಗಸ್ಟ್ 23 ರಂದು "ಬಲರಾಮನ ದಿನಗಳು" ಚಿತ್ರದ ಕುರಿತು ಬಿಗ್ ಅನೌನ್ಸ್ ಮೆಂಟ್ ಮಾಡುವುದಾಗಿ ಚಿತ್ರತಂಡ ತಿಳಿಸಿದೆ. ಅದೇನಿರಬಹುದೆಂಬ ಕುತೂಹಲ ಅಭಿಮಾನಿಗಳಿಗಿದೆ. 

ಒಟ್ಟಿನಲ್ಲಿ ಪದ್ಮಾವತಿ ಫಿಲಂಸ್ ನಿರ್ಮಾಣದ, ಕೆ.ಎಂ.ಚೈತನ್ಯ ಹಾಗೂ ವಿನೋದ್ ಪ್ರಭಾಕರ್ ಕಾಂಬಿನೇಶನ್ ನಲ್ಲಿ ಮೂಡಿ ಬರುತ್ತಿರುವ ಈ ಚಿತ್ರ ಆರಂಭದಲ್ಲೇ ಸಾಕಷ್ಟು ನಿರೀಕ್ಷೆ ಹುಟ್ಟಿಸಿದೆ.

ಇದನ್ನೂ ಓದಿ:ಅಂದು ದರ್ಶನ್‌ ಕೆನ್ನೆಗೆ ಬಾರಿಸಿದ್ದ ಈಕೆ ಇಂದು ಜನಪ್ರಿಯ ನಟಿ... ಯಾರೆಂದು ಗೆಸ್‌ ಮಾಡಿ ನೋಡೋಣ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News