ವೈರಲ್‌ ಆಗುತ್ತಿದೆ 'Thank You for Coming' ಚಿತ್ರದ ಪೋಸ್ಟರ್‌..! ಈ ಸುಂದರಿ ಯಾರು ಹೇಳಿ..?

ಕರಣ್ ಬೂಲಾನಿ ಚೊಚ್ಚಲ ನಿರ್ದೇಶನದ 'ಥ್ಯಾಂಕ್ಯೂ ಫಾರ್ ಕಮಿಂಗ್' ಚಿತ್ರದ ಮೊದಲ ಪೋಸ್ಟರ್ ರಿಲೀಸ್‌ ಆಗಿದೆ. ಚಿತ್ರದ ಹೆಸರು ಮತ್ತು ನಟಿಯ ಬ್ಯಾಕ್‌ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

Written by - Krishna N K | Last Updated : Aug 10, 2023, 02:10 PM IST
  • 'ಥ್ಯಾಂಕ್ಯೂ ಫಾರ್ ಕಮಿಂಗ್' ಚಿತ್ರದ ಮೊದಲ ಪೋಸ್ಟರ್ ರಿಲೀಸ್‌ ಆಗಿದೆ.
  • ಚಿತ್ರದ ಹೆಸರು ಮತ್ತು ನಟಿಯ ಬ್ಯಾಕ್‌ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌.
  • 'ಥ್ಯಾಂಕ್ಯೂ ಫಾರ್‌ ಕಮಿಂಗ್‌' ಶೀರ್ಷಿಕೆಯಲ್ಲಿ ಬರುವ ಪದವು ವಿಭಿನ್ನ ಅರ್ಥವನ್ನು ಹೊಂದಿದೆ.
ವೈರಲ್‌ ಆಗುತ್ತಿದೆ 'Thank You for Coming' ಚಿತ್ರದ ಪೋಸ್ಟರ್‌..! ಈ ಸುಂದರಿ ಯಾರು ಹೇಳಿ..? title=

Thank You For Coming movie : ಬಿಟೌನ್‌ ಸುಂದರಿ ನಟಿ ಭೂಮಿ ಪೆಡ್ನೇಕರ್ ಅವರ ಮುಂಬರುವ ಸಿನಿಮಾ 'ಥ್ಯಾಂಕ್ಯೂ ಫಾರ್‌ ಕಮಿಂಗ್‌' ಮೊದಲ ಪೋಸ್ಟರ್ ಬಿಡುಗಡೆಯಾಗಿದೆ. ಇದು ಕರಣ್ ಬೂಲಾನಿ ಅವರ ಚೊಚ್ಚಲ ಚಿತ್ರವಾಗಿದ್ದು, ಫಸ್ಟ್‌ ಲುಕ್‌ ಪೋಸ್ಟರ್‌ ಮೂಲಕ ಸುದ್ದಿಯಾಗಿದೆ.

ಹೌದು.. 'ಥ್ಯಾಂಕ್ಯೂ ಫಾರ್‌ ಕಮಿಂಗ್‌' ಚಿತ್ರದ ಮೊದಲ ಪೋಸ್ಟರ್‌ನಲ್ಲಿ ಕ್ಯಾಮರಾಕ್ಕೆ ಬೆನ್ನೆಲುಬಾಗಿರುವ ಮಹಿಳೆ ಮತ್ತು ಆಕೆಯ ಹಿಂಬಾಗದ ಅರ್ಧಭಾಗವನ್ನು ತೋರಿಸಲಾಗಿದೆ. ಸ್ವತಃ ಭೂಮಿ ತಮ್ಮ ಇನ್‌ಸ್ಟಾದಲ್ಲಿ ಈ ಪೋಸ್ಟರ್‌ನ್ನು ಶೇರ್‌ ಮಾಡಿಕೊಂಡಿದ್ದಾರೆ. ಜೊತೆಗೆ "ಚಿಕ್ ಫ್ಲಿಕ್‌ನ ಕಮ್‌ಬ್ಯಾಕ್. ಧನ್ಯವಾದಗಳು". ಅಂತ ಬರೆದುಕೊಂಡಿದ್ದಾರೆ. ಇಷ್ಟು ಬಿಟ್ಟರೆ ಸಿನಿಮಾದ ಕುರಿತು ಯಾವುದೇ ಮಾಹಿತಿ ಬಿಟ್ಟುಕೊಟ್ಟಿಲ್ಲ.

 
 
 
 

 
 
 
 
 
 
 
 
 
 
 

A post shared by Bhumi Pednekar (@bhumipednekar)

ಇದನ್ನೂ ಓದಿ: ʼಜೈಲರ್‌ʼ ಸಿನಿಮಾದಲ್ಲಿ ಶಿವಣ್ಣ ಆಕ್ಟಿಂಗ್‌ಗೆ ಫ್ಯಾನ್ಸ್‌ ಫಿದಾ : ಹೇಗಿದೆ ಗೊತ್ತಾ ರಜನಿ ಚಿತ್ರ

'ಥ್ಯಾಂಕ್ಯೂ ಫಾರ್‌ ಕಮಿಂಗ್‌' ಶೀರ್ಷಿಕೆಯಲ್ಲಿ ಬರುವ ಪದವು ವಿಭಿನ್ನ ಅರ್ಥವನ್ನು ಹೊಂದಿದೆ. ಡಬಲ್‌ ಮೀನಿಂಗ್‌ ಅಂತ ಕೆಲವೊಂದಿಷ್ಟು ನೆಟ್ಟಿಗರು ಹೇಳುತ್ತಿದ್ದಾರೆ. ಸದ್ಯ ಈ ಕಾಮಿಡಿ ಚಿತ್ರವನ್ನು ರಿಯಾ ಕಪೂರ್ ಅವರು ತಮ್ಮ ಬ್ಯಾನರ್ ಅಡಿಯಲ್ಲಿ ನಿರ್ಮಿಸಿದ್ದಾರೆ. ಇನ್ನೊಬ್ಬ ಪ್ರಮುಖ ನಿರ್ಮಾಪಕರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಚಿತ್ರತಂಡವು ದೆಹಲಿಯಲ್ಲಿ ಚಿತ್ರದ ಚಿತ್ರೀಕರಣವನ್ನು ಪ್ರಾರಂಭಿಸಿದೆ. ಈ ತಿಂಗಳ ಅಂತ್ಯದ ವೇಳೆಗೆ ಶೂಟಿಂಗ್‌ ಮುಕ್ತಾಯಗೊಳಿಸುವ ಪ್ರಕ್ರಿಯೆಯಲ್ಲಿದೆ.

ಶೆಹನಾಜ್ ಗಿಲ್, ಕುಶಾ ಕಪಿಲಾ, ಡಾಲಿ ಸಿಂಗ್, ಶಿಬಾನಿ ಬೇಡಿ ಮತ್ತು ಕರಣ್ ಕುಂದ್ರಾ ಕೂಡ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಟ ಅನಿಲ್ ಕಪೂರ್ ನಡೆಸುತ್ತಿರುವ ನಿರ್ಮಾಣ ಸಂಸ್ಥೆ ಅನಿಲ್ ಕಪೂರ್ ಫಿಲ್ಮ್ ಅಂಡ್ ಕಮ್ಯುನಿಕೇಷನ್ ನೆಟ್‌ವರ್ಕ್ ಚಿತ್ರಕ್ಕೆ ಬೆಂಬಲ ನೀಡುತ್ತಿದೆ. ಏಕ್ತಾ ಕಪೂರ್ ಒಡೆತನದ ಬಾಲಾಜಿ ಟೆಲಿಫಿಲ್ಮ್ಸ್ ಇನ್ನಿಬ್ಬರು ಚಿತ್ರವನ್ನು ಸಹ-ನಿರ್ಮಾಣ ಮಾಡಲಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News