Avatar 2 box office : 2 ದಿನಗಳಲ್ಲಿ 100 ಕೋಟಿ ಬಾಚಿದ ಅವತಾರ 2..!

Avatar 2 collection : ಡಿಸೆಂಬರ್‌ 16 ರಂದು ಬಿಡುಗಡೆಯಾದ ಅವತಾರ್ 2 ಜಗತ್ತಿನಾದ್ಯಂತ ಅದ್ಭುತ ಪ್ರದರ್ಶನ ಕಾಣುತ್ತಿದೆ. ಅವತಾರ್‌ನ ಮೊದಲ ಭಾಗವು ಡಿಸೆಂಬರ್ 2009 ರಲ್ಲಿ ಬಿಡುಗಡೆಯಾಗಿ ಗೆಲವು ಸಾಧಿಸಿತ್ತು. ಇದೀಗ ಅವತಾರ ಬಾಗ 2 ಭರ್ಜರಿ ಪ್ರದರ್ಶನ ಕಾಣತ್ತಿದೆ. ಸುಮಾರು 13 ವರ್ಷಗಳ ನಂತರ, ಮತ್ತೇ ಜೇಮ್ಸ್ ಕ್ಯಾಮರೂನ್ ತಮ್ಮ ದೃಶ್ಯಕಾವ್ಯದ ಮೂಲಕ ಜನರಿಗೆ ಮೋಡಿ ಮಾಡಿದ್ದಾರೆ.

Written by - Krishna N K | Last Updated : Dec 18, 2022, 04:30 PM IST
  • ಅವತಾರ್ 2 ಜಗತ್ತಿನಾದ್ಯಂತ ಅದ್ಭುತ ಪ್ರದರ್ಶನ ಕಾಣುತ್ತಿದೆ.
  • ಅವತಾರ್‌ನ ಮೊದಲ ಭಾಗವು ಡಿಸೆಂಬರ್ 2009 ರಲ್ಲಿ ಬಿಡುಗಡೆಯಾಗಿ ಗೆಲವು ಸಾಧಿಸಿತ್ತು.
  • ಕಳೆದ ಎರಡು ದಿನಗಳಲ್ಲಿ ಬಾಕ್ಸ್‌ ಆಪೀಸ್‌ನಲ್ಲಿ ಸಖತ್‌ ಸದ್ದು ಮಾಡಿ ಮುನ್ನುಗ್ಗುತ್ತಿದೆ.
Avatar 2 box office : 2 ದಿನಗಳಲ್ಲಿ 100 ಕೋಟಿ ಬಾಚಿದ ಅವತಾರ 2..! title=

Avatar 2 : ಡಿಸೆಂಬರ್‌ 16 ರಂದು ಬಿಡುಗಡೆಯಾದ ಅವತಾರ್ 2 ಜಗತ್ತಿನಾದ್ಯಂತ ಅದ್ಭುತ ಪ್ರದರ್ಶನ ಕಾಣುತ್ತಿದೆ. ಅವತಾರ್‌ನ ಮೊದಲ ಭಾಗವು ಡಿಸೆಂಬರ್ 2009 ರಲ್ಲಿ ಬಿಡುಗಡೆಯಾಗಿ ಗೆಲವು ಸಾಧಿಸಿತ್ತು. ಇದೀಗ ಅವತಾರ ಬಾಗ 2 ಭರ್ಜರಿ ಪ್ರದರ್ಶನ ಕಾಣತ್ತಿದೆ. ಸುಮಾರು 13 ವರ್ಷಗಳ ನಂತರ, ಮತ್ತೇ ಜೇಮ್ಸ್ ಕ್ಯಾಮರೂನ್ ತಮ್ಮ ದೃಶ್ಯಕಾವ್ಯದ ಮೂಲಕ ಜನರಿಗೆ ಮೋಡಿ ಮಾಡಿದ್ದಾರೆ.

2D, 3D, IMAX ಸ್ವರೂಪಗಳಲ್ಲಿ ವಿಶ್ವದಾದ್ಯಂತ ಸಿನಿಮಾ ಬಿಡುಗಡೆಯಾಗಿದೆ. ಅವತಾರ 2 ಭಾರತ ಮತ್ತು ವಿಶ್ವಾದ್ಯಂತ ವಿಮರ್ಶಕರಿಂದ ಉತ್ತಮ ವಿಮರ್ಶೆಗಳನ್ನು ಪಡೆದಿದೆ. ಚಿತ್ರದ ಟಿಕೆಟ್ ದರ ಮಾಮೂಲಿಗಿಂತ ತುಸು ಹೆಚ್ಚಿದೆ ಎನ್ನಲಾಗುತ್ತಿದೆ. ಆದರೆ, ಜನ ಮಾತ್ರ ಸಿನಿಮಾ ನೋಡಲು ತುಂಬಾ ಆಸಕ್ತಿ ತೋರಿಸುತ್ತಿದ್ದಾರೆ. ಚಿತ್ರ ಬಿಡುಗಡೆಯಾಗಿ ಮೂರು ದಿನಗಳು ಕಳೆದಿವೆ. ಕಳೆದ ಎರಡು ದಿನಗಳಲ್ಲಿ ಬಾಕ್ಸ್‌ ಆಪೀಸ್‌ನಲ್ಲಿ ಸಖತ್‌ ಸದ್ದು ಮಾಡಿ ಮುನ್ನುಗ್ಗುತ್ತಿದೆ.

ಇದನ್ನೂ ಓದಿ:  ಫ್ಯಾನ್ಸ್‌ಗೆ ʼಹೆದರ ಬೇಡಿʼ ಎಂದ ಶಾರುಖ್‌ : ಅದಕ್ಕೆ ಅಭಿಮಾನಿ ಹೀಗಾ ಮಾಡೋದು...!

ಅವತಾರ್ 2 ಸಿನಿಮಾ ರಿಲೀಸ್ ಆದ ಎರಡು ದಿನಗಳಲ್ಲಿ ಒಟ್ಟು ರೂ. 100 ಕೋಟಿಯಷ್ಟು ಕಲೆಕ್ಷನ್ ಆಗಿದೆ ಎಂದು ಸಿನಿಮಾ ವ್ಯವಹಾರ ವಿಶ್ಲೇಷಕ ರಮೇಶ್ ಬಾಲಾ ಅವರು ತಮ್ಮ ಟ್ವಿಟರ್ ಮಾಹಿತಿ ಹಂಚಿಕೊಂಡಿದ್ದಾರೆ. ಈ ಹಿಂದೆ ಭಾರತದಲ್ಲಿ ಮೊದಲ ದಿನ ಅವತಾರ 1 41 ಕೋಟಿ ರೂ ಮಾತ್ರ ಗಳಿಸಿತ್ತು. ಇದೀಗ, ಅವತಾರ್ 2 ಈಗ ರೂ. 100 ಕೋಟಿ ಗಳಿಸುವ ಮೂಲಕ ಸಖತ್‌ ಸೌಂಡ್‌ ಮಾಡುತ್ತಿದೆ.

ಅಲ್ಲದೆ, ಈ ವಾರಾಂತ್ಯದ ವೇಳೆಗೆ 135 ರಿಂದ 140 ಕೋಟಿ ವರೆಗೆ ಕಲೆಕ್ಷನ್ ಮಾಡುವ ಸಾಧ್ಯತೆ. ಭಾರತದಾದ್ಯಂತ ಒಂದೇ ವಾರದಲ್ಲಿ ರೂ. 300 ಕೋಟಿ ಗಳಿಸಿ ದೊಡ್ಡ ದಾಖಲೆ ನಿರ್ಮಿಸುವ ನಿರೀಕ್ಷೆ ಇದೆ. ಇದರೊಂದಿಗೆ, ಈ ವರ್ಷ ಭಾರತದಲ್ಲಿ ಭಾರಿ ಹಿಟ್ ಆಗಿದ್ದ RRR ಮತ್ತು ಬ್ರಹ್ಮಾಸ್ತ್ರದ ಮೊದಲ ಎರಡು ದಿನಗಳ ದಾಖಲೆಯನ್ನು ಅವತಾರ್ 2 ಮುರಿಯಲಿದೆ. ಕೆಜಿಎಫ್ 2 ಅವತಾರ್ 2 ಗಿಂತ ಮುಂದಿದೆ. ಅವತಾರ 1 ಇದುವರೆಗಿನ ಪ್ರಪಂಚದಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾಗಿದೆ. ಸಿನಿಮಾ US$2.9 ಬಿಲಿಯನ್ ಗಳಿಸಿತು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News