Ashwini Puneeth Rajkumar: ಅಂಗಾಂಗ ದಾನ ರಾಯಭಾರಿಯಾಗಿ ಅಶ್ವಿನಿ ಪುನೀತ್ ರಾಜ್‌ಕುಮಾರ್‌ಗೆ ಸರ್ಕಾರ ಆಹ್ವಾನ..!

Organ Donation Ambassador Ashwini Puneeth Rajkumar: ಪುನೀತ್ ರಾಜ್‌ಕುಮಾರ್  ಸಿನಿಮಾ ಮಾತ್ರವಲ್ಲದೇ ಅನೇಕ ಸಾಮಾಜಮುಖಿ ಕಾರ್ಯಗಳಿಂದ ಕರುನಾಡಿಗೆ ಮಾದರಿಯಾಗಿದ್ದಾರೆ. ಇದೀಗ ಸದ್ಯದಲ್ಲೇ ಅಂಗಾಂಗ ದಾನ ದಿನಾಚರಣೆ ಇರುವುದರಿಂದ ಸರ್ಕಾರವು ಅಶ್ವಿನಿ ಪುನೀತ್ ರಾಜ್ಕುಮಾರ್ ಅವರಿಗೆ ಅಂಗಾಂಗ ದಾನದ ರಾಯಭಾರಿಯಾಗಿ ಆಯೋಜಿಸುವ ಚಿಂತನೆ ನಡೆಸಿದೆ. 

Written by - Zee Kannada News Desk | Last Updated : Jul 24, 2023, 03:19 PM IST
  • ಅಂಗಾಂಗ ದಾನ ರಾಯಭಾರಿಯಾಗಿ ಅಶ್ವಿನಿ ಪುನೀತ್ ರಾಜ್‌ಕುಮಾರ್‌
  • ಅಂಗಾಂಗ ದಾನ ಮಹತ್ವ ಸಾರಲು ಅಪ್ಪು ಪತ್ನಿ ಸಾಥ್‌
  • ಅಂಗಾಂಗ ದಾನದ ಬಗ್ಗೆ ಅರಿವು ಮೂಡಿಸುವಂತೆ ಸರ್ಕಾರ ಚಿಂತನೆ
Ashwini Puneeth Rajkumar: ಅಂಗಾಂಗ ದಾನ ರಾಯಭಾರಿಯಾಗಿ ಅಶ್ವಿನಿ ಪುನೀತ್ ರಾಜ್‌ಕುಮಾರ್‌ಗೆ ಸರ್ಕಾರ ಆಹ್ವಾನ..! title=

ಬೆಂಗಳೂರು: ನಟ ಪುನೀತ್ ರಾಜ್‌ಕುಮಾರ್ ದೈಹಿಕವಾಗಿ ಅವರು ನಮ್ಮೊಂದಿಗೆ ಇಲ್ಲದೇ ಹೋದರೂ ಮಾನಸಿಕವಾಗಿ ಎಲ್ಲರ ಮನದಲ್ಲಿ ಬೇರೂರಿದ್ದಾರೆ. ಸಿನಿಮಾ ಮಾತ್ರವಲ್ಲದೇ ಅನೇಕ ಸಾಮಾಜಮುಖಿ ಕಾರ್ಯಗಳಿಂದ ಕರುನಾಡಿಗೆ ಮಾದರಿಯಾಗಿದ್ದಾರೆ. ಅಂಧರ ಬಾಳಿಗೆ ಕಣ್ಣು ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕಥೆ ಮೆರೆದಿದ್ದಾರೆ.

ಅಷ್ಟೆ ಅಲ್ಲದೇ ಹಲವು ಬಾರಿ ರಕ್ತದಾನ, ನೇತ್ರದಾನ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ  ಅಂಗಾಂಗ ದಾನದ ಮಹತ್ವನ್ನು ಸಾರುತ್ತಿದ್ದರು. ಇದೀಗ ಸದ್ಯದಲ್ಲೇ ಅಂಗಾಂಗ ದಾನ ದಿನಾಚರಣೆ ಇರುವುದರಿಂದ ಸರ್ಕಾರವು ಉತ್ತಮ ಕಾರ್ಯಕ್ರಮ ಆಯೋಜನೆ ನಡೆಸಿದೆ. ಸಾವಿನ ಬಳಿಕವೂ 8 ಜನರಿಗೆ  ಅಂಗಾಂಗ ದಾನ ಮಾಡುವ ಮೂಲಕ ಜೀವ ಉಳಿಸುವ ಸಹಕಾರ ಮಾಡಬಹುದಾಗಿದೆ. 

ಇದನ್ನೂ ಓದಿ: ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಸ್ಯಾಂಡಲ್ವುಡ್‌ ಪ್ರೇಮ್ & ಬಾಲಿವುಡ್ ಸಂಜಯ್ ದತ್..!

ಇನ್ನು ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಪತ್ನಿ, ಅಶ್ವಿನಿ ಪುನೀತ್ ರಾಜ್ಕುಮಾರ್ ಅವರಿಗೆ ಈ ಕಾರ್ಯಕ್ರಮದ ಮುಖ್ಯ ಅಥಿಯಾಗಿ ಆಹ್ವಾನಿಸಿದೆ. ಅಪ್ಪು, ಪತ್ನಿ ಅಂಗಾಂಗ ದಾನದ ರಾಯಭಾರಿಯಾಗಿ, ಅಂಗಾಂಗ ದಾನದ ಬಗ್ಗೆ ಅರಿವು ಮೂಡಿಸುವಂತೆ ಸರ್ಕಾರ ಚಿಂತನೆ ನಡೆಸಿದೆ. 

ಇದೇ ಈ ಕಾರ್ಯಕ್ರಮದಲ್ಲಿ ಅಂಗಾಂಗ ದಾನ ಮಾಡಿದ ರಾಜ್ಯದ 150 ಕುಟುಂಬಗಳನ್ನ ಸನ್ಮಾಸಿನಿ , ಜೀವ ಉಳಿಸುವ ಇನ್ನಷ್ಟು ಕಾರ್ಯ ಹಮ್ಮಿಕೊಳ್ಳುವ ಯೋಜನೆಯನ್ನು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹಾಗೂ  ಆರೋಗ್ಯ ಇಲಾಖೆ ಆಲೋಚಿಸಿದೆ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News