ನಟಿ ಅನುಷ್ಕಾ ಶೆಟ್ಟಿ ಕನ್ನಡಕ್ಕೆ ಮನಸೋತ ಕನ್ನಡಿಗರು!

ತೆಲುಗು, ತಮಿಳು ಚಿತ್ರರಂಗದ ಟಾಪ್ ಹೀರೋಯಿನ್‌ಗಳಲ್ಲಿ ಒಬ್ಬರಾಗಿರುವ ಮಂಗಳೂರು ಚೆಲುವೆ ಅನುಷ್ಕಾ ಶೆಟ್ಟಿ ಅವರ ಮಾತೃ ಭಾಷೆಯ ಮೇಲಿನ ಪ್ರೇಮ ಕೋಟ್ಯಾಂತ ಕನ್ನಡಿಗರ ಮನಸ್ಸನ್ನು ಗೆದ್ದಿದೆ.  

Last Updated : Aug 1, 2019, 01:21 PM IST
ನಟಿ ಅನುಷ್ಕಾ ಶೆಟ್ಟಿ ಕನ್ನಡಕ್ಕೆ ಮನಸೋತ ಕನ್ನಡಿಗರು! title=
Pic Courtesy: Facebook@AnushkaShetty

ಬೆಂಗಳೂರು: ಬಹು ಬೇಡಿಕೆಯ ನಟಿ ಅನುಷ್ಕಾ ಶೆಟ್ಟಿ ಕನ್ನಡತಿ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿರುವ ಹಲವು ನಾಯಕಿಯರು ತಮಗೆ ಕನ್ನಡವೇ ಗೊತ್ತಿಲ್ಲ ಎಂಬಂತೆ ಆಂಗ್ಲ ಭಾಷೆಯಲ್ಲಿ ಮಾತನಾಡುತ್ತಾರೆ. ಅಂತಹವರ ಮಧ್ಯೆ ತೆಲುಗು, ತಮಿಳು ಚಿತ್ರರಂಗದ ಟಾಪ್ ಹೀರೋಯಿನ್‌ಗಳಲ್ಲಿ ಒಬ್ಬರಾಗಿರುವ ಮಂಗಳೂರು ಚೆಲುವೆ ಅನುಷ್ಕಾ ಶೆಟ್ಟಿ ಅವರ ಮಾತೃ ಭಾಷೆಯ ಮೇಲಿನ ಪ್ರೇಮ ಕೋಟ್ಯಾಂತ ಕನ್ನಡಿಗರ ಮನಸ್ಸನ್ನು ಗೆದ್ದಿದೆ.

ನಟಿ ಅನುಷ್ಕಾ ಶೆಟ್ಟಿ ಅಂತಹದ್ದೇನು ಮಾಡಿದ್ದಾರೆ ಅಂತ ಯೋಚನೆ ಮಾಡ್ತಾ ಇದ್ದೀರಾ? ಅನುಷ್ಕಾ ಶೆಟ್ಟಿ ಅವರ ತಾಯಿಯ ಹುಟ್ಟುಹಬ್ಬಕ್ಕೆ ಸಾಮಾಜಿಕ ಜಾಲತಾಣದಲ್ಲಿ ಕನ್ನಡದಲ್ಲಿ ಶುಭಾಶಯ ತಿಳಿಸಿದ್ದಾರೆ. 

"ಜನ್ಮದಿನದ ಹಾರ್ದಿಕ ಶುಭಾಶಯಗಳು ಅಮ್ಮಾ" ಎಂದು ತಮ್ಮ ಅಧಿಕೃತ ಫೇಸ್ ಬುಕ್ ಖಾತೆಯಲ್ಲಿ ಅನುಷ್ಕಾ ಶೆಟ್ಟಿ ಪೋಸ್ಟ್ ಮಾಡಿದ್ದು, ಕನ್ನಡಿಗರು ಮನಸೋತಿದ್ದಾರೆ. ಅವರ ಈ ಪೋಸ್ಟ್ ಗೆ ಹಲವು ಕಾಮೆಂಟ್ಸ್ ಬಂದಿದ್ದು, ಅನುಷ್ಕಾರ ಕನ್ನಡ ಪ್ರೇಮವನ್ನು ಹಾಡಿ ಹೊಗಳಿದ್ದಾರೆ.

ಹುಟ್ಟು ಹಬ್ಬದ ಶುಭಾಶಯ ಅಮ್ಮ..ಕನ್ನಡ ಪ್ರೇಮಕ್ಕಾಗಿ ಅನುಷ್ಕಾ ಅವರಿಗೆ ಧನ್ಯವಾದಗಳು ಎಂದು ಕೆಲ ಅಭಿಮಾನಿಗಳು ಕಾಮೆಂಟ್ ಮಾಡಿದ್ದರೆ, ಇನ್ನೂ ಕೆಲವರು  ವಾಹ್ ಅದ್ಭುತ ಇದಲ್ವೇ ಭಾಷಾಪ್ರೇಮ ಅಂದರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತನ್ನ ತಾಯಿಗೆ ತನ್ನ ಮಾತೃಭಾಷೆಯಲ್ಲಿ ಶುಭಾಶಯ ಕೋರಿದ ಅನುಷ್ಕಾ ಶೆಟ್ಟಿ.. ಕನ್ನಡ ಭಾಷೆಯನ್ನು ಉಪೇಕ್ಷೆ ಮಾಡುವ ಹಲವರ ಮಧ್ಯೆ ಇವರು ಆದರ್ಶಪ್ರಾಯರಾಗುತ್ತಾರೆ ಎಂದು ಅಭಿಮಾನಿಯೊಬ್ಬರು ತಿಳಿಸಿದ್ದಾರೆ.

ನಿಮ್ಮ ತಾಯಿಯವರಿಗೆ ಇಡೀ ಕರ್ನಾಟಕದ ಕನ್ನಡಿಗರ ಪರವಾಗಿ ಜನ್ಮದಿನದ ಶುಭಾಶಯಗಳು, ಎಲ್ಲೇ ಇರು, ಹೇಗೆ ಇರು, ಎಂದೆಂದಿಗು ನೀ ಕನ್ನಡವಾಗಿರು. ಅನ್ನೋ ಸಾಲಿಗೆ ಅರ್ಥ- ನೀವೇ ಅನುಷ್ಕಾ ಶೆಟ್ಟಿ. ನಿಮ್ಮನ್ನು ಕನ್ನಡದ ಚಿತ್ರಗಳಲ್ಲಿ ನೋಡಲು ನಾವೆಲ್ಲಾ ಕಾತುರರಾಗಿದ್ದೇವೆ ಎಂದು ಇನ್ನೋರ್ವ ಅಭಿಮಾನಿ ತಿಳಿಸಿದ್ದಾರೆ.

ನಿಮ್ಮ ತಾಯಿಗೆ ಜನ್ಮ ದಿನದ ಶುಭಾಶಯಗಳು💐💐 ಹಾಗೇ ನೀವು "ಕನ್ನಡ" ದಲ್ಲಿ ನಿಮ್ಮ ಅಮ್ಮ ಅವರಿಗೆ ಶುಭಾಶಯ ತಿಳಿಸಿ ಎಲ್ಲಾ ಕನ್ನಡದ ನಟಿಯರಿಗೂ ಮಾದರಿಯಾಗಿದ್ದೀರಿ. ಕನ್ನಡದ ನಟಿಯರು ಬೇರೆ ಭಾಷೆಯಲ್ಲಿ ನಟಿಸಿದರು ಕನ್ನಡದಲ್ಲಿ ಮಾತು ಸಹ ಆಡೋದೆ ಕಷ್ಟವಾಗಿ ಬಿಟ್ಟಿದೆ. ಹಾಗೆ ನಾನು ಕನ್ನಡತಿ ಅಂತ ಈ ಪೋಸ್ಟ್‌ ಮೂಲಕ ಎಲ್ಲರಿಗೂ ತೋರಿಸಿ ಕೊಟ್ಟಿದ್ದೀರಿ. ನಿಮ್ಮ ಕನ್ನಡದ ಮೇಲಿನ ಪ್ರೀತಿಗೆ ನನ್ನ ಅಭಿನಂದನೆ ಎಂದು ಮತ್ತೋರ್ವ ಅಭಿಮಾನಿ ಸಂತಸ ವ್ಯಕ್ತಪಡಿಸಿದ್ದಾರೆ.

ಅನುಷ್ಕಾ ಅಕ್ಕ ನಿಮ್ಮ ಕನ್ನಡ ಪ್ರೇಮಕ್ಕೆ ಮಾತೆ ಬರುತ್ತಿಲ್ಲ ತುಂಬು ಹೃದಯದ ಧನ್ಯವಾದಗಳು .. ನಿಮ್ಮ ಕನ್ಮಡ ಪ್ರೇಮ ಸದಾ ಹೀಗೆ ಇರಲಿ. ಕನ್ನಡಿಗರು ನಿಮ್ಮನ್ನ ಎಷ್ಟು ಗೌರವಿಸಿತ್ತಾರೆ ಎಂಬುಂದು ನಿಮ್ಮ ಕಮೆಂಟ್ ಗಳನ್ನ ನೋಡಿದರೆ ತಿಳಿಯುತ್ತದೆ ಎಂದು ಕೆಲವರು ಹೇಳಿದ್ದಾರೆ.
 

Trending News