KGF 2: ತೂಫಾನ್ ಬಳಿಕ ಮತ್ತೊಂದು ಲಿರಿಕಲ್‌ ಸಾಂಗ್‌ ರಿಲೀಸ್‌ ಮಾಡಿದ ಕೆಜಿಎಫ್‌2 ತಂಡ

ರಾಕಿಂಗ್‌ ಸ್ಟಾರ್‌ ಯಶ್‌ ಅಭಿನಯದ ಕೆಜಿಎಫ್‌ ಸಿನಿಮಾ ತೂಫಾನ್ ಬಳಿಕ ರಿಲೀಸ್‌ ಆಗ್ತಿದೆ ಮತ್ತೊಂದು ಲಿರಿಕಲ್‌ ಸಾಂಗ್‌!   ಇದು ಎಲ್ಲಾ ಅಮ್ಮಂದಿರ ಧ್ವನಿ ಎಂದ ಕೆಜಿಎಫ್‌2 ತಂಡ! 

Written by - Chetana Devarmani | Last Updated : Apr 6, 2022, 01:18 PM IST
  • ರಾಕಿಂಗ್‌ ಸ್ಟಾರ್‌ ಯಶ್‌ ಅಭಿನಯದ ಕೆಜಿಎಫ್‌ ಸಿನಿಮಾ
  • ತೂಫಾನ್ ಬಳಿಕ ರಿಲೀಸ್‌ ಆಗಿದೆ ಮತ್ತೊಂದು ಲಿರಿಕಲ್‌ ಸಾಂಗ್‌!
  • ಇದು ಎಲ್ಲಾ ಅಮ್ಮಂದಿರ ಧ್ವನಿ ಎಂದ ಕೆಜಿಎಫ್‌2 ತಂಡ!
KGF 2: ತೂಫಾನ್ ಬಳಿಕ ಮತ್ತೊಂದು ಲಿರಿಕಲ್‌ ಸಾಂಗ್‌ ರಿಲೀಸ್‌ ಮಾಡಿದ ಕೆಜಿಎಫ್‌2 ತಂಡ  title=
ಕೆಜಿಎಫ್‌2

ರಾಕಿಂಗ್‌ ಸ್ಟಾರ್‌ ಯಶ್‌ (Yash) ಅಭಿನಯದ ಕೆಜಿಎಫ್‌ (KGF) ಹೆಸರು ಕೇವಲ ಸಿನಿಮಾ ಮಾತ್ರವಲ್ಲ ಅದೊಂದು ಬ್ರ್ಯಾಂಡ್‌ ಕ್ರಿಯೇಟ್‌ ಮಾಡಿದೆ. ಪ್ರಶಾಂತ್‌ ನೀಲ್‌ (Prashanth Neel) ನಿರ್ದೇಶನದ ಕೆಜಿಎಫ್‌ 1 ಹಾಗೂ 2 ಸಿನಿಮಾ ಜನರಲ್ಲಿ ಸಖತ್‌ ಕ್ರೇಜ್‌ ಹುಟ್ಟುಹಾಕಿದೆ. 2018ರಲ್ಲಿ ಬಂದ ಕೆಜಿಎಫ್‌ ಚಾಪ್ಟರ್‌ 1 ಮಾಡಿದ ಮೋಡಿ ಅಷ್ಟಿಷ್ಟಲ್ಲ. ಇದೀಗ ನರಾಚಿ ಲೋಕದ ಮತ್ತೊಂದು ಅಧ್ಯಾಯ ಹೊತ್ತು ಕೆಜಿಎಫ್‌ ಚಾಪ್ಟರ್‌ 2 ಬರುತ್ತಿದೆ.

ಕೆಜಿಎಫ್​: ಚಾಪ್ಟರ್​ 2 ಬಿಡುಗಡೆಗೆ ಇನ್ನು ಕೆಲವೇ ದಿನಗಳ ಬಾಕಿ ಉಳಿದುಕೊಂಡಿದೆ. ಈಗಾಗಲೇ ಚಿತ್ರತಂಡ ಭರ್ಜರಿ ಪ್ರಚಾರ ನಡೆಸುತ್ತಿದೆ. ಕೆಲವೇ ದಿನಗಳ ಹಿಂದೆ ಈ ಸಿನಿಮಾದಿಂದ ‘ತೂಫಾನ್​..’ ಲಿರಿಕಲ್​ ವಿಡಿಯೋ ಬಿಡುಗಡೆ ಮಾಡಲಾಗಿತ್ತು. ಇದೀಗ ಮತ್ತೊಂದು ಲಿರಿಕಲ್‌ ಸಾಂಗ್‌ ರಿಲೀಸ್‌ ಆಗಿದೆ.  

ಇದನ್ನೂ ಓದಿ:Love Mocktail 2: ಈ ದಿನದಂದು ಸ್ಟಾರ್​ ಸುವರ್ಣದಲ್ಲಿ ಪ್ರಸಾರವಾಗಲಿದೆ ‘ಲವ್ ಮಾಕ್ಟೇಲ್ 2’

ನರಾಚಿ ಲೋಕದಲ್ಲಿ ಗರುಡನ ಹತ್ಯೆ ಬಳಿಕ ಏನಾಯ್ತು? ಎಂಬ ಕುತೂಹಲಕ್ಕೆ ಶೀಘ್ರದಲ್ಲೇ ಉತ್ತರ ಸಿಗಲಿದೆ. ಕೇವಲ ಪೋಸ್ಟರ್‌ ಮತ್ತು ಟೀಸರ್‌ ಮೂಲಕ ಸಿನಿ ಪ್ರಿಯರ ಕಾತುರ ಹೆಚ್ಚಿಸಿದ್ದ ಚಿತ್ರತಂಡ ಮಾರ್ಚ್‌ನಲ್ಲಿ ತೂಫಾನ್‌ ಲಿರಿಕಲ್‌ ಸಾಂಗ್‌ (Toofan Lyrical Song) ಮತ್ತು ಟ್ರೇಲರ್ ಮೂಲಕ ಅಭಿಮಾನಿಗಳಿಗೆ ಸಂತಸದ ಸುದ್ದಿ ನೀಡಿತು. ಕೆಜಿಎಫ್​: ಚಾಪ್ಟರ್​ 2 ಒಂದು ಪ್ಯಾನ್​ ಇಂಡಿಯಾ ಸಿನಿಮಾ ಆಗಿದ್ದು, ಕನ್ನಡದಲ್ಲಿ ನಿರ್ಮಾಣವಾದ ಈ ಚಿತ್ರ ತೆಲುಗು, ಹಿಂದಿ, ಮಲಯಾಳಂ ಮತ್ತು ತಮಿಳು ಭಾಷೆಗಳಿಗೆ ಡಬ್​ ಆಗಿ ಬಿಡುಗಡೆಗೆ ಸಜ್ಜಾಗಿದೆ. 

ಇದೀಗ ಕೆಜಿಎಫ್ ತಂಡ ಹೊಸ ಅಪ್ಡೇಟ್ ನೀಡಿದೆ. ಚಿತ್ರದ ಮತ್ತೊಂದು ಹಾಡು ಇಂದು (ಏಪ್ರಿಲ್ 6) ಮಧ್ಯಾಹ್ನ 1 ಗಂಟೆಗೆ ಬಿಡುಗಡೆ ಆಗಿದೆ. "ಗಗನ ನೀ.." (Gagana Nee) ಎಂಬ ಹಾಡು ಇಂದು ರಿಲೀಸ್‌ ಆಗಿದೆ. ಇದನ್ನು ವಾಯ್ಸ್ ಆಫ್ ಎವರಿ ಮದರ್ ಎಂದು ಚಿತ್ರತಂಡ ಬಣ್ಣಿಸಿದೆ. ಇದನ್ನು ಎಲ್ಲ ತಾಯಂದಿರಿಗೆ ಡೆಡಿಕೇಟ್‌ ಮಾಡಿದೆ. ಕೆಜಿಎಫ್ ಚಿತ್ರದ ಎರಡನೇ ಲಿರಿಕಲ್ ವಿಡಿಯೋ ಇಂದು ಮಧ್ಯಾಹ್ನ 1 ಗಂಟೆಗೆ ಬಿಡುಗಡೆ ಆಗಿದೆ. ಕನ್ನಡ, ತೆಲುಗು, ತಮಿಳು, ಮಲಯಾಳಂ ‌ನಾಲ್ಕು ಭಾಷೆಗಳಲ್ಲಿ ಈ ಹಾಡು ರಿಲೀಸ್ ಆಗಿದೆ. 

ಇದನ್ನೂ ಓದಿ:ಕನ್ನಡ ಸಿನಿಮಾ ಹವಾ: ರಿಲೀಸ್‌ಗೂ ಮೊದಲೇ 500 ಕೋಟಿ ವಸೂಲಿ ಮಾಡಿದ 'ಕೆಜಿಎಫ್‌-2'..!

ಪ್ರಶಾಂತ್​ ನೀಲ್​ ನಿರ್ದೇಶನದ ಕೆಜಿಎಫ್​ 2 ಚಿತ್ರದಲ್ಲಿ ಬಾಲಿವುಡ್​ ಸ್ಟಾರ್‌ಗಳಾದ ಸಂಜಯ್​ ದತ್​, ರವೀನಾ ಟಂಡನ್ ನಟಿಸಿದ್ದಾರೆ. ಅಧೀರ ಎಂಬ ಪಾತ್ರಕ್ಕೆ ಸಂಜಯ್​ ದತ್​ ಬಣ್ಣ ಹಚ್ಚಿದ್ದರೆ, ರಮಿಕಾ ಸೇನ್​ ಎಂಬ ಪವರ್​ಫುಲ್​ ಮಹಿಳೆಯ ಪಾತ್ರದಲ್ಲಿ ರವೀನಾ ಟಂಡನ್​ ಕಾಣಿಸಿಕೊಂಡಿದ್ದಾರೆ.  ಬಹುನಿರೀಕ್ಷಿತ ಕೆಜಿಎಫ್ ಚಾಪ್ಟರ್ 2 (KGF Chapter 2) ಸಿನಿಮಾ ಬಿಡುಗಡೆಗೆ ಕೇವಲ ಒಂದು ವಾರವಷ್ಟೇ ಬಾಕಿಯಿದೆ. ಇದೇ ತಿಂಗಳ 14ನೇ ತಾರೀಖಿನಂದು ಕೆಜಿಎಫ್‌2 ಬಿಡುಗಡೆ ಆಗಲಿದೆ. ಕೆಜಿಎಫ್ ತೂಫಾನ್ ಬಳಿಕ ಇದೀಗ ತಂಗಾಳಿ ಬೀಸಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News