/kannada/photo-gallery/englands-legendary-test-batsman-joe-root-will-break-sachin-tendulkar-4-world-records-249475 ಒಂದಲ್ಲ ಎರಡಲ್ಲ ಸಚಿನ್ ಅವರ 4 ವಿಶ್ವ ದಾಖಲೆಗಳನ್ನು ಬ್ರೇಕ್‌ ಮಾಡಲಿದ್ದಾರೆ ಈ 33 ವರ್ಷದ ಬ್ಯಾಟ್ಸ್‌ಮನ್‌!  ಒಂದಲ್ಲ ಎರಡಲ್ಲ ಸಚಿನ್ ಅವರ 4 ವಿಶ್ವ ದಾಖಲೆಗಳನ್ನು ಬ್ರೇಕ್‌ ಮಾಡಲಿದ್ದಾರೆ ಈ 33 ವರ್ಷದ ಬ್ಯಾಟ್ಸ್‌ಮನ್‌! 249475

ಜಾಕ್ವೆಲಿನ್ ಫರ್ನಾಂಡಿಸ್ ಐ ಲವ್ ಯೂ ಎಂದಿದ್ದಷ್ಟೇ ಅಲ್ಲ, ಅದನ್ನೂ ಕೇಳಿದ್ದಾರೆ : ಮತ್ತೊಂದು ಲೆಟರ್ ಬಾಂಬ್ ಸಿಡಿಸಿದ ಸುಕೇಶ್

Sukesh Chandrasekhar News:ಸುಕೇಶ್ ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾನೆ. ಜಾಕ್ವೆಲಿನ್ ಹೆಸರಿನಲ್ಲಿ ಸುಕೇಶ್ ಮತ್ತೊಂದು ಪತ್ರವನ್ನು ಬರೆದಿರುವುದೇ ಇದಕ್ಕೆ ಕಾರಣ.   

Written by - Ranjitha R K | Last Updated : Jan 4, 2024, 04:35 PM IST
  • ಸುಖೇಶ್ ಚಂದ್ರಶೇಖರ್ ದೆಹಲಿಯ ಮಂಡೋಲಿ ಜೈಲಿನಲ್ಲಿದ್ದಾನೆ.
  • ಜೈಲಿನೊಳಗಿದ್ದರೂ ಸುಖೇಶ್ ಚಂದ್ರಶೇಖರ್ ಸುದ್ದಿಯಲ್ಲಿರುತ್ತಾನೆ.
  • ಸುಕೇಶ್ ಮತ್ತೊಂದು ಪತ್ರವನ್ನು ಬರೆದಿರುವುದೇ ಇದಕ್ಕೆ ಕಾರಣ.
ಜಾಕ್ವೆಲಿನ್ ಫರ್ನಾಂಡಿಸ್ ಐ ಲವ್ ಯೂ ಎಂದಿದ್ದಷ್ಟೇ ಅಲ್ಲ, ಅದನ್ನೂ ಕೇಳಿದ್ದಾರೆ :  ಮತ್ತೊಂದು ಲೆಟರ್ ಬಾಂಬ್ ಸಿಡಿಸಿದ ಸುಕೇಶ್  title=

Sukesh Chandrasekhar News: ವಂಚನೆ ಆರೋಪದಲ್ಲಿ ಜೈಲು ಸೇರಿರುವ ಸುಖೇಶ್ ಚಂದ್ರಶೇಖರ್ ದೆಹಲಿಯ ಮಂಡೋಲಿ ಜೈಲಿನಲ್ಲಿದ್ದಾನೆ. ಜೈಲಿನೊಳಗಿದ್ದರೂ ಸುಖೇಶ್ ಚಂದ್ರಶೇಖರ್ ಸುದ್ದಿಯಲ್ಲಿರುತ್ತಾನೆ. ಯಾವಾಗ ಸುಕೇಶ್ ವಿಚಾರ ಬೆಳಕಿಗೆ ಬರುತ್ತದೆಯೋ ಆಗ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಕೂಡಾ ಚರ್ಚೆಗೆ ಗ್ರಾಸವಾಗುತ್ತಾರೆ. ಸುಕೇಶ್ ಪದೇ ಪದೇ ಜಾಕ್ವೆಲಿನ್ ಫರ್ನಾಂಡೀಸ್ ಗೆ ಪತ್ರ ಬರೆಯುವ ಕಾರಣಕ್ಕೇ ಸುದ್ದಿಯಾಗುತ್ತಾನೆ. ಸುಕೇಶ್ ಕುಕೃತ್ಯದಲ್ಲಿ ಜಾಕ್ವೆಲಿನ್ ಕೂಡಾ ಶಾಮೀಲಾಗಿದ್ದಾರೆ ಎಂದು ಆರೋಪಿಸಿದಾಗ ನಟಿ ಈ ಆರೋಪವನ್ನು ಸಾರಾಸಗಟಾಗಿ ತಳ್ಳಿ ಹಾಕಿದ್ದರು. ಸುಕೇಶ್ ಕುಮಾರ್ ಒಬ್ಬ ಸರ್ಕಾರಿ ಅಧಿಕಾರಿ ಎಂದಷ್ಟೇ ತಿಳಿದಿತ್ತು. ವಂಚನೆಯಲ್ಲಿ ತೊಡಗಿರುವುದು ಅವರಿಗೆ ತಿಳಿದಿರಲಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದ್ದರು. ಸುಕೇಶ್ ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾನೆ. ಜಾಕ್ವೆಲಿನ್ ಹೆಸರಿನಲ್ಲಿ ಸುಕೇಶ್ ಮತ್ತೊಂದು ಪತ್ರವನ್ನು ಬರೆದಿರುವುದೇ ಇದಕ್ಕೆ ಕಾರಣ. 

ಚಾಟ್ 2021ರ ಉಲ್ಲೇಖ : 
ಸುಕೇಶ್ ಜಾಕ್ವೆಲಿನ್‌ಗೆ ಪತ್ರ ಬರೆದು ಹೊಸ ವರ್ಷದ ಶುಭಾಶಯ ಕೋರಿದ್ದಾನೆ. ಆ ಪತ್ರದಲ್ಲಿ ಅವರು ಜಾಕ್ವೆಲಿನ್ ಜೊತೆಗಿನ ಚಾಟ್ ಅನ್ನು ಹಂಚಿಕೊಂಡಿದ್ದಾನೆ. 2021ರಲ್ಲಿ ಇವರಿಬ್ಬರ ನಡುವೆ ನಡೆದಿರುವ ಚಾಟ್ ಎನ್ನುವುದನ್ನು ಸುಕೇಶ್  ಹೇಳಿದ್ದಾನೆ. ಜಾಕ್ವೆಲಿನ್ ತನಗೆ ಐ ಲವ್ ಯೂ  ಮೆಸೇಜ್ ಗಳನ್ನೂ ಕಳುಹಿಸಿದ್ದಳು ಎನ್ನುವುದನ್ನು ಸುಕೇಶ್ ಇಲ್ಲಿ ಹೇಳಿದ್ದಾನೆ. ಮಾತ್ರವಲ್ಲ ಜಾಕ್ವೆಲಿನ್ ತನ್ನ ಬಳಿ ಕ್ಷಮೆ ಕೂಡ ಕೇಳಿರುವುದಾಗಿ ಹೇಳಿದ್ದಾರೆ. ಇತ್ತೀಚೆಗಷ್ಟೇ ಜಾಕ್ವೆಲಿನ್ ಕೂಡಾ ಸುಕೇಶ್ ಪತ್ರಗಳಿಂದ ತನಗೆ ತೊಂದರೆಯಾಗಿದೆ ಎಂದು ದೆಹಲಿ ಪೊಲೀಸರಿಗೆ ದೂರು ನೀಡಿದ್ದರು. ಅಷ್ಟೇ ಅಲ್ಲ, ಸುಕೇಶ್‌ನಿಂದ ತನಗೆ ಅಪಾಯವಿದೆ ಎನ್ನುವುದನ್ನು ದೆಹಲಿ ಪೊಲೀಸರು ಹಾಗೂ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಇದನ್ನೂ ಓದಿ : Drone Prathap : ಬಿಗ್‌ಬಾಸ್‌ ಮನೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ರಾ ಡ್ರೋನ್‌ ಪ್ರತಾಪ್‌..!? ನಿಜವಾಗಿ ರಾತ್ರಿ ಆಗಿದ್ದೇನು..?

ಕ್ಷಮೆಯಾಚಿಸಿದ ಜಾಕ್ವೆಲಿನ್ : 
ಈ ಚಾಟ್ ಗಳು  ತನ್ನ ಕಕ್ಷಿದಾರ ಸುಕೇಶ್ ಮತ್ತು ಜಾಕ್ವೆಲಿನ್ ನಡುವೆ ನಡೆದಿರುವಂಥದ್ದು. ಇಲ್ಲಿ  ಜಾಕ್ವೆಲಿನ್  ಒಂದು ಕಡೆ sorry ಹೇಳುತ್ತಿದ್ದರೆ ಇನ್ನೊಂದು ಕಡೆ I love you ಎಂದು ಹೇಳುತ್ತಾರೆ ಸುಕೇಶ್ ಪರ ವಕೀಲರು ಹೇಳಿದ್ದಾರೆ. ಈ ಚಾಟ್‌ಗಳು 2021 ರಲ್ಲಿ ಮನಿ ಲಾಂಡರಿಂಗ್ ಪ್ರಕರಣ ಬೆಳಕಿಗೆ ಬಂದಾಗಿನ ಸಂದರ್ಭದ್ದು  ಎಂದು ವಕೀಲರು ಹೇಳಿದ್ದಾರೆ. ಇತ್ತೀಚೆಗೆ ಮತ್ತೊಂದು ಚಾಟ್ ವೈರಲ್ ಆಗಿದ್ದು, ಅದರಲ್ಲಿ ಜಾಕ್ವೆಲಿನ್ ಸುಕೇಶ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.  ಜಾಕ್ವೆಲಿನ್ ಅನ್ನು ಸುಕೇಶ್ ಯಾವ ರೀತಿ ತನ್ನ ಬಲೆಗೆ ಬೀಳಿಸಿದ್ದಾರೆ ಎಂದು ಹೇಳುತ್ತಾರೆ. ಸುಕೇಶ್‌ನಿಂದ ತನ್ನ ಜೀವಕ್ಕೆ ಅಪಾಯವಿದೆ ಎಂಬುದು ಸತ್ಯ ಎಂದು ದೆಹಲಿ ಪೊಲೀಸರು ಮತ್ತು ನ್ಯಾಯಾಲಯಕ್ಕೆ ನೀಡಿದ ದೂರಿನಲ್ಲಿ ಜಾಕ್ವೆಲಿನ್ ಹೇಳಿದಾಗ, ಇಬ್ಬರ ನಡುವೆ ಆರೋಪಗಳ ಸರಣಿ ಪ್ರಾರಂಭವಾಯಿತು. ಇನ್ನು ಜಾಕ್ವೆಲಿನ್ ಆರೋಪದ ಬಗ್ಗೆ, ಉತ್ತರಿಸಿದ ಸುಕೇಶ್ ಎಲ್ಲಾ ರಹಸ್ಯಗಳನ್ನು ಬಹಿರಂಗಪಡಿಸುವುದಾಗಿ ಹೇಳಿದ್ದಾರೆ. ಅಷ್ಟೇ ಅಲ್ಲ, ಜಾಕ್ವೆಲಿನ್‌ನ ಸತ್ಯವನ್ನು ಹೊರತರುವ ಎಲ್ಲಾ ಪುರಾವೆಗಳು ಇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : Urfi javed: ಆಕ್ಸಿಜನ್ ಮಾಸ್ಕ್ ಹಾಕಿಕೊಂಡು ಆಸ್ಪತ್ರೆಯ ಬೆಡ್ ಮೇಲೆ ಉರ್ಫಿ ..ಏನಾಯ್ತು ಈ ಬೋಲ್ಡ್‌ ಬಾಲೆಗೆ?

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.