VIDEO: ಸಾಹಸಸಿಂಹ ಡಾ|| ವಿಷ್ಣುವರ್ಧನ್ ಜನ್ಮದಿನದಂದು ಅನಿರುದ್ಧನ ಸವಿನೆನಪು

ಜೀ ವಾಹಿನಿಯೊಂದಿಗೆ ಡಾ|| ವಿಷ್ಣುವರ್ಧನ್ ಅವರ ಜೊತೆಗಿನ ದಿನಗಳ ಬಗ್ಗೆ ಮನಬಿಚ್ಚಿ ಮಾತನಾಡಿದ ಅವರ ಮಗನಂಥಾ ಅಳಿಯ ನಟ ಅನಿರುದ್ದ್

Last Updated : Sep 18, 2019, 12:16 PM IST
VIDEO: ಸಾಹಸಸಿಂಹ ಡಾ|| ವಿಷ್ಣುವರ್ಧನ್ ಜನ್ಮದಿನದಂದು ಅನಿರುದ್ಧನ ಸವಿನೆನಪು title=
Pic courtesy: ZeeKannada

ಬೆಂಗಳೂರು: ಇಂದು ಸಾಹಸಸಿಂಹ ಡಾ|| ವಿಷ್ಣುವರ್ಧನ್ ಅವರ ಜನ್ಮದಿನ. ಸಂಪತ್ ಕುಮಾರ್ ಆಗಿದ್ದ ಇವರು ತಮ್ಮ ಅಮೋಘ ನಟನೆಯ ಮೂಲಕ ಅಭಿಮಾನಿಗಳಿಂದ ಸಾಹಸಸಿಂಹ ಎಂಬ ಬಿರುದು ಪಡೆದ ಎಲ್ಲರ ನೆಚ್ಚಿನ 'ವಿಷ್ಣು ದಾದಾ' ಮೈಸೂರು ರತ್ನ, ಅಭಿನವ ಭಾರ್ಗವ ಎಂಬ ನಾನಾ ನಾಮಾಂಕಿತಗಳನ್ನೂ ಹೊಂದಿದ್ದರು.

ಡಾ. ವಿಷ್ಣುವರ್ಧನ್ ಹೆಚ್.ಎಲ್.ನಾರಾಯಣರಾವ್ ಮತ್ತು ಕಾಮಾಕ್ಷಮ್ಮ ಎಂಬ ದಂಪತಿಗಳ ಪುತ್ರ. ಸಾಂಸ್ಕೃತಿಕ ನಗರಿ ಮೈಸೂರಿನವರಾದ ವಿಷ್ಣು, ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮೈಸೂರಿನ ಗೋಪಾಲಸ್ವಾಮಿ ಶಾಲೆಯಲ್ಲಿಯೂ ಮತ್ತು ಹಿರಿಯ ಪ್ರಾಥಮಿಕ ಶಿಕ್ಷಣವನ್ನು ಬೆಂಗಳೂರಿನ ಕನ್ನಡ ಮಾದರಿ ಶಾಲೆಯಲ್ಲಿ ಪೂರ್ಣಗೊಳಿಸಿದರು. ಬೆಂಗಳೂರಿನ ಬಸವನಗುಡಿಯಲ್ಲಿರುವ ನ್ಯಾಷನಲ್ ಕಾಲೇಜಿನಲ್ಲಿ ತಮ್ಮ ಪ್ರೌಢಶಾಲಾ ಶಿಕ್ಷಣ ಹಾಗೂ ಪದವಿ ಶಿಕ್ಷಣವನ್ನು ಪಡೆದರು.

1972ರ ಡಿಸೆಂಬರ್ 29ರಂದು ತೆರೆಕಂಡ 'ನಾಗರಹಾವು' ಚಿಂತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಸಂಪತ್ ಕುಮಾರ್ ಅವರಿಗೆ ಪ್ರಸಿದ್ಧ ನಿರ್ದೇಶಕ ಪುಟ್ಟಣ್ಣ ಕಣಗಾಲ್ 'ವಿಷ್ಣುವರ್ಧನ' ಎಂದು ಹೆಸರಿಟ್ಟರು. ಬಳಿಕ ದಕ್ಷಿಣ ಭಾರತದಲ್ಲಿ ಕನ್ನಡ ಸೇರಿದಂತೆ ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ಸುಮಾರು 220 ಸಿನಿಮಾಗಳಲ್ಲಿ ನಟಿಸಿದ್ದಾರೆ. 2010ರಲ್ಲಿ ತೆರೆಕಂಡ 'ಆಪ್ತ ರಕ್ಷಕ' ಡಾ. ವಿಷ್ಣುವರ್ಧನ್ ಅಭಿನಯದ ಕೊನೆಯ ಚಿತ್ರ.

ಎಲ್ಲರ ನೆಚ್ಚಿನ ವಿಷ್ಣು ದಾದಾ ಇಂದು ನಮ್ಮೊಂದಿಗಿಲ್ಲ. ಆದರೆ ಅವರ ಅದ್ಭುತ ಅಭಿನಯದ ಮೂಲಕ ಅವರ ನೆನಪು ಎಲ್ಲರಲ್ಲೂ ಅಚ್ಚ ಹಸಿರಾಗಿದೆ. ಡಾ|| ವಿಷ್ಣುವರ್ಧನ್ ಅವರ ಜೊತೆಗಿನ ದಿನಗಳ ಬಗ್ಗೆ ಅವರ ಮಗನಂಥಾ ಅಳಿಯ ನಟ ಅನಿರುದ್ದ್ ನಮ್ಮ ಜೀ ವಾಹಿನಿಯೊಂದಿಗೆ ಮನಬಿಚ್ಚಿ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಅವರು ಧರ್ಮಸ್ಥಳಕ್ಕೆ ಹೋಗಿದ್ದ ಸನ್ನಿವೇಶವನ್ನು ಹಂಚಿಕೊಂಡಿದ್ದಾರೆ. ಅನಿರುದ್ದ್ ಆ ಬಗ್ಗೆ ಏನು ಹೇಳಿದ್ದಾರೆ ಅನ್ನೋದನ್ನ ನೀವೇ ನೋಡಿ...

 

Trending News