ಸರಿಗಮಪ ಸಂಗೀತ ಲೋಕಕ್ಕೆ ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ, ಕನ್ನಡ ಹಾಡು ಹೇಳಿ ರಂಜಿಸಿದ ಕ್ರಿಕೆಟ್ ದಿಗ್ಗಜ!

Anil Kumble in SRGMP: ಸರಿಗಮಪ ಸಂಗೀತ ಲೋಕಕ್ಕೆ ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ ಎಂಟ್ರಿ ಕೊಟ್ಟಿದ್ದಾರೆ. 'ಮಾಮರವೆಲ್ಲೋ ಕೋಗಿಲೆ ಎಲ್ಲೋ..' ಗೀತೆಯನ್ನು ಹಾಡಿದ್ದಾರೆ.

Edited by - Zee Kannada News Desk | Last Updated : Dec 23, 2021, 01:58 PM IST
  • ಸರಿಗಮಪ ಸಂಗೀತ ಲೋಕಕ್ಕೆ ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ ಎಂಟ್ರಿ
  • ಮಾಮರವೆಲ್ಲೋ ಕೋಗಿಲೆ ಎಲ್ಲೋ..' ಹಾಡು ಹೇಳಿದ ಕ್ರಿಕೆಟ್ ದಿಗ್ಗಜ
ಸರಿಗಮಪ ಸಂಗೀತ ಲೋಕಕ್ಕೆ ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ, ಕನ್ನಡ ಹಾಡು ಹೇಳಿ ರಂಜಿಸಿದ ಕ್ರಿಕೆಟ್ ದಿಗ್ಗಜ! title=
ಅನಿಲ್ ಕುಂಬ್ಳೆ

ಜೀ ಕನ್ನಡದ (Zee Kannada) ಸರಿಗಮಪ ಶೋನಲ್ಲಿ ಈ ವಾರದ ಅತಿಥಿಯಾಗಿ ಕ್ರಿಕೆಟ್ ದಿಗ್ಗಜ ಅನಿಲ್ ಕುಂಬ್ಳೆ ಆಗಮಿಸಿದ್ದಾರೆ. ಸ್ಪಿನ್​ ಮಾಂತ್ರಿಕ ಅನಿಲ್​ ಕುಂಬ್ಳೆ (Anil Kumble) ಆಗಮನದಿಂದ ಕಾರ್ಯಕ್ರಮಕ್ಕೆ ಹೊಸ ಮೆರುಗು ಬಂದಿದೆ. 

ಜೀ ಕನ್ನಡ ವಾಹಿನಿಯು ಈ ವಿಶೇಷ ಎಪಿಸೋಡ್​ನ ಪ್ರೋಮೋ ಹಂಚಿಕೊಂಡಿದ್ದು, ವೀಕ್ಷಕರಲ್ಲಿ ಸಖತ್ ನಿರೀಕ್ಷೆ ಮೂಡಿದೆ. ಶನಿವಾರ ಮತ್ತು ಭಾನುವಾರ ರಾತ್ರಿ 7.30ರಿಂದ 10.30ರವರೆಗೆ ಈ ಎಪಿಸೋಡ್​ ಪ್ರಸಾರವಾಗಲಿದೆ. ಇದಕ್ಕಾಗಿ ಸಂಗೀತ ಪ್ರಿಯರು ಮಾತ್ರವಲ್ಲ, ಕ್ರೀಡಾಭಿಮಾನಿಗಳು ಸಹ ಕಾತುರರಾಗಿದ್ದಾರೆ.

ಕುಂಬ್ಳೆ ಮಾತಿಗೆ ಥ್ರಿಲ್​ ಆದ ಹಂಸಲೇಖ:

ಅನೇಕ ವಿಚಾರಗಳನ್ನು ಹಂಚಿಕೊಂಡ ಅನಿಲ್ ಕುಂಬ್ಳೆ, "ಹಂಸಲೇಖ ಅವರ ಪ್ರೇಮಲೋಕ ಶುರುವಾದಾಗ ನಮ್ಮ ಕ್ರಿಕೆಟ್​ ಲೋಕ ಶುರುವಾಯ್ತು" ಎಂದು ಹೇಳಿದ್ದಾರೆ. ಆ ಮಾತು ಕೇಳಿದ ಹಂಸಲೇಖ ಆಶ್ಚರ್ಯಗೊಂಡಿದ್ದಾರೆ. "ನೀವು ಮನಸ್ಸಿಗೆ ಇಳಿದರೆ ಕಮಿಟ್ಟು. ಕಣಕ್ಕೆ ಇಳಿದರೆ ವಿಕೆಟ್ಟು" ಎಂದು ಹಂಸಲೇಖ ಹೇಳಿದ್ದಾರೆ. ಈ ವಿಡಿಯೋ ತುಣುಕು ಪ್ರೋಮೋದಲ್ಲಿದೆ.

ಕನ್ನಡದ ಹಾಡು ಹಾಡಿದ ಅನಿಲ್​ ಕುಂಬ್ಳೆ:

ಅನಿಲ್​ ಕುಂಬ್ಳೆ ಕನ್ನಡದ ಹಾಡು ಹಾಡಿದ್ದಾರೆ. 'ದೇವರ ಗುಡಿ' ಚಿತ್ರದ  'ಮಾಮರವೆಲ್ಲೋ ಕೋಗಿಲೆ ಎಲ್ಲೋ..' ಹಾಡನ್ನು ಅವರು ವೇದಿಕೆ ಮೇಲೆ ಹಾಡಿದ್ದಾರೆ. 

ಕನ್ನಡದ ರಿಯಾಲಿಟಿ ಶೋನಲ್ಲಿ ಇದು ಎರಡನೇ ಬಾರಿ ಅನಿಲ್ ಕುಂಬ್ಳೆ ಭಾಗವಹಿಸುತ್ತಿದ್ದಾರೆ. ಈ ಮೊದಲು ಅವರು ಪುನೀತ್ ರಾಜ್‌ಕುಮಾರ್ ನಡೆಸಿಕೊಡುತ್ತಿದ್ದ 'ಕನ್ನಡದ ಕೋಟ್ಯಧಿಪತಿ' ಕಾರ್ಯಕ್ರಮದಲ್ಲಿ ಕುಂಬ್ಳೆ ಅತಿಥಿಯಾಗಿ ಭಾಗವಹಿಸಿದ್ದರು. 

ಇದನ್ನೂ ಓದಿ: Gangubhai Kathiawadi row: ಬಾಂಬೆ ಹೈಕೋರ್ಟ್ ನಿಂದ ಆಲಿಯಾ ಭಟ್ ಮತ್ತು ಇತರ 2 ಮಂದಿಗೆ ಸಮನ್ಸ್‌ಗೆ ತಡೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News