Sarath Babu: ‘ಅಮೃತವರ್ಷಿಣಿ’ ನಟ ಶರತ್​ ಬಾಬು ಆರೋಗ್ಯ ಸ್ಥಿತಿ ಬಗ್ಗೆ ವೈದ್ಯರು ಹೇಳಿದ್ದೇನು?

Actor Sarath Babu Hospitalised: ನಟ ಶರತ್ ಬಾಬು ತೀವ್ರ ಅಸ್ವಸ್ಥಗೊಂಡಿದ್ದು, ಕೂಡಲೇ ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಲ್ಲಿ ಚೇತರಿಸಿಕೊಳ್ಳದ ಕಾರಣ ಅವರನ್ನು ಹೈದರಾಬಾದ್ ಎಐಜಿ ಆಸ್ಪತ್ರೆಗೆ ಶಿಫ್ಟ್‌ ಮಾಡಲಾಗಿದೆ.   

Written by - Chetana Devarmani | Last Updated : Apr 23, 2023, 07:41 AM IST
  • ‘ಅಮೃತವರ್ಷಿಣಿ’ ನಟ ಶರತ್​ ಬಾಬು
  • ಶರತ್​ ಬಾಬು ಆರೋಗ್ಯ ಸ್ಥಿತಿ ಹೇಗಿದೆ?
  • ಆರೋಗ್ಯ ಸ್ಥಿತಿ ಬಗ್ಗೆ ವೈದ್ಯರು ಹೇಳಿದ್ದೇನು?
Sarath Babu: ‘ಅಮೃತವರ್ಷಿಣಿ’ ನಟ ಶರತ್​ ಬಾಬು ಆರೋಗ್ಯ ಸ್ಥಿತಿ ಬಗ್ಗೆ ವೈದ್ಯರು ಹೇಳಿದ್ದೇನು?  title=
Sarath Babu

Actor Sarath Babu Hospitalised: ಹಿರಿಯ ನಟ ಶರತ್ ಬಾಬು ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ತೀವ್ರ ಅಸ್ವಸ್ಥಗೊಂಡಿರುವ ನಟ ಶರತ್ ಬಾಬು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಧಿಕ ರಕ್ತದೊತ್ತಡದಿಂದ ಅವರು ಇದ್ದಕ್ಕಿದ್ದಂತೆ ಅಸ್ವಸ್ಥರಾಗಿದ್ದರು ಎಂದು ವೈದ್ಯರು ಬಹಿರಂಗಪಡಿಸಿದ್ದಾರೆ. ಸದ್ಯ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದಿದ್ದಾರೆ. 

ಇತ್ತೀಚಿಗೆ ಶರತ್ ಬಾಬು ಅನಾರೋಗ್ಯದ ಕಾರಣ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬಳಿಕ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿದ್ದರಿಂದ ಶರತ್ ಬಾಬು ಅವರನ್ನು ಈಗ ಬೆಂಗಳೂರಿನಿಂದ ಹೈದರಾಬಾದ್‌ನಲ್ಲಿರುವ ಎಐಜಿ ಆಸ್ಪತ್ರೆಗೆ ಶಿಫ್ಟ್‌ ಮಾಡಲಾಗಿದೆ. 

ಇದನ್ನೂ ಓದಿ: Elon Musk ಗೋಸ್ಕರ 'ತೂ ಚೀಜ್ ಬಡಿ ಹೈ..' ಹಾಡು ಹೇಳಿದ ಬಿಗ್ ಬಿ ಅಮಿತಾಭ್!

ವೈದ್ಯರು ಅವರ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಿದ್ದಾರೆ. ಅವರ ಆರೋಗ್ಯ ಸ್ಥಿತಿ ಉತ್ತಮವಾಗಿದ್ದು, ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಅವರನ್ನು ಐಸಿಯುನಿಂದ ಸಾಮಾನ್ಯ ವಾರ್ಡ್‌ಗೆ ಸ್ಥಳಾಂತರಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಅವರ ಅನಾರೋಗ್ಯದ ವಿಚಾರ ತಿಳಿದ ಅಭಿಮಾನಿಗಳು ಆತಂಕ ವ್ಯಕ್ತಪಡಿಸುತ್ತಿದ್ದರೆ, ಸದ್ಯ ಅವರನ್ನು ಜನರಲ್ ರೂಂಗೆ ಶಿಫ್ಟ್ ಮಾಡಿರುವುದು ಕೊಂಚ ಸಮಾಧಾನ ನೀಡಿದೆ. 

ಶರತ್ ಬಾಬು ದಕ್ಷಿಣದ ಬಹುತೇಕ ಎಲ್ಲಾ ಭಾಷೆಗಳಲ್ಲಿ ನಟಿಸಿದ್ದಾರೆ. ಶರತ್ ಬಾಬು ತೆಲುಗು ಸಿನಿರಂಗದಿಂದ ತಮ್ಮ ಜರ್ನಿ ಶುರು ಮಾಡಿದರು. ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಚಲನಚಿತ್ರಗಳಲ್ಲಿ ಅನೇಕ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದರು. 1973ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟ ಶರತ್ ಬಾಬು ಈವರೆಗೆ 200ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಕನ್ನಡದಲ್ಲಿ ಸುಮಾರು 20ಕ್ಕಿಂತ ಹೆಚ್ಚು ಸಿನಿಮಾಗಳಲ್ಲಿ ಶರತ್‌ ಬಾಬು ಅಭಿನಯಿಸಿದ್ದಾರೆ. ಕನ್ನಡದಲ್ಲಿ ಶರತ್‌ ಬಾಬು ನಟಿಸಿದ ಅಮೃತವರ್ಷಿಣಿ ಸಿನಿಮಾ ಸೂಪರ್ ಹಿಟ್ ಪಡೆದಿತ್ತು.

ಇದನ್ನೂ ಓದಿ: ಸಿನಿಮಾಗೋಸ್ಕರ ಕಪ್ಪೆ ಫ್ರೈ ಮಾತ್ರವಲ್ಲದೇ ವಿಚಿತ್ರ ಆಹಾರ ಸೇವಿಸಿದ ಬಾಲಿವುಡ್‌ ತಾರೆಯರು - ಇವ್ರೇ ನೋಡಿ

ಇವರ ಮೂಲ ಹೆಸರು ಸತ್ಯಂ ಬಾಬು ದೀಕ್ಷಿತಲು. 1951 ರಲ್ಲಿ ಆಂಧ್ರಪ್ರದೇಶದಲ್ಲಿ ಜನಿಸಿದ ಶರತ್‌ ಬಾಬು 1973 ರಲ್ಲಿ ತೆರೆಕಂಡ ತೆಲುಗು ಭಾಷೆಯ ರಾಮರಾಜ್ಯಂ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ತಮ್ಮ ನಟನಾ ಕಲೆಯಿಂದ ಸುಮಾರು 8 ನಂದಿ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News