ಭಾರತದ ಫೈನಲ್ ಪಂದ್ಯ ನೋಡಬೇಡಿ: ಅಭಿಮಾನಿಗಳಿಗೆ ಅಮಿತಾಭ್ ಬಚ್ಚನ್ ಸಲಹೆ

ICC World Cup 2023: ‘ಸರ್‌ ನೀವು ಭಾನುವಾರ ನಡೆಯಲಿರುವ ಭಾರತದ ಫೈನಲ್‌ ಪಂದ್ಯವನ್ನು ನೋಡಬೇಡಿ’ ಅಂತಾ ಒಬ್ಬರು ಟ್ವೀಟ್ ಮಾಡಿದ್ದರೆ, ‘ನಮಗಾಗಿ ಇದೊಂದು ತ್ಯಾಗ ಮಾಡಿ, ದಯವಿಟ್ಟು ಫೈನಲ್ ಪಂದ್ಯವನ್ನು ನೋಡಬೇಡಿ’ ಅಂತಾ ಮತ್ತೊಬ್ಬರು ಟ್ವೀಟ್ ಮಾಡಿ ಮನವಿ ಮಾಡಿಕೊಂಡಿದ್ದಾರೆ.

Written by - Puttaraj K Alur | Last Updated : Nov 17, 2023, 03:05 PM IST
  • ಭಾರತ ತಂಡ ಫೈನಲ್ ಪ್ರವೇಶಿಸಿದ್ದಕ್ಕೆ ಬಾಲಿವುಡ್‍ ನಟ ಅಮಿತಾಭ್‌ ಬಚ್ಚನ್ ಅಭಿನಂದನೆ
  • ವಿಶ್ವಕಪ್ ಫೈನಲ್ ಪಂದ್ಯದ ಬಗ್ಗೆ ‘ಬಿಗ್ ಬಿ’ ಮಾಡಿರುವ ಟ್ವೀಟ್ ಸಖತ್ ವೈರಲ್ ಆಗಿದೆ
  • ‘ಸರ್ ದಯವಿಟ್ಟು ನೀವು ಫೈನಲ್ ಪಂದ್ಯ ನೋಡಬೇಡಿ’ ಎಂದು ನಟನಿಗೆ ಅಭಿಮಾನಿಗಳಿಂದ ಮನವಿ
ಭಾರತದ ಫೈನಲ್ ಪಂದ್ಯ ನೋಡಬೇಡಿ: ಅಭಿಮಾನಿಗಳಿಗೆ ಅಮಿತಾಭ್ ಬಚ್ಚನ್ ಸಲಹೆ title=
'ಭಾರತದ ಫೈನಲ್ ಪಂದ್ಯ ನೋಡಬೇಡಿ'

ನವದೆಹಲಿ: ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಬಲಿಷ್ಠ ನ್ಯೂಜಿಲ್ಯಾಂಡ್ ತಂಡದ ವಿರುದ್ಧ ಭರ್ಜರಿ ಗೆಲುವು ಸಾಧಿಸಿ ಫೈನಲ್ ತಲುಪಿದೆ. ಇತ್ತ ದಕ್ಷಿಣ ಆಫ್ರಿಕಾವನ್ನು ವಿಕೆಟ್‍ಗಳಿಂದ ಸೋಲಿಸುವ ಮೂಲಕ ಆಸ್ಟ್ರೇಲಿಯಾ ತಂಡವು ಫೈನಲ್‍ಗೆ ಲಗ್ಗೆ ಇಟ್ಟಿದೆ. ನವೆಂಬರ್ 19ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಫೈನಲ್ ಫೈಟ್ ನಡೆಯಲಿದೆ.

ಫೈನಲ್‍ನಲ್ಲಿ ಆಸೀಸ್‍ ತಂಡಕ್ಕೆ ಮಣ್ಣುಮುಕ್ಕಿಸುವ ಮೂಲಕ ಟೀಂ ಇಂಡಿಯಾ 2003ರ ಸೋಲಿನ ಸೇಡನ್ನು ತೀರಿಸಿಕೊಳ್ಳುವ ತವಕದಲ್ಲಿದೆ. ಹೀಗಾಗಿ ಎಲ್ಲೆಡೆ ಸಂಭ್ರಮ ಮನೆ ಮಾಡಿದ್ದು, ಫೈನಲ್ ಫೈಟ್ ಬಗ್ಗೆ ತೀವ್ರ ಕುತೂಹಲ ಮೂಡಿದೆ. ವಿರಾಟ್ ಕೊಹ್ಲಿ, ಶುಭಮನ್‍ ಗಿಲ್, ರೋಹಿತ್ ಶರ್ಮಾ, ಶ್ರೇಯಸ್ ಅಯ್ಯರ್‌ ಅವರ ಅಮೋಘ ಬ್ಯಾಟಿಂಗ್‌ ಜೊತೆಗೆ ಮೊಹಮ್ಮದ್ ಶಮಿ ಮತ್ತು ಸಿರಾಜ್ ಅವರ ಶ್ರೇಷ್ಠ ಬೌಲಿಂಗ್‌ ದಾಳಿ ಎದುರಾಳಿ ತಂಡಗಳಿವೆ ನಡುಕ ಹುಟ್ಟಿಸಿದೆ. ಹೀಗಾಗಿ ಆಸೀಸ್ ಕೂಡ ಭಾರತವನ್ನು ಮಣಿಸುವ ನಿಟ್ಟಿನಲ್ಲಿ ಲೆಕ್ಕಾಚಾರ ಹಾಕುತ್ತಿದೆ.

ಇದನ್ನೂ ಓದಿ: INd NZ ಸೆಮಿಫೈನಲ್ ವೇಳೆ ಅನುಷ್ಕಾ ಶರ್ಮಾ ತೊಟ್ಟ ಈ ಬಟ್ಟೆಯ ಬೆಲೆ ಎಷ್ಟು ಗೊತ್ತಾ ?

ಭಾರತ ತಂಡ ಫೈನಲ್ ಪ್ರವೇಶಿಸಿರುವುದಕ್ಕೆ ಬಾಲಿವುಡ್‍ನ ಖ್ಯಾತ ನಟ ಅಮಿತಾಭ್‌ ಬಚ್ಚನ್ ಅಭಿನಂದಿಸಿದ್ದಾರೆ. ಆದರೆ ಬಿಗ್‌ ಬಿ ಮಾಡಿರುವ ಒಂದು ಟ್ವೀಟ್‌ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸಖತ್ ಸೌಂಡ್ ಮಾಡುತ್ತಿದೆ. ಭಾರತ ತಂಡದ ಫೈನಲ್ ಪಂದ್ಯವನ್ನು ನೋಡಬೇಡಿ ಎಂದು ಅವರು ಅಭಿಮಾನಿಗಳಿಗೆ ಎಚ್ಚರಿಸಿದ್ದಾರೆ.

ಅಮಿತಾಭ್‌ ಟ್ವೀಟ್‍ನಲ್ಲಿ ಏನಿದೆ? ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯ ಮುಗಿದ ಬಳಿಕ ಅಮಿತಾಭ್‌ ಬಚ್ಚನ್‌ ಟ್ವೀಟ ಮಾಡಿದ್ದು, ‘ನಾವು ಯಾವಾಗ ಮ್ಯಾಚ್‌ ನೋಡುವುದಿಲ್ಲವೋ ಆ ದಿನವೇ ನಾವು ಪಂದ್ಯವನ್ನು ಗೆಲ್ಲುತ್ತೇವೆ’ ಅಂತಾ ಟ್ವೀಟ್‌ ಮಾಡಿದ್ದಾರೆ. ಈ ಟ್ವೀಟ್‌ ನೋಡಿದ ಅಭಿಮಾನಿಗಳು ಅಮಿತಾಭ್‌ ಅವರಿಗೆ ‘ನೀವು ಫೈನಲ್‌ ಪಂದ್ಯವನ್ನು ನೋಡಬೇಡಿ ಸರ್’ ಎಂದು ಮನವಿ ಮಾಡಿದ್ದಾರೆ.   

ಇದನ್ನೂ ಓದಿ: ಲಿಯೋ OTT ರಿಲೀಸ್ ಡೇಟ್ ಫಿಕ್ಸ್..! ಮುಂದಿನ ವಾರದಿಂದಲೇ ಸ್ಟ್ರೀಮಿಂಗ್

‘ಸರ್‌ ನೀವು ಭಾನುವಾರ ನಡೆಯಲಿರುವ ಭಾರತದ ಫೈನಲ್‌ ಪಂದ್ಯವನ್ನು ನೋಡಬೇಡಿ’ ಅಂತಾ ಒಬ್ಬರು ಟ್ವೀಟ್ ಮಾಡಿದ್ದರೆ, ‘ನಮಗಾಗಿ ಇದೊಂದು ತ್ಯಾಗ ಮಾಡಿ, ದಯವಿಟ್ಟು ಫೈನಲ್ ಪಂದ್ಯವನ್ನು ನೋಡಬೇಡಿ’ ಅಂತಾ ಮತ್ತೊಬ್ಬರು ಟ್ವೀಟ್ ಮಾಡಿ ಮನವಿ ಮಾಡಿಕೊಂಡಿದ್ದಾರೆ. ಸದ್ಯ ಅಮಿತಾಭ್ ಅವರ ಟ್ವೀಟ್ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಚರ್ಚೆ ನಡೆಯುತ್ತಿದೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯಲಿರುವ ಫೈನಲ್ ಪಂದ್ಯವನ್ನು ‘ಬಿಗ್ ಬಿ’ ನೋಡದಿರಲಿ ಅಂತಾ ಫ್ಯಾನ್ಸ್ ಮನವಿ ಮಾಡಿಕೊಳ್ಳುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News