ನವದೆಹಲಿ: ಬಾಲಿವುಡ್ ಸೂಪರ್‌ಸ್ಟಾರ್ ಅಮಿತಾಬ್ ಬಚ್ಚನ್ ಅವರ ಕೊವಿಡ್ -19 ಗುಣಮುಖವಾಗಿದೆ ಎಂದು ಕೆಲ ಗಂಟೆಗಳ ಹಿಂದೆ ಹಲವು ಮಾಧ್ಯಮಗಳಲ್ಲಿ ಸುದ್ದಿ ಬಿತ್ತರ ಗೊಂಡಿತ್ತು. ಅಷ್ಟೇ ಅಲ್ಲ ಅವರ ಕರೋನಾಟೆಸ್ಟ್ ವರದಿ ನಕಾರಾತ್ಮಕವಾಗಿದೆ ಎಂದು ಹೇಳಲಾಗಿತ್ತು. ಈ ಸುದ್ದಿಯೊಂದಿಗೆ ಅವರ ಅವರ ಅಭಿಮಾನಿಗಳಲ್ಲಿ ಮನದಲ್ಲಿ ಭಾರಿ ಸಂತಸ ಮನೆಮಾಡಿತ್ತು. ಆದರೆ ಇದೀಗ ಸ್ವತಃ ಅಮಿತಾಬ್ ಬಚ್ಚನ್ ಅವರೇ ತಮ್ಮ ಕೋವಿಡ್ -19 ವರದಿ ಋಣಾತ್ಮಕವಾಗಿದೆ ಎಂಬ ಅಂಶವನ್ನು ತಿರಸ್ಕರಿಸಿದ್ದಾರೆ.
ಈ ಮಾಧ್ಯಮಗಳು ಅಮಿತಾಭ್ ಬಚ್ಚನ್ ಅವರ ಸ್ವ್ಯಾಬ್ ವರದಿಗಳು ನಕಾರಾತ್ಮಕವಾಗಿವೆ ಎಂಬ ಸುದ್ದಿಯನ್ನು ಬಿತ್ತರಿಸುವಲ್ಲಿ ನಿರತವಾಗಿದ್ದವು. ಆದರೆ, ಇನ್ನೂ ಎರಡು ದಿನಗಳ ಕಾಲ ಅವರನ್ನು ಆಸ್ಪತ್ರೆಯಲ್ಲಿಯೇ ಇರಿಸಲಾಗುತ್ತಿದ್ದು, ಅವರ ಪುತ್ರ ಅಭಿಷೇಕ್ ಬಚ್ಚನ್ ಅವರನ್ನು ಇಂದು ಸಂಜೆ ಬಿಡುಗಡೆ ಮಾಡಲಾಗುತ್ತಿದೆ ಎನ್ನಲಾಗಿದೆ. ಈ ಕುರಿತು ಖುದ್ದು ಅಮಿತಾಬ್ ಬಚ್ಚನ್ ಅವರೇ ಟ್ವೀಟ್ ಮಾಡಿದ್ದು ಇದೊಂದು ಶುದ್ಧ ಸುಳ್ಳು ಹಾಗೂ ಬೇಜವಾಬ್ದಾರಿಯುತ ವರದಿಯಾಗಿದೆ ಎಂದು ಹೇಳಿದ್ದಾರೆ.
ತಮ್ಮ ಟ್ವೀಟ್ ನಲ್ಲಿ ಟಿವಿ ಚಾನೆಲ್ ವೊಂದರ ಕ್ಲಿಪ್ ಅನ್ನು ಹಂಚಿಕೊಂಡಿರುವ ಅಮಿತಾಬ್, "ಇದು ಸುಳ್ಳು ಸುದ್ದಿಯಾಗಿದೆ, ಬೇಜವಾಬ್ದಾರಿಯುತವಾಗಿದೆ, ಫೇಕ್ ಹಾಗೂ ಒಂದು ಅಳಿಸಲಾಗದ ಅಸತ್ಯವಾಗಿದೆ" ಎಂದು ಬರೆದುಕೊಂಡಿದ್ದಾರೆ.
.. this news is incorrect , irresponsible , fake and an incorrigible LIE !! https://t.co/uI2xIjMsUU
— Amitabh Bachchan (@SrBachchan) July 23, 2020
ಕಳೆದ 12 ದಿನಗಳಿಂದ ಶತಮಾನದ ಸೂಪರ್ ಸ್ಟಾರ್ ಎಂದೇ ಕರೆಯಲಾಗುವ ಅಮಿತಾಬ್ ಬಚ್ಚನ್ ಹಾಗೂ ಅವರ ಪುತ್ರ ಅಭಿಷೇಕ್ ಬಚ್ಚನ್ ಮುಂಬೈನ ನಾನಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಅವರು ಆಸ್ಪತ್ರೆಗೆ ದಾಖಲಾದ ಕೆಲವೇ ದಿನಗಳ ಬಳಿಕ ಅದೇ ಆಸ್ಪತ್ರೆಯಲ್ಲಿ ಅವರ ಸೊಸೆ ಐಶ್ವರ್ಯಾ ರೈ ಬಚ್ಚನ್ ಹಾಗೂ ಮೊಮ್ಮಗಳು ಆರಾಧ್ಯಾ ಬಚ್ಚನ್ ಅವರನ್ನು ಕೂಡ ದಾಖಲಾಗಿದ್ದಾರೆ.
ಇಂದು ತಮ್ಮ ಟ್ವಿಟ್ಟರ್ ಖಾತೆಯ ನೆರವು ಪಡೆದ ಅಮಿತಾಭ್ ಬಚ್ಚನ್, ಧಾರ್ಮಿಕತೆಯ ಪಾಠ ಹೇಳಿಕೊಟ್ಟಿದ್ದರು. ಇದಕ್ಕೆ ಸಂಬಂಧಿಸಿದಂತೆ ಫೋಟೋವೊಂದನ್ನು ಹಂಚಿಕೊಂಡಿದ್ದ ಅಮಿತಾಬ್ "ನಮ್ಮ ಎರಡು ಕೈಗಳು ಧರ್ಮ ಹೇಳಿಕೊಡುತ್ತವೆ. ಜೋಡಿಸಿದರೆ 'ಪೂಜೆ', ತೆರೆದರೆ 'ಪ್ರಾರ್ಥನೆ' ಸಲ್ಲಿಸಲು ಹೇಳುತ್ತವೆ" ಎಂದು ಬರೆದುಕೊಂಡಿದ್ದರು.