ಆಗರ್ಭ ಶ್ರೀಮಂತೆಯಾದ್ರೂ ಚಿನ್ನಾಭರಣ ಧರಿಸಲ್ಲ ʼಬಣ್ಣದ ಗೆಜ್ಜೆʼ ನಟಿ ಅಮಲಾ..! ಕಾರಣ ಇಲ್ಲಿದೆ

ಪತಿ ನಾಗಾರ್ಜುನ ಟಾಲಿವುಡ್ ಸ್ಟಾರ್ ಹೀರೋ ಅಲ್ಲದೆ ಅನ್ನಪೂರ್ಣ ಸ್ಟುಡಿಯೋ ಮುಖ್ಯಸ್ಥರಾಗಿ, ನಿರ್ಮಾಪಕರಾಗಿ, ಬಿಗ್ ಬಾಸ್ ಶೋ ನಿರೂಪಕರಾಗಿ ರಂಜಿಸುತ್ತಿದ್ದಾರೆ. ಸೋ.. ಹೊರಗಡೆ ಯಾವ ಫಂಕ್ಷನ್‌ಗಳಲ್ಲಿ ಅಮಲಾ ಕಾಣಿಸಿಕೊಂಡರೂ ತುಂಬಾ ಸಿಂಪಲ್ ಆಗಿ ಕಾಣಿಸುತ್ತಾರೆ.

Written by - Krishna N K | Last Updated : Oct 21, 2023, 03:56 PM IST
  • ನಟಿ ಅಮಲಾ ನಟ ನಾಗಾರ್ಜುನ ಪತ್ನಿ
  • ಶ್ರೀಮಂತೆಯಾದ್ರೂ ತುಂಬಾ ಸರಳ ಜೀವನ
  • ಅಮಲಾ ಚಿನ್ನಾಭರಣವನ್ನ ಧರಿಸುವುದೇ ಇಲ್ಲ
ಆಗರ್ಭ ಶ್ರೀಮಂತೆಯಾದ್ರೂ ಚಿನ್ನಾಭರಣ ಧರಿಸಲ್ಲ ʼಬಣ್ಣದ ಗೆಜ್ಜೆʼ ನಟಿ ಅಮಲಾ..! ಕಾರಣ ಇಲ್ಲಿದೆ title=

Amala Akkineni : ನಟಿ ಅಮಲಾ ಅಕ್ಕಿನೇನಿ ಅವರನ್ನು ಹೊಸದಾಗಿ ಪರಿಚಯಿಸುವ ಅಗತ್ಯವಿಲ್ಲ. ಕನ್ನಡದ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಕನ್ನಡಿಗರ ಮನಗೆದ್ದಿದ್ದಾರೆ. ಅಲ್ಲದೆ, ಸೂಪರ್‌ ಸ್ಟಾರ್‌ ನಟ ನಾಗಾರ್ಜುನ ಅಕ್ಕಿನೇನಿ ಪತ್ನಿಯೂ ಸಹ ಹೌದು. ಸಧ್ಯ ಸರಳ ಜೀವನ ನಡೆಸುವ ಅಮಲಾ ಇತ್ತೀಚಿಗೆ ತಾವು ಚಿನ್ನಾಭರಣ ಏಕೆ ಧರಿಸಲ್ಲ ಎನ್ನುವ ಕುರಿತು ಕೆಲವೊಂದಿಷ್ಟು ಇಂಟ್ರಸ್ಟಿಂಗ್‌ ಮಾಹಿತಿ ಹಂಚಿಕೊಂಡಿದ್ದಾರೆ.

ಅಕ್ಕಿನೇನಿ ಸೊಸೆಯಾಗುವ ಮುನ್ನ ಅಮಲಾ ಮುಖರ್ಜಿ ಆಗಿದ್ದರು. ಅವರ ತಂದೆ ನೌಕಾಪಡೆಯಲ್ಲಿ ಅಧಿಕಾರಿ. ಅವರ ತಾಯಿ ಐರಿಶ್. 1967 ರ ಸೆಪ್ಟೆಂಬರ್ 12 ರಂದು ಕೋಲ್ಕತ್ತಾದಲ್ಲಿ ಜನಿಸಿದರು. ಅದರ ನಂತರ, ಅವರ ತಂದೆ ಮದ್ರಾಸ್ ಪ್ರೆಸಿಡೆನ್ಸಿಗೆ ವರ್ಗಾವಣೆಯಾದರು. ಹಾಗಾಗಿ ಅಮಲಾ ಅಲ್ಲಿಯೇ ಬೆಳೆಯಬೇಕಾಯಿತು. 

ಇದನ್ನೂ ಓದಿ: ಶಾರ್ಟ್‌ ಫ್ರಾಕ್‌ ಧರಿಸಿ ಸಖತ್‌ ಪೋಸ್‌ ಕೊಟ್ಟ ಪೂಜಾ ಹೆಗ್ಡೆ..ಪೋಟೋಸ್‌ ನೋಡಿ

1986 ರಲ್ಲಿ 'ಮೈಥಿಲ್ ಎನ್ನೈ ಕಥಲಿ' ಎಂಬ ತಮಿಳು ಚಲನಚಿತ್ರದ ಮೂಲಕ ಅಮಲಾ ನಾಯಕಿಯಾಗಿ ಪಾದಾರ್ಪಣೆ ಮಾಡಿದರು. ಆ ನಂತರ ತೆಲುಗು, ಮಲಯಾಳಂ, ಕನ್ನಡ ಮತ್ತು ಹಿಂದಿಯ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. 1987 ರಲ್ಲಿ ಪುಷ್ಪಕ ವಿಮಾನ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟರು. ರವಿಚಂದ್ರನ್‌ ನಟನೆಯ ಬಣ್ಣದ ಗೆಜ್ಜೆ ಸಿನಿಮಾದ ಅಮಲಾಗೆ ಕ್ರೇಜ್‌ ತಂದು ಕೊಟ್ಟಿತು.

ತೆಲುಗು ನಟ ನಾಗಾರ್ಜುನ ಮತ್ತು ಅಮಲಾ 1992ರ ಜೂನ್ 11ರಂದು ತಿರುಪತಿಯಲ್ಲಿ ಮದುವೆಯಾದರು. ಮೊದಲು ಇಬ್ಬರ ಮದುವೆಗೆ ನಾಗಾರ್ಜುನ ತಂದೆ ನಾಗೇಶ್ವರರಾವ್ ಅಕ್ಕಿನೇನಿ ಅವರು ಒಪ್ಪಿರಲಿಲ್ಲ. ನಂತರ ದೊರಸ್ವಾಮಿರಾಜು ಅವರ ಮಧ್ಯಸ್ತಿಕೆಯಲ್ಲಿ ಮದುವೆಗೆ ಒಪ್ಪಿಗೆ ನೀಡಿದರು.

ಇದನ್ನೂ ಓದಿ: SSE Side B: ‘ಸಪ್ತ ಸಾಗರದಾಚೆ ಎಲ್ಲೋ - Side B' ರಿಲೀಸ್ ಡೇಟ್ ಫಿಕ್ಸ್!

ಅಮಲಾ ಅಕ್ಕಿನೇನಿ ಕಿರುತೆರೆ ಹಾಗೂ ವೆಬ್ ಸೀರಿಸ್‌ಗಳಲ್ಲಿ ನಟಿಸಿ ಖ್ಯಾತಿ ಗಳಿಸಿದ್ದಾರೆ. ಪತಿ ನಾಗಾರ್ಜುನ ಟಾಲಿವುಡ್ ಸ್ಟಾರ್ ಹೀರೋ ಅಲ್ಲದೆ ಅನ್ನಪೂರ್ಣ ಸ್ಟುಡಿಯೋ ಮುಖ್ಯಸ್ಥರಾಗಿ, ನಿರ್ಮಾಪಕರಾಗಿ, ಬಿಗ್ ಬಾಸ್ ಶೋ ನಿರೂಪಕರಾಗಿ ರಂಜಿಸುತ್ತಿದ್ದಾರೆ. ಸೋ.. ಹೊರಗಡೆ ಯಾವ ಫಂಕ್ಷನ್‌ಗಳಲ್ಲಿ ಅಮಲಾ ಕಾಣಿಸಿಕೊಂಡರೂ ತುಂಬಾ ಸಿಂಪಲ್ ಆಗಿ ಕಾಣಿಸುತ್ತಾರೆ.

ಮಹಿಳೆಯರಿಗೆ ಚಿನ್ನದ ಮೇಲೆ ಸ್ವಾಭಾವಿಕ ಆಸಕ್ತಿ ಇರುತ್ತದೆ. ಆದರೆ ಅಮಲಾ ಅವರು ಅದರಿಂದ ದೂರ ಉಳಿದಿದ್ದಾರೆ. ಚಿನ್ನ ಧರಿಸದೇ ಇರುವುದಕ್ಕೆ ಕಾರಣವೂ ಇದೆ. ಚಿನ್ನವನ್ನು ಧರಿಸಿದರೆ ತ್ವಚೆಯ ಸಮಸ್ಯೆಗಳು ಬರುತ್ತವೆ. ಆ ಕಾರಣದಿಂದ ನಟಿ ಕೊರಳಲ್ಲಿ ಬಂಗಾರದ ಬದಲು ಕರಿಮಣಿ ತಾಳಿಯೊಂದೆ ಕಾಣಸಿಗುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News