"Our baby coming soon.." ತಾಯಿಯಾಗ್ತಿದ್ದಾರೆ ಆಲಿಯಾ ಭಟ್‌! ಫೋಟೋ ಮೂಲಕ ಸೀಕ್ರೇಟ್‌ ರಿವೀಲ್‌

Alia Bhatt pregnant: ಅಭಿಮಾನಿಗಳಿಗೆ ಸಂತಸದ ಸುದ್ದಿಯೊಂದನ್ನು ಆಲಿಯಾ ಹಂಚಿಕೊಂಡಿದ್ದಾರೆ. ಇದೀಗ ಆಲಿಯಾ ಮತ್ತು ರಣಬೀರ್‌ ಕಪೂರ್‌ ಇಬ್ಬರೂ ಬಡ್ತಿ ಪಡೆಯುತ್ತಿದ್ದು, ಪಾಲಕರಾಗುತ್ತಿದ್ದಾರೆ. 

Written by - Chetana Devarmani | Last Updated : Jun 27, 2022, 11:35 AM IST
  • ತಾಯಿಯಾಗ್ತಿದ್ದಾರೆ ಆಲಿಯಾ ಭಟ್‌
  • ಫೋಟೋ ಮೂಲಕ ಸೀಕ್ರೇಟ್‌ ರಿವೀಲ್‌
  • ಸಂತಸದ ಸುದ್ದಿ ಹಂಚಿಕೊಂಡ ಆಲಿಯಾ
"Our baby coming soon.." ತಾಯಿಯಾಗ್ತಿದ್ದಾರೆ ಆಲಿಯಾ ಭಟ್‌! ಫೋಟೋ ಮೂಲಕ ಸೀಕ್ರೇಟ್‌ ರಿವೀಲ್‌  title=
ಆಲಿಯಾ ಭಟ್‌ 

Alia Bhatt pregnant: ನಟಿ ಆಲಿಯಾ ಭಟ್‌ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಆಕ್ಟಿವ್‌ ಆಗಿರುತ್ತಾರೆ. ಇದೀಗ ಅವರ ಅಭಿಮಾನಿಗಳಿಗೆ ಸಂತಸದ ಸುದ್ದಿಯೊಂದನ್ನು ಆಲಿಯಾ ಹಂಚಿಕೊಂಡಿದ್ದಾರೆ. ಇದೀಗ ಆಲಿಯಾ ಮತ್ತು ರಣಬೀರ್‌ ಕಪೂರ್‌ ಇಬ್ಬರೂ ಬಡ್ತಿ ಪಡೆಯುತ್ತಿದ್ದು, ಪಾಲಕರಾಗುತ್ತಿದ್ದಾರೆ. 

ಇದನ್ನೂ ಓದಿ: ಸ್ಯಾಂಡಲ್‌ವುಡ್‌ ಖ್ಯಾತ ನಿರ್ಮಾಪಕ ಸೂರಪ್ಪ ಬಾಬು ಕಾರು ಅಪಘಾತ

ಹೌದು, ಸೋಮವಾರ ನಟಿ ಆಲಿಯಾ ಭಟ್‌ ತಾಯಿಯಾಗುತ್ತಿರುವ ಸಂತೋಷದ ಸುದ್ದಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಅಲ್ಟ್ರಾಸೌಂಡ್ ಅಪಾಯಿಂಟ್‌ಮೆಂಟ್‌ನಿಂದ ಫೋಟೋವನ್ನು ಹಂಚಿಕೊಂಡ ಆಲಿಯಾ, "Our baby coming soon.." ಎಂದು ಫೋಟೋಗೆ ಶೀರ್ಷಿಕೆ ನೀಡಿದ್ದಾರೆ. ಅಲ್ಲದೇ ಸಿಂಹವೊಂದು ಸಿಂಹವನ್ನು ತಬ್ಬಿ ಹಿಡಿದು ಮರಿಯನ್ನು ನೋಡುತ್ತಿರುವ ಫೋಟೋವನ್ನು ಆಲಿಯಾ ಭಟ್‌ ಹಂಚಿಕೊಂಡಿದ್ದಾರೆ.  

 

 

ಬಾಂದ್ರಾ ಮನೆಯಲ್ಲಿ ನಡೆದ ಸಮಾರಂಭದಲ್ಲಿ ಬಾಲಿವುಡ್‌ನ ಈ ಕ್ಯೂಟ್‌ ಕಪಲ್‌ ಸಪ್ತಪದಿ ತುಳಿದರು. ಮದುವೆಯಾದ ಎರಡು ತಿಂಗಳ ನಂತರ ಆಲಿಯಾ ಪ್ರೆಗ್ನಂಟ್‌ ಆಗಿದ್ದು, ಈ ಸಂತೋಷದ ಸುದ್ದಿಯನ್ನು ಬಲು ವಿಶೇಷವಾಗಿ ಶೇರ್‌ ಮಾಡಿಕೊಂಡಿದ್ದಾರೆ. ರಣಬೀರ್ ಮತ್ತು ಆಲಿಯಾ ಈ ವರ್ಷ ಏಪ್ರಿಲ್ 14 ರಂದು ವಿವಾಹವಾದರು.

ಮದುವೆಯಾದ ನಂತರ, ದಂಪತಿಗಳು ತಮ್ಮ ಅನೇಕ ಸಿನಿಮಾ ಪ್ರಾಜೆಕ್ಟ್‌ಗಳಲ್ಲಿ ಬ್ಯಸಿಯಾಗಿದ್ದರು. ಇದರ ಮಧ್ಯೆ ಈ ಸಂತೋಷದ ಸುದ್ದಿ ಹೊರಬಂದಿದೆ. 

ಇದನ್ನೂ ಓದಿ: ʻತ್ರಿವಿಕ್ರಮʼನಿಗೆ ಕಿಚ್ಚನ ಸಾಥ್..‌ ಪ್ರೀತಿಯ ಸಹೋದರನಿಗೆ ಬೆಸ್ಟ್‌ ವಿಶಸ್‌ ತಿಳಿಸಿದ ಸುದೀಪ್‌

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News