ʼಆದಿಪುರುಷʼ ಸೋಲು..! ಪ್ರಭಾಸ್‌ ಕಮ್‌ಬ್ಯಾಕ್‌ ಮಾಡೋಕೆ ಈ ಎರಡು ಸಿನಿಮಾ ಗೆಲ್ಲಲೇಬೇಕು..

Prabhas movies : ಬಾಲಿವುಡ್ ನಿರ್ದೇಶಕ ಓಂ ರಾವುತ್ ನಿರ್ದೇಶನಕ ಆದಿಪುರುಷ ಚಿತ್ರ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಸತತ ಎರಡು ಚಿತ್ರಗಳು ಫ್ಲಾಪ್ ಆಗಿದ್ದರಿಂದ ಪ್ರಭಾಸ್ ಅಭಿಮಾನಿಗಳು ಚಿಂತೆಗೆ ಒಳಗಾಗಿದ್ದಾರೆ. ಆದ್ರೆ, ಆ ಎರಡು ಚಿತ್ರಗಳ ಮೇಲೆ ಡಾರ್ಲಿಂಗ್‌ ಪ್ಯಾನ್ಸ್‌ಗೆ ಭರವಸೆ ಇದ್ದು, ರೆಬೆಲ್‌ ಮತ್ತೆ ಕಮ್‌ಬ್ಯಾಕ್‌ ಮಾಡ್ತಾರೆ ಅಂತ ಕಾಯ್ದು ನೋಡುತ್ತಿದ್ದಾರೆ.

Last Updated : Jun 28, 2023, 05:19 PM IST
  • ಓಂ ರಾವುತ್ ನಿರ್ದೇಶನಕ ಆದಿಪುರುಷ ಚಿತ್ರ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ.
  • ಸತತ ಎರಡು ಚಿತ್ರಗಳು ಫ್ಲಾಪ್ ಆಗಿದ್ದರಿಂದ ಪ್ರಭಾಸ್ ಅಭಿಮಾನಿಗಳು ಚಿಂತೆಗೆ ಒಳಗಾಗಿದ್ದಾರೆ.
  • ರೆಬೆಲ್‌ ಮತ್ತೆ ಕಮ್‌ಬ್ಯಾಕ್‌ ಮಾಡೋಕೆ ಅವರ ಮುಂಬರುವ ಈ ಎರಡು ಸಿನಿಮಾ ಗೆಲ್ಬೇಕು.
ʼಆದಿಪುರುಷʼ ಸೋಲು..! ಪ್ರಭಾಸ್‌ ಕಮ್‌ಬ್ಯಾಕ್‌ ಮಾಡೋಕೆ ಈ ಎರಡು ಸಿನಿಮಾ ಗೆಲ್ಲಲೇಬೇಕು.. title=

Prabhas upcoming movies : ಬಾಲಿವುಡ್ ನಿರ್ದೇಶಕ ಓಂ ರಾವುತ್ ನಿರ್ದೇಶನಕ ಡಾರ್ಲಿಂಗ್‌ ಪ್ರಭಾಸ್‌ ನಟನೆಯ ಆದಿಪುರುಷ ಚಿತ್ರ ಬಾಕ್ಸ್‌ ಆಫೀಸ್‌ನಲ್ಲಿ ಸದ್ದು ಮಾಡಲು ವಿಫಲವಾಗಿದೆ. ಈ ಸಿನಿಮಾದಲ್ಲಿ ಪ್ರಭಾಸ್ ಶ್ರೀರಾಮನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು, ಕೃತಿ ಸನನ್ ಸೀತೆ ಮತ್ತು ಸೈಫ್ ಅಲಿ ಖಾನ್ ರಾವಣನಾಗಿ ನಟಿಸಿದ್ದಾರೆ. ಜೂನ್ 16 ರಂದು ವಿಶ್ವದಾದ್ಯಂತ ಬಿಡುಗಡೆಯಾಗಿತ್ತು.

ಹೌದು.. ʼಆದಿಪುರುಷʼ ಸಿನಿಮಾ ಪ್ರಭಾಸ್ ವೃತ್ತಿಜೀವನದ ಅತ್ಯಂತ ದೊಡ್ಡ ಬಜೆಟ್ ಚಿತ್ರ. ಸುಮಾರು 600 ಕೋಟಿ ವೆಚ್ಚದಲ್ಲಿ ಈ ಚಿತ್ರವನ್ನು ನಿರ್ಮಿಸಲಾಗಿದೆ. ಆದರೆ ದಿನದಿಂದ ದಿನಕ್ಕೆ ಚಿತ್ರದ ಕಲೆಕ್ಷನ್ ಭಾರೀ ಕುಸಿತ ಕಂಡಿದೆ. ಮತ್ತೊಂದೆಡೆ, ಚಿತ್ರದ ಸುತ್ತ ವಿವಾದಗಳಿವೆ. ಸಂಭಾಷಣೆಗಳು, ದೃಶ್ಯಗಳು, ಪಾತ್ರಗಳು, ಸನ್ನಿವೇಶಗಳು ಎಲ್ಲಾ ವಿವಾದಗಳನ್ನು ಪಡೆದುಕೊಂಡಿವೆ. ಕೊನೆಗೆ ಸೀತೆಯ ಜನ್ಮಸ್ಥಳವನ್ನೂ ನಿರ್ದೇಶಕರು ತಪ್ಪಾಗಿ ಬಿಂಬಿಸಿದ್ದರಿಂದ ರಾಮ ಭಕ್ತರಿಗೆ ಅವಮಾನವಾಗಿದೆ ಎಂದು ಚಲನಚಿತ್ರವನ್ನು ನಿಷೇಧಿಸುವಂತೆ ಪ್ರತಿಭಟನೆಗಳು ಸಹ ಮುಂದುವರೆದಿದೆ.

ಇದನ್ನೂ ಓದಿ: ಹೊಸ ಪ್ರಯತ್ನಕ್ಕೆ ಮುಂದಾದ ʻನಮಸ್ತೆ ಗೋಷ್ಟ್ʼ ಟೀಂ.. ರಿಲೀಸ್‌ಗೂ ಮೊದಲೇ 6000 ಜನರ ಮನಗೆದ್ದ ಮೂವಿ!

ಬಾಹುಬಲಿ ಸೂಪರ್‌ ಹಿಟ್‌ ನಂತರ, ಸಾಹೋ ಸೌತ್‌ನಲ್ಲಿ ಸ್ವಲ್ಪ ಮಟ್ಟಿಗೆ ಪ್ರದರ್ಶನ ಕಂಡಿತ್ತು. ನಂತರ ಬಿಡುಗಡೆಯಾದ ರಾಧೇಶ್ಯಾಮ್ ದೊಡ್ಡ ಪ್ಲಾಪ್‌ ನೀಡಿತ್ತು. ಇದೀಗ ಆದಿಪುರುಷ ಸಹ ಸೋತಿದ್ದು, ಪ್ರಭಾಸ್ ಮತ್ತು ಅವರ ಅಭಿಮಾನಿಗಳು ತೀವ್ರ ನಿರಾಸೆಗೊಂಡಿದ್ದಾರೆ. ಸದ್ಯ ಡಾರ್ಲಿಂಗ್‌ ಮತ್ತು ಅವರ ಅಭಿಮಾನಿಗಳ ಎಲ್ಲಾ ನಿರೀಕ್ಷೆಗಳು ಎರಡು ಚಿತ್ರಗಳ ಮೇಲೆ ಇದೆ.

ಯಸ್‌, ಪ್ರಭಾಸ್‌ ನಿರೀಕ್ಷಿತ ಸಿನಿಮಾಗಳಲ್ಲಿ, ಸಲಾರ್ ಕೂಡ ಒಂದು. ಕೆಜಿಎಫ್ ಚಿತ್ರವನ್ನು ನೀಡಿದ್ದ ಕನ್ನಡದ ಹಿಟ್ ನಿರ್ದೇಶಕ ಪ್ರಶಾಂತ್ ನೀಲ್ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಸಂಪೂರ್ಣ ಆ್ಯಕ್ಷನ್ ಥ್ರಿಲ್ಲರ್ ಆಗಿರುವ ಈ ಸಿನಿಮಾ ಹಿಟ್ ಆಗುವುದು ಎಲ್ಲರಿಗೂ ಖಚಿತವಾಗಿದೆ. 

ಇದನ್ನೂ ಓದಿ: ಶೂಟಿಂಗ್‌ ವೇಳೆ ನಟ ಪೃಥ್ವಿರಾಜ್ ಸುಕುಮಾರನ್‌ಗೆ ಗಾಯ..! ʼಸಲಾರ್ʼ ತಂಡಕ್ಕೆ ಟೆನ್ಷನ್..?

ಮತ್ತೊಂದು ಸಿನಿಮಾ ಬಿಗ್ ಬಜೆಟ್ ಹಾಗೂ ದೊಡ್ಡ ನಟರ ಜೊತೆ ತಯಾರಾಗುತ್ತಿರುವ ಪ್ರಾಜೆಕ್ಟ್ ಕೆ. ನಾಗ್ ಅಶ್ವಿನ್ ನಿರ್ದೇಶನದ ಬಿಗ್ ಬಜೆಟ್ ಚಿತ್ರ ಇದಾಗಿದೆ. ತಮಿಳು ಸೂಪರ್‌ಸ್ಟಾರ್ ಕಮಲ್ ಹಾಸನ್, ದೀಪಿಕಾ ಪಡುಕೋಣೆ, ಅಮಿತಾಬ್ ಬಚ್ಚನ್ ಮತ್ತು ದಿಶಾ ಪಟಾನಿ ಈ ಯೋಜನೆಯಲ್ಲಿ ನಟಿಸುವ ನಿರೀಕ್ಷೆಯಿದೆ.

ಅಲ್ಲದೆ, ಪ್ರಾಜೆಕ್ಟ್‌ ಕೆನಲ್ಲಿ, ಮತ್ತೊಬ್ಬ ಸ್ಟಾರ್ ನಟ ದುಲ್ಕರ್ ಸಲ್ಮಾನ್ ಕೂಡ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ದೊಡ್ಡ ತಾರಾಬಳಗ ಮತ್ತು ಬೃಹತ್ ಬಜೆಟ್‌ನ ಸಂಪೂರ್ಣ ಆಕ್ಷನ್ ಲೋಡೆಡ್ ಚಿತ್ರವಾಗಿರುವುದರಿಂದ ಹಲವಾರು ನಿರೀಕ್ಷೆಗಳು ಹೆಚ್ಚಾಗುತ್ತಿವೆ. ಬಜೆಟ್ ಕೂಡ 600 ಕೋಟಿ ಮೀರುವ ನಿರೀಕ್ಷೆ ಇದೆ. 

ಇದನ್ನೂ ಓದಿ: ಎಲ್ಲಾ ಮುಸ್ಲಿಮರು ಐಸಿಸ್ ಅಲ್ಲ.. ಎಲ್ರೂ ಲವ್ ಜಿಹಾದ್ ಮಾಡಲ್ಲ- ನಟಿ ಪ್ರಿಯಾಮಣಿ

ಈ ಸಿನಿಮಾಗಾಗಿ ಪ್ರಭಾಸ್ ಬರೋಬ್ಬರಿ 150 ಕೋಟಿ ಸಂಭಾವನೆ ತೆಗೆದುಕೊಳ್ಳುತ್ತಿದ್ದಾರಂತೆ. ಕಮಲ್ ಹಾಸನ್ 20 ಕೋಟಿ, ದೀಪಿಕಾ ಪಡುಕೋಣೆ 10 ಕೋಟಿ ಮತ್ತು ಇತರ ಸ್ಟಾರ್‌ ಕಲಾವಿದರು 20 ಕೋಟಿ ಪಡೆದಿದ್ದಾರೆ ಎಂಬ ಸುದ್ದಿ ಸೋಷಿಯಲ್‌ ಮೀಡಿಯಾದಲ್ಲಿ ಸೌಂಡ್‌ ಮಾಡಿತ್ತು. ವೈಜಯಂತಿ ಮೂವೀಸ್ ಬ್ಯಾನರ್ ಅಡಿಯಲ್ಲಿ ತಯಾರಾಗುತ್ತಿರುವ ಪ್ರಾಜೆಕ್ಟ್ ಕೆ ಸಿನಿಮಾ 2024, ಜನವರಿ 12, 2024 ರಂದು ಪ್ಯಾನ್ ಇಂಡಿಯಾ ಚಲನಚಿತ್ರವಾಗಿ ಬಿಡುಗಡೆಯಾಗಲಿದೆ. ಪ್ರಭಾಸ್ ವೃತ್ತಿ ಜೀವನಕ್ಕೆ ಈ ಸಿನಿಮಾ ತುಂಬಾ ಅಗತ್ಯ. ಸಲಾರ್ ಜೊತೆಗೆ ಪ್ರಾಜೆಕ್ಟ್‌ ಕೆ ಹಿಟ್ ಆದ್ರೆ, ರೆಬೆಲ್‌ ಇಸ್‌ ಬ್ಯಾಕ್‌ ಅಂತ ಡಾರ್ಲಿಂಗ್‌ ಪ್ಯಾನ್ಸ್‌ ಖುಷಿಯಾಗ್ತಾರೆ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News