The Kerala story : ಶಾಲಿನಿ - ಫಾತಿಮಾ ಆದ ಕತೆ..! ರೋಚಕವಾಗಿದೆ ʼದಿ ಕೇರಳ ಸ್ಟೋರಿʼ ಚಿತ್ರದ ಟ್ರೈಲರ್‌

Adah Sharma the Kerala story : ʼದಿ ಕೇರಳ ಸ್ಟೋರಿʼ ಕೇರಳದಿಂದ ನಾಪತ್ತೆಯಾದ 32 ಸಾವಿರ ಮಹಿಳೆಯರಿಗೆ ಸಂಬಂಧಿಸಿದ ಕಥಾ ಹಂದರ ಹೊಂದಿರುವ ಸಿನಿಮಾ. ಟ್ರೈಲರ್‌ನಲ್ಲಿ ಅಮಾಯಕ ಹಿಂದೂ ಹುಡುಗಿಯರನ್ನು ಹೇಗೆ ದಾರಿ ತಪ್ಪಿಸುತ್ತಾರೆ ಎಂಬುದನ್ನು ತೋರಿಸಲಾಗಿದೆ. ಹಿಜಾಬ್ ಧರಿಸಿರುವ ಹುಡುಗಿಯರು ಎಂದಿಗೂ ಅತ್ಯಾಚಾರ ಮತ್ತು ದೌರ್ಜನ್ಯಕ್ಕೆ ಒಳಗಾಗುವುದಿಲ್ಲ ಎಂದು ಅವರು ಭರವಸೆ ನೀಡುತ್ತಾರೆ. ನಂತರ ಈ ಹುಡುಗಿಯರು ಇಸ್ಲಾಂ ಧರ್ಮವನ್ನು ಸ್ವೀಕರಿಸುತ್ತಾರೆ. 

Written by - Krishna N K | Last Updated : Apr 27, 2023, 04:06 PM IST
  • ʼದಿ ಕೇರಳ ಸ್ಟೋರಿʼ ಕೇರಳದಿಂದ ನಾಪತ್ತೆಯಾದ 32 ಸಾವಿರ ಮಹಿಳೆಯರ ಕಥೆ.
  • ನಟಿ ಅದಾ ಶರ್ಮಾ ನಟನೆಯ ಬಹುನಿರೀಕ್ಷಿತ ʼದಿ ಕೇರಳ ಸ್ಟೋರಿʼ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ.
  • ಟ್ರೈಲರ್‌ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಅದಾ ನಟನೆಗೆ ನೆಟ್ಟಿಗರು ಫಿದಾ ಆಗಿದ್ದಾರೆ.
The Kerala story : ಶಾಲಿನಿ - ಫಾತಿಮಾ ಆದ ಕತೆ..! ರೋಚಕವಾಗಿದೆ ʼದಿ ಕೇರಳ ಸ್ಟೋರಿʼ ಚಿತ್ರದ ಟ್ರೈಲರ್‌ title=

The Kerala story trailer :  ಬಾಲಿವುಡ್‌ ನಟಿ ಅದಾ ಶರ್ಮಾ ನಟನೆಯ ಬಹುನಿರೀಕ್ಷಿತ ʼದಿ ಕೇರಳ ಸ್ಟೋರಿʼ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದ್ದು, ಸಾಕಷ್ಟು ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಸಿನಿಮಾದಲ್ಲಿ ಅದಾ ಶಾಲಿನಿ ಉನ್ನಿಕೃಷ್ಣನ್ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಹಿಂದೂ ಕುಟುಂಬಕ್ಕೆ ಸೇರಿದ ಶಾಲಿನಿ ಫಾತಿಮಾ ಆದ ರೋಚಕ ಕಥೆ ಮತ್ತು ಫಾತಿಮಾ ಸುತ್ತ ನಡೆಯುವ ಘಟನೆಯನ್ನು ಟ್ರೈಲರ್‌ನಲ್ಲಿ ತೋರಿಸಲಾಗಿದೆ. ಆದ್ರೆ, ಈ ಕಥೆ ಕೇವಲ ಶಾಲಿನಿಯದ್ದಲ್ಲ. ಬದಲಿಗೆ ಕೇರಳದಿಂದ ನಾಪತ್ತೆಯಾದ ಆಕೆಯಂತಹ 32 ಸಾವಿರ ಯುವತಿಯರ ದಂತಕಥೆ.

ಹೌದು.. ʼದಿ ಕೇರಳ ಸ್ಟೋರಿʼ ಕೇರಳದಿಂದ ನಾಪತ್ತೆಯಾದ 32 ಸಾವಿರ ಮಹಿಳೆಯರಿಗೆ ಸಂಬಂಧಿಸಿದ ಕಥಾ ಹಂದರ ಹೊಂದಿರುವ ಸಿನಿಮಾ. ನರ್ಸ್‌ ಆಗಲು ಬಯಸಿದ್ದ ಕೇರಳದ ಹಿಂದೂ ಮತ್ತು ಕ್ರಿಶ್ಚಿಯನ್ ಯುವತಿಯರನ್ನು ಲವ್ ಜಿಹಾದ್‌ನ ಹೆಸರಿನಲ್ಲಿ ಮುಸಲ್ಮಾನರನ್ನಾಗಿಸಿ ಐಸಿಸ್‌ನ ಭಯೋತ್ಪಾದಕ ಹೆಸರನ್ನು ತಳುಕು ಹಾಕಿಕೊಂಡ ಹುಡುಗಿಯರ ಕಥೆ ಇದು. ಈ ಸಿನಿಮಾ 5 ಮೇ 2023 ರಂದು ದೇಶಾದ್ಯಂತ ಬಿಡುಗಡೆಯಾಗಲಿದೆ. ಸುದೀಪ್ತೋ ಸೇನ್ ನಿರ್ಮಿಸಿರುವ ಈ ಚಿತ್ರವನ್ನು, ವಿಪುಲ್ ಅಮೃತಲಾಲ್ ಶಾ ನಿರ್ದೇಶನ ಮಾಡಿದ್ದಾರೆ.

ಇದನ್ನೂ ಓದಿ: ಸೀರಿಯಲ್ ಲೋಕಕ್ಕೆ ಕಾಲಿಟ್ಟ ನೇಹಾ ಗೌಡ ರಿಯಲ್‌ ಪತಿ ಚಂದನ್ ಗೌಡ, ಹೇಗಿದೆ ನೋಡಿ ಪಾತ್ರ!

ಈ ಸಿನಿಮಾದಲ್ಲಿ ಅದಾ ಶರ್ಮಾ, ಯೋಗಿತಾ ಬಿಹಾನಿ, ಸೋನಿಯಾ ಬಾನಿ, ಸಿದ್ಧಿ ಇದ್ನಾನಿ ಮುಖ್ಯ ಭೂಮಿಕೆಯಲ್ಲಿದ್ದಾರೆ. ಹಿಂದಿ, ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿ ಚಿತ್ರ ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ಅದಾ ಶಾಲಿನಿ ಉನ್ನಿಕೃಷ್ಣನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹಿಂದೂ ಕುಟುಂಬಕ್ಕೆ ಸೇರಿದ ಶಾಲಿನಿ ಹೇಗೆ ಫಾತಿಮಾ ಆಗುತ್ತಾಳೆ, ನಂತರ ಆಕೆಯನ್ನು ಭಯೋತ್ಪಾಕಿ ಎಂದು ಬಿಂಬಿಸುವ ದೃಶ್ಯಗಳು ಟ್ರೇಲರ್‌ನಲ್ಲಿವೆ.

 

ಟ್ರೈಲರ್‌ನಲ್ಲಿ ಅಮಾಯಕ ಹಿಂದೂ ಹುಡುಗಿಯರನ್ನು ಹೇಗೆ ದಾರಿ ತಪ್ಪಿಸುತ್ತಾರೆ ಎಂಬುದನ್ನು ತೋರಿಸಲಾಗಿದೆ. ಅವರನ್ನು ಬ್ರೈನ್ ವಾಶ್ ಮಾಡುವ ಮೂಲಕ ಅಲ್ಲಾಹನಿಗೆ ಹತ್ತಿರವಾಗಿಸುತ್ತಾರೆ. ಹಿಜಾಬ್ ಧರಿಸಿರುವ ಹುಡುಗಿಯರು ಎಂದಿಗೂ ಅತ್ಯಾಚಾರ ಮತ್ತು ದೌರ್ಜನ್ಯಕ್ಕೆ ಒಳಗಾಗುವುದಿಲ್ಲ ಎಂದು ಅವರು ಭರವಸೆ ನೀಡುತ್ತಾರೆ. ನಂತರ ಈ ಹುಡುಗಿಯರು ಇಸ್ಲಾಂ ಧರ್ಮವನ್ನು ಸ್ವೀಕರಿಸುತ್ತಾರೆ. ನಂತರ ಅವರನ್ನು ಐಸಿಸ್ ಭಯೋತ್ಪಾದಕರ ನಡುವೆ ನಿಲ್ಲುವಂತೆ ಮಾಡುವುದು ಟ್ಟೈಲರ್‌ನಲ್ಲಿದೆ.

ಇದನ್ನೂ ಓದಿ: ಬಿಸ್‌ ಬಾಸ್‌ 8 ವಿನ್ನರ್‌ ಮಂಜು ಪಾವಗಡ ಧಾರಾವಾಹಿಗೆ ಎಂಟ್ರಿ, ಏನಿದರ ಕಥೆ?

ಈ ಕಥೆ ಕೇವಲ ಶಾಲಿನಿಯದ್ದಲ್ಲ. ಬದಲಿಗೆ ಕೇರಳದಿಂದ ನಾಪತ್ತೆಯಾಗಿರುವ ಆಕೆಯಂತಹ 32 ಸಾವಿರ ಮಹಿಳೆಯರು. ಟ್ರೈಲರ್‌ನ ಕೊನೆಯಲ್ಲಿ, ನನ್ನಂತಹ ಸಾವಿರಾರು ಹುಡುಗಿಯರು ತಮ್ಮ ಮನೆಯಿಂದ ಓಡಿಹೋಗಿ ಈ ಮರುಭೂಮಿಯಲ್ಲಿ ಸಮಾಧಿಯಾಗಿದ್ದಾರೆ ಅದಾ ಶರ್ಮಾ ಹೇಳುತ್ತಾರೆ. ಇದನ್ನು ಗಮನಿಸಿದಾಗ ಇದೊಂದು ಮತಾಂತರಕ್ಕೆ ಬಲಿಯಾದ ಯುವತಿಯರಿಗೆ ಸಂಬಂಧಪಟ್ಟ ಸಿನಿಮಾ ಅಂತ ತಿಳಿಯುತ್ತದೆ. ಸದ್ಯ ʼದಿ ಕೇರಳ ಸ್ಟೋರಿʼ ಟ್ರೈಲರ್‌ ನೋಡಿದ ನೆಟ್ಟಿಗರು ಇಷ್ಟಪಟ್ಟಿದ್ದಾರೆ. ಅದಾ ಅಭಿನಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. 

 ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News