Priyanka Chopra daughter : ಮಗಳ ಮುದ್ದಾದ ಫೋಟೋ ಹಂಚಿಕೊಂಡ ನಟಿ ಪ್ರಿಯಾಂಕಾ ಚೋಪ್ರಾ

Priyanka Chopra daughter : ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಾಸ್ ಈ ವರ್ಷದ ಆರಂಭದಲ್ಲಿ ಬಾಡಿಗೆ ತಾಯ್ತನದ ಮೂಲಕ ಹೆಣ್ಣು ಮಗುವನ್ನು ಸ್ವಾಗತಿಸಿದರು. ಅವರು ತಮ್ಮ ಪುಟ್ಟ ಮಗುವಿಗೆ ಮಾಲ್ತಿ ಮೇರಿ ಚೋಪ್ರಾ ಜೊನಾಸ್ ಎಂದು ಹೆಸರಿಟ್ಟಿದ್ದಾರೆ. ಮಾಲ್ತಿ ಇತ್ತೀಚಿನ ದಿನಗಳಲ್ಲಿ ಹೆಚ್ಚು ಸುದ್ದಿಯಲ್ಲಿರುವ ಸ್ಟಾರ್ ಕಿಡ್ ಆಗಿದ್ದಾಳೆ. 

Written by - Chetana Devarmani | Last Updated : Nov 23, 2022, 02:24 PM IST
  • ವಿಶ್ವ ಸುಂದರಿ ಕಿರೀಟ ಧರಿಸುವ ಮೂಲಕ ಭಾರತಕ್ಕೆ ಹೆಮ್ಮೆ ತಂದಿದ್ದ ಪ್ರಿಯಾಂಕಾ ಚೋಪ್ರಾ
  • ಇವರ ಬ್ಯೂಟಿ ಮತ್ತು ಅಭಿನಯದ ಮೂಲಕ ಹಾಲಿವುಡ್‌ಗೂ ಪ್ರವೇಶಿಸಿದರು
  • ಮಗಳ ಮುದ್ದಾದ ಫೋಟೋ ಹಂಚಿಕೊಂಡ ನಟಿ ಪ್ರಿಯಾಂಕಾ ಚೋಪ್ರಾ
Priyanka Chopra daughter : ಮಗಳ ಮುದ್ದಾದ ಫೋಟೋ ಹಂಚಿಕೊಂಡ ನಟಿ ಪ್ರಿಯಾಂಕಾ ಚೋಪ್ರಾ title=
ಪ್ರಿಯಾಂಕಾ ಚೋಪ್ರಾ

Priyanka Chopra daughter : ವಿಶ್ವ ಸುಂದರಿ ಕಿರೀಟ ಧರಿಸುವ ಮೂಲಕ ಭಾರತಕ್ಕೆ ಹೆಮ್ಮೆ ತಂದಿದ್ದ ಪ್ರಿಯಾಂಕಾ ಚೋಪ್ರಾ ನಂತರ ಬಾಲಿವುಡ್ ಚಿತ್ರರಂಗಕ್ಕೆ ಕಾಲಿಟ್ಟರು. ಇವರ ಬ್ಯೂಟಿ ಮತ್ತು ಅಭಿನಯದ ಮೂಲಕ ಹಾಲಿವುಡ್‌ಗೂ ಪ್ರವೇಶಿಸಿದರು.  ಹಾಲಿವುಡ್‌ನಲ್ಲೂ ಸೈ ಎನಿಸಿಕೊಂಡರು. ಪ್ರಿಯಾಂಕಾ ಚೋಪ್ರಾ ಅವರಿಗೆ ವಿಶ್ವದಾದ್ಯಂತ ಲಕ್ಷಾನುಗಟ್ಟಲೆ ಫ್ಯಾನ್ಸ್‌ ಇದ್ದಾರೆ. ನಟನೆಯಲ್ಲಿ ಸಾಕಷ್ಟು ಹೆಸರು ಮಾಡಿದ ಬಳಿಕ ನಟಿ ಪ್ರಿಯಾಂಕಾ ಚೋಪ್ರಾ ಅವರು ತಮಗಿಂತ ಕಿರಿಯ ವಯಸ್ಸಿನ ನಿಕ್‌ ಜೋನಾಸ್‌ ಅವರನ್ನು ಮದುವೆಯಾದರು.

ಇದನ್ನೂ ಓದಿ : Disha Salian Suicide: ಸಿಬಿಐ ತನಿಖೆಯಲ್ಲಿ ಸುಶಾಂತ್ ಮ್ಯಾನೇಜರ್ ದಿಶಾ ಸಾವಿನ ರಹಸ್ಯ ಬಯಲು!

ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಾಸ್ ಈ ವರ್ಷದ ಆರಂಭದಲ್ಲಿ ಬಾಡಿಗೆ ತಾಯ್ತನದ ಮೂಲಕ ಹೆಣ್ಣು ಮಗುವನ್ನು ಸ್ವಾಗತಿಸಿದರು. ಅವರು ತಮ್ಮ ಪುಟ್ಟ ಮಗುವಿಗೆ ಮಾಲ್ತಿ ಮೇರಿ ಚೋಪ್ರಾ ಜೊನಾಸ್ ಎಂದು ಹೆಸರಿಟ್ಟಿದ್ದಾರೆ. ಮಾಲ್ತಿ ಇತ್ತೀಚಿನ ದಿನಗಳಲ್ಲಿ ಹೆಚ್ಚು ಸುದ್ದಿಯಲ್ಲಿರುವ ಸ್ಟಾರ್ ಕಿಡ್ ಆಗಿದ್ದಾಳೆ. ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಾಸ್ ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಮಾಲ್ತಿ ಮೇರಿಯ ಕ್ಯೂಟ್‌ ಲುಕ್‌ಗಳನ್ನು ಆಗಾಗ ಹಂಚಿಕೊಳ್ಳುತ್ತಿರುತ್ತಾರೆ. ಇದೀಗ ಪ್ರಿಯಾಂಕಾ ಚೋಪ್ರಾ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಮಾಲ್ತಿಯ ಫೋಟೋವನ್ನು ಹಂಚಿಕೊಂಡಿದ್ದಾರೆ. 

Priyanka Chopra daughter

ನಟಿ ಪ್ರಿಯಾಂಕಾ ಚೋಪ್ರಾ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಮಾಲ್ತಿ ಮೇರಿ ಚೋಪ್ರಾ ಜೋನಾಸ್ ಅವರ ಫೋಟೋವನ್ನು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಕಾರಿನಲ್ಲಿ ಬೇಬಿ ಸೀಟಿನಲ್ಲಿ ಮಾಲ್ತಿ ಮಲಗಿದ್ದಾಳೆ ಎಂದು ತೋರುತ್ತದೆ. ವೂಲನ್‌ ಟೋಪಿಯನ್ನು ಅವಳ ಕಣ್ಣುಗಳ ಮೇಲೆ ಎಳೆದಿದ್ದಾರೆ. ಈ ಮುದ್ದಾದ ಮಗುವಿನ ಮುಖದ ಮೇಲೆ ಸೂರ್ಯನ ಕಿರಣಗಳು ಬಿದ್ದಿದ್ದು, ಸಖತ್‌ ಕ್ಯೂಟ್‌ ಆಗಿ ಕಾಣುತ್ತಿದೆ. ಮಾಲ್ತಿ ಗಾಢ ನಿದ್ದೆಯಲ್ಲಿರುವಂತೆ ತೋರುತ್ತಿದೆ.

ಇದನ್ನೂ ಓದಿ :  ವೈಷ್ಣವಿಗೌಡ ಮದುವೆ ನಿಶ್ಚಯ : ಸನ್ನಿಧಿ ಕೈಹಿಡಿಯಲಿದ್ದಾನೆ ಈ ಹೀರೋ..!

ಮಾಲ್ತಿ ಅವರ ಈ ಕ್ಯೂಟ್‌ ಫೋಟೋವನ್ನು ನೀವು ನೋಡುವುದನ್ನು ನಿಲ್ಲಿಸುವುದೇ ಇಲ್ಲ. ಮಾಲ್ತಿ ಈ ಫೋಟೋದಲ್ಲಿ ತುಂಬಾ ಶಾಂತಿಯುತವಾಗಿ ಮತ್ತು ಸುಂದರವಾಗಿ ಕಾಣುತ್ತಿದ್ದಾಳೆ. ಆದರೆ ಅವಳ ಪೂರ್ಣ ಮುಖವನ್ನು ಈ ಫೋಟೋದಲ್ಲಿ ನೋಡಲಾಗಲಿಲ್ಲ. ಆದರೂ ಈ ಕ್ಯೂಟ್‌ ಬೇಬಿಯ ಫೋಟೋ ಎಲ್ಲರ ಮನಗೆಲ್ಲುತ್ತಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News