The Vaccine War: ಸಪ್ತಮಿ ಗೌಡ ನಟನೆಯ ಹಿಂದಿ ಸಿನಿಮಾ ಶೂಟಿಂಗ್‌ ವೇಳೆ ಅವಘಡ, ನಟಿಗೆ ಗಾಯ!

Actress Pallavi Joshi injured : 'The Vaccine War' ಸಿನಿಮಾದಲ್ಲಿ ಕನ್ನಡದ ಕಾಂತಾರ ಸಿನಿಮಾದ ಚೆಲುವೆ ಸಪ್ತಮಿ ಗೌಡ ನಾಯಕಿಯಾಗಿ ನಟಿಸುತ್ತಿದ್ದಾರೆ. ಚಿತ್ರದ ಶೂಟಿಂಗ್ ಹೈದರಾಬಾದ್‌ನಲ್ಲಿ ನಡೆಯುತ್ತಿದೆ. ಇತ್ತೀಚಿನ ವರದಿಯ ಪ್ರಕಾರ, ಚಿತ್ರದ ಸೆಟ್‌ನಲ್ಲಿ ನಟಿಯೊಬ್ಬರು ಗಾಯಗೊಂಡಿದ್ದಾರೆ. 

Written by - Chetana Devarmani | Last Updated : Jan 17, 2023, 12:14 PM IST
  • ದಿ ವ್ಯಾಕ್ಸಿನ್‌ ವಾರ್‌ ಸಿನಿಮಾ ಶೂಟಿಂಗ್‌
  • ಸಿನಿಮಾ ಶೂಟಿಂಗ್‌ ವೇಳೆ ಅವಘಡ
  • ಚಿತ್ರದ ಸೆಟ್‌ನಲ್ಲಿ ಗಾಯಗೊಂಡ ನಟಿ
The Vaccine War: ಸಪ್ತಮಿ ಗೌಡ ನಟನೆಯ ಹಿಂದಿ ಸಿನಿಮಾ ಶೂಟಿಂಗ್‌ ವೇಳೆ ಅವಘಡ, ನಟಿಗೆ ಗಾಯ! title=

Pallavi Joshi Injured : ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ದಿ ಕಾಶ್ಮೀರ ಫೈಲ್ಸ್‌ ಗಲ್ಲಾಪೆಟ್ಟಿಗೆಯಲ್ಲಿ ಸಾಕಷ್ಟು ಸದ್ದು ಮಾಡಿದ ಸಿನಿಮಾ. ಈ ಚಿತ್ರದಲ್ಲಿ ಅವರ ಪತ್ನಿ ಪಲ್ಲವಿ ಜೋಶಿ, ಅನುಪಮ್ ಖೇರ್ ಮತ್ತು ಇತರರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. 'ಕಾಶ್ಮೀರ ಫೈಲ್ಸ್' ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಮತ್ತು ನಿರ್ಮಾಪಕ ಅಭಿಷೇಕ್ ಅಗರ್ವಾಲ್ ಈಗ ತಮ್ಮ ಮುಂದಿನ ಸಿನಿಮಾದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ರಾಷ್ಟ್ರೀಯ ಪ್ರಶಸ್ತಿ ವಿಜೇತ ನಟಿ ಮತ್ತು ವಿವೇಕ್ ಅಗ್ನಿಹೋತ್ರಿ ಅವರ ಪತ್ನಿ ಪಲ್ಲವಿ ಜೋಶಿ ಈ ಚಿತ್ರದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದ್ದಾರೆ. 'The Vaccine War' ಸಿನಿಮಾದಲ್ಲಿ ಕನ್ನಡದ ಕಾಂತಾರ ಸಿನಿಮಾದ ಚೆಲುವೆ ಸಪ್ತಮಿ ಗೌಡ ನಾಯಕಿಯಾಗಿ ನಟಿಸುತ್ತಿರುವುದು ಗಮನಾರ್ಹ. 

ಚಿತ್ರದ ಶೂಟಿಂಗ್ ಹೈದರಾಬಾದ್‌ನಲ್ಲಿ ನಡೆಯುತ್ತಿದೆ. ಇತ್ತೀಚಿನ ವರದಿಯ ಪ್ರಕಾರ, ಪಲ್ಲವಿ ಜೋಶಿ ಚಿತ್ರದ ಸೆಟ್‌ನಲ್ಲಿ ಗಾಯಗೊಂಡಿದ್ದಾರೆ. ಮಾಹಿತಿಯ ಪ್ರಕಾರ, ಶೂಟಿಂಗ್ ಸಮಯದಲ್ಲಿ, ಒಂದು ಕಾರು ಕಂಟ್ರೋಲ್‌ ತಪ್ಪಿ ಪಲ್ಲವಿ ಜೋಶಿ ಅವರಿಗೆ ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್‌ ಪಲ್ಲವಿ ಜೋಶಿ ಹೆಚ್ಚು ಗಂಭೀರವಾಗಿ ಗಾಯಗೊಂಡಿಲ್ಲ ಎಂದು ಮೂಲಗಳು ತಿಳಿಸಿವೆ. ಕಾರು ಅವರಿಗೆ ಗುದ್ದಿದ ಬಳಿಕವೂ, ಪಲ್ಲವಿ ಅವರು ಶಾಟ್‌ ಅನ್ನು ಪೂರ್ಣಗೊಳಿಸಿ ನಂತರ ಆಸ್ಪತ್ರೆಗೆ ತೆರಳಿದ್ದಾರೆ. ಆಸ್ಪತ್ರೆಯಲ್ಲಿ ಪಲ್ಲವಿ ಜೋಶಿಗೆ ವೈದ್ಯರು ಚಿಕಿತ್ಸೆ ನೀಡಿದ್ದು, ಚಿಂತಿಸುವ ಅಗತ್ಯವಿಲ್ಲ ಎಂದಿದ್ದಾರೆ. 

ಇದನ್ನೂ ಓದಿ : Jr NTR with Cricketers : ಜೂ.ಎನ್‌ಟಿಆರ್‌ ಜೊತೆ ಟೀಂ ಇಂಡಿಯಾ ಆಟಗಾರರು.. ಈ ಭೇಟಿಯ ವಿಶೇಷವೇನು?

ದಿ ವ್ಯಾಕ್ಸಿನ್‌ ವಾರ್‌ ಸಿನಿಮಾ ಆಗಸ್ಟ್ 15, 2023 ರಂದು ಬಿಡುಗಡೆಯಾಗುವ ನಿರೀಕ್ಷೆಯಿದೆ. ಇತ್ತೀಚೆಗೆ ವಿವೇಕ್ ಅಗ್ನಿಹೋತ್ರಿ ಅವರು ಈ ಚಿತ್ರದ ನಾಯಕಿಯಾಗಿ ಸ್ಯಾಂಡವ್‌ವುಡ್‌ ನಟಿ ಸಪ್ತಮಿ ಗೌಡ ಅವರನ್ನು ಆಯ್ಕೆ ಮಾಡಿದರು. ರಿಷಬ್ ಶೆಟ್ಟಿಯವರ ಕಾಂತಾರಾದಲ್ಲಿ ಸಪ್ತಮಿಯ ಅಂದ ಮತ್ತು ಅಭಿನಯಕ್ಕೆ ಅನೇಕರು ಮಾರು ಹೋಗಿದ್ದಾರೆ.  

ವರದಿಯ ಪ್ರಕಾರ, ಈ ಚಿತ್ರವು ವಿಶ್ವದ ಅತ್ಯಂತ ಪರಿಣಾಮಕಾರಿ ಲಸಿಕೆಯನ್ನು ಅಭಿವೃದ್ಧಿಪಡಿಸಲು ಶ್ರಮಿಸಿದ ಭಾರತೀಯ ವಿಜ್ಞಾನಿಗಳ ಕಥೆಯನ್ನು ನಿರೂಪಿಸುತ್ತದೆ. ಕಠಿಣ ಸಮಯದ ಮಧ್ಯೆ ಜಾಗತಿಕ ಉತ್ಪಾದಕರಿಂದ ಬರುವ ಒತ್ತಡದಿಂದ ವಿಜ್ಞಾನಿಗಳು ಪಟ್ಟ ಕಷ್ಟವನ್ನು ತೋರಿಸಲಿದೆ. ಈ ಚಿತ್ರವು 11 ವಿವಿಧ ಭಾಷೆಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ. 

ಇದನ್ನೂ ಓದಿ : Puneeth Rajkumar: ಅಪ್ಪನ ಜನ್ಮ ದಿನಕ್ಕೆ ಕೊಡಗಿನಲ್ಲಿ ಹುಣಸೆ ಗಿಡ ನೆಟ್ಟಿದ್ರು ಪುನೀತ್‌!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News