ʼಈʼ ಖ್ಯಾತ ಸೌತ್‌ ನಟನೊಂದಿಗೆ ಪ್ರೀತಿಯಲ್ಲಿ ಬಿದ್ದ ಮೃಣಾಲ್ ಠಾಕೂರ್.. ಶೀಘ್ರದಲ್ಲೇ ಮದುವೆ?

Actress Mrunal Thakur: ನಟಿ ಮೃಣಾಲ್ ಠಾಕೂರ್ ಅವರ ಹೆಸರಿಗೆ ವಿಶೇಷ ಪರಿಚಯ ಅಗತ್ಯವಿಲ್ಲ. ಈ ಚೆಲುವೆ ತನ್ನ ಸೌಂದರ್ಯ ಮತ್ತು ನಟನೆಯಿಂದಲೂ ಅಭಿಮಾನಿಗಳನ್ನು ಆಕರ್ಷಿಸುತ್ತಿದ್ದಾರೆ.

Written by - Savita M B | Last Updated : Jul 26, 2024, 01:51 PM IST
  • ಸದ್ಯ ಈಕೆ ಸ್ಟಾರ್ ಹೀರೋ ಜೊತೆ ಪ್ರೀತಿಯಲ್ಲಿ ಬಿದ್ದಿರುವ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ
  • ಲವ್ ಅಫೇರ್ ಸದ್ದು ಮಾಡುತ್ತಿರುವಾಗ ಹೀರೋ ಯಾರು ಎಂದು ನೆಟ್ಟಿಗರು ಚರ್ಚಿಸುತ್ತಿದ್ದಾರೆ.
 ʼಈʼ ಖ್ಯಾತ ಸೌತ್‌ ನಟನೊಂದಿಗೆ ಪ್ರೀತಿಯಲ್ಲಿ ಬಿದ್ದ ಮೃಣಾಲ್ ಠಾಕೂರ್.. ಶೀಘ್ರದಲ್ಲೇ ಮದುವೆ? title=

Mrunal Thakur: ಸೀತಾರಾಮನ್‌ ಸಿನಿಮಾದ ನಂತರ ರೌಡಿ ಸ್ಟಾರ್ ವಿಜಯ್ ದೇವರಕೊಂಡ ಜೊತೆ ಪರಶುರಾಮ್ ನಿರ್ದೇಶನದಲ್ಲಿ ಫ್ಯಾಮಿಲಿ ಸ್ಟಾರ್ ಸಿನಿಮಾ ಮಾಡಿದರು. ಈ ಸಿನಿಮಾ ನಿರೀಕ್ಷಿತ ಹಿಟ್ ಆಗದಿದ್ದರೂ ಮೃಣಾಲ್ ಅಭಿನಯಕ್ಕೆ ಒಳ್ಳೆ ಮಾರ್ಕ್ಸ್ ಸಿಕ್ಕಿದೆ. ಡಾರ್ಲಿಂಗ್ ಪ್ರಭಾಸ್ ಜೊತೆ ಸಿನಿಮಾ ಮಾಡುವ ಸಾಧ್ಯತೆ ಇದೆ ಎಂಬ ವರದಿಗಳು ಬಂದಿದ್ದು, ಇದರಲ್ಲಿ ಎಷ್ಟು ಸತ್ಯಾಂಶವಿದೆಯೋ ಗೊತ್ತಿಲ್ಲ.

 ಸದ್ಯ ಈಕೆ ಸ್ಟಾರ್ ಹೀರೋ ಜೊತೆ ಪ್ರೀತಿಯಲ್ಲಿ ಬಿದ್ದಿರುವ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಶೀಘ್ರದಲ್ಲೇ ಇಬ್ಬರೂ ಮದುವೆಯಾಗಲಿದ್ದಾರೆ ಎಂಬುದು ಸುದ್ದಿಯ ಸಾರಾಂಶ. ಕೆಲ ಸಮಯದ ಹಿಂದೆ ಮೃಣಾಲ್ ತೆಲುಗು ಸ್ಟಾರ್ ಹೀರೋ ಜೊತೆ ಲವ್ ಮಾಡುತ್ತಿದ್ದಾಳೆ ಎಂಬ ಸುದ್ದಿ ಬಂದಿತ್ತು ಆದರೆ ಈ ನಟಿ ಅದಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಆಕೆಯಿಂದ ಯಾವುದೇ ಪ್ರತಿಕ್ರಿಯೆ ಬಾರದೆ ಇದ್ದುದರಿಂದ ಎಲ್ಲರೂ ಈ ಸುದ್ದಿ ನಿಜ ಎಂದುಕೊಂಡರು.. ಸದ್ಯ ಈಕೆಯ ಲವ್ ಅಫೇರ್ ಸದ್ದು ಮಾಡುತ್ತಿರುವಾಗ ಹೀರೋ ಯಾರು ಎಂದು ನೆಟ್ಟಿಗರು ಚರ್ಚಿಸುತ್ತಿದ್ದಾರೆ.

ಇದನ್ನೂ ಓದಿ-ಬೆಡ್‌ ಮೇಲೆ ಆ ರೀತಿ ಮಾಡುವುದು ಸ್ವಲ್ಪ ಕಷ್ಟ, ನಾನು ಅಳುತ್ತಿದ್ದೆ..! ನಟಿ ಅಂಜಲಿ ಹೇಳಿಕೆ ವೈರಲ್‌

 ಇನ್ನು ನಟಿ ಸೀರೆಯುಟ್ಟುಕೊಂಡಿರುವ ಫೋಟೋಗಳನ್ನು ಶೇರ್ ಮಾಡುತ್ತಾ, ಸಿನಿಮಾಗಳಲ್ಲಿ ತುಂಬಾ ಸಾಂಪ್ರದಾಯಿಕವಾಗಿ ಕಾಣುವ ಮೃಣಾಲ್, ಕಡಿಮೆ ಬಟ್ಟೆ ತೊಟ್ಟಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. 

ಇತ್ತೀಚೆಗೆ, ಅವರು ಸೀರೆಯಲ್ಲಿ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದರೊಂದಿಗೆ ನೆಟಿಜನ್‌ಗಳೆಲ್ಲರೂ ಮದುವೆ ಸದ್ಯದಲ್ಲೇ ನಡೆಯಲಿದೆ ಎಂದು ಖಚಿತಪಡಿಸುತ್ತಿದ್ದಾರೆ.. ಅದಕ್ಕಾಗಿಯೇ ಇಂತಹ ಫೋಟೋಗಳ ಮೂಲಕ ಸುಳಿವು ನೀಡುತ್ತಿದ್ದಾರೆ ಎನ್ನಲಾಗ್ತಿದೆ..  

ಇದನ್ನೂ ಓದಿ-ಯುವ ಪಡೆ ಹೃದಯವನ್ನ ತಲ್ಲಣಗೊಳಿಸುತ್ತಿದೆ ತಮನ್ನಾ ಸೊಗಸು..! ಫೋಟೋಸ್‌ ಇಲ್ಲಿವೆ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 

Trending News