ಬಾಲಿವುಡ್ ನಟಿ ಕಂಗನಾ ರಣಾವತ್ ಮದುವೆ..! ‘ರಾಣಿ’ಯ ವರಿಸುವ ವರನ್ಯಾರು ಗೊತ್ತಾ?

kangana ranaut marriage: ಮಣಿಕರ್ಣಿಕ, ಫ್ಯಾಷನ್, ಕ್ವೀನ್ ಹೀಗೆ ಅನೇಕ ಸಿನಿಮಾಗಳಿವೆ. ಈ ಎಲ್ಲಾ ಸಿನಿಮಾಗಳನ್ನು ಆಯ್ಕೆ ಮಾಡುವಾಗ ಆಕೆ ವಹಿಸುವ ಆಸಕ್ತಿ ಎಂಥವರನ್ನೂ ನಿಬ್ಬೆರಗುಗೊಳಿಸದಿರದು.

Written by - Bhavishya Shetty | Last Updated : Oct 6, 2023, 06:08 PM IST
    • ಬಾಲಿವುಡ್ ಖ್ಯಾತ ನಟಿ ಕಂಗನಾ ರಣಾವತ್ ಮದುವೆ ಬಗ್ಗೆ ಗುಸುಗುಸು
    • ಎರಡು ಬಾರಿ ರಾಷ್ಟ್ರ ಪ್ರಶಸ್ತಿ ಪಡೆದಿರುವ ನಟಿ ಕಂಗನಾ
    • ಬಾಲಿವುಡ್ ಫಿಟ್ನೆಸ್ ಹಂಕ್ ಜಾನ್ ಅಬ್ರಹಾಂ ಬಗ್ಗೆ ವಿಶೇಷ ಮಾತುಗಳನ್ನಾಡಿದ್ದಾರೆ
ಬಾಲಿವುಡ್ ನಟಿ ಕಂಗನಾ ರಣಾವತ್ ಮದುವೆ..! ‘ರಾಣಿ’ಯ ವರಿಸುವ ವರನ್ಯಾರು ಗೊತ್ತಾ? title=
kangana ranaut

Actress Kangana Ranaut: ಬಾಲಿವುಡ್ ಖ್ಯಾತ ನಟಿ ಕಂಗನಾ ರಣಾವತ್ ಮದುವೆ ಬಗ್ಗೆ ಅವರ ಅಭಿಮಾನಿಗಳಿಗೆ ಸಾಕಷ್ಟು ಕುತೂಹಲವಿದೆ. ಇನ್ನು ನಟಿ ಕಂಗನಾ ಅಭಿನಯ ಎಂಥಾ ವೈಶಿಷ್ಟ್ಯ ಉಳ್ಳದು, ಅವರ ನಟನೆಯಲ್ಲಿರುವ ಪಕ್ವತೆ ಎಂತಹದ್ದು ಎಂಬುದನ್ನು ಅವರು ನಟಿಸಿದ ಪ್ರತೀ ಸಿನಿಮಾಗಳು ಹೇಳುತ್ತವೆ.

ಉದಾಹರಣೆಗೆ ಮಣಿಕರ್ಣಿಕ, ಫ್ಯಾಷನ್, ಕ್ವೀನ್ ಹೀಗೆ ಅನೇಕ ಸಿನಿಮಾಗಳಿವೆ. ಈ ಎಲ್ಲಾ ಸಿನಿಮಾಗಳನ್ನು ಆಯ್ಕೆ ಮಾಡುವಾಗ ಆಕೆ ವಹಿಸುವ ಆಸಕ್ತಿ ಎಂಥವರನ್ನೂ ನಿಬ್ಬೆರಗುಗೊಳಿಸದಿರದು.

ಇದನ್ನೂ ಓದಿ: ವಿಶ್ವಕಪ್ ಸೆಮಿಫೈನಲ್ ಪ್ರವೇಶಿಸಲಿರುವ 4 ತಂಡಗಳನ್ನು ಹೆಸರಿಸಿದ ಸಚಿನ್ ತೆಂಡೂಲ್ಕರ್

ಎರಡು ಬಾರಿ ರಾಷ್ಟ್ರ ಪ್ರಶಸ್ತಿ ಪಡೆದಿರುವ ನಟಿ ಕಂಗನಾ ಇದೀಗ ಸಿನಿಮಾ ಬದಲಾಗಿ, ರಾಜಕೀಯದತ್ತ ಹೆಚ್ಚಾಗಿ ಗಮನ ಹರಿಸುತ್ತಿದ್ದಾರೆ. ಆದರೆ ಈ ಎಲ್ಲದರ ಮಧ್ಯೆ ಅವರ ಮದುವೆ ಗಾಸಿಪ್ ಕೂಡ ಮುನ್ನೆಲೆಗೆ ಬಂದಿದೆ.

ಇದೀಗ ನಟಿ ಕಂಗನಾ ರಣಾವತ್, ಬಾಲಿವುಡ್ ಫಿಟ್ನೆಸ್ ಹಂಕ್ ಜಾನ್ ಅಬ್ರಹಾಂ ಬಗ್ಗೆ ವಿಶೇಷ ಮಾತುಗಳನ್ನಾಡಿದ್ದಾರೆ. ಇತ್ತೀಚಿಗೆ ಬಿಡುಗಡೆಯಾದ ಪಠಾಣ್ ಸಿನಿಮಾದಲ್ಲಿ ನಟ ಜಾನ್ ಅಬ್ರಹಾಂ ನಟಿಸಿದ್ದರು. ಈ ಸಂದರ್ಭದಲ್ಲಿ ಲವ್ ಯೂ ಜಾನ್ ಎಂದು ನಟಿ ಪೋಸ್ಟ್ ಹಾಕಿದ್ದರು. ನಟಿಯ ಈ ಪೋಸ್ಟ್ ನೋಡಿ ಇವರಿಬ್ಬರೂ ಮದುವೆಯಾಗುತ್ತಾರಾ ಎನ್ನುವ ಚರ್ಚೆ ಇದೀಗ ಪ್ರಾರಂಭವಾಗಿದೆ.

ಜಾನ್ ಅಬ್ರಹಾಂ ಅವರ ಪೆಟಾ ಇಂಡಿಯಾ ಅಭಿಯಾನದ ಫೋಟೋ ಹಾಕಿ “ಸಿನಿಮಾ ಇಂಡಸ್ಟ್ರಿಯಲ್ಲಿರುವ ಕೆಟ್ಟ ಜನರ ಬಗ್ಗೆ ನಾನು ಮಾತನಾಡಿರಬಹುದು. ಆದರೆ ಅಲ್ಲಿ ಕೆಲವು ಒಳ್ಳೆಯ ಮಂದಿ, ಪ್ರೇರಣಾತ್ಮಕವಾಗಿವರೂ ಇದ್ದಾರೆ. ಅವರ ಬಗ್ಗೆ ಹೇಳಲೇಬೇಕು. ನಾನು ಜಾನ್ ಅಬ್ರಹಾಂ ಜೊತೆ ಕೆಲಸ ಮಾಡಿದ್ದೇನೆ. ಅವರು ಎಷ್ಟು ಅದ್ಭುತ ವ್ಯಕ್ತಿ ಎಂದು ಹೇಳಲು ನನಗೆ ಪದಗಳೇ ಸಾಲುತ್ತಿಲ್ಲ. ಈ ವಿಷಯ ಬಹಳಷ್ಟು ಜನರಿಗೆ ಗೊತ್ತಿರಲು ಸಾಧ್ಯವಿಲ್ಲ. ಇದಕ್ಕೆ ಕಾರಣ ಜಾನ್ ಅವರನ್ನು ಹೊಗಳಲು ಯಾವ ಮಾಧ್ಯಮಕ್ಕೂ ಹಣ ಕೊಡುವುದಿಲ್ಲ” ಎಂದಿದ್ದಾರೆ.

“ಅವರು ತುಂಬಾ ಕರುಣಾಮಯಿ. ಮದುವೆ ಇಲ್ಲ, ಸಂಬಂಧ ಇಲ್ಲ. ಇನ್ನೊಬ್ಬರ ಕುರಿತು ನೆಗೆಟಿವ್ ಮಾತನಾಡಲು ಹಣವನ್ನು ನೀಡುವುದಿಲ್ಲ. ದೌರ್ಜನ್ಯವಿಲ್ಲ. ಮಹಿಳೆಯರನ್ನು ದುರುಪಯೋಗಪಡಿಸಿಕೊಳ್ಳುವುದಿಲ್ಲ. ಅಜೆಂಡಾ, ಗ್ರೂಪಿಸಂ ಇಲ್ಲ, ಅವರು ಅದ್ಭುತ ವ್ಯಕ್ತಿ. ಲವ್ ಯೂ ಜಾನ್” ಎಂದಿದ್ದಾರೆ.

ಇದನ್ನೂ ಓದಿ: ವಿಶ್ವಕಪ್ ಪಂದ್ಯಗಳಿಗೆ ಆತಿಥ್ಯ ವಹಿಸುವ ಸ್ಟೇಡಿಯಂಗಳಲ್ಲಿ ಫ್ರೀ ಆಗಿ ಸಿಗಲಿದೆ ಈ ವಸ್ತು!

ಈ ಪೋಸ್ಟ್ ಹಾಕಿದ್ದೇ ತಡ… ಅವರ ಅಭಿಮಾನಿಗಳು ಕಂಗನಾ ಅವರಿಗೆ ಜಾನ್ ಅಬ್ರಹಾಂ ಮೇಲೆ ಲವ್ ಆದಂತಿದೆ ಎಂದು ಕಮೆಂಟ್ ಮಾಡುತ್ತಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News