ಹೇಮಾ ಮಾಲಿನಿಗೆ ಸೀರೆಯ ಪಿನ್‌ ತೆಗೆಯಲು ಕೇಳಿದ್ದ ಡೈರೆಕ್ಟರ್‌! ಡ್ರೀಮ್‌ ಗರ್ಲ್‌ಗೂ ಕಾಸ್ಟಿಂಗ್ ಕೌಚ್?

Hema Malini: ಡ್ರೀಮ್ ಗರ್ಲ್‌ ಹೇಮಾ ಮಾಲಿನಿ, ಸಿನಿಮಾ ನಿರ್ದೇಶಕರೊಬ್ಬರು ತಮ್ಮ ಸೀರೆಯ ಪಲ್ಲುನಿಂದ ಪಿನ್ ಅನ್ನು ತೆಗೆಯಲು ತಿಳಿಸಿದ್ದರು ಎಂದು ಹೇಳಿದರು. 

Written by - Chetana Devarmani | Last Updated : Jul 11, 2023, 03:46 PM IST
  • ಹಿಂದಿ ಚಿತ್ರರಂಗದ ಹಿರಿಯ ನಟಿ ಹೇಮಾ ಮಾಲಿನಿ
  • ಹೇಮಾ ಮಾಲಿನಿಗೂ ಆಗಿತ್ತು ಕಾಸ್ಟಿಂಗ್ ಕೌಚ್.!
  • ಸೀರೆಯ ಸೆರೆಗಿನ ಪಿನ್‌ ತೆಗೆಯಲು ಕೇಳಿದ್ದ ಡೈರೆಕ್ಟರ್‌!
ಹೇಮಾ ಮಾಲಿನಿಗೆ ಸೀರೆಯ ಪಿನ್‌ ತೆಗೆಯಲು ಕೇಳಿದ್ದ ಡೈರೆಕ್ಟರ್‌! ಡ್ರೀಮ್‌ ಗರ್ಲ್‌ಗೂ ಕಾಸ್ಟಿಂಗ್ ಕೌಚ್?  title=
Hema Malini

Hema Malini: ಹಿಂದಿ ಚಿತ್ರರಂಗದ ಹಿರಿಯ ನಟಿ ಹೇಮಾ ಮಾಲಿನಿ. ಇತ್ತೀಚೆಗಷ್ಟೇ ಹೇಮಾ ಮಾಲಿನಿ ಸಂದರ್ಶನವೊಂದರಲ್ಲಿ ಚಿತ್ರದ ನಿರ್ದೇಶಕರೊಬ್ಬರಿಂದ ತನಗಾದ ಮುಜುಗರದ ಬಗ್ಗೆ ಕರಾಳ ಸತ್ಯವನ್ನು ತೆರೆದಿಟ್ಟಿದ್ದಾರೆ. ಡ್ರೀಮ್ ಗರ್ಲ್‌ ಹೇಮಾ ಮಾಲಿನಿ, ಸಿನಿಮಾ ನಿರ್ದೇಶಕರೊಬ್ಬರು ತಮ್ಮ ಸೀರೆಯ ಪಲ್ಲುನಿಂದ ಪಿನ್ ಅನ್ನು ತೆಗೆಯಲು ತಿಳಿಸಿದ್ದರು ಎಂದು ಹೇಳಿದರು. 

ಹೇಮಾ ಮಾಲಿನಿ ಇತ್ತೀಚೆಗೆ ಸಂದರ್ಶನವನ್ನು ನೀಡಿದ್ದಾರೆ. ನಿರ್ದೇಶಕರೊಬ್ಬರು ತಮ್ಮ ಸೀರೆಯ ಪಲ್ಲು ಪಿನ್ ಅನ್ನು ತೆಗೆಯಲು ಬಯಸಿದ್ದರು ಎಂದು ಹೇಮಾ ಮಾಲಿನಿ ಹೇಳಿದರು. 'ಅವರು ಕೆಲವು ರೀತಿಯ ದೃಶ್ಯವನ್ನು ಚಿತ್ರೀಕರಿಸಲು ಬಯಸಿದ್ದರು. ನಾನು ಯಾವಾಗಲೂ ನನ್ನ ಸೀರೆಯ ಸೆರಗನ್ನು ಪಿನ್ ಮಾಡುತ್ತೇನೆ. ಪಿನ್ ತೆಗೆಯಲು ಡೈರೆಕ್ಟರ್‌ ಹೇಳಿದರು. ಆಗ ನಾನು ಸೀರೆ ಕೆಳಗೆ ಬೀಳುತ್ತದೆ ಎಂದೆ, ಆಗ ಡೈರೆಕ್ಟರ್‌ ಇದೇ ನಮಗೆ ಬೇಕು ಎಂದರು ಅಂತ ಹೇಮಾ ಮಾಲಿನಿ ಹೇಳಿದ್ದಾರೆ. 

ಇದನ್ನೂ ಓದಿ: Viral Video: "ನಾನು ಸುಶಾಂತ್‌ ಸಿಂಗ್‌, ನನ್ನನ್ನು ಕೊಂದಿದ್ದಾರೆ" ಮಹಿಳೆಯ ಮೇಲೆ ಬಂದ ನಟನ 'ಆತ್ಮ' ಬಿಚ್ಚಿಟ್ಟ ಸಾವಿನ ರಹಸ್ಯ!?

ರಾಜ್ ಕಪೂರ್‌ ಜೊತೆ ಸತ್ಯಂ ಶಿವಂ ಸುಂದರಂ ಸಿನಿಮಾದಲ್ಲಿ ನಟಿಸುವ ಆಫರ್ ಬಂದಿತ್ತು, ಆದರೆ ಅಂತಹ ಸಿನಿಮಾದಲ್ಲಿ ನಟಿಸಲ್ಲ ಎಂದು ರಿಜೆಕ್ಟ್‌ ಮಾಡಿದ್ದಾಗಿ ಹೇಳಿದ್ದಾರೆ. ರಾಜ್ ಕಪೂರ್ ತಮ್ಮ ಬಳಿ ಬಂದು ಚಿತ್ರದ ಬಗ್ಗೆ ಹೇಳಿದ್ದರು ಎಂದು ಹೇಮಾ ಮಾಲಿನಿ ಹೇಳಿದ್ದಾರೆ.  

ಹೇಮಾ ಭಾರತೀಯ ಚಲನಚಿತ್ರೋದ್ಯಮದಲ್ಲಿ ಅತ್ಯಂತ ಸುಂದರ ಮತ್ತು ಗೌರವಾನ್ವಿತ ನಟಿಯರಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ. ಅವರು 1963 ರಲ್ಲಿ ತಮಿಳು ಚಲನಚಿತ್ರ ‘ಇಧು ಸತ್ಯಂ’ ಮೂಲಕ ಉದ್ಯಮಕ್ಕೆ ಪದಾರ್ಪಣೆ ಮಾಡಿದರು. ಸುಮಾರು 150 ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಎರಡು ಚಲನಚಿತ್ರಗಳನ್ನು ನಿರ್ದೇಶಿಸಿದ್ದಾರೆ. 2020 ರಲ್ಲಿ ಅವರು ಚಲನಚಿತ್ರವೊಂದರಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡರು. ಪ್ರಸ್ತುತ ಮಥುರಾದ ಬಿಜೆಪಿ ಸಂಸದೆಯಾಗಿದ್ದಾರೆ.

ಇದನ್ನೂ ಓದಿ:Photos: ಸುಡುತಿರುವ ಸಾರಂಗಿ.. ಬಿಕಿನಿಯಲ್ಲಿ ನಮೃತಾ ಗೌಡ ಸೌಂದರ್ಯ ಕಂಡು ಬೆವರಿದ ಪಡ್ಡೆಹೈಕ್ಳು 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News