ಮನಸಾರೆ ಜೋಡಿ ಐಂದ್ರಿತಾ-ದಿಗಂತ್​​ ಮದುವೆ ಡೇಟ್ ಫಿಕ್ಸ್! ಯಾವತ್ತು ಗೊತ್ತಾ?

 “ನನ್ನ ಬೆಸ್ಟ್ ಫ್ರೆಂಡ್ ನನ್ನು ಮದುವೆಯಾಗುತ್ತಿರುವುದಕ್ಕೆ ತುಂಬಾ ಉತ್ಸುಕಳಾಗಿದ್ದೇನೆ” ಎಂದು ಐಂದ್ರಿತಾ ರೇ ಸಂತಸದಿಂದ ಹೇಳಿಕೊಂಡಿದ್ದಾರೆ. 

Last Updated : Nov 21, 2018, 10:56 AM IST
ಮನಸಾರೆ ಜೋಡಿ ಐಂದ್ರಿತಾ-ದಿಗಂತ್​​ ಮದುವೆ ಡೇಟ್ ಫಿಕ್ಸ್! ಯಾವತ್ತು ಗೊತ್ತಾ? title=

ಬೆಂಗಳೂರು: ಕಳೆದ 8 ವರ್ಷಗಳಿಂದ ಮನಸಾರೆ ಪ್ರೀತಿಸುತ್ತಿದ್ದ ಸ್ಯಾಂಡಲ್ ವುಡ್ ನಟಿ ಐಂದ್ರಿತಾ ರೇ ಮತ್ತು ದೂದ್ ಪೇಡ ದಿಗಂತ್ ಮದುವೆ ಕೊನೆಗೂ ಫಿಕ್ಸ್ ಆಗಿದೆ. ಇದುವರೆಗೂ ಪ್ರೇಮಿಗಳಾಗಿಡ್ಡ ಈ ಜೋಡಿ ಈಗ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.

ಹಲವು ದಿನಗಳಿಂದ ಯಾರ ಕಣ್ಣಿಗೂ ಕಾಣಿಸಿಕೊಳ್ಳದೆ ಇದ್ದ ಈ ಜೋಡಿ ಇದೀಗ ಮದುವೆ ದಿನಾಂಕ ನಿಗದಿಯಾಗಿರುವುದನ್ನು ಬಹಿರಂಗಪಡಿಸಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅಧಿಕೃತವಾಗಿ ತಮ್ಮ ಮದುವೆಯ ಬಗ್ಗೆ ಬಿಚ್ಚಿಟ್ಟಿದ್ದಾರೆ. ಇದೇ ಡಿಸೆಂಬರ್ 11 ಮತ್ತು 12 ರಂದು ಮದುವೆ ನಡೆಯಲಿದೆ. ಡಿಸೆಂಬರ್ 15 ರಂದು ಆಪ್ತರು ಹಾಗೂ ಚಿತ್ರರಂಗದ ಗಣ್ಯರಿಗಾಗಿ ಔತಣಕೂಟ ಏರ್ಪಡಿಸಲಾಗಿದೆ. “ನನ್ನ ಬೆಸ್ಟ್ ಫ್ರೆಂಡ್ ನನ್ನು ಮದುವೆಯಾಗುತ್ತಿರುವುದಕ್ಕೆ ತುಂಬಾ ಉತ್ಸುಕಳಾಗಿದ್ದೇನೆ” ಎಂದು ಐಂದ್ರಿತಾ ರೇ ಸಂತಸದಿಂದ ಹೇಳಿಕೊಂಡಿದ್ದಾರೆ. 

2009ರಲ್ಲಿ ತೆರೆಕಂಡ 'ಮನಸಾರೆ' ಚಿತ್ರದಲ್ಲಿ ಒಟ್ಟಿಗೆ ನಟಿಸುವ ಮೂಲಕ ದಿಗಂತ್ ಮತ್ತು ಐಂದ್ರಿತಾ ಪರಿಚಯವಾಗಿದ್ದು. ನಂತರ 2012ರ 'ಪಾರಿಜಾತ' ಚಿತ್ರದಲ್ಲೂ ಈ ಜೋಡಿಯ ತೆರೆ ಮೇಲಿನ ರೊಮ್ಯಾನ್ಸ್ ಮುಂದುವರಿದಿತ್ತು. ಆ ಬಳಿಕ ಹೆಚ್ಚು ಸಿನಿಮಾಗಳಲ್ಲಿ ಒಟ್ಟಿಗೆ ಕಾಣಿಸಿಕೊಳ್ಳದಿದ್ದರೂ ಈ ಜೋಡಿಯ ತೆರೆ ಹಿಂದಿನ ಕೆಮಿಸ್ಟ್ರಿ ಮಾತ್ರ ಮುಂದುವರಿದಿತ್ತು. ಅದನ್ನು 'ಶಾರ್ಪ್ ಶೂಟರ್' ಸಿನಿಮಾದಲ್ಲೂ ನೋಡಬಹುದು. 

Trending News