ಲಾಕ್‌ಡೌನ್ ಸಮಯದಲ್ಲಿ ಆಹಾರವೂ ಸಿಗಲಿಲ್ಲ.. ಭಿಕ್ಷೆ ಬೇಡಿ ಬದುಕುತ್ತಿದ್ದೇವು..! ರಿಯಲ್‌ ಹೀರೋ ವಿಜಯ್‌..

Devarakonda Foundation : ರೌಡಿ ಬೇಬಿ ವಿಜಯ್ ದೇವರಕೊಂಡ ಸಾಕಷ್ಟು ನೋವು, ಸಂಕಷ್ಟಗಳನ್ನು ಎದುರಿಸಿ ತಳ ಮಟ್ಟದಿಂದ ಬಂದು ಇಂದು ಪ್ಯಾನ್‌ ಇಂಡಿಯಾ ಸ್ಟಾರ್‌ ಆಗಿ ಗುರುತಿಸಿಕೊಂಡಿದ್ದಾರೆ. ಇತ್ತೀಚಿಗೆ ಕಲ್ಕಿ 2898 ಎಡಿ ಸಿನಿಮಾದ ಮೂಲಕ ತೆರೆ ಮೇಲೆ ಮಿಂಚಿದ್ದ ನಟನ ಹೃಂದಯವಂತಿಕೆ ಕೆಲಸ ಇದೀಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.. 

Written by - Krishna N K | Last Updated : Jul 12, 2024, 07:05 PM IST
    • ನಟ ವಿಜಯ್‌ ದೇವರಕೊಂಡ ಪ್ಯಾನ್‌ ಇಂಡಿಯಾ ಸ್ಟಾರ್‌ ಆಗಿ ಗುರುತಿಸಿಕೊಂಡಿದ್ದಾರೆ.
    • ತಳಮಟ್ಟದಿಂದ ಬಂದ ನಟ ಇಂದು ಇಂಡಿಯಾ ಲೆವೆಲ್‌ನಲ್ಲಿ ಖ್ಯಾತಿ ಪಡೆದಿದ್ದಾರೆ.
    • ನಟನ ಹೃಂದಯವಂತಿಕೆ ಕೆಲಸ ಇದೀಗ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ..
ಲಾಕ್‌ಡೌನ್ ಸಮಯದಲ್ಲಿ ಆಹಾರವೂ ಸಿಗಲಿಲ್ಲ.. ಭಿಕ್ಷೆ ಬೇಡಿ ಬದುಕುತ್ತಿದ್ದೇವು..! ರಿಯಲ್‌ ಹೀರೋ ವಿಜಯ್‌.. title=
Vijay Deverakonda

Actor Vijay devarakonda social services : ನಟ ವಿಜಯ್ ದೇವರಕೊಂಡ ಆಹಾದಲ್ಲಿ ಪ್ರಸಾರವಾಗುವ ತೆಲುಗು ಇಂಡಿಯನ್ ಐಡಲ್ ಸೀಸನ್ 3 ನಲ್ಲಿ ಅತಿಥಿಯಾಗಿ ಕಾಣಿಸಿಕೊಂಡಿದ್ದರು. ಈ ವೇಳೆ ವೇದಿಕೆಯ ಮೇಲೆ ಅನಿರೀಕ್ಷಿತ ಘಟನೆಯೊಂದು ನಡೆಯಿತು. ವಿಜಯ್ ದೇವರಕೊಂಡ ಅವರು ಲಾಕ್‌ಡೌನ್ ಸಮಯದಲ್ಲಿ ತಮ್ಮ ಸಂಸ್ಥೆಯಾದ ದೇವರಕೊಂಡ ಫೌಂಡೇಶನ್ ಮೂಲಕ ಸುಮಾರು 6 ಸಾವಿರ ಕುಟುಂಬಗಳಿಗೆ ಸಹಾಯ ಮಾಡಿದ್ದರು. 

ಆ ಸಮಯದಲ್ಲಿ ಹಲವು ಕುಟುಂಬಗಳು ಜೀವನ ನಿರ್ವಹಣೆಗೆ ಕಷ್ಟಪಡುತ್ತಿದ್ದವು. ಉದ್ಯೋಗದ ಕೊರತೆಯಿಂದ ಕುಟುಂಬ ನಿರ್ವಹಣೆ ಕಷ್ಟವಾಯಿತು. ಸೋನುಸೂದ್, ಚಿರಂಜೀವಿ ಮುಂತಾದ ತಾರೆಯರು ತಮ್ಮದೇ ಶೈಲಿಯಲ್ಲಿ ಸಹಾಯಹಸ್ತ ಚಾಚಿದ್ದರು. ಈ ಪೈಕಿ ವಿಜಯ್ ದೇವರಕೊಂಡ ಅವರು ತಮ್ಮ ಫೌಂಡೇಶನ್ ಮೂಲಕ ಸಹಾಯ ಮಾಡಿದರು. ನಟನಿಂದ ಸಹಾಯ ಪಡೆದವರಲ್ಲಿ ತೃತೀಯಲಿಂಗಿಗಳೂ ಇದ್ದರು. 

ಇದನ್ನೂ ಓದಿ:ಬಿಗ್‌ ಬಾಸ್ ಚೆಲುವೆ ಜೊತೆ ಸ್ಟಾರ್‌ ನಟ ಅಫೇರ್‌... ದಿನಕ್ಕೆ 50 ಸಾವಿರ..! ಶಾಕಿಂಗ್‌ ವಿಚಾರ ರಿವೀಲ್‌

ವಿಜಯ್ ದೇವರಕೊಂಡ ಅವರ ಸಹಾಯ ಪಡೆದ ಕೆಲವು ಕುಟುಂಬಗಳೊಂದಿಗೆ ಇಂಡಿಯನ್ ಐಡಲ್ ವೇದಿಕೆಯಲ್ಲಿ ಟ್ರಾನ್ಸ್ಜೆಂಡರ್ ವ್ಯಕ್ತಿಯೂ ಕಾಣಿಸಿಕೊಂಡರು. ತೃತೀಯಲಿಂಗಿ ವಿಜಯ್ ದೇವರಕೊಂಡ ಬಗ್ಗೆ ಮಾತನಾಡುತ್ತಾ ಭಾವುಕರಾಗಿ ಕಣ್ಣೀರು ಹಾಕಿದರು. 

No description available.

ಈ ವೇಳೆ ಅವರು, 'ಸರ್ ನಾನೊಬ್ಬ ತೃತೀಯಲಿಂಗಿ.. ಎರಡು ವರ್ಷಗಳಿಂದ ನಿಮಗೆ ಧನ್ಯವಾದ ಹೇಳಲು ಕಾಯುತ್ತಿದ್ದೆ. ಲಾಕ್‌ಡೌನ್ ಸಮಯದಲ್ಲಿ ನಮಗೆ ಆಹಾರವೂ ಸಿಗಲಿಲ್ಲ. ಭಿಕ್ಷೆ ಬೇಡಿ ಬದುಕುತ್ತಿದ್ದೇವು. ಆ ಸಮಯದಲ್ಲಿ ನಾನು ಸಹಾಯಕ್ಕಾಗಿ ನಿಮ್ಮ ಪೌಂಡೇಶನ್‌ಗೆ ಅರ್ಜಿ ಸಲ್ಲಿಸಿದ ತಕ್ಷಣ ನನಗೆ ಫೋನ್ ಕರೆ ಬಂತು. 

ಇದನ್ನೂ ಓದಿ:ನನ್ನ ನೋಡ್ಬೇಕು ಅಂದ್ರೆ ಅದನ್ನ ತೋರಿಸಬೇಕು..! ಸಂಸದೆ ಕಂಗನಾ ಹೊಸ ರೂಲ್ಸ್‌

ತಕ್ಷಣ ಸಹಾಯ ಮಾಡಿದರು. ನನ್ನ ಜೊತೆಗೆ 18 ಟ್ರಾನ್ಸ್‌ಜೆಂಡರ್‌ಗಳು ನಿಮ್ಮ ಫೌಂಡೇಶನ್ ಮೂಲಕ ಸಹಾಯ ಪಡೆದಿದ್ದಾರೆ ಅಂತ ಕಣ್ಣೀರಿಟ್ಟರು.. ಆಗ ವಿಜಯ್ ಕೂಡ ಅವರನ್ನು ನೋಡಿ ಭಾವುಕರಾದರು. ಅಲ್ಲದೆ, ನಮ್ಮ ಪೌಂಡೇಶನ್‌ಗೆ ಅನೇಕರು 500, 1000 ಕಳುಹಿಸಿದ್ದಾರೆ. ಅವರೆಲ್ಲರಿಂದ ಇದು ಸಾಧ್ಯವಾಯ್ತು ಅಂತ ಹೇಳಿದರು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News