ಅನ್ಯಧರ್ಮಿಯ ಆಗಿದ್ದರೂ ತಾಯಿಗಾಗಿ ಸಾಯಿ ಬಾಬಾ ಮಂದಿರ ಕಟ್ಟಿದ ನಟ ವಿಜಯ್‌..! 

Actor Vijay news : ನಟ ವಿಜಯ್, ಮೂಲತಃ ಕ್ರಿಶ್ಚಿಯನ್ ಆಗಿದ್ದರೂ, ಎಲ್ಲಾ ಧರ್ಮಗಳನ್ನು ಒಂದೇ ಬೆಳಕಿನಲ್ಲಿ ನೋಡುತ್ತಾರೆ. ಆದರೆ ಅವರು ಹೆಚ್ಚು ದೇವಸ್ಥಾನಕ್ಕೆ ಹೋಗುವವರಲ್ಲ ಅಥವಾ ಯಾವುದೇ ಧರ್ಮವನ್ನು ಅನುಸರಿಸುವವನಲ್ಲ. ಆದರೆ ಇದೀಗ ಸಾಯಿಬಾಬಾ ಮಂದಿರದಲ್ಲಿ ಭಕ್ತರೊಂದಿಗೆ ಪೋಸ್ ನೀಡಿರುವ ಫೋಟೋವೊಂದು ಅಂತರ್ಜಾಲದಲ್ಲಿ ವೈರಲ್ ಆಗಿದೆ. 

Written by - Krishna N K | Last Updated : Apr 10, 2024, 08:23 PM IST
    • ನಟ ವಿಜಯ್ ಪ್ರಸ್ತುತ ತಮಿಳು ಚಿತ್ರರಂಗದ ಟಾಪ್ ಹೀರೋಗಳಲ್ಲಿ ಒಬ್ಬರು.
    • ಜಕೀಯಕ್ಕೆ ಪ್ರವೇಶ ಮಾಡಿರುವ ಅವರು ಸ್ವಃತ ಪಕ್ಷವನ್ನು ಕಟ್ಟಿದ್ದಾರೆ.
    • ವಿಜಯ್‌ ತಮ್ಮ ತಾಯಿಗೆ ದೇವಸ್ಥಾನ ಕಟ್ಟಿಸಿದ್ದಾರೆ ಎಂದು ವರದಿಯಾಗಿದೆ.
ಅನ್ಯಧರ್ಮಿಯ ಆಗಿದ್ದರೂ ತಾಯಿಗಾಗಿ ಸಾಯಿ ಬಾಬಾ ಮಂದಿರ ಕಟ್ಟಿದ ನಟ ವಿಜಯ್‌..!  title=

Actor Vijay built temple for his mother : ನಟ ವಿಜಯ್ ಪ್ರಸ್ತುತ ತಮಿಳು ಚಿತ್ರರಂಗದ ಟಾಪ್ ಹೀರೋಗಳಲ್ಲಿ ಒಬ್ಬರು. ಸದ್ಯ GOAT ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅಲ್ಲದೆ, ರಾಜಕೀಯಕ್ಕೆ ಪ್ರವೇಶ ಮಾಡಿರುವ ಅವರು ಸ್ವಃತ ಪಕ್ಷವನ್ನು ಕಟ್ಟಿದ್ದಾರೆ. ಇದೀಗ ವಿಜಯ್‌ ತಮ್ಮ ತಾಯಿಗೆ ದೇವಸ್ಥಾನ ಕಟ್ಟಿಸಿದ್ದಾರೆ ಎಂದು ವರದಿಯಾಗಿದೆ.

ಹೌದು... ನಟ ವಿಜಯ್, ಮೂಲತಃ ಕ್ರಿಶ್ಚಿಯನ್ ಆಗಿದ್ದರೂ, ಎಲ್ಲಾ ಧರ್ಮಗಳನ್ನು ಒಂದೇ ಬೆಳಕಿನಲ್ಲಿ ನೋಡುತ್ತಾರೆ. ಆದರೆ ಅವರು ಹೆಚ್ಚು ದೇವಸ್ಥಾನಕ್ಕೆ ಹೋಗುವವರಲ್ಲ ಅಥವಾ ಯಾವುದೇ ಧರ್ಮವನ್ನು ಅನುಸರಿಸುವವನಲ್ಲ. ಆದರೆ ಇದೀಗ ಸಾಯಿಬಾಬಾ ಮಂದಿರದಲ್ಲಿ ಭಕ್ತರೊಂದಿಗೆ ಪೋಸ್ ನೀಡಿರುವ ಫೋಟೋವೊಂದು ಅಂತರ್ಜಾಲದಲ್ಲಿ ವೈರಲ್ ಆಗಿದೆ. 

ಇದನ್ನೂ ಓದಿ:ಹಣ ಪಡೆಯದೇ ʼರಾಮಾಯಣʼ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ರಾಕಿಂಗ್‌ ಸ್ಟಾರ್‌ ಯಶ್‌..! ಏಕೆ ಗೊತ್ತೆ

ನಟ ವಿಜಯ್ ತಾಯಿ ಶೋಭಾ ಅವರಿಗೆ ಸಾಯಿಬಾಬಾ ಮೇಲೆ ಅಪಾರ ನಂಬಿಕೆ ಇದೆ ಎನ್ನಲಾಗಿದೆ. ಹೀಗಾಗಿ, ಅವರು ತಮ್ಮ ತಾಯಿಗಾಗಿ ಚೆನ್ನೈನ ಅಂಬತ್ತೂರು ಪುರಸಭೆಯ ಕೊರತ್ತೂರಿನಲ್ಲಿ ಸಾಯಿಬಾಬಾ ದೇವಾಲಯವನ್ನು ನಿರ್ಮಿಸಿದ್ದಾರೆ ಎಂದು ಹೇಳಲಾಗುತ್ತದೆ. 

ವಿಜಯ್ ಅವರು ನಿರ್ಮಿಸಿದ್ದಾರೆ ಎನ್ನಲಾದ ಸಾಯಿಬಾಬಾ ಮಂದಿರದ ಕುಂಬಾಭಿಷೇಕ ಫೆಬ್ರವರಿ 11 ರಂದು ಪೂರ್ಣಗೊಂಡಿದೆ. ಈ ಕುಂಭಾಭಿಷೇಕ ಸಮಾರಂಭದಲ್ಲಿ ನಟ ವಿಜಯ್, ಬಸ್ಸಿ ಆನಂದ್, ವಿಜಯ್ ತಾಯಿ ಶೋಭಾ ಮತ್ತಿತರರು ಭಾಗವಹಿಸಿದ್ದರು ಎಂದು ತಿಳಿದು ಬಂದಿದೆ.. 

ಇದನ್ನೂ ಓದಿ:ವಿಜಯ್‌ ದೇವರಕೊಂಡ ಕೊನೆಯ ಬಾರಿಗೆ S*X ಮಾಡಿದ್ದು ಯಾವಾಗ.. ಯಾರ್‌ ಜೊತೆ ಗೊತ್ತೆ..?

ನಟ ಲಾರೆನ್ಸ್ ಕೆಲವು ವರ್ಷಗಳ ಹಿಂದೆ ತನ್ನ ತಾಯಿಗಾಗಿ ದೇವಸ್ಥಾನವನ್ನು ನಿರ್ಮಿಸಿದ್ದರು. ಇದನ್ನು ಕಟ್ಟುವಾಗ ಈ ದೇವಸ್ಥಾನವನ್ನು ತನ್ನ ಸ್ವಂತ ತಾಯಿಗೆ ಮಾತ್ರವಲ್ಲದೆ ತಮ್ಮ ಮಕ್ಕಳಿಗಾಗಿ ಪ್ರಾಣ ತ್ಯಾಗ ಮಾಡಿದ ಎಲ್ಲ ತಾಯಂದಿರಿಗೂ ಸಮರ್ಪಿಸುವುದಾಗಿ ಹೇಳಿದ್ದರು. ಈಗ ವಿಜಯ್ ಮಾಡಿದ್ದನ್ನು ಕೂಡ ಇದಕ್ಕೆ ಹೋಲಿಸಲಾಗುತ್ತಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News