ಸ್ನೇಹಿತ್‌ ಪರ ಮಾತಾಡಿದ್ದಕ್ಕೆ ವಿರೋಧ : ಮುಟ್ಟಿ ನೋಡಿಕೊಳ್ಳುವಂತೆ ಉತ್ತರಿಸಿದ ʼಉಪ್ಪಿʼ

ಜಾಣ ಕುರುಡರೇ ನಿಮ್ಮನ್ನು ನೀವು ನೋಡಿಕೊಳ್ಳಿ. ಈ ನಿಮ್ಮ ನೀತಿ ನಿಯತ್ತು, ಪರಾಕ್ರಮ ಚುನಾವಣೆಯಲ್ಲಿ ಮತ ಕೇಳಲು ಬರುವ ಭ್ರಷ್ಟ ನಾಯಕರ ಮುಂದೆ  ತೋರಿಸಿ ಎಂದು ಸೌಂದರ್ಯ ಜಗದೀಶ್‌ ಪುತ್ರನ ವಿಚಾರವಾಗಿ ಹೇಳಿಕೆ ನೀಡಿದ್ದಕ್ಕೆ ಕೆಟ್ಟದಾಗಿ ಕಾಮೆಂಟ್ ಮಾಡಿದ ಜನಕ್ಕೆ ನಟ, ನಿರ್ದೇಶಕ ಉಪೇಂದ್ರ ಅವರು ಪ್ರತ್ಯುತ್ತರ ನೀಡಿದ್ದಾರೆ.

Written by - Krishna N K | Last Updated : Oct 1, 2022, 08:09 PM IST
  • ಸೌಂದರ್ಯ ಜಗದೀಶ್‌ ಪುತ್ರನ ವಿಚಾರವಾಗಿ ಉಪೇಂದ್ರ ಹೇಳಿಕೆ
  • ಕೆಟ್ಟದಾಗಿ ಕಾಮೆಂಟ್‌ ಮಾಡಿದ ಜನಕ್ಕೆ ತಕ್ಕ ಉತ್ತರ ಕೊಟ್ಟ ನಟ
  • ನಿಮ್ಮ ಪರಾಕ್ರಮ ಮತ ಕೇಳಲು ಬರುವ ಭ್ರಷ್ಟ ನಾಯಕರ ಮುಂದೆ ತೋರಿಸಿ ಎಂದ ಉಪ್ಪಿ
ಸ್ನೇಹಿತ್‌ ಪರ ಮಾತಾಡಿದ್ದಕ್ಕೆ ವಿರೋಧ : ಮುಟ್ಟಿ ನೋಡಿಕೊಳ್ಳುವಂತೆ ಉತ್ತರಿಸಿದ ʼಉಪ್ಪಿʼ title=

ಬೆಂಗಳೂರು : ಜಾಣ ಕುರುಡರೇ ನಿಮ್ಮನ್ನು ನೀವು ನೋಡಿಕೊಳ್ಳಿ. ಈ ನಿಮ್ಮ ನೀತಿ ನಿಯತ್ತು, ಪರಾಕ್ರಮ ಚುನಾವಣೆಯಲ್ಲಿ ಮತ ಕೇಳಲು ಬರುವ ಭ್ರಷ್ಟ ನಾಯಕರ ಮುಂದೆ  ತೋರಿಸಿ ಎಂದು ಸೌಂದರ್ಯ ಜಗದೀಶ್‌ ಪುತ್ರನ ವಿಚಾರವಾಗಿ ಹೇಳಿಕೆ ನೀಡಿದ್ದಕ್ಕೆ ಕೆಟ್ಟದಾಗಿ ಕಾಮೆಂಟ್ ಮಾಡಿದ ಜನಕ್ಕೆ ನಟ, ನಿರ್ದೇಶಕ ಉಪೇಂದ್ರ ಅವರು ಪ್ರತ್ಯುತ್ತರ ನೀಡಿದ್ದಾರೆ.

ನಿರ್ಮಾಪಕ ಸೌಂದರ್ಯ ಜಗದೀಶ್ ಪುತ್ರ ಸ್ನೇಹಿತ್ ವಿಚಾರವಾಗಿ ಉಪೇಂದ್ರ ಅವರು ಸ್ನೇಹಿತ್‌ ಒಳ್ಳೆತನವನ್ನು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದರು. ಇದಕ್ಕೆ ನೆಟ್ಟಿಗರು ವಿರೋಧ ಮತ್ತು ಪರವಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಇನ್ನು ತೀರ್ವವಾಗಿ ಮಾತನಾಡಿದವರಿಗೆ ಉಪ್ಪಿ ತಮ್ಮದೆ ಸ್ಟೈಲ್‌ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಅಬ್ಬಬ್ಬಾ ! ಕಾಮೆಂಟ್ಸ್ ಬಾಕ್ಸ್ ತುಂಬಾ ನ್ಯಾಯ ಅನ್ಯಾಯಗಳ ಬಗ್ಗೆ ಬೊಬ್ಬೆ ಹೊಡೆಯುತ್ತಿದ್ದಾರೆ ಪರಾಕ್ರಮಿಗಳು !  ಈ ದೇಶದ ಪ್ರಜೆಯಾಗಿ ನನಗೂ ನ್ಯಾಯಾಂಗ ವೃವಸ್ಥೆ ಬಗ್ಗೆ ಅಪಾರ ಗೌರವವಿದೆ. ಚಿಕ್ಕ ಹುಡುಗನಾಗಿದ್ದಾಗಿನಿಂದ ನನಗೆ ತಿಳಿದಿರುವ ಹುಡುಗ ಎಂದು ಎರಡು ಸಾಲು ಬರೆದೆ, ಅದೂ ಅವನು ತಪ್ಪೇ ಮಾಡಿಲ್ಲ ಎಂದು ಹೇಳಲಿಲ್ಲ. ಕೂತು ಮಾತಾಡಿ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಹೇಳಿದ್ದು ಮತ್ತು ಕೊನೆಯ ಸಾಲಲ್ಲಿ  “ಅಜ್ಞಾನದ ಫಲ ಅಹಂಕಾರ, ಅಹಂಕಾರದ ಫಲ ದ್ವೇಶ, ದ್ವೇಶದ ಫಲ ಸರ್ವನಾಶ ಇದು ಎಲ್ಲರಿಗೂ ಅನ್ವಯಿಸುತ್ತದೆ ಎಂದು ಹೇಳಿದ್ದೂ ಅದಕ್ಕಾಗಿಯೇ. 

ಇದನ್ನೂ ಓದಿ: ಮಿಲ್ಕಿ ಬ್ಯೂಟಿ ತಮನ್ನಾ ಸೌಂದರ್ಯ ನೋಡಿ ಮಿಡಿಯಿತು ಮನ ತಂನಂ.. ತಂನಂ..!

ಇದರಲ್ಲಿ ಪ್ರಜಾಕೀಯ ತಂದು ರಾಜಕೀಯ ಮಾಡುವ ನಿಮಗೆ ತಿಳಿದಿರಲಿ… ವ್ಯಾಪಾರಿ ರಾಜಕೀಯದಿಂದ ಭ್ರಷ್ಟ ವ್ಯವಸ್ಥೆಯಿಂದ ಸಾವಿರಾರು ಸಮಸ್ಯೆ ಎದುರಿಸುತ್ತಿದ್ದರೂ ರಾಜಕೀಯದಲ್ಲಿ ಭ್ರಷ್ಟತೆ ತುಂಬಿ ತುಳುಕುತ್ತಿದೆ ಎಂದು ಗೊತ್ತಿದ್ದೂ ಅದಕ್ಕೆ ಪ್ರತಿಕ್ರಯಿಸದ ಜಾಣ ಕುರುಡರೇ …. ನಿಮ್ಮನ್ನು ನೀವು ನೋಡಿಕೊಳ್ಳಿ. 
ಈ ನಿಮ್ಮ ನೀತಿ ನಿಯತ್ತು, ಪರಾಕ್ರಮ ಚುನಾವಣೆಯಲ್ಲಿ ಮತ ಕೇಳಲು ಬರುವ ಭ್ರಷ್ಟ ನಾಯಕರ ಮುಂದೆ  ತೋರಿಸಿ ನೋಡೋಣ.. ಎಂದು ಸವಾಲ್‌ ಹಾಕಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News