ಶಿಕ್ಷಣ ಪಡೆದ ಕೆರಾಡಿ ಕನ್ನಡ ಸರ್ಕಾರಿ ಶಾಲೆಯನ್ನು ದತ್ತು ಸ್ವೀಕರಿಸಿದ ರಿಷಬ್‌ ಶೆಟ್ಟಿ!

Rishab Shetty: ಡಿವೈನ್‌ ಸ್ಟಾರ್‌ ರಿಷಬ್‌ ಸ್ಟಾರ್‌ ತಾವು ಶಿಕ್ಷಣ ಪಡೆದ ಕೆರಾಡಿಯ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಯನ್ನು ದತ್ತು ಪೆಡೆದು, ಊರಿನ ಹಿರಿಯರು ಮತ್ತು ಪ್ರಮುಖರಿಂದ ಮೆಚ್ಚುಗೆಯನ್ನು ಪಡೆದುಕೊಂಡಿದ್ದಾರೆ.

Written by - Zee Kannada News Desk | Last Updated : Dec 17, 2023, 05:44 PM IST
  • ಡಿವೈನ್‌ ಸ್ಟಾರ್‌ ನಟ ರಿಷಬ್​ ಶೆಟ್ಟಿಗೆ, ಹುಟ್ಟೂರಿನ ಬಗ್ಗೆ ಅಪಾರ ಪ್ರೀತಿ, ಅಭಿಮಾನ ಇದ್ದು, ತಮ್ಮ ಸಿನಿಮಾಗಳಲ್ಲಿ ಕೂಡ ಕರಾವಳಿಯ ವಿಷಯಗಳನ್ನು ಆಯ್ದುಕೊಳ್ಳುತ್ತಾರೆ.
  • ನಟ-ನಿರ್ದೇಶಕ ರಿಷಬ್‌ ಶೆಟ್ಟಿ ಸಿನಿಮಾ ಮಾತ್ರವಲ್ಲದೇ ಒಂದಷ್ಟು ಸಾಮಾಜಿಕ ಕೆಲಸಗಳ ಮೂಲಕವೂ ಗಮನ ಸೆಳೆಯುತ್ತಿದ್ದಾರೆ
  • ಕನ್ನಡ ಶಾಲೆಯನ್ನು ಉಳಿಸುವ ಮತ್ತು ಬೆಳೆಸುವ ಕಾರ್ಯದಲ್ಲಿ ನಿರತರಾಗಿದ್ದ ರಿಷಬ್​ ಶೆಟ್ಟಿ, ಕೆರಾಡಿಯ ಕನ್ನಡ ಮಾಧ್ಯಮ ಶಾಲೆಯನ್ನು ದತ್ತು ಪಡೆದಿದ್ದಾರೆ.
ಶಿಕ್ಷಣ ಪಡೆದ ಕೆರಾಡಿ ಕನ್ನಡ ಸರ್ಕಾರಿ ಶಾಲೆಯನ್ನು ದತ್ತು ಸ್ವೀಕರಿಸಿದ ರಿಷಬ್‌ ಶೆಟ್ಟಿ! title=

Rishab Shetty Adopted School: ಸ್ಯಾಂಡಲ್‌ವುಡ್‌ ಡಿವೈನ್‌ ಸ್ಟಾರ್‌ ನಟ ರಿಷಬ್​ ಶೆಟ್ಟಿಗೆ, ಹುಟ್ಟೂರಿನ ಬಗ್ಗೆ ಅಪಾರ ಪ್ರೀತಿ, ಅಭಿಮಾನ ಇದ್ದು, ತಮ್ಮ ಸಿನಿಮಾಗಳಲ್ಲಿ ಕೂಡ ಕರಾವಳಿಯ ವಿಷಯಗಳನ್ನು ಆಯ್ದುಕೊಳ್ಳುತ್ತಾರೆ. ಸದ್ಯಕ್ಕೆ ‘ಕಾಂತಾರ: ಚಾಪ್ಟರ್​ 1’ ಚಿತ್ರದ ಕೆಲಸಗಳಲ್ಲಿ ಬ್ಯುಸಿ ಆಗಿರುವ ರಿಷಬ್​ ಶೆಟ್ಟಿ ಬಿಡುವಿನಲ್ಲಿ, ತಾವು ಓದಿದ ಕೆರಾಡಿಯ ಕನ್ನಡ ಮಾಧ್ಯಮ ಶಾಲೆಗೆ ತೆರಳಿ ಒಂದಷ್ಟು ಸಮಯ ಕಳೆದಿದ್ದಾರೆ. ಹಾಗೆಯೇ ಅಲ್ಲಿನ ಮಕ್ಕಳು ಮತ್ತು ಶಿಕ್ಷಕರ ಜೊತೆ ಅವರು ಮಾತುಕತೆ ನಡೆಸಿದ್ದಾರೆ.

ನಟ-ನಿರ್ದೇಶಕ ರಿಷಬ್‌ ಶೆಟ್ಟಿ ಸಿನಿಮಾ ಮಾತ್ರವಲ್ಲದೇ ಒಂದಷ್ಟು ಸಾಮಾಜಿಕ ಕೆಲಸಗಳ ಮೂಲಕವೂ ಗಮನ ಸೆಳೆಯುತ್ತಿದ್ದಾರೆ. ಇವರು ಕನ್ನಡದ ಶಾಲೆಗಳ ಉಳಿವಿಗಾಗಿ ಪ್ರಯತ್ನಿಸುತ್ತಿದ್ದು, ಅದರ ಅಂಗವಾಗಿ ತಾವು ಓದಿದ ಕೆರಾಡಿ ಕನ್ನಡ ಮಾಧ್ಯಮ ಶಾಲೆಯನ್ನು ದತ್ತು ತೆಗೆದುಕೊಂಡಿದ್ದಾರೆ. ನಟ ರಿಷಬ್​ ಶೆಟ್ಟಿಯ ಈ ಕಾರ್ಯಕ್ಕೆ ಎಲ್ಲರೂ ಮೆಚ್ಚುಗೆ ಸೂಚಿಸುತ್ತಿದ್ದಾರೆ. 

ಇದನ್ನೂ ಓದಿ: ಧೂಳೆಬ್ಬಿಸಿದ ʻಕಾಟೇರʼ ಆಕ್ಷನ್ ಪ್ಯಾಕ್ಡ್ ಟ್ರೇಲರ್‌: ವಿಭಿನ್ನ ಪಾತ್ರದಲ್ಲಿ ಚಾಲೆಂಜಿಂಗ್‌ಸ್ಟಾರ್‌!

ರಿಷಬ್​ ಶೆಟ್ಟಿಯವರ ಸಾಮಾಜಿಕ ಕೆಲಸಗಳಿಗಾಗಿ ತಮ್ಮದೇ ಫೌಂಡೇಶನ್​ ಆರಂಭಿಸಿ, ‘ರಿಷಬ್​ ಶೆಟ್ಟಿ ಫೌಂಡೇಶನ್​’ ಮೂಲಕ ಅನೇಕ ಕಾರ್ಯಗಳು ಆಗುತ್ತಿವೆ. ಕನ್ನಡ ಶಾಲೆಯನ್ನು ಉಳಿಸುವ ಮತ್ತು ಬೆಳೆಸುವ ಕಾರ್ಯದಲ್ಲಿ ನಿರತರಾಗಿದ್ದು, ಕೆರಾಡಿಯ ಕನ್ನಡ ಮಾಧ್ಯಮ ಶಾಲೆಯನ್ನು ದತ್ತು ಪಡೆದಿದ್ದಕ್ಕಾಗಿ ರಿಷಬ್​ ಶೆಟ್ಟಿಗೆ ಊರಿನ ಹಿರಿಯರು ಮತ್ತು ಪ್ರಮುಖರು ಅಭಿನಂದನೆ ತಿಳಿಸಿದ್ದಾರೆ.

ನಟನಾಗಿ, ನಿರ್ದೇಶಕನಾಗಿ ಮತ್ತು ನಿರ್ಮಾಪಕನಾಗಿ ರಿಷಬ್​ ಶೆಟ್ಟಿ ಕನ್ನಡ ಚಿತ್ರರಂಗದಲ್ಲಿ ನೆಲೆ ಕಂಡುಕೊಂಡಿದ್ದು, ‘ಕಿರಿಕ್​ ಪಾರ್ಟಿ’, ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ’, ‘ಕಾಂತಾರ’ ರೀತಿಯ ಸಿನಿಮಾಗಳ ಮೂಲಕ  ಛಾಪು ಮೂಡಿಸಿದ್ದಾರೆ. ಈ ಹಿಂದೆ ರಿಷಬ್‌ ಶೆಟ್ಟಿ, ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ’ ಚಿತ್ರದಲ್ಲಿ ಕನ್ನಡ ಶಾಲೆಯ ಉಳಿವಿನ ಬಗ್ಗೆ ಸಂದೇಶ ನೀಡಿದವರು, ಇದೀಗ ರಿಯಲ್​ ಲೈಫ್‌ನಲ್ಲಿಯೂ ಅದೇ ಕೆಲಸವನ್ನು ಮಾಡುವ ಮೂಲಕ  ಅನೇಕರಿಗೆ ಮಾದರಿಯಾಗಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News