ದಿನನಿತ್ಯದ ಜೀವನದಲ್ಲಿ ನಾವು ಒಂದಿಲ್ಲೊಂದು ಯಲ್ಲೋ ಬೋರ್ಡ್ (Yellow Board) ವಾಹನವನ್ನು ಬಳಸಿಯೇ ಇರ್ತಿವೆ. ಸಾರ್ವಜನಿಕರನ್ನು ಸುರಕ್ಷಿತವಾಗಿ ಮನೆಗೆ ಕರೆದೊಯ್ಯುವ ಜವಾಬ್ದಾರಿ ಹೊತ್ತ ಕ್ಯಾಬ್ ಚಾಲಕನ (Cab Driver) ಕಥೆ ಹೇಳಲು ಬರುತ್ತಿದೆ ಈ ಸಿನಿಮಾ.
ಇದನ್ನೂ ಓದಿ: ಕಿಚ್ಚನ ನೆಕ್ಸ್ಟ್ ಪ್ರಾಜೆಕ್ಟ್: ವಿಕ್ರಾಂತ್ ರೋಣ ಬಳಿಕ ಸುದೀಪ್ ಮುಂದಿನ ಚಿತ್ರ ಇದೆ ನೋಡಿ.!
ನೈಜ ಕಥೆ ಆಧರಿಸಿದ ಈ ಚಿತ್ರವೇ 'ಯೆಲ್ಲೋ ಬೋರ್ಡ್'. ಟೈಗರ್ ಖ್ಯಾತಿಯ ನಟ ಪ್ರದೀಪ್ (Pradeep) ಅಭಿನಯದ ಈ ಸಿನಿಮಾ ಟ್ರೈಲರ್ ಮತ್ತು ಹಾಡುಗಳಿಂದ ಈಗಾಗಲೇ ಸದ್ದು ಮಾಡುತ್ತಿದೆ.
ಅಂದಹಾಗೆ ಯೆಲ್ಲೋ ಬೋರ್ಡ್ ಸಿನಿಮಾ ನಾಳೆ ಬಿಡುಗಡೆಯಾಗುತ್ತಿದ್ದು, ಯೆಲ್ಲೋ ಬೋರ್ಡ್ ಟೈಟಲ್ ಪ್ರತಿಯೊಬ್ಬ ನಾಗರಿಕರಿಗೂ ಸಂಬಂಧಿಸಿದ್ದಾಗಿದೆ. ಈ ಬಗ್ಗೆ ಮಾತನಾಡಿದ ಪ್ರದೀಪ್, ಟ್ಯಾಕ್ಸಿ, ಆಟೋ, ಟೆಂಪೋ ಟ್ರಾವೆಲರ್, ಲಗೇಜ್ ಆಟೋ ಅಥವಾ ಲಾರಿ ಯಾವುದೇ ಆಗಿರಲಿ, ಅಥವಾ ಯೆಲ್ಲೋ ಬೋರ್ಡ್ ಆಗಿರಲಿ, ಒಂದು ದಿನ ನಿಂತರೆ, ಇಡೀ ದೇಶ ಸ್ಥಬ್ತವಾಗಲಿದೆ. ನಾಗರಿಕರು ತೊಂದರೆಗೆ ಸಿಲುಕಿಕೊಳ್ಳುತ್ತಾರೆ ಎಂದಿದ್ದಾರೆ.
ಕ್ಯಾಬ್ ಚಾಲಕನ ಸುತ್ತ ಸುತ್ತುವ ಈ ಕಥೆ ಇದಾಗಿದೆ. ದಿನಗೂಲಿ ನೌಕರಿಯಲ್ಲಿ ತೊಡಗಿರುವ ಕ್ಯಾಬ್ ಡ್ರೈವರ್ ಗಳ ಜೀವನ ಈ ಚಿತ್ರದಲ್ಲಿದೆ. ಕ್ಯಾಬ್ ಚಾಲಕನ ಜವಾಬ್ದಾರಿ, ಸಮಾಜದಲ್ಲಿ ಮಹಿಳಾ ಸುರಕ್ಷತೆ ಕುರಿತ (Women Saftey) ಈ ಸಿನಿಮಾ ನೈಜ ಕಥೆಯನ್ನು ಆಧರಿಸಿದೆ.
ಈ ಸಿನಿಮಾದಲ್ಲಿ ತುಂಬಾ ಇಂಟರೆಸ್ಟಿಂಗ್ ಆಗಿರೋದೆ ಅಪ್ಪು (Puneeth Rajkumar) ಹಾಡಿದ ಹಾಡು. ಮೊದಲ ಬಾರಿಗೆ ರ್ಯಾಪ್ ಸಾಂಗ್ ಹೇಳಿದ ಖುಷಿ ಪುನೀತ್ ಅವರದ್ದಾದರೆ, ಅಪ್ಪು ಹತ್ತಿರ ಹಾಡು ಹೇಳಿಸಿದ ಸಂತಸ ಈ ಚಿತ್ರ ತಂಡಕ್ಕಿತ್ತು. ಈ ಸಿನಿಮಾ ಕತೆ ಹುಟ್ಟಿದ ಬಗ್ಗೆ ನಿರ್ದೇಶಕ ತ್ರಿಲೋಕ ರೆಡ್ಡಿ ಹೇಳಿದ್ದು ಹೀಗೆ.
ತೆಲುಗಿನಲ್ಲಿ ಸ್ಟೂಡೆಂಟ್ ಆಫ್ ದ ಇಯರ್ ಚಿತ್ರದ ಮೂಲದ ಚಿತ್ರರಂಗಕ್ಕೆ ಕಾಲಿಟ್ಟ ಅಹಲ್ಯಾ (Ahalya) ಈ ಚಿತ್ರದಲ್ಲಿ ನಟಿಸಿದ್ದಾರೆ. ಒಂದು ಕೊಲೆಯ ಆರೋಪ ಹೊತ್ತು ನಾಯಕ ಅದರಿಂದ ಹೇಗೆ ಹೊರಬರುತ್ತಾನೆ ಎಂಬ ಸಸ್ಪೆನ್ಸ್ ಕಹಾನಿಯನ್ನು ತೆರೆಗೆ ತರಲು ತಂಡ ರೆಡಿಯಾಗಿದೆ. ಅದ್ವಿಕ್ ಅವರು ಸಂಗೀತ ನಿರ್ದೇಶನವಿರುವ ಈ ಸಿನಿಮಾಗೆ ಪ್ರವೀಣ್ ಛಾಯಾಗ್ರಹಣವಿದೆ. ವಿಂಟೇಜ್ ಫಿಲಂಸ್ (Vintage Films) ಮೂಲಕ ನವೀನ್ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಒಟ್ಟಾರೆ ಯೆಲ್ಲೋ ಬೋರ್ಡ್ ತಂಡದ ಈ ಪ್ರಯತ್ನಕ್ಕೆ ಯಶಸ್ಸು ದೊರಕಲಿ. All The Best Yellow Board.
ಇದನ್ನೂ ಓದಿ: Vikrant Rona: ಹಾಲಿವುಡ್ನಲ್ಲೂ ಹವಾ ಎಬ್ಬಿಸಲಿದೆ ‘ವಿಕ್ರಾಂತ್ ರೋಣ’ ಸಿನಿಮಾ..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.