ವಯನಾಡ್ ಭೂಕುಸಿತ ಸ್ಥಳಕ್ಕೆ ನಟ ಮೋಹನ್ ಲಾಲ್ ಸೇನಾ ಸಮವಸ್ತ್ರದಲ್ಲಿ ಹೋಗಿದ್ದು ಏಕೆ ಗೊತ್ತಾ..? ʼರಹಸ್ಯ ಯೋಧʼ..

Actor Mohan Lal army : ಭಾರೀ ಮಳೆಗೆ ಕೇರಳ ರಾಜ್ಯ ತುತ್ತಾಗುತ್ತಿದೆ.. ಕಳೆದ ಕೆಲವು ದಿನಗಳ ಹಿಂದೆ ವಯನಾಡಿನಲ್ಲಿ ನಡೆದ ಭೂ ಕುಸಿತ 200 ಕ್ಕೂ ಹೆಚ್ಚು ಜೀವಗಳನ್ನು ಬಲಿ ತೆಗೆದುಕೊಂಡಿತು.. ಇನ್ನು ಘಟನಾ ಸ್ಥಳಕ್ಕೆ ಹಲವಾರು ರಾಜಕೀಯ ನಾಯಕರು, ಸಚಿವರು, ನಟರು ಸಹ ಭೇಟಿ ನೀಡಿದ್ದರು.. ಈ ಪೈಕಿ ನಟ ಮೋಹನ್‌ ಲಾಲ್‌ ಸೈನಿಕ ವೇಷ ಧರಿಸಿ ದುರ್ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿದ್ದರು.

Written by - Krishna N K | Last Updated : Aug 4, 2024, 02:44 PM IST
    • ಭಾರೀ ಮಳೆಗೆ ಕೇರಳ ರಾಜ್ಯ ತುತ್ತಾಗುತ್ತಿದೆ..
    • ವಯನಾಡಿನಲ್ಲಿ ನಡೆದ ಭೂ ಕುಸಿತ 200 ಕ್ಕೂ ಹೆಚ್ಚು ಜೀವಗಳನ್ನು ಬಲಿ ಪಡೆದಿದೆ
    • ಭೂ ಕುಸಿತ ಸ್ಥಳಕ್ಕೆ ನಟ ಮೋಹನ್‌ ಲಾಲ್‌ ಸೈನಿಕ ವೇಷದಲ್ಲಿ ಭೇಟಿ ನೀಡಿದ್ದರು..
ವಯನಾಡ್ ಭೂಕುಸಿತ ಸ್ಥಳಕ್ಕೆ ನಟ ಮೋಹನ್ ಲಾಲ್ ಸೇನಾ ಸಮವಸ್ತ್ರದಲ್ಲಿ ಹೋಗಿದ್ದು ಏಕೆ ಗೊತ್ತಾ..? ʼರಹಸ್ಯ ಯೋಧʼ.. title=

Actor Mohan Lal in army dress : ಮಾಲಿವುಡ್‌ ನಟ ಮೋಹನ್‌ ಲಾಲ್‌ ವಯನಾಡಿನಲ್ಲಿ ನಡೆದ ಭೂ ಕುಸಿತ ಸ್ಥಳಕ್ಕೆ ಸೈನಿಕ ವೇಷದಲ್ಲಿ ಭೇಟಿ ನೀಡಿದ್ದರು.. ಅಲ್ಲದೆ, ರಕ್ಷಣಾ ಕಾರ್ಯಾಚರಣೆ ಕುರಿತು ಪರಿಶೀಲನೆ ನಡೆಸಿದರು.. ಒರ್ವ ನಟ ಯೋಧನ ವೇಷದಲ್ಲಿ ಬಂದಿದ್ದು, ಚರ್ಚೆಗೆ ಕಾರಣವಾಗಿದೆ.. ಅಲ್ಲದೆ, ಇದು ಹೇಗೆ ಸಾಧ್ಯತ ಅಂತ ನೆಟ್ಟಿಗರು ಚರ್ಚೆ ಮಾಡುತ್ತಿದ್ದಾರೆ..

ಹೌದು.. 2008 ರ ಮಲಯಾಳಂ ಚಿತ್ರ ಕುರುಷೇತ್ರದಲ್ಲಿ ನಟ ಮೋಹನ್ ಲಾಲ್ ಸೈನಿಕನಾಗಿ ಕಾಣಿಸಿಕೊಂಡಿದ್ದರು.. ಲಾಲಾಟ್ಟನ್‌ ನಟನೆ ಭಾರತೀಯ ಸನ್ಯದ ಮಹತ್ವವನ್ನು ತಿಳಿಸುವಂತಿತ್ತು. ಈ ಚಿತ್ರಕ್ಕೆ ಪ್ರಶಸ್ತಿ ಪಡೆಯುವುದಕ್ಕಿಂತ ಹೆಚ್ಚಾಗಿ ನಟ ಸೈನ್ಯಕ್ಕೆ ಸೇರಲು ಬಯಸಿದ್ದರು. 

ಇದನ್ನೂ ಓದಿ:ಡಿವೋರ್ಸ್‌ ಸುದ್ದಿ ನಡುವೆ ಐಶ್ವರ್ಯಾ ರೈ ಕುರಿತು ಮೆಚ್ಚುಗೆ ಮಾತುಗಳನ್ನಾಡಿದ ಅಭಿಷೇಕ್..! ಏನಂದ್ರು ಗೊತ್ತೆ..?

ಆದರೆ, ಭಾರತೀಯ ಸೇನೆಗೆ ನೇರವಾಗಿ ಸೇರಲು ಸಾಧ್ಯವಾಗದಿದ್ದರೂ, ಟೆರಿಟೋರಿಯಲ್ ಆರ್ಮಿಗೆ ಸೇರಲು ಪ್ರಯತ್ನಿಸಿದರು. ಟೆರಿಟೋರಿಯಲ್ ಆರ್ಮಿಗೆ ಸೇರಲು 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು. ಆಗ ಮೋಹನ್‌ಲಾಲ್‌ಗೆ 42 ವರ್ಷ ವಯಸ್ಸಾಗಿತ್ತು..

ಆದರೂ, ಅವರ ಅಭಿಮಾನವನ್ನು ಶ್ಲಾಘಿಸಿ ಮತ್ತು ಯುವ ಪೀಳಿಗೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ, ಪ್ರಾದೇಶಿಕ ಸೇನೆಯ ನಿಯಮಗಳನ್ನು ಸಡಿಲಗೊಳಿಸಲಾಯಿತು. ಮೋಹನ್‌ಲಾಲ್‌ಗೆ ಅಂದಿನ ಸೇನಾ ಮುಖ್ಯಸ್ಥ ದೀಪಕ್ ಕಪೂರ್ ಗೌರವದ ಆಧಾರದ ಮೇಲೆ ಕಣ್ಣೂರಿನ 122 ರೆಜಿಮೆಂಟ್‌ನ ಲೆಫ್ಟಿನೆಂಟ್ ಕರ್ನಲ್ ಹುದ್ದೆಯನ್ನು ನೀಡಿದ್ದರು.

ಇದನ್ನೂ ಓದಿ:ಮತ್ತೆ ಬಾಲಬಿಚ್ಚಿದ ಕೆಲ ʼದರ್ಶನ್ ಫ್ಯಾನ್ಸ್‌ʼ..! ʼದೊಡ್ಮನೆ ಅಭಿಮಾನಿಗೆʼ ಕೊಲೆ ಬೆದರಿಕೆ

ಲೆಫ್ಟಿನೆಂಟ್ ಕರ್ನಲ್ ಮೋಹನ್ ಲಾಲ್ ಅವರು ಅನುಗುಣವಾದ ಮಿಲಿಟರಿ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದರು. ಲೆಫ್ಟಿನೆಂಟ್ ಕರ್ನಲ್ ಆಗಿ ಮಾತ್ರವಲ್ಲದೆ ಟೆರಿಟೋರಿಯಲ್ ಆರ್ಮಿಯ ಸದ್ಭಾವನಾ ರಾಯಭಾರಿಯಾಗಿಯೂ ನೇಮಿಸಲಾಯಿತು ನಟನನ್ನು ನೇಮಿಸಲಾಯಿತು. ಈ ಟೆರಿಟೋರಿಯಲ್ ಆರ್ಮಿಯಲ್ಲಿ ಮೋಹನ್ ಲಾಲ್, ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕರಾದ ಕಪಿಲ್ ದೇವ್ ಮತ್ತು ಎಂಎಸ್ ಧೋನಿಯೂ ಸಹ ಇದ್ದಾರೆ.

ಇಷ್ಟು ದಿನ ರಹಸ್ಯ ಯೋಧನಾಗಿದ್ದ ಮೋಹನ್ ಲಾಲ್ ವಯನಾಡ್ ಭೂಕುಸಿತದ ವೇಳೆ ಸೇನಾ ಸಮವಸ್ತ್ರದಲ್ಲಿ ರಕ್ಷಣಾ ಕಾರ್ಯಾಚರಣೆಗೆ ಇಳಿದರು. ಸೂರಲ್ಮಲೈ, ಪೂಂಚೇರಿಮಟ್ಟಂ, ಮುಂಡಕಾಡು ಮತ್ತಿತರ ಪ್ರದೇಶಗಳಲ್ಲಿ ಪರಿಶೀಲನೆ ನಡೆಸಿ, ರಕ್ಷಣಾ ಕಾರ್ಯಾಚರಣೆಯ ಸ್ಥಿತಿಯನ್ನು ಪರಿಶೀಲನೆ ನಡೆಸಿದರು. 

ಇದನ್ನೂ ಓದಿ: ಸೀರೆಯುಟ್ಟರೆ ಈಕೆಯಷ್ಟು ಸುಂದರಿ ಯಾರೂ ಇಲ್ಲ..! ಸ್ಟಾರ್ ನಟನ ಮಗಳ ಫೋಟೋಸ್‌ ವೈರಲ್‌..

ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದ ಯೋಧರಿಗೆ ನೆರವಾದ ಮೋಹನ್ ಲಾಲ್ ಮೊದಲ ಹಂತದಲ್ಲಿ 3 ಕೋಟಿ ರೂಪಾಯಿ ಆರ್ಥಿಕ ನೆರವು ಘೋಷಿಸಿದರು. ವಿಪತ್ತಿನಲ್ಲಿ ಕಳೆದುಕೊಂಡಿದ್ದನ್ನು ಮರಳಿ ಪಡೆಯಲು ಸಾಧ್ಯವಿಲ್ಲ, ರಕ್ಷಿಸಿದ ಜನರಿಗಾಗಿ ತಮ್ಮ ಕೈಲಾದಷ್ಟು ಮಾಡುವುದಾಗಿ ನಟ ಹೇಳಿಕೊಂಡಿದ್ದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News