ಶೂಟಿಂಗ್‌ ಸೆಟ್‌ನಲ್ಲಿ ನಟ ಬಾಲಯ್ಯ ಕನ್ನಡತಿ ಶ್ರೀಲೀಲಾ ಕೆನ್ನೆಗೆ ಬಾರಿಸಿದ್ದೇಕೆ?

Nandamuri Balakrishna : ತೆಲುಗಿನ ಖ್ಯಾತ ನಟ ನಂದಮುರಿ ಬಾಲಕೃಷ್ಣ ತಮ್ಮ ನಟನೆಯ ಮೂಲಕವೇ ಕೋಟ್ಯಾಂತರ ಅಭಿಮಾನಿಗಳ ಮನವನ್ನು ಮುಟ್ಟಿದ್ದಾರೆ. ಜೊತೆಗೆ ದೊಡ್ಡ ಅಭಿಮಾನಿ ಬಳಗವನ್ನೆ ಹೊಂದಿದ್ದಾರೆ. ಇನ್ನು ನಟ ಬಾಲಕೃಷ್ಣ ಅವರಿಗೆ ಎಲ್ಲರು ಬಾಲಯ್ಯ ಎಂದೇ ಕರೆಯುತ್ತಾರೆ ಅಲ್ಲದೇ ಅವರು ಇದೇ ಹೆಸರಿನಿಂದಲೇ ಗುರುತಿಸಿಕೊಂಡಿದ್ದಾರೆ.   

Written by - Zee Kannada News Desk | Last Updated : May 27, 2023, 12:39 PM IST
  • ಸಾಮಾನ್ಯವಾಗಿ ಬಾಲಯ್ಯ ಅವರಿಗೆ ಕೋಪ ಹೆಚ್ಚು ಅನ್ನೋದು ಎಲ್ಲರಿಗೂ ಗೊತ್ತು.
  • ಕೋಪ ಬಂದಾಗ ಅವರ ಅಭಿಮಾನಿಗಳ ಕನ್ನೆಗೆ ಭಾರಿಸಿರುವ ನಿದರ್ಶನಗಳು ಇವೆ.
  • ಕನ್ನಡತಿ ಶ್ರೀಲೀಲಾ ಅವರಿಗೆ ನಟ ಬಾಲಯ್ಯ ಕೆನೆಗೆ ಹೊಡೆದಿದ್ದಾರೆ ಎನ್ನುವ ಸುದ್ದಿ ಸಖತ್‌ ವೈರಲ್‌ ಆಗುತ್ತಿದೆ.
ಶೂಟಿಂಗ್‌ ಸೆಟ್‌ನಲ್ಲಿ ನಟ ಬಾಲಯ್ಯ ಕನ್ನಡತಿ ಶ್ರೀಲೀಲಾ ಕೆನ್ನೆಗೆ ಬಾರಿಸಿದ್ದೇಕೆ?  title=

Actress Sreeleela : ಸಾಮಾನ್ಯವಾಗಿ ಬಾಲಯ್ಯ ಅವರಿಗೆ ಕೋಪ ಹೆಚ್ಚು ಅನ್ನೋದು ಎಲ್ಲರಿಗೂ ಗೊತ್ತು. ಅವರಿಗೆ ಕೋಪ ಬಂದಾಗ ಅವರ ಅಭಿಮಾನಿಗಳ ಕನ್ನೆಗೆ ಭಾರಿಸಿರುವ ನಿದರ್ಶನಗಳು ಇವೆ. ಇದೀಗ ಕನ್ನಡತಿ ಶ್ರೀಲೀಲಾ ಅವರಿಗೆ ನಟ ಬಾಲಯ್ಯ ಕೆನೆಗೆ ಹೊಡೆದಿದ್ದಾರೆ ಎನ್ನುವ ಸುದ್ದಿ ಸಖತ್‌ ವೈರಲ್‌ ಆಗುತ್ತಿದೆ. ಜೊತೆಗೆ ಈ ಸುದ್ದಿ ಚರ್ಚೆಗೂ ಕಾರಣವಾಗಿದೆ. 

ನಟ ಶ್ರೀಲೀಲಾ ಕೆನ್ನೆಗೆ ಬಾಲಯ್ಯ ಬಾರಿಸಿದ್ದೇಕೆ?
ಸಾಮಾನ್ಯವಾಗಿ ಬಾಲಯ್ಯ ಎಲ್ಲರೊಂದಿಗೂ ಆತ್ಮೀಯವಾಗಿಯೇ ನಡೆದುಕೊಳ್ಳುತ್ತಾರೆ ಅವರಿಗೆ ಕೋಪ ಬಂದಾಗ ಮಾತ್ರ ಅವರು ಬೇರೊಬ್ಬರ ಮೇಲೆ ರೇಗುತ್ತಾರೆ. ಇದೀಗ ನಟಿ ಶ್ರೀಲೀಲಾ ಬಾಲಯ್ಯ ಅವರ ಆಕ್ರೋಶಕ್ಕೆ ಗುರಿಯಾಗಿದ್ದು, ಅವರಿಗೆ ಕಪಾಳಮೋಕ್ಷ ಮಾಡಿದ್ದಾರೆ. ನಟಿ ಶ್ರೀಲೀಲಾ ಸೆಟ್‌ನಲ್ಲಿಯೇ ಅತ್ತಿದ್ದಾರೆ ಎನ್ನಲಾಗುತಿದೆ. 

ಇದನ್ನೂ ಓದಿ-The Kerala Story : ವಿವಾದಗಳ ನಡುವೆಯೂ ಬಾಕ್ಸಾಫೀಸ್‌ನಲ್ಲಿ ದಾಖಲೆಯ ಕಲೆಕ್ಷನ್‌

ಅನಿಲ್‌ ರಾವಿಪುಡಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಬಾಲಕೃಷ್ಣ ಅವರು ನಟಿಸಿರುವ NBK108 ಚಿತ್ರದ ಚಿತ್ರೀಕರಣ ನಡೆಯುತ್ತಿದ್ದು, ಸಿನಿಮಾ ನಾಯಕಿಯಾಗಿ ಕಾಜಲ್‌ ಅವಗರವಾಲ್‌ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಈ ಚಿತ್ರದಲ್ಲಿ ಶ್ರೀಲೀಲಾ ಬಾಲಯ್ಯ ಅವರ ಸೊಸೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಗುಸುಗುಸು ಸುದ್ದಿಗಳು ಹರಿದಾಡುತ್ತಿವೆ.

ನಟಿ ಶ್ರೀಲೀಲಾ ಶೂಟಿಂಗ್‌ ಸೆಟ್‌ನಲ್ಲಿ ಮುತ್ತು ಕೊಟ್ಟಿದಕ್ಕೆ ಬಾಲಕೃಷ್ಣ ಅವರು ಅವರಿಗೆ ಕೆನ್ನೆಗೆ ಹೊಡೆದಿದ್ದಾರೆ ಎನ್ನಲಾಗುತ್ತಿದೆ. ಹಾಗಾದರೇ ಇದು ರಿಲಾ ಅಥವಾ ರಿಯಲ್‌ ಅನ್ನೋದೆ ಎಲ್ಲರ ಪ್ರಶ್ನೆ. ಹೌದು ಸಿನಿಮಾ ಒಂದರಲ್ಲಿ ಶ್ರೀಲೀಲಾ ಕೆನ್ನೆಗೆ ನಟ ಬಾಲಯ್ಯ ಅವರು ಬಾರಿಸುವ ಸನ್ನಿವೇಶವನ್ನು ನಿರ್ದೇಶಕರು ಚಿತ್ರೀಸಿದ್ದಾರೆ. ಈ ದೃಶ್ಯ ನೈಜ ರೀತಿಯಲ್ಲಿ ಕಾಣಿಸಿಕೊಳ್ಳಬೇಕು ನನಗೆ ನಿಜವಾಗಿಯೇ ಕೆನ್ನೆಗೆ ಬಾರಿಸಿ ಎಂದು ನಟಿ ಶ್ರೀಲೀಲಾ ಕೇಳಿಕೊಂಡಿದ್ದಾರೆ ಎನ್ನಲಾಗುತ್ತಿದೆ. 

 

ಇದನ್ನೂ ಓದಿ-ಬೆಂಗಳೂರು ಬಾಯ್ಸ್" ನೀನೇ ಬೇಕು ಹಾಡಿಗೆ ಸಿಕ್ತು ಸಖತ್ ಮೆಚ್ಚುಗೆ...!

ನಟಿ ಶ್ರೀಲೀಲಾ ಮಾತಿನಂತೆ ನಟ ಬಾಲಯ್ಯ ಅವರ ಕೆನೆಗೆ ಜೋರಾಗಿ ಬಾರಿಸಿದ್ದು, ಅದನ್ನು ನೋಡಿ ಎಲ್ಲರೂ ಶಾಕ್‌ ಆಗಿ ಒಂದು ಕ್ಷಣ ಮೌನ ತಾಳಿದ್ದರಂತೆ. ಈ ಸೀನ್‌ ಮುಗಿದ ನಂತರ ಕೂಡ ನಿರ್ದೇಶಕರು ಕಟ್‌ ಹೇಳಲಿಲ್ಲವಂತೆ. ಚಿತ್ರದಲ್ಲಿ ಈ ಸನ್ನಿವೇಶ್‌ ನೈಜವಾಗಿ ಮೂಡಿ ಬಂದಿದೆ ಎನ್ನಲಾಗುತ್ತಿದೆ. ಚಿತ್ರೀಕರಣದ ಪಾತ್ರದಲ್ಲಿ ಶ್ರೀಲೀಲಾ ಅಳುತ್ತಾ ಹೊರಟು ಹೋದರಂತೆ. ಆದರೆ ನಟಿ ಶ್ರೀಲೀಲಾ ಅವರ ಬದ್ಧತೆಯನ್ನು ಇಡೀ ಸೆಟ್‌ನಲ್ಲಿ ಎಲ್ಲರು ಮೆಚ್ಚಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡ

Trending News